ವಾರ್ತಾ ಮಂಜರಿ
Trending Stories, Viral News, Gossips & Everything in Kannada

ವಿಚಿತ್ರವಾಗಿ ಭರತನಾಟ್ಯ ಮಾಡಿದ ವೈಷ್ಣವಿ ಗೌಡ…ನೋಡಿ ಚಿಂದಿ ವಿಡಿಯೋ

3,238

ಸದ್ಯ ಕನ್ನಡ ಕಿರುತೆರೆಯಲ್ಲಿ ಮನೆ ಮಗಳು ಎಂದೇ ಖ್ಯಾತಿ ಪಡೆದಿರುವ ನಟಿ‌ ವೈಷ್ಣವಿ ಗೌಡ ರವರು ಅಗ್ನಿಸಾಕ್ಷಿಯ ಸನ್ನಿಧಿ ಪಾತ್ರ ಮೂಲಕ‌ ವೈಷ್ಣವಿ ಇನ್ನೂ ಕೂಡ ಜನರ ಮನಸಲ್ಲಿ ಹಾಗೆ ಉಳಿದಿದ್ದಾರೆ ಎನ್ನಬಹುದು. ಇನ್ನು ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣದಲ್ಲಿ ಹೆಚ್ಚು ಆಕ್ಟಿವ್ ಆಗಿರುವ ನಟಿ ವೈಷ್ಣವಿ ಗೌಡ.
ನಾನ ಬಗೆಯ ರೀಲ್ಸ್ ಮಾಡುತ್ತಾ ಗಮನ ಸೆಳೆಯುತ್ತಿದ್ದಾರೆ.

ಹೌದು ಹಲವು ಸಿನಿಮಾಗಳ ಹಾಡುಗಳಿಗೂ ನಟಿ ವೈಷ್ಣವಿ ಆಗಾಗ ಸೊಂಕ ಬಳುಕಿಸುತ್ತಿದ್ದು ಇತ್ತೀಚಿಗೆ ನಟ ಸುದೀಪ್ ಜಾಕ್ವೆಲಿನ್ ಡಾನ್ಸ್ ಮಾಡುವ ಇದಂತಹ ರಾ.. ರಾ.. ರಕ್ಕಮ್ಮ ಹಾಡಿಗೂ ಕೂಡ ಸೊಂಟ ಬಳುಕಿಸಿ ಪಡ್ಡೆ ಹುಡುಗರ ಹೃದಯ ಕದ್ದಿದ್ದರು. ದಿಲ್ ಖುಷ್ ಆಗುವಂತೆ ಸ್ಟೆಪ್ ಹಾಕಿದ್ದರು.

ಹೀಗೆ ಒಂದಲ್ಲ ಒಂದು ವಿಡಿಯೋಗಳ ಮೂಲಕ ನಟಿ ವೈಷ್ಣವಿ ಕಿಚ್ಚು ಹಚ್ಚುತ್ತಿದ್ದು ಮೊನ್ನೆ ತಾನೆ ಮತ್ತೊಮ್ಮೆ ಬೆಲ್ಲಿ ಡ್ಯ ಮಾಡುವ ಮೂಲಕ ಕಣ್ಣು ಕುಕ್ಕಿದ್ದಾರೆ. ತಮಿಳಿನ ಬೀಸ್ಟ್ ಚಿತ್ರದ ಹಾಡಿನ ಸಂಗೀತಕ್ಕೆ ವೈಷ್ಣವಿ ಬೆಲ್ಲಿ ಡ್ಯಾನ್ಸ್ ಮಾಡಿದ್ದು ಗುಲಾಬಿ ಬಣ್ಣದ ಕಾಸ್ಟ್ಯೂಂನಲ್ಲಿ ಒಡವೆ ತೊಟ್ಟು ಅಲಂಕಾರ ಮಾಡಿಕೊಂಡು ಬೆಲ್ಲಿ ಡ್ಯಾನ್ಸ್ ಮಾಡಿ ಬೀಗಿದ್ದರು.

ಆರಂಭದಲ್ಲಿ ಕೇವಲ ಧಾರವಾಹಿ ಮೂಲಕ ಎಲ್ಲರ ಮನೆಮಾತಾಗಿದ್ದ ವೈಷ್ಣವಿ ಗೌಡ ಅವರು ಬಳಿಕ ಬಿಗ್ ಬಾಸ್ ಮನೆಗೆ ಎಂಟ್ರಿ ಕೊಟ್ಟಿದ್ದು ಅಲ್ಲದೆ ಕೆಲವು ಸಿನಿಮಾಗಳಲ್ಲಿ ನಟಿಸಿದ್ದಾರೆ.‌ಆದರೆ ಬೆಳ್ಳಿ ಪರದೆ ಮೇಲೆ ನಟಿಯಾಗಿ ಮುಂದುಯುವ ಅದೃಷ್ಟ ಮಾತ್ರ ಇನ್ನೂ ಬಂದಿಲ್ಲ. ಆದರೆ ಸಾಮಾಜಿಕ ಜಾಲತಾಣದಲ್ಲಿ ಮಾತ್ರ ಸದಾ ಆ್ಯಕ್ಟಿವ್ ಆಗಿ ಇದ್ದು ತಮ್ಮ ಅಭಿಮಾನಿಗಳಿಗೆ ಸದಾ ಹತ್ತಿರವಾಗಿ ಇರುತ್ತಾರೆ.

ಭರತನಾಟ್ಯಂ ಕುಚಿಪುಡಿ ಮತ್ತು ಬೆಲ್ಲಿ ಡ್ಯಾನ್ಸಿಂಗ್‌ನಲ್ಲಿ ಪರಿಣಿತಿ ಇರುವ ಇವರು ಗಿರಿಗಿಟ್ಲೆ ಮೂಲಕ ನಾಯಕಿಯಾಗಿ ಚಂದನವನ ಪ್ರವೇಶಿಸಿದ್ದಾರೆ. ಭರ್ಜರಿ ಕಾಮಿಡಿ ಎಂಬ ರಿಯಾಲಿಟಿ ಶೋ ಅನ್ನು ನಿರೂಪಣೆ ಮಾಡಿದ್ದರು. ಕುಣಿಯೋಣ ಬಾರ ಡ್ಯಾನ್ಸ್ ರಿಯಾಲಿಟಿ ಶೋದಲ್ಲಿ ಕೂಡ ಭಾಗವಹಿಸಿದ್ದರು. ಇನ್ನು ನಿವೇದಿತಾ ಗೌಡ ಜೊತೆಗೂ ಸಾಮಾಜಿಕ ಜಾಲತಾಣದಲ್ಲೊ ಕಾಣಿಸಿಕೊಳ್ಳುತ್ತಾ ಇರುತ್ತಾರೆ.

ಇತ್ತೀಚಿಗೆ ಯುಟ್ಯೂಬ್ ಚಾನೆಲ್ ಕೂಡ ತೆರೆದಿದ್ದಾರೆ. ಈ ಯು ಟ್ಯೂಬ್ ಚಾನೆಲ್ ನಲ್ಲಿ ವೈಷ್ಣವಿ ಹತ್ತಾರು ವಿಡಿಯೋಗಳನ್ನು ಹಂಚಿಕೊಳ್ಳುತ್ತಾ ಇರುತ್ತಿದ್ದು ಇದೀಗ ಕ್ಲಾಸಿಕಲ್ ಡ್ಯಾನ್ಸ್ ಒಂದನ್ನ ಮಾಡಿದ್ದಾರೆ. ಈ ವಿಡಿಯೋ ಕೂಡ ಎಲ್ಲರ ಗಮನ ಸೆಳೆಯುತ್ತಿದೆ.ಸದ್ಯ ಅವರು ಮಾಡಿರುವ ಹೊಸ ವಿಡಿಯೋ ವೈರಲ್ ಲಿಸ್ಡ್ ಸೇರಿದೆ. ವೈಷ್ಣವಿ ನೃತ್ಯ ಕಲೆಗೆ ಮೆಚ್ಚುಗೆ ವ್ಯಕ್ತವಾಗಿದೆ. ನೀವು ಕೂಡ ಲೇಖನಿಯ ಕಳಗೆ ಈ ವಿಡಿಯೋ ನೋಡಬಹುದು.

ಇನ್ನು ನಟಿ ವೈಷ್ಣವಿ ಗೌಡ ರವರು ಇತ್ತೀಚೆಗೆ ಹೊಸ ಮನೆ ಖರೀದಿಸಿದ್ದು ಅವರ ಮನೆ ಗೃಹ ಪ್ರವೇಶಕ್ಕೆ ಕನ್ನಡ ಬಿಗ್ ಬಾಸ್ ಸೀಸನ್ 8ರ ಎಲ್ಲಾ ಸ್ಪರ್ಧಿಗಳು ಸಹ ಪಾಲ್ಗೊಂಡಿದ್ದರು. ಸೀಮಿತ ಆಪ್ತರನ್ನು ಮಾತ್ರ ಆಹ್ವಾನಿಸಿದ್ದ ವೈಷ್ಣವಿ ತಮ್ಮ ಸೋಶಿಯಲ್ ಮಿಡಿಯಾ ಇನ್‍ಸ್ಟಾಗ್ರಾಮ್‍ನಲ್ಲಿ ದೊಡ್ಮನೆ ಮಂದಿಯೊಂದಿಗಿನ ಪೋಟೋ ವನ್ನು ಹಂಚಿಕೊಂಡಿದ್ದರು. ನಟ ರಾಜೀವ್ ದಿವ್ಯ ಉರುಡುಗ ಅರವಿಂದ್ ಕೆಪಿ ರಘು ಪ್ರಶಾಂತ್ ಸಂಬರಗಿ ಸೇರಿದಂತೆ ಹಲವರು ಮಂದಿ ಪಾಲ್ಗೊಳ್ಳುವ ಮೂಲಕ ವೈಷ್ಣವಿ ಅವರಿಗೆ ಶುಭ ಹಾರೈಸಿದರು.