ನಮ್ಮ ಚೆಂದನವನದ ಭರವಸೆಯ ನಿರ್ದೇಶಕ ರಿಷಬ್ ಶೆಟ್ಟಿ ಅವರ ನಟನೆಯ ಮತ್ತು ನಿರ್ದೇಶನದ ಬಹು ನಿರೀಕ್ಷಿತ ಚಿತ್ರ ಕಾಂತಾರ Kantara ರಾಜ್ಯಾದ್ಯಂತ ಭರ್ಜರಿ ಪ್ರದರ್ಶನ ಕಾಣುತ್ತಿದ್ದು ವಿಶ್ವದಾದ್ಯಂತ ತೆರೆ ಕಂಡಿರುವ ಕಾಂತಾರ ಚಿತ್ರ ಇಂದಿಗೂ ಕೂಡ ಯಶಸ್ವಿ ಪ್ರದರ್ಶನ ಕಾಣುತ್ತಿದೆ.
ಬಹುತೇಕ ಚಿತ್ರಮಂದಿರಗಳಲ್ಲಿ ಕಾಂತಾರ ಹೌಸ್ಫುಲ್ ಪ್ರದರ್ಶನ ಕಾಣುತ್ತಿದ್ದು ಪ್ರತಿಯೊಬ್ಬ ಪ್ರೇಕ್ಷಕನಿಂದಲೂ ಕೂಡ ಮೆಚ್ಚುಗೆ ಪಡೆದಿರುವ ಕಾಂತಾರ ಚಿತ್ರ ಸಾಮಾಜಿಕ ಜಾಲತಾಣಗಳಲ್ಲಿ ಅತ್ಯುತ್ತಮ ವಿಮರ್ಶೆ ಪಡೆದುಕೊಂಡಿದ್ದು ಚಿತ್ರ ವೀಕ್ಷಿಸಿದ ಪ್ರತಿಯೊಬ್ಬರು ಕೂಡ ರಿಷಬ್ ಶೆಟ್ಟಿ ನಿರ್ದೇಶನ ಹಾಗೂ ನಟನೆಗೆ ಮಾರು ಹೋಗಿ ವಾವ್ ಎಂದಿದ್ದು ಈವರೆಗೂ ಚಿತ್ರಕ್ಕೆ ಎಲ್ಲಿಯೂ ಕೂಡ ನಕಾರಾತ್ಮಕ ಪ್ರತಿಕ್ರಿಯೆ ವ್ಯಕ್ತವಾಗಿಲ್ಲ. ಇನ್ನು ಚಿತ್ರದ ಪ್ರತಿಯೊಂದು ಪಾತ್ರವೂ ಕೂಡ ಪ್ರೇಕ್ಷಕರ ಮನಸೂರೆಗೊಂಡಿದ್ದು ಕಾಂತಾರ ಚಿತ್ರದ ಶಿವ ಪಾತ್ರದಷ್ಟೇ ಪ್ರೇಕ್ಷಕರನ್ನು ಮೆಚ್ಚಸಿರುವ ಮತ್ತೊಂದು ಪಾತ್ರ ಕಮಲ.ಶಿವನ ತಾಯಿ ಪಾತ್ರ.
ಹೌದು ಈ ಪಾತ್ರವನ್ನು ನಿರ್ವಹಿಸಿರುವ ಮಾನಸಿ ಸುಧೀರ್ ಚಿತ್ರದ ಬಗ್ಗೆ ಮಾತನಾಡಿದ್ದಾರೆ.ಕಾಂತಾರ ಚಿತ್ರದಲ್ಲಿ ಶಿವನ ತಾಯಿ ಪಾತ್ರ ಅಂದರೆ ಕಮಲ ಪಾತ್ರ ನಿರ್ವಹಿಸಿರುವ ನಿಜವಾದ ಹೆಸರು ಮಾನಸಿ ಸುಧೀರ್ ಎಂಬುದಾಗಿದ್ದು ಸೋಶಿಯಲ್ ಮೀಡಿಯಾ ಬಳಕೆದಾರರಿಗೆ ಇವರು ಚಿರಪರಿಚಿತರಾಗಿರುತ್ತಾರೆ. ಶಾಸ್ತ್ರೀಯ ನೃತ್ಯ ಕಲಾವಿದೆಯಾಗಿರುವ ಮಾನಸಿ ಸುಧೀರ್ ಲಾಕ್ಡೌನ್ ಸಂದರ್ಭಗಳಲ್ಲಿ ಭಾವಗೀತೆಗಳನ್ನು ಹಾಡಿ ಅದಕ್ಕೆ ತಕ್ಕಂತೆ ನಟಿಸಿ ಸೋಶಿಯಲ್ ಮೀಡಿಯಾದಲ್ಲಿ ಶೆರ್ ಮಾಡುತ್ತಿದ್ದರು.
ಈ ವಿಡಿಯೋಗಳು ೩ಸಖತ್ ವೈರಲ್ ಆಗಿದ್ದವು. ಅನೇಕ ರಂಗಕರ್ಮಿಗಳು ಮಾನಸ ಸುಧೀರ್ ರವರ ನಟನೆಗೆ ಮೆಚ್ಚುಗೆ ವ್ಯಕ್ತಪಡಿಸಿದ್ದು ಮಾನಸಿ ಸುಧೀರ್ ಅವರು ಪತಿ ವಿದ್ವಾನ್ ಸುಧೀರ್ ಅವರೊಂದಿಗೆ ನೃತ್ಯ ಶಾಲೆ ನಡೆಸುತ್ತಿದ್ದಾರೆ. ಇನ್ನು ಮಾನಸಿ ಸುಧೀರ್ ಅವರಿಗೆ ಕಾಂತಾರ ಮೊದಲ ಚಿತ್ರವಲ್ಲ. ಹೌದು ಈ ಹಿಂದೆ ಕೂಡ ಅವರು ಸಿನಿಮಾದಲ್ಲಿ ನಟಿಸಿದ್ದು ಈ ಬಗ್ಗೆ ಇತ್ತೀಚೆಗೆ ನಡೆದ ಸಂದರ್ಶನವೊಂದರಲ್ಲಿ ಅವರು ಮಾತನಾಡಿದ್ದಾರೆ .
ನಾನು ಮೂಲತಃ ಭರತ ನಾಟ್ಯ ಕಲಾವಿದೆ. ಸಿನಿಮಾದಲ್ಲಿ ನಾನು ಮೊದಲ ಬಾರಿಗೆ ನಟಿಸುತ್ತಿರುವುದಲ್ಲ. 2006 ರಲ್ಲಿ ಸುನೀಲ್ ದೇಸಾಯಿ ಅವರ ರಮ್ಯಾ ಚೈತ್ರಾ ಕಾಲ ಚಿತ್ರದ ನಾಯಕಿಯಾಗಿ ನಟಿಸಿದ್ದೆ. ನಿಖಿಲ್ ಮಂಜು ಅವರ ನಿರ್ದೇಶನದ ರಿಸರ್ವೇಶನ್ ಎನ್ನುವ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದೆ ರಾಘವೇಂದ್ರ ರಾಜ್ಕುಮಾರ್ ಅವರ ಚಿತ್ರದಲ್ಲೂ ಕೂಡ ನಟಿಸಿರುವುದಾಗಿ ಮಾನಸ ಸುಧೀರ್ ಹೇಳಿದ್ದಾರೆ.
ಇನ್ನು ಕಾಂತಾರ ಸಿನಿಮಾದ ಬಗ್ಗೆ ಮಾತನಾಡಿದ ಅವರು ಕಾಂತಾರದಲ್ಲಿ ಮೊದಲ ದೃಶ್ಯವೇ ರಿಷಬ್ ಸರ್ ಅವರ ಕೆನ್ನೆಗೆ ಭಾರಿಸುವವುದು ಆಗಿದ್ದು ಆ ಕ್ಷಣವನ್ನು ಈಗ ನೆನಪು ಮಾಡಿಕೊಂಡರೂ ಮೈ ಜುಮ್ ಎನ್ನುತ್ತದೆ. ಮೊದಲ ಬಾರಿಗೆ ಚಿತ್ರೀಕರಣದ ವೇಳೆ ನೆರೆದಿದ್ದ ಜನ ಸಾಗರ ನೋಡಿ ಕಂಗಾಲಾಗಿದ್ದು ಮೊದಲೆ ನಮಗೆ ವರ್ಕ್ಶಾಪ್ಗಳನ್ನು ಮಾಡಿ ಆ ಪಾತ್ರವನ್ನು ಸ್ವೀಕರಿಸುವಂತೆ ನಮ್ಮನ್ನು ತಯಾರಿ ಮಾಡಿದ್ದರು ಆ ಕ್ಷಣಕ್ಕೆ ನಟಿಸುವಾಗ ಭಯವಾಗಿತ್ತು. ಚಿತ್ರ ಈಗ ನಿರೀಕ್ಷೆಗೂ ಮೀರಿ ಹಿಟ್ ಆಗಿದೆ ತುಂಬಾ ಖುಷಿ ಇದೆ ಎಂದು ತಮ್ಮ ಸಂತಸವನ್ನು ಹಂಚಿಕೊಂಡಿದ್ದಾರೆ.