ವಾರ್ತಾ ಮಂಜರಿ
Trending Stories, Viral News, Gossips & Everything in Kannada

ಹಿಂದಿಯ ಡಾನ್ಸ್ ಮಾಸ್ಟರ್ ಜೊತೆ ರಶ್ಮಿಕಾ ಚಿಂದಿ ಡ್ಯಾನ್ಸ್ ನೋಡಿ…ವಿಡಿಯೋ

5,031

ಸದ್ಯ ಇದೀಗ ದಕ್ಷಿಣ ಭಾರತದಲ್ಲಿ ದೊಡ್ಡ ಮಟ್ಟದಲ್ಲಿ ಮಿಂಚುತ್ತಿರುವ ನಟಿ ರಶ್ಮಿಕಾ ಮಂದಣ್ಣ ನ್ಯಾಷನಲ್ ಕ್ರಶ್ ಎಂಬ ಪಟ್ಟ ಅಲಂಕರಿಸಿದ್ದು ಸದ್ಯ ಇದೀಗ ಅವರ ಸಿನಿಪಯಣ ಬಾಲಿವುಡ್​ನತ್ತ ಸಾಗಿರುವುದು ಒಂದು ರೀತಿಯಲ್ಲಿ ಸಾಧನೆಯೇ ಸರಿ.

ತಮ್ಮ ವೃತ್ತಿಜೀವನದಲ್ಲಿ ಎದುರಾದ ಹಲವಾರು ಅಡೆತಡೆಗಳನ್ನು ನಿವಾರಿಸಿಕೊಳ್ಳುತ್ತ ಮುಂದೆ ಸಾಗುತ್ತಿರುವ ಈ ಕೊಡಗಿನ ಬೆಡಗಿ ತಮ್ಮ ಮೊದಲ ಬಾಲಿವುಡ್ ಸಿನಿಮಾ ಮಿಷನ್​ ಮಜ್ನು ಕೆಲಸಗಳಲ್ಲಿ ಇದೀಗ ಫುಲ್ ಬ್ಯುಸಿ ಆಗಿದ್ದಾರೆ. ವಿಶೇಷವೇನೆಂದರೆ ಇದೀಗ ಅವರು ಬಾಲಿವುಡ್​ನಲ್ಲಿ ಒಂದು ಮುಖ್ಯ ಹಂತವನ್ನು ಪೂರ್ಣಗೊಳಿಸಿದ್ದು ಅಂದರೆ ಅವರ ಮೊದಲ ಹಿಂದಿ ಸಿನಿಮಾದ ಚಿತ್ರೀಕರಣ ಮುಗಿದಿದೆ.

ಹೌದು ಯಾವುದೇ ವಿಘ್ನಗಳಿಲ್ಲದೇ ಚಿತ್ರೀಕರಣ ಮುಗಿದಿರುವುದಕ್ಕೆ ಇಡೀ ತಂಡ ಬಹಳಾನೇ ಖುಷಿಯಾಗಿದ್ದು ಈ ಸಿನಿಮಾದಲ್ಲಿ ಶೇರ್​ಷಾ ಖ್ಯಾತಿಯ ನಟ ಸಿದ್ಧಾರ್ಥ್​ ಮಲ್ಹೋತ್ರಾ ಅವರಿಗೆ ನಮ್ಮ ಕನ್ನಡದ ನಟಿ ರಶ್ಮಿಕಾ ಜೋಡಿಯಾಗಿದ್ದಾರೆ.

ಹೌದು ದಿನದಿಂದ ದಿನಕ್ಕೆ ರಶ್ಮಿಕಾ ಮಂದಣ್ಣ ಅವರು ಉತ್ತುಂಗಕ್ಕೆ ಏರುತ್ತಿರುವುದನ್ನು ನೋಡಿ ಅವರ ಅಭಿಮಾನಿಗಳು ಬಹಳಾನೇ ಖುಷಿಪಡುತ್ತಿದ್ದು ಆದಷ್ಟು ಬೇಗ ಅವರ ಮೊದಲ ಹಿಂದಿ ಸಿನಿಮಾವಾದ ಮಿಷನ್​ ಮಜ್ನು ತೆರೆಕಾಣಲಿ ಎಂದು ರಶ್ಮಿಕಾರ ಪಟ್ಟ ಅಭಿಮಾನಿಗಳು ಕಾಯುತ್ತಿದ್ದಾರೆ.

ಅಂಥವರಿಗೆಲ್ಲ ಈ ಸುದ್ದಿ ಖುಷಿ ನೀಡಿದ್ದು ಚಿತ್ರೀಕರಣ ಪೂರ್ಣಗೊಂಡಿರುವ ಸಂತಸಕ್ಕೆ ನಟ ಸಿದ್ಧಾರ್ಥ್​ ಮಲ್ಹೋತ್ರಾ ಅವರು ರಶ್ಮಿಕಾ ಜೊತೆಗಿರುವ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಇದರ ಬೆನ್ನಲ್ಲೇ ಇದೀಗ ರಶ್ಮಿಕಾ ಡ್ಯಾನ್ಸ್ ಮಾಡಿದ ವಿಡಿಯೋ ವೈರಲ್ ಆಗಿದೆ ನೋಡಿ.