ಚಿತ್ರರಸಿಕರಿಗೆ ಡಿ ಬಾಸ್ ಎಂಬ ಹೆಸರು ಕೇಳಿದರೆ ಸಾಕು ಅದೊಂದು ರೀತಿಯ ರೋಮಾಂಚನ ಮತ್ತು ವಿಶೇಷವಾದ ಪ್ರೀತಿ ಎಂದೇ ಹೇಳಬಹುದು. ಸಿನಿಮಾಗಳನ್ನು ಹೊರತುಪಡಿಸಿ ನೇರನುಡಿ ವ್ಯಕ್ತಿತ್ವ ಸಹಜ ಗುಣ ಸಹಾಯ ಮಾಡುವ ಮನೋಭಾವ ಇದೆಲ್ಲದರಿಂದಾಗಿ ದರ್ಶನ್ ಮೇಲೆ ಅಭಿಮಾನಿಗಳಿಗೆ ವಿಶೇಷವಾದಂತಹ ಗೌರವ ಹುಟ್ಟಿಕೊಂಡಿದೆ ಅಂತಾನೂ ಹೇಳಬಹುದು.
ಸದ್ಯ ಇದೀಗ ದರ್ಶನ್ ರವರ ನೇರ ನುಡಿಯೇ ಮುಳ್ಳಾಗಿದ್ದು ಮಾಧ್ಯಮದವರಿಗೆ ಚಳಿ ಬಿಡಿಸಿದರು ಎಂಬ ಕಾರಣಕ್ಕಾಗಿ ಇದೀಗ ಅವರನ್ನು ಬ್ಯಾನ್ ಮಾಡಲಾಗಿದೆ. ಹೌದು ಯಾವುದೇ ಸುದ್ದಿ ವಾಹಿನಿಯಲ್ಲಿಯೂ ಕೂಡ ದರ್ಶನ್ ಕುರಿತಾದಂತಹ ಸಣ್ಣ ವಿಚಾರವೂ ಕೂಡ ಪ್ರಸಾರವಾಗುವುದಿಲ್ಲ.ಇದರಿಂದಾಗಿ ದರ್ಶನ್ ಸಿನಿಮಾಗಳ ಮೇಲೆ ಭಾರಿ ಹೊಡೆತ ಬೀಳುತ್ತಿದೆ ಎನ್ನಬಹುದು.
ಆದರೆ ಮಾತ್ರ ಅಭಿಮಾನಿಗಳು ಡಿ ಬಾಸ್ ಕೈ ಬಿಡುತ್ತಿಲ್ಲ. ಮೀಡಿಯಾದವರು ಚಿತ್ರದ ಪ್ರಚಾರ ಮಾಡದೆ ಇದ್ದರೆ ಏನು? ಅಭಿಮಾನಿಗಳು ನಾವಿದ್ದೀವಲ್ಲ ಎಂದು ಘಂಟಾ ಘೋಷವಾಗಿ ಕೂಗಿ ಕ್ರಾಂತಿ ಯಾತ್ರೆ ಪ್ರಾರಂಭಿಸಿದ್ದಾರೆ. ಸದ್ಯ ಅಭಿಮಾನಿಗಳು ಮಾಡುತ್ತಿರುವ ಪ್ರವಾರದ ಕುರಿತು ದರ್ಶನ್ ಕೂಡ ಭಾವುಕರಾಗಿದ್ದು ತನ್ನ ಅಭಿಮಾನಿಗಳಿಗೆಲ್ಲ ಕೈಮುಗಿದು ಧನ್ಯವಾದಗಳನ್ನು ತಿಳಿಸಿದ್ದರು.ನಿಜಕ್ಕೂ ಕನ್ನಡ ಚಿತ್ರರಂಗದಲ್ಲಿ ಈ ಬಾಕ್ಸಾಫೀಸ್ ಸುಲ್ತಾನನಿಗೆ ಇರುವಂತಹ ಅಭಿಮಾನಿ ಬಳಗ ಯಾರಿಗೂ ಕೂಡ ಇಲ್ಲ ಅಂತಾನೇ ಹೇಳಬಹುದು.
ಇನ್ನು ಚಿತ್ರರಂಗದಲ್ಲಿ ಚಾಲೆಂಜಿಂಗ್ ಸ್ಟಾರ್ ಹಾಗೂ ಬಾಕ್ಸಾಫೀಸ್ ಸುಲ್ತಾನ ಡಿ ಬಾಸ್ ಅಂತೆಲ್ಲ ಹೆಸರುಗಳಿಸಿರುವ ದರ್ಶನ್ ರವರ ಸಿನಿಮಾ ಹಾದಿ ಅಷ್ಟು ಸುಲಭವಾಗಿರಲಿಲ್ಲ. ತಂದೆ ಚಿತ್ರರಂಗದ ಖ್ಯಾತ ನಟ ಆಗಿದ್ದರು ಕೂಡ ದರ್ಶನ್ ರವರು ನಟನಾಗಿ ಬೆಳೆಯಲು ಸೈಕಲ್ ಹೊಡೆಯ ಬೇಕಾಗಿತ್ತು.
ಮೊದಮೊದಲು ನೀನಾಸಮ್ ನಲ್ಲಿ ನಟನೆಯ ತರಬೇತಿ ಪಡೆದ ದರ್ಶನ್ ರವರು ಚಿತ್ರರಂಗಕ್ಕೆ ಬಂದಿದ್ದು ಮಾತ್ರ ಲೈಟ್ ಮ್ಯಾನ್ ಆಗಿ. ಹೌದು ಶಿವರಾಜಕುಮಾರ್ ಅಭಿನಯದ ಜನುಮದ ಜೋಡಿ ಸಿನಿಮಾದಲ್ಲೂ ಕೂಡ ದರ್ಶನ್ ಲೈಟ್ ಬಾಯ್ ಆಗಿ ಕೆಲಸ ಮಾಡಿದ್ದರು. ತದನಂತರ ಅಸಿಸ್ಟೆಂಟ್ ಕ್ಯಾಮೆರಾಮೆನ್ ಆಗಿ ಕೂಡಾ ಕಾರ್ಯ ನಿರ್ವಹಿಸಿದ್ದರು.ಇದೀಗ ಡ್ಯೂಪ್ ಬಳಸದೆ ದರ್ಶನ್ ಮಾಡಿದ ಫೈಟ್ ನೋಡಿ.