ವಾರ್ತಾ ಮಂಜರಿ
Trending Stories, Viral News, Gossips & Everything in Kannada

ಅಪ್ಪು ಕೊನೆಯ ದಿನ ಜಿಮ್ ಮಾಡುವಾಗ ಏನಾಯ್ತು ನೋಡಿ…ವಿಡಿಯೋ

2,092

ಅಕ್ಟೋಬರ್ 29 ನಮ್ಮ ಕರುನಾಡಿಗೆ ಕರಳಾ ದಿನ. ಅಭಿಮಾನಿಗಳನ್ನೇ ದೆವರು ಎನ್ನುತ್ತಿದ್ದ ಅಪ್ಪು ದೇವರ ಬಳಿಯೇ ಹೋಗಿಬಿಟ್ಟಿದ್ದು ಭೂಮಿಯ ಮೇಲೆ ಎಷ್ಟೋ ಹೂವುಗಳಿದ್ದರು ಕೂಡ ಭಗವಂತನಿಗೆ ಬೆಟದ ಹೂ ಮೇಲೆ ಆಸೆಯಾಗಿ ಕರೆಸಿಕೊಂಡು ಬಿಟ್ಟರು. ಸದ್ಯ ಸಾಮಾಜಿಕ ಜಾಲತಾಣ ತೆರೆದರೆ ಸಾಕು ಕೇವಲ ಅಪ್ಪು ಅವರ ಫೋಟೋಗಳೆ ಕಾಣಸಿಗುತ್ತಿದ್ದು ಇದೀಗ ಅಂತಹದ್ದೆ ಒಂದು ವಿಡಿಯೋ ವೈರಲ್ ಆಗಿದ್ದು ಈ ವಿಡಿಯೋ ನೋಡುತ್ತಿದ್ದರೆ ನಿಜಕ್ಕೂ ಅಪ್ಪು ಅವರು ಅಗಲು ಸಾಧ್ಯವಿಲ್ಲ ಎಂದೆನೆಸುತ್ತಿದೆ.

ಹೌದು ಡಾ.ರಾಜ್ ಕುಮಾರ್ ಕುಟುಂಬ ಎಂದಿಗೂ ಅಭಿಮಾನಿಗಳನ್ನು ದೇವರ ರೂಪದಲ್ಲಿ ನೋಡುತ್ತ ಬಂದಿದೆ. ಇದು ಅಣ್ಣಾವ್ರು ತನ್ನ ಕುಟುಂಬಕ್ಕೆ ಹೇಳಿಕೊಟ್ಟ ಬಿಟ್ಟು ಹೋದ ದೊಡ್ಡ ಕಾಣಿಕೆಗಳಲ್ಲಿ ಒಂದು.ಕರುನಾಡು ಕೂಡ ಅಣ್ಣಾವ್ರ ಕುಟುಂಬವನ್ನು ಅಷ್ಟೇ ಪ್ರೀತಿ ವಿಶ್ವಾಸ ಆತ್ಮೀಯತೆಯಿಂದ‌ ಕಾಣುತ್ತಿದೆ ಎಂಬುದು ತಮಗೆ ತಿಳಿದಿದೆ. ಇನ್ನು ಇಡೀ ಕುಟುಂಬವೇ ಅಭಿಮಾನಿಗಳ ಕಷ್ಟ ಸುಖದಲ್ಲಿ‌ ಜೊತೆ ನಿಂತು ಅಭಯ ನೀಡುವ ಕೆಲಸ ಮಾಡುತ್ತ ಬಂದಿದೆ.

ಇನ್ನು ಪುನೀತ್ ರಾಜ್ ಕುಮಾರ್ ರವರು ಸಿನಿಮಾಗಳಲ್ಲಿ ಪವರ್ ಸ್ಟಾರ್ ಆದರೆ ನಿಜಜೀವನದಲ್ಲಿ ಯೂತ್ ಐಕಾನ್ ಆಗಿದ್ದವರು. ಸಾಮಾಜಿಕ ಕೆಲಸಗಳಲ್ಲೂ ಕೂಡ ತಮ್ಮನ್ನು ತಾವು ತೊಡಗಿಸಿಕೊಂಡಿರುವ ಅವರು ಇದರ ಜೊತೆಗೆ ಫಿಟ್ನೆಸ್​ ಅಂದರೆ ಪುನೀತ್​ ರಾಜ್​ಕುಮಾರ್​ ಪುನೀತ್​ ರಾಜ್​ಕುಮಾರ್​ ಅಂದರೆ ಫಿಟ್ನೆಸ್​ ಎಂದು ಹೇಳುವಂತೆ ಮಾಡಿದ್ದರು. ಹೌದು ಲಾಕ್​ಡೌನ್​ ಸಮಯದಲ್ಲೂ ಸಹ ಅಪ್ಪು ಮನೆಯಲ್ಲಿ ಸುಮ್ಮನೆ ಕೂರದೆ ಮನೆಯಲ್ಲಿ ವರ್ಕ್​ಔಟ್​ ಮಾಡುತ್ತಾ ವಿಡಿಯೋಗಳನ್ನ ಸೋಷಿಯಲ್​ ಮೀಡಿಯಾದಲ್ಲಿ ಶೇರ್​ ಮಾಡಿ ಅಭಿಮಾನಿಗಳನ್ನ ಹುರಿದುಂಬಿಸುತ್ತಿದರು.

ಹೌದು ಲಾಕ್​ಡೌನ್​ ಸಮಯದಲ್ಲಿ ಪುನೀತ್​ ರಾಜ್​ಕುಮಾರ್​ ಮನೆಯಲ್ಲೇ ವರ್ಕ್​ಔಟ್​ ಮಾಡಿರೋ ಸಾಕಷ್ಟು ವೀಡಿಯೋಗಳನ್ನ ನಾವು ಈಗಾಗಲೇ ನೋಡಿದ್ದೇವೆ. ಅಬ್ಬಾ ವಯಸ್ಸು ನಲವತ್ತೈದಾದರು ಕೂಡ ಅವರು ಮಾಡುವ ಸ್ಟಂಟ್ಸ್​ ಎಕ್ಸರ್​ಸೈಜ್ ​ ಹುಬ್ಬೇರಿಸುತ್ತದೆ. ಇನ್ನು ಪುನೀತ್​​ ವರ್ಕೌಟ್​ ನೋಡಿ ಅಭಿಮಾನಿಗಳು ದಂಗಾಗಿದ್ದು ಅಷ್ಟೇ ಅಲ್ಲ ಕೆಲವರು ಅದನ್ನ ಪ್ರಯತ್ನ ಕೂಡ ಮಾಡಿದರು.

ಸಾಮಾನ್ಯವಾಗಿ ಜಿಮ್​ನಲ್ಲಿ ಬೆವರಿಳಿಸುವ ಅಪ್ಪು ಬಾಡಿ ವೇಯ್ಟ್​ ಎಕ್ಸರ್​ಸೈಜ್ ಮಾಡುವಯದಲ್ಲೂ ಕೂಡ ನಿಸ್ಸೀಮರು. ಏನು ಇಲ್ಲ ಅಂದರೆ ಸೈಕಲ್​ ಏರಿ ಹೊರಟು ಬಿಡ್ತಾರೆ. ನಂದಿ ಬೆಟ್ಟಕ್ಕೆ ಸ್ನೇಹಿತರ ಜೊತೆ ಸೈಕಲ್​ ಸವಾರಿ ಅಂದರೆ ಅವರಿಗೆ ಬಹಳ ಅಚ್ಚುಮೆಚ್ಚು. ಆದರೆ ಕೊರೊನಾ ಸಮಯದಲ್ಲಿ ಅದಕ್ಕೆಲ್ಲಾ ಬ್ರೇಕ್​ ಬಿದ್ದಿದ್ದ ಕಾರಣ ಏಕಾಂಗಿಯಾಗಿ ಬೆಳ್ಳಂ ಬೆಳಗ್ಗೆ ಮಾಸ್ಕ್​ ಧರಿಸಿ ಬೆಂಗಳೂರು ಸುತ್ತಾಮುತ್ತಾ ಸವಾರಿ ಮಾಡಿದ್ದರು.

ಇದೀಗ ಕೊರೋನಾ ಸಮಯದಲ್ಲಿ ವರ್ಕೌಟ್ ಮಾಡಿ ಕರೋನಾ ತೊಲಗಿಸಿ ಎಂದು ಸಂದೇಶ ನೀಡಿ ವರ್ಕೌಟ್ ಮಾಡಿದ್ದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ಇಷ್ಟು ಕಟು ಮಸ್ತಾಗಿ ಜಿಮ್ ಮಾಡಿದ್ದ ಅಪ್ಪು ಅಗಲಲು ಹೇಗೆ ಸಾಧ್ಯ ಎನುಸುತ್ತಿದೆ. ನೀವು ಒಮ್ಮೆ ಲೇಖನಿ ಕೆಳಗಿರುವ ವಿಡಿಯೋ ನೋಡಿ.

ಸದ್ಯ ಕರ್ನಾಟಕ ರತ್ನ ಪುನೀತ್ ರಾಜ್‌ಕುಮಾರ್ ಕನಸಿನ ಸಿನಿಮಾ ಗಂಧದ ಗುಡಿ ಯಶಸ್ವಿಯಾಗಿದ್ದು ಕಳೆದ ತಿಂಗಳು ಅಕ್ಟೋಬರ್ 28ಕ್ಕೆ ತೆರೆಗೆ ಬಂದಿದ್ದ ಈ ಡಾಕ್ಯುಡ್ರಾಮಾ ಸಿನಿಮಾ ಬಾಕ್ಸಾಫೀಸ್ ಶೇಕ್ ಮಾಡಿತ್ತು. ಪೇಯ್ಡ್ ಪ್ರೀಮಿಯರ್ ಶೋಗಳಿಂದ ಹೌಸ್‌ಫುಲ್ ಪ್ರದರ್ಶನ ಕಂಡಿದ್ದ ಸಿನಿಮಾ ಕೋಟಿ ಕೋಟಿ ಕೊಳ್ಳೆ ಹೊಡೆದಿತ್ತು.

ಕನ್ನಡನಾಡಿನ ಬಯಲುಸೀಮೆಯಿಂದ ಹಿಡಿದು ಕಡಲ ತೀರದವರೆಗೆ ಬರಡು ಭೂಮಿಯಿಂದ ಪಶ್ಚಿಮಘಟ್ಟಗಳವರೆಗೆ ಸುತ್ತಾಡಿ ಅಪ್ಪು- ಅಮೋಘವರ್ಷ ಈ ಡಾಕ್ಯುಮೆಂಟರಿ ಸಿನಿಮಾ ನಿರ್ಮಿಸಿದ್ದು ಕರ್ನಾಟಕದ ಮಣ್ಣಿನ ಘಮವನ್ನು ಪ್ರಪಂಚಕ್ಕೆ ಪರಿಚಯಿಸುವ ಕನಸಿನೊಂದಿಗೆ ಪುನೀತ್ ರಾಜ್‌ಕುಮಾರ್‌ ಈ ಸಾಹಸಕ್ಕೆ ಕೈ ಹಾಕಿದ್ದರು. ಪ್ರೇಕ್ಷಕರು ಪುನೀತ್ ರಾಜ್‌ಕುಮಾರ್ ಜೊತೆಗೆ ಕರ್ನಾಟಕದ ಕಾಡು ನದಿ ಬೆಟ್ಟ ಜಲಪಾತವನ್ನು ನೋಡುತ್ತಾ ಬೆರಗಾಗಿದ್ದಾರೆ. ಮಕ್ಕಳನ್ನು ಕರೆದುಕೊಂಡು ಚಿತ್ರಮಂದಿರಕ್ಕೆ ಬರುತ್ತಿದ್ದಾರೆ. ಪದೇ ಪದೇ ಗಂಧದ ಗುಡಿ ಸಿನಿಮಾ ನೋಡುತ್ತಿರುವ ಅಭಿಮಾನಿಗಳು ಕೂಡ ಇದ್ದಾರೆ.