ವಾರ್ತಾ ಮಂಜರಿ
Trending Stories, Viral News, Gossips & Everything in Kannada

ಅಣ್ಣಾವ್ರ ಹಿರಣ್ಯಕಶಿಪು ಡೈಲಾಗ್ ಹೊಡೆದ ವಂಶಿಕಾ …ಚಿಂದಿ ವಿಡಿಯೋ ನೋಡಿ

37,776

ಸದ್ಯ ನಟ ಆನಂದ್‌ ರವರು ಇಂದಿಗೂ ಕೂಡ ಮಾಸ್ಟರ್‌ ಆನಂದ್‌ ಎಂದೇ ಖ್ಯಾತಿ ಪಡೆದವರು. ಹೌದು ಬಾಲನಟನಾಗಿ ಚಿತ್ರರಂಗದಲ್ಲಿ ಗುರುತಿಸಿಕೊಂಡಿದ್ದು ಸಾಕಷ್ಟು ಸಿನಿಮಾಗಳಲ್ಲಿ ನಟಿಸಿ ಅದಾದ ಬಳಿಕ ಕಿರುತೆರೆಯಲ್ಲಿಯೂ ಮಿಂಚಿದರು. ಇನ್ನು ನಿರ್ದೇಶನ ನಿರ್ಮಾಪಕನಾಗಿಯೂ ಕೆಲಸ ಮಾಡಿದ್ದು ಸದ್ಯ ಇದೀಗ ಜೀ ಕನ್ನಡದಲ್ಲಿ ಪ್ರಸಾರವಾಗುವ ಶೋಗಳ ನಿರೂಪಣೆಯ ಜವಾಬ್ದಾರಿ ಹೊತ್ತು ನಾಡಿನ ಮನೆ ಮಂದಿಯ ಬಾಯಲ್ಲಿ ನಲಿಯುತ್ತಿದ್ದಾರೆ.

ಸದ್ಯ ಇದೀಗ ಇದೇ ಮಾಸ್ಟರ್‌ ಆನಂದ್‌ ಮಗಳು ವಂಶಿಕಾ ಕಶ್ಯಪ್‌ ಸಿನಿಮಾ ಕ್ಷೇತ್ರಕ್ಕೆ ಎಂಟ್ರಿ ಕೊಡಲು ಸಜ್ಜಾಗಿದ್ದಾರೆ. ಈಗಾಗಲೇ ಕಿರುತೆರೆಯಲ್ಲಿ ದೊಡ್ಡ ಹೆಸರು ಮಾಡಿರುವ ಈ ಪುಟಾಣಿ ಸಾಮಾಜಿಕ ಜಾಲತಾಣದಲ್ಲಿಯೂ ದೊಡ್ಡ ಅಭಿಮಾನಿ ಬಳಗವನ್ನು ಸಂಪಾದಿಸಿದ್ದು ತನ್ನ ಕ್ಯೂಟ್‌ ಮಾತು ಹಾವಭಾವದ ಮೂಲಕವೇ ಎಲ್ಲರ ಪ್ರೀತಿ ಅಭಿಮಾನವನ್ನು ಗಳಿಸಿದ್ದು ಈಗ ಹಿರಿತೆರೆಯ ಕಡೆ ಮುಖ ಮಾಡಿದ್ದಾರೆ.

ಕಿರುತೆರೆಯಲ್ಲಿ ಪ್ರಸಾರವಾದ ನನ್ನಮ್ಮ ಸೂಪರ್ ಸ್ಟಾರ್ ಮತ್ತು ಗಿಚ್ಚಿ ಗಿಲಿಗಿಲಿ ಶೋನಲ್ಲಿ ದೊಡ್ಡ ಮಟ್ಟದ ಹವಾ ಸೃಷ್ಟಿಸಿರುವ ವಂಶಿಕಾ ನಟನೆ ಡಾನ್ಸ್‌ ತನ್ನ ಎಕ್ಸ್‌ಪ್ರೆಷನ್‌ ಮೂಲಕವೇ ತೀರ್ಪುಗಾರರ ಗಮನ ಸೆಳೆದಿದ್ದು ಸದ್ಯ ಇದೀಗ ಇದೇ ಪುಟಾಣಿ ವಸಿಷ್ಠ ಸಿಂಹ ನಾಯಕನಾಗಿ ನಟಿಸುತ್ತಿರುವ ಲವ್‌ಲಿ ಚಿತ್ರಕ್ಕೆ ಎಂಟ್ರಿಕೊಟ್ಟಿದ್ದಾಳೆ. ಸ್ವತಃ ವಸಿಷ್ಠ ಸಿಂಹ ತಮ್ಮ ಸೋಷಿಯಲ್‌ ಮೀಡಿಯಾ ಟ್ವಿಟರ್‌ನಲ್ಲಿ ಈ ಪುಟಾಣಿಯನ್ನು ಸ್ವಾಗತಿಸಿದ್ದು ರಿಯಾಲಿಟಿ ಶೋಗಳಲ್ಲಿ ಮಿಂಚುತ್ತಿದ್ದಂತೆ ಇದೇ ಪುಟಾಣಿಗೆ ಸಾಕಷ್ಟು ಸಿನಿಮಾ ಆಫರ್‌ಗಳು ಬಂದಿವೆ.

ಆ ಪೈಕಿ ಲವ್‌ಲಿ ಮೊದಲ ಸಿನಿಮಾವಾಗಿದ್ದು, ಇನ್ನೇನು ಶೀಘ್ರದಲ್ಲಿ ಶೂಟಿಂಗ್‌ನಲ್ಲಿಯೂ ಭಾಗವಹಿಸಲಿದ್ದು ಈ ಚಿತ್ರದಲ್ಲಿಯ ವಂಶಿಕಾಳ ಪಾತ್ರವೇನು? ಇದರ ಬಗ್ಗೆ ಚಿತ್ರತಂಡ ಯಾವುದೇ ಮಾಹಿತಿ ನೀಡಿಲ್ಲ. ಇನ್ನು ಲವ್ ಲಿ ಚಿತ್ರಕ್ಕೆ ವಸಿಷ್ಠ ಸಿಂಹ ಜೊತೆ ತೆರೆ ಹಂಚಿಕೊಳ್ಳುವರ್ಯಾರು ಎಂಬ ಕುತೂಹಲ ಎಲ್ಲರಲ್ಲಿತ್ತು. ಆ ಕುತೂಹಲಕ್ಕೆ ಇತ್ತೀಚೆಗಷ್ಟೇ ಬ್ರೇಕ್ ಬಿದ್ದಿತ್ತು. ವಸಿಷ್ಠ ಸಿಂಹನಿಗೆ ನಾಯಕಿಯಾಗಿ ಜಾರ್ಖಂಡ್ ಮೂಲದ ಸ್ಟೆಫಿ ಪಟೇಲ್ ಆಯ್ಕೆಯಾಗಿದ್ದು ಹಿಂದಿ ಕೊರಿಯನ್ ತಮಿಳು ಭಾಷೆಗಳ ಸಿನಿಮಾ ಮತ್ತು ವೆಬ್ ಸಿರೀಸ್ ಗಳಲ್ಲಿ ನಟಿಸಿರುವ ಸ್ಟೆಫಿ ಪಟೇಲ್ ಗೆ ಇದು ಮೊದಲ ಕನ್ನಡ ಸಿನಿಮಾ. ಈಗಾಗಲೇ ಸ್ಟೆಫಿ ಪಟೇಲ್ ಲವ್ ಲಿ ಚಿತ್ರತಂಡ ಸೇರಿಕೊಂಡಿದ್ದು ಶೂಟಿಂಗ್‌ನಲ್ಲಿ ಭಾಗವಹಿಸಿದ್ದಾರೆ..

ಇನ್ನು ಲಿ ಕಮರ್ಷಿಯಲ್ ರೊಮ್ಯಾಂಟಿಕ್ ಲವ್ ಸ್ಟೋರಿ ಸಿನಿಮಾವಾಗಿದ್ದು ರೊಮ್ಯಾನ್ಸ್-ಲವ್ ಸ್ಟೋರಿ ಜೊತೆಗೆ ರೌಡಿಸಂ ವಿಭಿನ್ನ ಕಥಾಹಂದರವನ್ನು ಸಿನಿಮಾ ಒಳಗೊಂಡಿದೆ. ಇನ್ನು ಕಳೆದ ಎಂಟು ವರ್ಷಗಳಿಂದ ವಸಿಷ್ಠ ಸಿಂಹ ಜೊತೆಯಲಿ ಇರುವ ಹಾಗೂ ಮಫ್ತಿ ನಿರ್ದೇಶಕ ನರ್ತನ್ ಜೊತೆ ಕೆಲಸ ಮಾಡಿ ಅನುಭವವಿರುವ ಚೇತನ್ ಕೇಶವ್ ಈ ಸಿನಿಮಾಗೆ ಆಕ್ಷನ್ ಕಟ್ ಹೇಳುತ್ತಿದ್ದಾರೆ.

ಚಿತ್ರವನ್ನು ಎಂ.ಆರ್ ರವೀಂದ್ರ ಕುಮಾರ್ ನಿರ್ಮಿಸುತ್ತಿದ್ದು, ಹರೀಶ್ ಕೊಮ್ಮೆ ಸಂಕಲನ ಅಶ್ವಿನ್ ಕೆನಡಿ ಕ್ಯಾಮರಾ ವರ್ಕ್ ಅನೂಪ್ ಸೀಳಿನ್ ಸಂಗೀತ ನಿರ್ದೇಶನ ಲವ್ ಲಿ ಚಿತ್ರಕ್ಕಿದೆ. ಸದ್ಯ ವಂಶಿಕಾ ಇದೀಗ ಎಲ್ಲಾ ವಲಯದಲ್ಲೂ ಸದ್ದು ಮಾಡುತ್ತಿದ್ದು ಅಶ್ವಿನಿ ಪುನೀತ್ ರಾಜ್ ಕುಮಾರ್ ಅವರ ಜೊತೆಗೆ ಗಂಧದ ಗುಡಿ ಸಿನಿಮಾ ನೋಡಿದ್ದು ಅಶ್ವಿನಿಯವರು ವಂಶಿಕಾಳನ್ನು ಎತ್ತಿ ಮುದ್ದಾಡುತ್ತಿರುವ ವಿಡಿಯೋವೊಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು.

ಆದರೆ ಇದೀಗ ಮತ್ತೆ ವಂಶಿಕಾಳ ಮತ್ತೊಂದು ವಿಡಿಯೋವೊಂದು ವೈರಲ್ ಆಗಿದೆ. ಈ ವಿಡಿಯೋದಲ್ಲಿ ಅಣ್ಣಾವ್ರ ಬಬ್ರುವಾಹನ ಸಿನಿಮಾದ ಡೈಲಾಗ್ ಲೀಲಾ ಜಾಲವಾಗಿ ಹೇಳಿದ್ದು ಪಟ ಪಟನೇ ಅಣ್ಣಾವ್ರ ಸಿನಿಮಾದ ಡೈಲಾಗ್ ಹೇಳಿದ್ದು ಈ ವಿಡಿಯೋಗೆ ಎಲ್ಲರೂ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.