ಸುಮಲತಾ ರವರು ಕನ್ನಡ ಚಿತ್ರರಂಗ ಕಂಡಂತಹ ಚೆಂದುಳ್ಳಿ ಚೆಲುವೆ ಹಾಗೂ ದಕ್ಷಿಣ ಭಾರತ ಚಿತ್ರರಂಗ ಕಂಡ ಅದ್ಬುತ ಕಲಾವಿದೆಯಾಗಿ ತಮ್ಮನ್ನು ತಾವು ಸ್ಥಾಪಿಸಿಕೊಂಡು ಯಶಸ್ಸಿನ ಉತ್ತುಂಗದಲ್ಲಿದ್ದ ನಟಿ ಅಂತಾನೇ ಹೇಳಬಹುದು. ಹೌದು ಚಿತ್ರರಂಗದಲ್ಲಿ ಬೇಡಿಕೆ ಇರುವಾಗಲೇ ಕರುನಾಡ ಕರ್ಣ ಎಂದೇ ಖ್ಯಾತಿ ಪಡೆದಿದ್ದಂತಹ ಮಂಡ್ಯದ ಗಂಡು ರೆಬಲ್ ಸ್ಟಾರ್ ಅಂಬರೀಶ್ ಅವರ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಇವರು ಇದೀಗ ರಾಜಕೀಯದಲ್ಲಿಯೂ ಸಹ ಸಕ್ರಿಯರಾಗಿದ್ದಾರೆ.
ಕನ್ನಡ ಸೇರಿದಂತೆ ತೆಲುಗು ತಮಿಳು ಮಲಯಾಳಂ ಹೀಗೆ ದಕ್ಷಿಣ ಭಾರತದ ಚಿತ್ರರಂಗದಲ್ಲಿ ಸಕ್ರಿಯರಾಗಿದ್ದ ನಟಿ ಬಾಲಿವುಡ್ ಗೂ ಕೂಡ ಪಾದಾರ್ಪಣೆ ಮಾಡಿ ತಮ್ಮನ್ನು ತನ್ನ ಛಾಪನ್ನು ತೋರಿದ್ದರೆ. ಇನ್ನು ಸುಮಲತಾ ಅವರು ಪ್ರತಿನಿಧಿಸುತ್ತಿದ್ದ ಚಿತ್ರಗಳು ಕೂಡ ಸೂಪರ್ ಹಿಟ್ ಆಗಿದ್ದು ಅಭಿಮಾನಿಗಳ ಮನ ಗೆಲ್ಲುವಲ್ಲಿ ಯಶಸ್ವಿಯಾಗಿದ್ದರು.
ಇನ್ನು ಸುಮಲತಾ ಅಂಬರೀಶ್ ಅವರು ಸುಮಾರು ಎರಡು 220ಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿದ್ದು ಚಿತ್ರರಂಗಕ್ಕೆ ತಮ್ಮದೇ ಆದ ಕೊಡುಗೆಗಳನ್ನು ಕೂಡ ನೀಡಿದ್ದಾರೆ.
ಅಂಬಿ ಅವರನ್ನು ಪ್ರೀತಿಸಿ ವಿವಾಹವಾಗಿ ತಮ್ಮ ದಾಂಪತ್ಯ ಜೀವನದಲ್ಲಿ ನೆಮ್ಮದಿಯಾಗಿದ್ದ ಸುಮಲತಾ ರವರಿಗೆ ಅಭಿಷೇಕ್ ಅಂಬರೀಶ್ ಎಂಬುವಂತಹ ಮಗ ಕೂಡ ಇದ್ದು ಅಂಬಿ ಇಹಲೋಕ ತ್ಯಜಿಸಿದ ಸಮಯದಲ್ಲಿ ಬದುಕನ್ನೇ ಕತ್ತಲೆ ಮಾಡಿಕೊಂಡಿದ್ದ ಸುಮಲತಾ ಅವರು ದುಃಖದ ಮೊಡವೆಯಲ್ಲಿ ತೇಲುತ್ತಿದ್ದರು.
ಆದರೆ ಪತಿಯ ಕಾರ್ಯವನ್ನು ನಿರ್ವಹಿಸಬೇಕು ಪತಿಯ ಆಸೆಯನ್ನು ನೆರವೇರಿಸಬೇಕು ಎಂಬುದರ ಸಲುವಾಗಿ ರಾಜಕೀಯಕ್ಕೆ ಧುಮುಕಿದ ಸುಮಲತಾ ಸದ್ಯ ಇದೀಗ ಸಂಸದೆಯಾಗಿದ್ದಾರೆ. ಇದೀಗ ಸುಮಲತಾ ನಿಶ್ಚಿತಾರ್ಥ ಶಾಸ್ತ್ರ ನೆರೆವೇರಿಸಿದ ವಿಡಿಯೋ ನೋಡಿ.