ಕನ್ನಡತಿ ಧಾರವಾಹಿಯಲ್ಲಿ ಸದ್ಯ ಪತ್ರಕರ್ತೆ ಪೂಜಾ ಪಾತ್ರ ಸಿಕ್ಕಾಪಟ್ಟೆ ಪ್ರಾಮುಖ್ಯತೆ ಪಡೆದುಕೊಳ್ಳುತ್ತಿದ್ದು
ಕನ್ನಡತಿ ಧಾರವಾಹಿಯಲ್ಲಿ ಬರೋ ಪತ್ರಕರ್ತೆ ಪೂಜಾ ಪಾತ್ರ ಮಾಡೋದು ಯಾರು ಗೊತ್ತಾ?
ಈಕೆಯ ಹೆಸರು ಹರ್ಷಿತಾ ರಾಮಚಂದ್ರ. ಇವರು ಬೆಂಗಳೂರಿನ ಚೆಲುವೆಯಾಗಿದ್ದು ನೀಳ ಕಾಯದ ಸ್ಲಿಮ್ ಬ್ಯೂಟಿ ಈ ಹರ್ಷಿತಾ.
ಪತ್ರಕರ್ತೆ ಪೂಜಾ ಪಾತ್ರ ಮಾಡುತ್ತಿರುವ ಈಕೆ ರಿಯಲ್ ಲೈಫ್ನಲ್ಲಿ ಏನ್ ಮಾಡ್ತಾರೆ ಎಂದು ನೋಡುವುದಾದರೆ ಇವರು ರಿಯಲ್ ಲೈಫ್ನಲ್ಲಿ ಎಂಜಿನಿಯರ್ ಆಗಿ ಕೆಲಸ ಮಾಡುವಾಕೆ. ಹಾಗೆಯೇ ನಿರೂಪಣೆಯನ್ನೂ ಕೂಡ ಮಾಡುತ್ತಾರೆ.ಕನ್ನಡತಿಯಲ್ಲಿ ಪತ್ರಕರ್ತೆಯಾಗಿ ಕಾಣಿಸಿಕೊಂಡಿರುವ ಈಕೆಯ ಪಾತ್ರ ಸದ್ಯ ಮುಖ್ಯ ಪಾತ್ರವಾಗಿ ಮುಂದುವರಿಯುತ್ತಿದೆ.
ಜೈಲು ಕೋರ್ಟ್ ಕಚೇರಿ ಹೀಗೆ ಇವೆಲ್ಲದರ ಜೊತೆ ನಡೆಯುತ್ತಿದೆ ಪೂಜಾ ಪಾತ್ರದ ಪ್ರಯಾಣ.
ಇನ್ನು ಆರಂಭದಲ್ಲಿ ವಿಲನ್ನಂತೆ ಕಂಡರೂ ಭುವಿಗೆ ನೆರವಾಗುವ ಮನಸು ಮಾಡುತ್ತಾರೆ ಪತ್ರಕರ್ತೆ ಪೂಜಾ. ಹೌದು ಆರಂಭದಲ್ಲಿ ವಿಲನ್ನಂತೆ ಕಂಡರೂ ಈಗ ಪಾಸಿಟವ್ ಪಾತ್ನಲ್ಲಿರುವ ನಟಿ ಸಿಂಪಲ್ ಬ್ಯೂಟಿ. ಇನ್ನು ನಿರೂಪಣೆ ನಡೆಸುತ್ತಾ ಪಾರ್ಟ್ಟೈಂ ಕಲಾವಿದೆಯಾಗಿ ಈಕೆ ಕೆಲಸ ಮಾಡುತ್ತಿದ್ದು ಧಾರಾವಾಹಿಯಲ್ಲಿ
ಸಾನ್ಯಾ ಬಂದು ಅಪಘಾತ ಮಾಡಿದರೂ ಅಲ್ಲಿಂದ ತಪ್ಪಿಸಿಕೊಂಡು ಕೋರ್ಟ್ಗೆ ತಲುಪುತ್ತಾರೆ ಪೂಜಾ.
ಸದ್ಯ ವರುಧಿನಿ ಪರವಾಗಿ ಸಾಕ್ಷಿ ಹೇಳ್ತಾರಾ..? ಕಾದು ನೋಡಬೇಕು. ಸದ್ಯ ಇದೀಗ ಪತ್ರಕರ್ತೆ ಪೂಜಾ ಹಳ್ಳಕ್ಕೆ ಬಿದ್ದಿದ್ದಾರೆ. ಹೌದು ಈಗಾಗಲೇ ಚೆಂದನವನದಲ್ಲಿ ಅನೇಕರು ವಿವಾಹವಾಗುತ್ತಿದ್ದು ಇದೀವ ಹರ್ಷಿತಾ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಹರ್ಷಿತಾ ಮನಸ್ಸು ಕದ್ದ ಚೆಲುವೆ ಯಾರು ಗೊತ್ತಾ? ಕೆಳಗಿನ ವಿಡಿಯೋ ನೋಡಿ..
ಸದ್ಯ ದಿನಕ್ಕೊಂದು ತಿರುವುಗಳ ಮೂಲಕ ಕನ್ನಡತಿ ಸೂಪರ್ ಹಿಟ್ ಆಗಿ ಓಡ್ತಿದೆ. ಆದರೆ ಈಗ ಕನ್ನಡತಿ ಧಾರಾವಾಹಿ ಮುಕ್ತಾಯವಾಗುತ್ತೆ ಎನ್ನೋ ಚರ್ಚೆಗಳು ಸಾಮಾಜಿಕ ಜಾಲತಾಣದಲ್ಲಿ ಎದ್ದಿದೆ. ಜನರ ಗೆಸ್ ನಿಜ ಆಗಿದ್ರೆ ಈ ಸೀರಿಯಲ್ ಜನವರಿ ಅಥವಾ ಮಾರ್ಚ್ ಗೆ ಮುಗಿಯುತ್ತೆ ಎಂದು ಹೇಳಲಾಗ್ತಿದೆ. ಹೌದು ಅಮ್ಮಮ್ಮನ ಅಧ್ಯಾಯ ಮುಕ್ತಾಯವಾದಾಗಲೇ ಧಾರಾವಾಹಿ ಮುಗಿಯತ್ತೆ ಎನ್ನುತ್ತಿದ್ದರು.
ಅಲ್ಲದೇ ಕಲರ್ಸ್ ಕನ್ನಡದಲ್ಲಿ ಶೀಘ್ರದಲ್ಲೇ ಪುಣ್ಯವತಿ ಹಾಗೂ ತ್ರಿಪುರ ಸುಂದರಿ ಧಾರಾವಾಹಿಗಳು ಪ್ರಸಾರವಾಗಲಿದ್ದು ಅದಕ್ಕೆ ಧಾರಾವಾಹಿ ಮುಗಿಸುತ್ತಾರೆ ಎಂಬ ಮಾತುಗಳು ಕೇಳಿ ಬರ್ತಿವೆ.ಸದ್ಯ ಈ ಸುದ್ದಿ ಚರ್ಚೆ ಆಗುತ್ತಿದ್ದಂತೆ ಸಾವಿರಾರು ಅಭಿಮಾನಿಗಳು ಕನ್ನಡತಿ ಧಾರಾವಾಹಿ ನಮ್ಮ ನೆಚ್ಚಿನ ಸೀರಿಯಲ್. ದಯಮಾಡಿ ಧಾರಾವಾಹಿ ಮುಗಿಸಬೇಡಿ ಎಂದು ಹೇಳುತ್ತಿದ್ದಾರೆ.