ವಾರ್ತಾ ಮಂಜರಿ
Trending Stories, Viral News, Gossips & Everything in Kannada

Hari: ಸಿಹಿ ಸುದ್ದಿ ಹಂಚಿಕೊಂಡ ಫ್ರೆಂಡ್ಸ್ ಸಿನೆಮಾ ಖ್ಯಾತಿಯ ನಟ ಹರಿ ಹಾಗು ಚೈತ್ರ ರೆಡ್ಡಿ

1,764

ಸಾಮಾನ್ಯವಾಗಿ ಸಿನಿಮಾ ಅಂದರೇನೆ ಹಾಗೆ. ಯಾವಾಗ ಹೇಗೆ ಬದಲಾಗುತ್ತದೆ ಎಂದು ಹೇಳಕಾಗುವುದಿಲ್ಲ. ಹೌದು ಶೇರ್ ಮಾರ್ಕೆಟ್ ನ ರೀತಿ ಹೇಗೆ ಬೇಕಾದರೂ ಶೇಕ್ ಆಗುತ್ತದೆ. ಇನ್ನು ಹಾಗಾಗಿಯೇ ಸಿನಿಮಾವನ್ನೇ ನಂಬಿಕೊಂಡ ಕಲಾವಿದರ ಬದುಕು ಕೂಡ ಬದಲಾಗುತ್ತಲೇ ಇರುತ್ತದೆ. ಇನ್ನು 2002ರಲ್ಲಿ ಫ್ರೆಂಡ್ ಎಂಬ ಒಂದು ಸಿನಿಮಾ ಬಂದಿದ್ದು ಅದೇ ತಿರುಪತಿ ತಿರುಮಲ ವೆಂಕಟೇಶ ಹಾಡು ಇರೋ ಸಿನಿಮಾ. ಈ ಸಿನಿಮಾದ ಕಲಾವಿದರ ಪೈಕಿ ಹರಿ ಕೂಡ ಒಬ್ಬರಾಗಿದ್ದಿ ತಮ್ಮ ದೈತ್ಯ ದೇಹ ಮತ್ತು ಕಾಮಿಡಿ ಟೈಮಿಂಗ್ ಮೂಲಕ ಈ ನಟ ಗಮನ ಸೆಳೆದಿದ್ದರು.

ಇನ್ನು ಫ್ರೆಂಡ್ಸ್ ಸಿನಿಮಾ ಏನೋ ದೊಡ್ಡ ಹಿಟ್ ಆಯ್ತು. ಆದರೆ ಹರಿ Hari  ಫ್ರೆಂಡ್ಸ್ ಸಿನಿಮಾ ಬಳಿಕ ಕೆಲವೊಂದು ಸಿನಿಮಾ ಮಾಡಿದ್ದರು ಕೂಡ ಯಾವುದು ದೊಡ್ಡ ಹೆಸರು ನೀಡಲಿಲ್ಲ. ಕ್ಯಾಮರಾ ಮುಂದೆ ಇರಬೇಕಿದ್ದ ಕಲಾವಿದ ಅವಕಾಶಗಳ ಕೊರತೆಯಿಂದಾಗಿ ಕ್ಯಾಮರಾ ಮ್ಯಾನ್ ಜೊತೆಗೆ ಕೆಲಸ ಮಾಡುವ ಪರಿಸ್ಥಿತಿ ಬಂತು. ಹೌದು 17 ವರ್ಷಗಳಿಂದ ತೆರೆ ಹಿಂದೆ ಕೆಲಸ ಮಾಡಿಕೊಂಡು ಸಣ್ಣ ಪುಟ್ಟ ಪಾತ್ರಗಳಿಗೆ ಸೀಮಿತನಾಗಿದ್ದ ಈ ನಟ ಈಗ ಹೀರೋ ಆಗಿದ್ದಾರೆ. ಹೌದು ಎಂ ಆರ್ ಪಿ ಸಿನಿಮಾದ ಮೂಲಕ ಹರಿ ನಾಯಕನಾಗಿದ್ದಾರೆ.

ಸದ್ಯ ತಮ್ಮ ಎಂ ಆರ್ ಪಿ ಸಿನಿಮಾದ ಬಗ್ಗೆ ಹಾಗೂ ಇಷ್ಟು ವರ್ಷದ ಏಳು ಬೀಳಿನ ಬಗ್ಗೆ ಮಾತನಾಡಿದ್ದು
ಇನ್ನು ಫ್ರೆಂಡ್ಸ್ ನಂತರ ನಾಲ್ಕೈದು ಸಿನಿಮಾ ಮಾಡಿದ್ದು ಅಷ್ಟೊಂದು ತೃಪ್ತಿ ನೀಡಲಿಲ್ಲ. ನಂತರ ಟೆಕ್ನಿಷಿಯಲ್ ಆಗಿ ಮುಂದುವರೆಯುವ ನಿರ್ಧಾರ ಮಾಡಿದೆ. ಕ್ಯಾಮರಾ ಮ್ಯಾನ್ ಕೃಷ್ಣ ಕುಮಾರ್ ರವರ ಜೊತೆಗೆ ಕೆಲಸ ಮಾಡಲು ಶುರು ಮಾಡಿದೆ. ಅದರ ಜೊತೆ ಜೊತೆಗೆ ಸಿಕ್ಕ ಸಣ್ಣ ಪುಟ್ಟ ಪಾತ್ರಗಳಲ್ಲಿ ಕೂಡ ನಟಿಸಿದೆ ಎಂದಿದ್ದಾರೆ.

ಈಗಲೂ ನಾನು ಟೆಕ್ನಿಷಿಯನ್ ಆಗಿಯೇ ಕೆಲಸ ಮಾಡುತ್ತಿದ್ದು ಒಂದು ಒಳ್ಳೆಯ ಕಥೆ ಇದೆ ಎಂದು ನಿರ್ದೇಶಕರು ಸಂಪರ್ಕ ಮಾಡಿದರು. ನನಗಾಗಿಯೇ ಒಂದು ಕಥೆ ಮಾಡಿದ್ದೇನೆ ಎಂದರು. ನಾನು ಈ ಸಿನಿಮಾ ಮಾಡುವುದೋ ಬೇಡವೋ ಎನ್ನುವ ಅನುಮಾನದಲ್ಲಿ ಇದ್ದೆ. ಆದರೆ ನನಗಾಗಿ ಒಂದ ಈ ಅವಕಾಶವನ್ನು ಬಿಟ್ಟು ಬಿಡಲು ಮನಸ್ಸಾಗಲಿಲ್ಲ ಎಂದು ಚಿತ್ರಕ್ಕೆ ಆಯ್ಕೆಯಾದ ಕುರಿತು ಮಾತನಾಡಿದ್ದಾರೆ.ಇನ್ನೂ ಹಲವು ವಿಶೇಷತೆಗಳಿಂದ ಕೂಡಿದ್ದು ಜನರಿಗೆ ನಿರೀಕ್ಷೆ ಹೆಚ್ಚಿಸಿದೆ ಅಂತಾನೇ ಹೇಳಬಹುದು. ಇದೆಲ್ಲದರ ನಡುವೆ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ಯುವಕರೆಲ್ಲರೂ ಕೂಡ ಕಣ್ಣೀರಿಟ್ಟಿದ್ದಾರೆ.

ಹೌದು ಎಲ್ಲರಿಗೂ ಕೂಡ ತಿಳಿದಿರಬಹುದು ಇತ್ತೀಚೆಗೆ ತಮಿಳು ಚಿತ್ರರಂಗದಲ್ಲಿ ನಟಿ ಮಹಾಲಕ್ಷ್ಮಿ
ಹಾಗೂ ನಿರ್ಮಾಪಕ ರವಿಚಂದ್ರನ್ ರವರ ಮದುವೆ ಸಾಮಾಜಿಕ ಜಾಲತಾಣದಿಂದ ಹಿಡಿದು ಮಾಧ್ಯಮಗಳವರೆಗೂ ಕೂಡ ದೊಡ್ಡ ಮಟ್ಟದಲ್ಲಿ ಸಂಚಲನ ಮೂಡಿಸಿತ್ತು. ಸದ್ಯ ಇದೀಗ ಅದೇ ರೀತಿಯಾಗಿ ಕನ್ನಡದಲ್ಲಿ ಜೋಡಿಯೊಂದು ಬಹಳ ಸದ್ದು ಮಾಡುತ್ತಿದೆ.

ಹೌದು ಎಂ ಆರ್ ಪಿ ಚಿತ್ರದ ನಾಯಕ ಶ್ರೀಹರಿ ಹಾಗು ನಟಿ ಚೈತ್ರಾ ರೆಡ್ಡಿ ಯವರು ವಿವಾಹವಾಗಿರುವ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು ರವೀಂದ್ರನ್ ಹಾಗೂ ಮಹಾಲಕ್ಷ್ಮೀ ಅವಂತೆಯೇ ಇದೆ ಈ ಜೋಡಿ ಎನ್ನುತ್ತಿದ್ದಾರೆ ನೆಟ್ಟಿಗರು. ಮೂಲಗಳ ಪ್ರಕಾರ ಈ ಚಿತ್ರಕ್ಕೆ ಚೈತ್ರಾ ರೆಡ್ಡಿಯವರೇ ಹೀರೋಯಿನ್ ಆಗಿದ್ದು ತೆರೆಯ ಮೇಲೆ ಇವರಿಬ್ಬರ ಕಮಾಲ್ ಹೇಗೇ ಇರುತ್ತದೆ ಕಾದು ನೋಡಬೇಕಿದೆ.