ನಮ್ಮ ಚೆಂದನವನದಲ್ಲಿ ಡ್ಯಾನ್ಸ್ ಕಿಂಗ್ ಎಂದೇ ಖ್ಯಾತಿ ಪಡೆದಿರುವ ನಟ ಎಂದರೆ ಖ್ಯಾತ ಹಿರಿಯ ನಟಿ ಲೀಲಾವತಿ ಯವರು ಪುತ್ರರಾದ ವಿನೋದ್ ರಾಜ್ ಅವರು. ಸದ್ಯ ಇದೀಗ ಅವರು ಚಿತ್ರರಂಗದಿಂದ ಸಂಪೂರ್ಣವಾಗಿ ದೂರ ಉಳಿದಿರುವ ವಿಷಯ ತಮಗೆಲ್ಲರಿಗೂ ತಿಳಿದಿದೆ.
ಇನ್ನು ವಿನೋದ್ ರಾಜ್ ಅವರು ಪ್ಯಾಟೆ ಜೀವನ ಬಿಟ್ಟು ತಮ್ಮ ತಾಯಿಯನ್ನು ನೋಡಿಕೊಂಡು ವ್ಯವಸಾಯ ಮಾಡುತ್ತಾ ಹಳ್ಳಿಯಲ್ಲಿ ನೆಲೆಸಿದ್ದು ತಮ್ಮ ಸುತ್ತ ಇರುವ ಗ್ರಾಮದ ಜನರಿಗೆ ಸಹಾಯ ಮಾಡುತ್ತಾ ಕಷ್ಟದಲ್ಲಿರುವವರಿಗೆ ಹೆಗಲು ನೀಡುತ್ತಾ ಶ್ರಮ ಜೀವಿ ಹಾಗೂ ಆದರ್ಶ ವ್ಯಕ್ತಿಯಾಗಿ ಬದುಕುತ್ತಿದ್ದಾರೆ.
ಇನ್ನು ತಾಯಿ ಮಗ ಇಬ್ಬರು ಕೂಡ ತಾವು ವಾಸ ಮಾಡುತ್ತಿರುವ ಗ್ರಾಮದಲ್ಲಿ ಆಸ್ಪತ್ರೆಯನ್ನು ಕೂಡ ಕಟ್ಟಿಸಿ ದನ ಕರು ಹಸುಗಳಿಗೆ ಮೇವುಗಳ ವ್ಯವಸ್ಥೆ ಕೂಡ ಮಾಡುತ್ತಾ ಬಂದಿದ್ದಾರೆ.
ಹೌದು ಸದ್ಯ ಲೀಲಾವತಿ ಹಾಗೂ ವಿನೋದ್ ರಾಜ್ ರವರು ತಮಗೆ ಯಾರೂ ಇಲ್ಲ ಎಂದು ತಿಳಿದುಕೊಳ್ಳದೆ ಹಳ್ಳಿಯ ಜನರನ್ನೇ ತಮ್ಮವರ ತಮ್ಮ ಕುಟುಂಬದವರು ಎಂದು ಭಾವಿಸಿ ಅವರ ಜೊತೆಯಲ್ಲೇ ಮಾತನಾಡುತ್ತಾ ಕೆಲಸ ಮಾಡುತ್ತಾ ಜೀವನ ನಡೆಸುತ್ತಿದ್ದಾರೇ.
ಇನ್ನು ಕಳೆದ ತಿಂಗಳು ನಟಿ ಲೀಲಾವತಿ ಅವರು ಬಿದ್ದು ಸೊಂಟಕ್ಕೆ ಪೆಟ್ಟು ಮಾಡಿಕೊಂಡಿದ್ದು ನಂತರ ಆಸ್ಪತ್ರೆಗೆ ದಾಖಲಾಗಿ ಇದೀಗ ಚೇತರಿಸಿಕೊಳ್ಳುತ್ತಿದ್ದಾರೆ. ಇದೀಗ ಲೀಲಾವತಿ ಅಮ್ಮನ ಮುಂದೆ ವಿನೋದ್ ರಾಜ್ ಮಾಡಿರುವ ಡಾನ್ಸ್ ನೋಡಿ .