ವಾರ್ತಾ ಮಂಜರಿ
Trending Stories, Viral News, Gossips & Everything in Kannada

Dhruva Sarja: ಪತ್ನಿಗೆ ಪ್ರೀತಿಯಿಂದ ಕಿಸ್ ಮಾಡಿದ ಧ್ರುವ ಸರ್ಜಾ…ವಿಡಿಯೋ ನೋಡಿ ಕ್ಷಣಗಳು

229

ಸದ್ಯ ಕನ್ನಡ ಚಿತ್ರರಂಗದ ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ  Dhruva Sarja ರವರು ಮೂವತ್ತ ಮೂರನೇ ವರ್ಷದ ಹುಟ್ಟುಹಬ್ಬವನ್ನು ಸರಳವಾಗಿ ಆಚರಿಸಿಕೊಂಡಿದ್ದು ಈ ವರುಷ ಧ್ರುವ ಸರ್ಜಾ ರವರ ಪಾಲಿಗೆ ಅತ್ಯಂತ ವಿಶೇಷ ಹುಟ್ಟುಹಬ್ಬವಾಗಿದೆ ಎನ್ನಬಹುದು. ಹೌದು ಪತ್ನಿ ಪ್ರೇರಣಾ ರವರು ಗಂಡನಿಗೆ ಮರೆಯಲಾಗದ ಅಮೂಲ್ಯವಾದಂತಹ ಅದ್ಬುತ ಉಡುಗೊರೆಯೊಂದನ್ನು ನೀಡಿದ್ದಾರೆ.

ನಟ ಧ್ರುವ ಸರ್ಜಾ ಅವರು ಕಳೆದ ಎರಡು ವರ್ಷ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಂಡಿರಲಿಲ್ಲ‌. ಈ ವರ್ಷವೂ ಕೂಡ ಅಭಿಮಾನಿಗಳಿಗೆ ತಾವುಗಳು ಇದ್ದಲ್ಲಿಯೇ ಹಾರೈಸಿ ಎಂದು ಮನವಿ ಮಾಡಿಕೊಂಡಿದ್ದು ಆದರೂ ಕೂಡ ಕೆಲ ಅಭಿಮಾನಿಗಳು‌ ಮನೆಗೆ ಆಗಮಿಸಿ ಕೇಕ್ ತಂದು ನೆಚ್ಚಿನ ನಟನ ಹುಟ್ಟುಹಬ್ಬವನ್ನು ಸರಳವಾಗಿ ಆಚರಣೆ ಮಾಡಿದ್ದಾರೆ.

ಎರಡು ವರ್ಷದ ಹಿಂದೆಯಷ್ಟೆ ನಟ ಚಿರು ಸರ್ಜಾ ರವರ ಅಕಾಲಿಕ ಅಗಲಿಕೆಯಿಂದಾಗಿ ಬಹಳಾನೇ ನೊಂದಿದ್ದ ಧ್ರುವ ಸರ್ಜಾ ಎರಡು ವರ್ಷಗಳಿಂದ ತಮ್ಮ ಹುಟ್ಟುಹಬ್ಬವನ್ನು ಆಚರಣೆ ಮಾಡಿಕೊಂಡಿರಲಿಲ್ಲ. ಆದರೆ ಈ ವರ್ಷ ಮಾತ್ರ ಧ್ರುವ ಅವರಿಗೆ ಬಹಳ ವಿಶೇಷ ಹುಟ್ಟುಹಬ್ಬವಾಗಿದ್ದು ಇದೇ ತಿಂಗಳು ಅಕ್ಟೋಬರ್ ಎರಡರಂದು ಮಗಳು ಹುಟ್ಟಿದ್ದ ಕಾರಣ ಅತ್ಯಂತ ಸಂತೋಷದಲ್ಲಿದ್ದಾರೆನ್ನಬಹುದು.

ಅಪ್ಪ ಮಗಳು ಇಬ್ಬರದ್ದೂ ಕೂಡ ಒಂದೇ ತಿಂಗಳಲ್ಲಿ ಹುಟ್ಟುಹಬ್ಬವಿದ್ದು ಕೇವಲ‌ ನಾಲ್ಕು ದಿನಗಳ ಅಂತರದಲ್ಲಿ ಮಗಳು ಮತ್ತು ಧೃವ ಸರ್ಜಾರ ಹುಟ್ಟುಹಬ್ಬವಿದ್ದು ಮುಂದಿನ ವರ್ಷದಿಂದ ಎರೆಡೆರೆಡು ಸಂಭ್ರಮ ಎನ್ನಬಹುದು. ನೆಚ್ಚಿನ ಪತಿಗೆ ಪ್ರೇರಣಾ ಸರ್ಜಾ ಅವರೂ ಕೂಡ ವಿಶೇಷವಾಗಿ ಶುಭ ಹಾರೈಸಿದ್ದು ಪತಿಯ 33 ನೇ ಹುಟ್ಟುಹಬ್ಬಕ್ಕೆ ಮರೆಯಲಾಗದ ಉಡುಗೊರೆ ನೀಡಿದ್ದಾರೆ.Dhruva Sarja and wife Prerana test coronavirus negative: I thank my uncle Arjun Sarja who stood by me - India Today

ಹೌದು ಧೃವ ಸರ್ಜಾ ಹಾಗೂ ಪ್ರೇರಣಾ ಅವರು ಬಾಲ್ಯದ ಸ್ನೇಹಿತರು ಎಂಬ ವಿಚಾರ ಎಲ್ಲರಿಗೂ ತಿಳಿದೇ ಇದ್ದು ಚಿಕ್ಕ ವಯಸ್ಸಿನಿಂದಲೂ ಕೂಡ ಪ್ರೀತಿಸಿ ಕಳೆದ ಮೂರು ವರ್ಷದ ಹಿಂದೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಧ್ರುವ ಹಾಗೂ ಪ್ರೇರಣಾ ಜೋಡಿಗೆ ಇದೀಗ ಹೆಣ್ಣು ಮಗು ಜನನವಾಗಿದ್ದು ಮನೆಗೆ ಮಹಾಲಕ್ಷ್ಮಿಯನ್ನು ಬರಮಾಡಿಕೊಂಡಿದ್ದಾರೆ.

ಹೌದು ಅಕ್ಟೋಬರ್ ಎರಡರಂದು ಗಾಂಧಿಜಯಂತಿಯ ವಿಶೇಷ ದಿನದಲ್ಲಿ ಪ್ರೇರಣಾ ಅವರು ಹೆಣ್ಣು ಮಗುವಿಗೆ ಜನ್ಮ ನೀಡಿದ್ದು ಚೆಂದದ ಮಗಳು ಹುಟ್ಟಿದ್ದಾಳೆ ನಿಮ್ಮೆಲ್ಲರ ಆಶೀರ್ವಾದವಿರಲಿ ಎಂದು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿ ಸಂತೋಷ ಹಂಚಿಕೊಂಡಿದ್ದರು ಧ್ರುವ ಸರ್ಜಾ.ಇನ್ನು ಇದೀಗ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದ ಸರ್ಜಾ ಅವರಿಗೆ ಮಡದಿ ಪ್ರೇರಣಾ ಕೂಡ ತಮ್ಮ ಇನ್ಸ್ಟಾಗ್ರಾಂ ನಲ್ಲಿ ಗಂಡನ ಕುರಿತು ಬರೆದು ಪೋಸ್ಟ್ ಮಾಡಿ ಹಾರೈಸಿದ್ದಾರೆ‌‌.

ಹೌದು ಧ್ರುವ ಅವರ ಜೊತೆಗಿನ ಆತ್ಮೀಯವಾದ ಫೋಟೋ ಹಂಚಿಕೊಂಡಿರುವ ಪ್ರೇರಣಾ ಹುಟ್ಟುಹಬ್ಬದ ಶುಭಾಶಯಗಳು ಪ್ರೀತಿಯ ಪತಿ ಹಾಗೂ ತಂದೆಗೆ. ಈ ಬಾರಿ ನಾನು ಅತ್ಯುತ್ತಮವಾದ ಉಡುಗೊರೆಯನ್ನೇ ನೀಡಿದ್ದೇನೆ ಎಂದು ನನಗೆ ತಿಳಿದಿದೆ ಎಂದು ಬರೆದು ಪೋಸ್ಟ್ ಮಾಡಿದ್ದು ಧ್ರುವ ಅವರು ಆಸೆಪಟ್ಟಂತೆ ಹೆಣ್ಣು ಮಗುವನ್ನೇ ಉಡುಗೊರೆಯಾಗಿ ನೀಡಿದ್ದರ ಬಗ್ಗೆ ಬರೆದುಕೊಂಡಿರುವ ಪ್ರೇರಣಾ ಅವರು ಪತಿಗೆ ಶುಭಾಶಯ ತಿಳಿಸಿದ್ದಾರೆ.

ಇನ್ನು ಅಷ್ಟು ಮಾತ್ರವಲ್ಲದೇ ಹನ್ನೆರೆಡು ಗಂಟೆಗೆ ಮನೆಯಲ್ಲಿಯೇ ಕೇಕ್ ತಿನ್ನಿಸಿ ಪತಿಯ ಹುಟ್ಟುಹಬ್ಬವನ್ನು ಸರಳವಾಗಿ ವಿಶೇಷವಾಗಿ ಆಚರಿಸಿದ್ದು ಸದ್ಯ ಪ್ರೇರಣಾ ಅವರು ಪೋಸ್ಟ್ ಮಾಡಿರುವ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ಧ್ರುವ ಸರ್ಜಾ ಅವರಿಗೆ ಅಭಿಮಾನಿಗಳು ಶುಭ ಕೋರಿದ್ದು ಈ ಜೋಡಿ ನೂರು ಕಾಲ ಹೀಗೆ ಸಂತೋಷವಾಗಿರಲಿ ಎಂದು ಹಾರೈಸಿದ್ದಾರೆ. ಸದ್ಯ ಇದೀಗ ಸಾಮಾಜಿಕ ಜಾಲತಾಣದಲ್ಲಿ ಪ್ರೇರಣಾ ಅವರು ಧ್ರುವ ಸರ್ಜಾ ಅವರ ಹುಟ್ಟುಹಬ್ಬವನ್ನು ಆಚರಿಸುತ್ತಿರುವ ವಿಡಿಯೋ ಬಹಳ ವೈರಲ್ ಆಗುತ್ತಿದೆ.

Dhruvasarja with baby girl Birthday Celebration | Dhruvasarja daughter Hospital Happy Moments