ವಾರ್ತಾ ಮಂಜರಿ
Trending Stories, Viral News, Gossips & Everything in Kannada

ಹೇಗಿದ್ದಿಯಾ ಯಶ್…ಡಿಬಾಸ್ ಓಡಿ ಬಂದು ಮಾತಾಡಿಸಿದ ಕ್ಷಣ ನೋಡಿ ವಿಡಿಯೋ

3,140

ಕೆಲವೇ ವರುಷಗಳ ಹಿಂದಷ್ಟೇ ಕನ್ನಡ ಚಿತ್ರರಂಗಕ್ಕೆ ಅಮರ್ ಎಂಬ ಸಿನಿಮಾದ ಮೂಲಕ ನಾಯಕ ನಟನಾಗಿ ಪಾದರ್ಪಣೆ ಮಾಡಿದ್ದ ಅಭಿಷೇಕ್ ಅಂಬರೀಶ್ ಸದ್ಯ ಅದಾಗಲೇ ಹಸೆಮಣೆ ಏರಲು ಸಿದ್ಧರಾಗಿ ಬಿಟ್ಟಿದ್ದಾರೆ. ಹೌದು ಇತ್ತೀಚಿಗಷ್ಟೇ ಅಭಿಷೇಕ್ ಅಂಬರೀಶ್ ಅವರು ತಮ್ಮ ಕುಟುಂಬಸ್ಥರು ಸ್ನೇಹಿತರು ಮತ್ತು ಹಲವಾರು ಗಣ್ಯರ ಸಮ್ಮುಖದಲ್ಲಿ ಅವಿವಾ ಎಂಬುವವರ ಜೊತೆಗೆ ಅರಮನೆ ಮೈದಾನದಲ್ಲಿ ಅದ್ದೂರಿಯಾಗಿ ನಿಶ್ಚಿತಾರ್ಥ ಮಾಡಿಕೊಂಡಿದ್ದು ಇದು ರೆಬೆಲ್ ಸ್ಟಾರ್ ಅಭಿಮಾನಿಗಳಲ್ಲಿ ಸಾಕಷ್ಟು ಸಂತೋಷವನ್ನು ಮೂಡಿಸಿದೆ.

ಸಾಕಷ್ಟು ಸಮಯಗಳಿಂದ ಅಭಿಷೇಕ್ ಅಂಬರೀಶ್ ರವರು ಆದಷ್ಟು ಶೀಘ್ರದಲ್ಲಿಯೇ ಮದುವೆ ಅಗಲಿದ್ದಾರೆ ಎಂಬ ಸುದ್ದಿಗಳು ಹರಿದಾಡುತ್ತಿದ್ದವು. ಹೌದು ಕೊನೆಗೂ ಈ ಅದ್ದೂರಿ ನಿಶ್ಚಿತಾರ್ಥ ಕಾರ್ಯಕ್ರಮದ ಮೂಲಕ ಈ ಸುದ್ದಿ ನಿಜವಾಗಿದ್ದು ಮಾಹಿತಿಗಳ ಪ್ರಕಾರ ಅಭಿಷೇಕ್ ಅಂಬರೀಶ್ ಮತ್ತು ಅವಿವಾ ಬಿದ್ದಪ್ಪ ಇಬ್ಬರೂ ಕೂಡ ನಾಲ್ಕು ವರ್ಷಗಳಿಂದ ಪರಸ್ಪರ ಡೇಟಿಂಗ್ ಮಾಡುತ್ತಿದ್ದರು.

ಇನ್ನು ಅವಿವಾ ಬಿದ್ದಪ್ಪ ಸಹ ಫ್ಯಾಶನ್ ಹಿನ್ನೆಲೆ ಉಳ್ಳಂತಹ ಶ್ರೀಮಂತ ಕುಟುಂಬದಿಂದ ಬಂದವರಾಗಿದ್ದು ಅಭಿಷೇಕ್ ಅಂಬರೀಶ್ ಅವರು ಕನ್ನಡದ ಹುಡುಗಿಯನ್ನು ಮದುವೆಯಾಗದೆ ಉತ್ತರ ಭಾರತದ ಹುಡುಗಿಯನ್ನು ಮದುವೆಯಾಗುತ್ತಿರುವುದು ಹಲವರಿಗೆ ಆಶ್ಚರ್ಯ ತಂದಿದೆ.

ಇನ್ನೊಂದು ಆಶ್ಚರ್ಯಕರ ಮಾಹಿತಿ ಏನೆಂದರೆ ಅಭಿಷೇಕ್ ಅಂಬರೀಶ್ ಅವರು ಮದುವೆಯಾಗುತ್ತಿರುವ ಉತ್ತರ ಭಾರತದ ಬೆಡಗಿ ಅಭಿಷೇಕ್ ಅಂಬರೀಶ್ ಅವರಿಗಿಂತ ಮೂರು ವರ್ಷ ದೊಡ್ಡವರು. ಹೌದು ನನಗಿಂತ ಮೂರು ವರ್ಷ ದೊಡ್ಡವಳನ್ನು ಅಭಿಷೇಕ್ ಅಂಬರೀಶ್ ಮದುವೆಯಾಗುತ್ತಿರುವುದು ಅಂಬರೀಶ್ ಫ್ಯಾಮಿಲಿ ಆಶ್ಚರ್ಯದ ಸಂಗತಿಯಾಗಿದ್ದು ಬಹುಕಾಲದಿಂದ ಇಬ್ಬರು ಒಬ್ಬರನ್ನೊಬ್ಬರು ಪ್ರೀತಿ ಮಾಡುತ್ತಿದ್ದ ಕಾರಣ ವಯಸ್ಸು ಇವರಿಗೆ ಅಡ್ಡಿಯಾಗಲಿಲ್ಲ ಎನ್ನಬಹುದು.

ಅಭಿಷೇಕ್ ಅಂಬರೀಶ್ ಹಾಗೂ ಅವಿವಾ ಅವರ ಅದ್ದೂರಿ ನಿಶ್ಚಿತಾರ್ಥ ಕಾರ್ಯಕ್ರಮಕ್ಕೆ ಕನ್ನಡ ಚಿತ್ರರಂಗದ ಸ್ಟಾರ್ ನಟರಾಗಿರುವ ಚಾಲೆಂಜಿಂಗ್ ಸ್ಟಾರ್ ದರ್ಶನ್ ಹಾಗೂ ರಾಕಿಂಗ್ ಸ್ಟಾರ್ ಯಶ್ ಅವರ ಪತ್ನಿ ಆಗಿರುವ ರಾಧಿಕಾ ಪಂಡಿತ್ ಸೇರಿದಂತೆ ಹಲವಾರು ಜನರು ಆಗಮಿಸಿದ್ದು ಕಾರ್ಯಕ್ರಮ ದೊಡ್ಡಮಟ್ಟದಲ್ಲಿ ಸುದ್ದಿ ಕೂಡ ಆಗಿದೆ.

ಅಭಿ‍ಷೇಕ್ ಹಾಗೂ ಅವಿವಾಗೆ ಶುಭ ಕೋರಿದ ದರ್ಶನ್ ಜೋಡಿ ಜತೆ ಫೋಟೊಗೆ ಪೋಸ್ ನೀಡಿದ್ದು ಇನ್ನು ಯಶ್ ಹಾಗೂ ರಾಧಿಕಾ ಪಂಡಿತ್ ದಂಪತಿ ಸಹ ಈ ನಿಶ್ಚಿತಾರ್ಥ ಕಾರ್ಯಕ್ರಮಕ್ಕೆ ಆಗಮಿಸಿ ಅಭಿಷೇಕ್ ಹಾಗೂ ಅವಿವಾ ಜೋಡಿಗೆ ಶುಭ ಹಾರೈಸಿದರು. ಸದ್ಯ ಚಾಲೆಂಜಿಂಗ್ ಸ್ಟಾರ್ ದರ್ಶನ್ ಹಾಗೂ ರಾಕಿಂಗ್ ಸ್ಟಾರ್ ಯಶ್ ಇಬ್ಬರೂ ಸಹ ಅಭಿಷೇಕ್ ಅಂಬರೀಶ್ ಹಾಗೂ ಅವಿವಾ ಬಿದ್ದಪ್ಪ ನಿಶ್ಚಿತಾರ್ಥಕ್ಕೆ ಆಗಮಿಸಿದ್ದ ಫೋಟೊಗಳು ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಅಗಿದ್ದು ಈ ಲೇಖನಿಯ ಕೆಳಗೆ ಯಶ್ ಹಾಗೂ ದಚ್ಚು ಭೇಟಿಯಾದ ಸಂಧರ್ಭದ ವಿಡಿಯೋ ನೋಡಬಹುದು.

ಇನ್ನು ಜೂನಿಯರ್ ರೆಬೆಲ್ ಸ್ಟಾರ್ ಅಭಿಷೇಕ್ ಅಂಬರೀಶ್ ಅವರ ವಯಸ್ಸು 29 ವರ್ಷ ವಯಸ್ಸಾಗಿದ್ದು ಇನ್ನು ಅವಿವಾ ಬಿದ್ದಪ್ಪ ಅವರ ವಯಸ್ಸು 32 ವರ್ಷ ವಯಸ್ಸಾಗಿದೆ. ಅಂದರೆ ಅಭಿಷೇಕ್ ಅಂಬರೀಶ್ ಅವರಿಗಿಂತ ಅವಿವಾ ಬಿದ್ದಪ್ಪ ಮೂರು ವರ್ಷ ದೊಡ್ಡವರಾಗಿದ್ದು ಇವರಿಬ್ಬರ ಪ್ರೀತಿಗೆ ಇವರ ವಯಸ್ಸು ಅಡ್ಡಿಯಾಗಿಲ್ಲ ಎಂದು ಹೇಳಿದರೆ ತಪ್ಪಾಗಲಾರದು. ಆದಷ್ಟು ಶೀಘ್ರದಲ್ಲಿಯೇ ಇವರಿಬ್ಬರೂ ಹಸೆಮಣೆ ಏರಲಿದ್ದು ಈ ನವ ಜೋಡಿಗಳಿಗೆ ಶುಭವಾಗಲಿ ಎಂಬುದಾಗಿ ಕಾಮೆಂಟ್ ಬಾಕ್ಸ್ ನಲ್ಲಿ ಹಾರೈಸೋಣ. ಈ ವಿಚಾರದ ಬಗ್ಗೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯಗಳನ್ನು ತಪ್ಪದೆ ಕಾಮೆಂಟ್ ಮಾಡುವ ಮೂಲಕ ಹಂಚಿಕೊಳ್ಳಿ.