ಈ ವರುಷದ ಹಿಟ್ ಲಿಸ್ಟ್ ಸೇರಿರುವ ಹೊಂಬಾಳೆ ಫಿಲ್ಮ್ಸ್ ಬ್ಯಾನರ್ ನ ರಿಷಬ್ ಶೆಟ್ಟಿ ನಿರ್ದೇಶನ ಹಾಗೂ ನಟನೆಯ ಕಾಂತರ ಸಿನಿಮಾ ಇದೀಗ ದಂತಕಥೆಯೇ ಆಗಿಬಿಟ್ಟಿದೆ. ಈಗಾಗಲೇ ಕನ್ನಡದಲ್ಲಿ ಬಾಕ್ಸ್ ಆಫೀಸ್ ಡೂಳಿಪಟ ಮಾಡಿರುವ ಕಾಂತಾರ ಹಿಂದಿಯಲ್ಲೂ ಡಬ್ ಆಗಿ ಬಿಡುಗಡೆ ಆಗಿದ್ದು ಬಾಲಿವುಡ್ ನಲ್ಲೂ ಹವಾ ಎಬ್ಬಿಸಿದೆ.
ಸದ್ಯ ಇದೀಗ ಕಾಂತಾರ ಸಿನಿಮಾ ಕೇವಲ ಕನ್ನಡ ಚಿತ್ರರಂಗದಲ್ಲಿ ಮಾತ್ರವಲ್ಲದೆ ವಿದೇಶದವರೆಗೂ ಕೂಡ ತನ್ನದೇ ಆದ ಛಾಪನ್ನು ಮೂಡಿಸಿದ್ದು ಕನ್ನಡದಲ್ಲಿ ಮಾತ್ರ ಬಿಡುಗಡೆಯಾದ ಈ ಸಿನಿಮಾ ಇದೀಗ ಪರಬಾಷೆಗೆ ಡಬ್ ಆಗಿ ಸೆನ್ಸೇಷನ್ ಮೂಡಿಸುತ್ತಿದೆ. ಪ್ರಸ್ತುತ ಇನ್ನೂ ಕೂಡ ಕಾಂತಾರ ಸಿನಿಮಾದ ಪ್ರಚಾರ ಕಾರ್ಯದಲ್ಲಿಯೇ ನಿರತರಾಗಿರುವ ನಟ ನಿರ್ದೇಶಕ ರಿಷಬ್ ಶೆಟ್ಟಿ ಅದೇ ಸಿನಿಮಾ ಕುರಿತ ಸಂದರ್ಶನವೊಂದರಲ್ಲಿ ತಮ್ಮ ಮುಂದಿನ ಚಿತ್ರಗಳಾದ ಬೆಲ್ ಬಾಟಮ್ 2 ಹಾಗೂ ಕಿರಿಕ್ ಪಾರ್ಟಿ 2 ಸಿನಿಮಾದ ಬಗ್ಗೆ ಕೂಡ ಮಾತನಾಡಿದ್ದಾರೆ.
ಹೌದು ಬೆಲ್ ಬಾಟಮ್ 2 ಚಿತ್ರದ ಅದ್ಭುತವಾದ ಕತೆ ಹೊಂದಿದ್ದು ದಯಾನಂದ ಟಿಕೆ ಅದ್ಭುತವಾದ ಕತೆಯನ್ನು ಹುಡುಕಿ ತಂದು ಬರೆದಿದ್ದಾರೆ.ಇದೀಗ ಕಾಂತಾರ ಮೇಕಿಂಗ್ ವಿಡಿಯೋ ಹೇಗಿತ್ತು ಎನ್ನುವುದನ್ನು ನೋಡಿ.