ವಾರ್ತಾ ಮಂಜರಿ
Trending Stories, Viral News, Gossips & Everything in Kannada

Rajani: ದಸರಾ ವೇದಿಕೆ ಮೇಲೆ ಅಮೃತ ವರ್ಷಿಣಿ ಧಾರಾವಾಹಿಯ ನಟಿ ರಜಿನಿಯ ಚಿಂದಿ ಡ್ಯಾನ್ಸ್…ವಿಡಿಯೋ

3,809

ಮೊದಮೊದಲು ಸ್ಟಾರ್ ಸುವರ್ಣ ವಾಹಿನಿ ಪ್ರಾರಂಭಗೊಂಡ ಆರಂಭದ ದಿನಗಳಲ್ಲಿ ಬಂದಂತಹ ಧಾರಾವಾಹಿ ಎಂದರೆ ಅಮೃತವರ್ಷಿಣಿ. ಹೌದು ಈ ಧಾರಾವಾಹಿಯಲ್ಲಿ ಹಿರಿಯ ಕಲಾವಿದರಾದ ಹೇಮಾ ಚೌಧರಿ ಅವರು ಕೂಡ ಅಭಿನಯಿಸಿದ್ದು ವಿಶೇಷ ಜೊತೆಗೆ ಅಮೃತವರ್ಷಿಣಿ ಧಾರಾವಾಹಿ ಮೂಲಕ ಅನೇಕ ಯುವಪ್ರತಿಭೆಗಳು ಸಹ ಕನ್ನಡ ಕಿರುತೆರೆಗೆ ಪರಿಚಯವಾಗಿದ್ದು ಅಮೃತವರ್ಷಿಣಿ ಧಾರಾವಾಹಿಯ ಕಥಾನಾಯಕಿ ಅಮೃತ ಪಾತ್ರ ನಿರ್ವಹಿಸಿದ ನಟಿ ರಜಿನಿ ರವರು ಮುಗ್ಧವಾದ ನಟನೆಯಿಂದ ಕರ್ನಾಟಕದ ಮನೆಮಾತಾಗಿದ್ದರು ಅಂತಾನೇ ಹೇಳಬಹುದು.

ಹೌದು ಅದರಲ್ಲಿಯೂ ಕೂಡ ಅಮೃತವರ್ಷಿಣಿ ಧಾರಾವಾಹಿ ನಂತರ ಕೆಲವು ರಿಯಾಲಿಟಿ ಶೋಗಳು ಹಾಗೂ ಆತ್ಮಬಂಧನ ಧಾರಾವಾಹಿಯಲ್ಲಿ ನಟಿಸಿದ ಇವರಿಗೆ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಅಮೃತವರ್ಷಿಣಿ ಧಾರಾವಾಹಿ ತಂದುಕೊಟ್ಟ ಜನಪ್ರಿಯತೆ ಹಾಗೂ ಖ್ಯಾತಿ ಈ ನಟಿಗೆ ಮತ್ತೆ ಸಿಗಲಿಲ್ಲ.

ಇದೀಗ ನಟಿ ರಜನಿ Rajani ಅವರು ತಮ್ಮ ಮೂಗಿನ ಸರ್ಜರಿ ಮಾಡಿಸಿಕೊಂಡಿದ್ದು ಇದು ಅಮೃತವರ್ಷಿಣಿಯ ರಜನಿನ ಎಂದು ಕಂಡುಹಿಡಿಯುವುದು ಸಹ ಬಹಳ ಕಷ್ಟವಾಗುತ್ತಿದೆ. ತಮ್ಮ ಮೂಗು ಉದ್ಧವಾಗಿತ್ತು ಎಂಬ ಕಾರಣಕ್ಕಾಗಿ ಸರ್ಜರಿ ಮಾಡಿಸಿಕೊಂಡು ಮೂಗನ್ನು ಕೂಯ್ಸಿಕೊಂಡಿದ್ದಾರೆ ರಜನಿ ಮೂಗಿನ ಸರ್ಜರಿ ಬಳಿಕ ಈ ನಟಿ ಹೊರಗಡೆ ಓಡಾಡುತ್ತಿದ್ದರು ಸಹ ಹಲವಾರು ವರ್ಷಗಳ ಕಾಲ ಪ್ರಸಾರವಾದ ಅಮೃತವರ್ಷಿಣಿ ಧಾರಾವಾಹಿಯ ಅಳುಮುಂಜಿ ಅಮೃತಾ ಇವರೇ ಎಂದ ತಿಳಿಯುತ್ತಿಲ್ಲ.

ಕೆಲವರು ನಿನ್ನ ಮೂಗು ಚೆನ್ನಾಗಿತ್ತಲ್ಲ ಸರ್ಜರಿ ಯಾಕಮ್ಮ ಮಾಡಿಸಿಕೊಂಡೆ ಎಂದು ಕೇಳುತ್ತಿದ್ದರೆ ಇದಕ್ಕೆ ರಜನಿ ನೀಡುವ ಉತ್ತರ ನನ್ನ ಮೂಗಿನ ಶೇಪ್ ಸರಿಯಿಲ್ಲ ಎಂದು ಹಲವಾರು ಜನ ಹೇಳಿದ್ದರು, ಹಾಗಾಗಿ ಸರ್ಜರಿ ಮಾಡಿಸಿಕೊಂಡೇ ಎಂದಿದ್ದಾರೆ. ಆದರೆ ಸರ್ಜರಿ ಮಾಡಿಸಿಕೊಂಡ ನಂತರ ಇವರಿಗೆ ಯಾವುದೇ ಅವಕಾಶ ಸಿಗುತ್ತಿಲ್ಲ ಎಂಬುದು ಬೇಸರದ ಸಂಗತಿ.

Amrutha varshini serial Actress Rajani dance

ಇದರಿಂದ ಸ್ವಲ್ಪ ಬೇಸರದಲ್ಲಿರುವ ನಟಿ ರಜನಿ ರವರು ನಮ್ಮ ಸೀರಿಯಲ್ ಏನಾದರು ಈಗ ಪ್ರಸಾರವಾಗುತ್ತಿದ್ದರೆ ನಮ್ಮ ರೇಂಜ್ ಬೇರೆಯೇ ಇರುತ್ತಿತ್ತು ಎನ್ನುತ್ತಾರೆ. ಹೌದು ಅಮೃತವರ್ಷಿಣಿ ಧಾರಾವಾಹಿ ಪ್ರಸಾರವಾಗುತ್ತಿದ್ದ ಸಮಯದಲ್ಲಿ ಸಾಮಾಜಿಕ ಜಾಲತಾಣದ ಪ್ರಭಾವ ಹೆಚ್ಚಾಗಿ ಇರಲಿಲ್ಲ ಮತ್ತು ಧಾರಾವಾಹಿ ಹೆಚ್ಚು ಜನರನ್ನು ತಲುಪಿರಲಿಲ್ಲ. ಸದ್ಯ ಇದೀಗ ಸಾಮಾಜಿಕ ಜಾಲತಾಣದ ಟಾಪ್ ನಲ್ಲಿರುವ ಸಮಯದಲ್ಲಿ ಅಮೃತವರ್ಷಿಣಿ ಧಾರಾವಾಹಿ ಪ್ರಸಾರವಾಗಿದ್ದರೆ ಧಾರವಾಹಿ ಇನ್ನು ಹೆಚ್ಚಿನ ಜನರನ್ನು ತಲುಪುತ್ತಿತ್ತು ಎಂಬುದು ರಜನಿ ಅವರ ವಾದವಾಗಿದೆ .

ಇನ್ನು ಮುಂದಾದರು ಹೊಸ ಪ್ರಾಜೆಕ್ಟ್ ಗಳಲ್ಲಿ ರಜನಿ ಕಾಣಿಸಿಕೊಳ್ಳುತ್ತಾರೆ ಎಂದು ಕಾದು ನೋಡಬೇಕಿದೆ. ಇನ್ನು ಇತ್ತೀಚಿನ ದಿನಗಳಲ್ಲಿ ಸೆಲೆಬ್ರಿಟಿಗಳ ಡ್ಯಾನ್ಸ್ ವೀಡಿಯೋಗಳು ಸೋಶಿಯಲ್ ಮೀಡಿಯಾಗಳಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದ್ದು ಡ್ಯಾನ್ಸ್ ವೀಡಿಯೋಗಳೇ ಅಲ್ಲದೇ ಸೆಲೆಬ್ರಿಟಿಗಳ ಫಿಟ್ನೆಸ್ ವೀಡಿಯೋಗಳು ಕೂಡಾ ಅದೇ ಮಟ್ಟದಲ್ಲಿ ವೈರಲ್ ಆಗುವುದು ಕೂಡಾ ನಿಜ.

ಈ ಡ್ಯಾನ್ಸ್ ವೀಡಿಯೋಗಳ ಮೂಲಕ ಅನೇಕರಿಗೆ ತಮ್ಮ ಅಭಿಮಾನ ನಟ ನಟಿಯರಲ್ಲಿ ಇಂತಹ ಮತ್ತೊಂದು ಪ್ರತಿಭೆ ಕೂಡಾ ಇದೆ ಎನ್ನುವುದು ತಿಳಿಯುವುದು ಮಾತ್ರವೇ ಅಲ್ಲದೇ ಆಶ್ಚರ್ಯವನ್ನು ಕೂಡಾ ಉಂಟು ಮಾಡುತ್ತದೆ.

ಸದ್ಯ ಇದೀಗ ಸಾಮಾಜಿಕ ಜಾಲತಾಣದಲ್ಲಿ ರಜನಿ ಅವರು ಹಲವಾರು ರೀತಿಯ ಡ್ಯಾನ್ಸ್ ವಿಡಿಯೋಗಳನ್ನು ಮಾಡುತ್ತಿದ್ದು ಎಲ್ಲವೂ ಕೂಡ ವೈರಲ್ ಆಗಿದೆ. ಈ ನಡುವೆ ರಜನಿ ಅವರು ಕಾರ್ಯಕ್ರಮವೊಂದರಲ್ಲಿ ಬೆಲ್ಲಿ ಡ್ಯಾನ್ಸ್ ಸೇರಿದಂತೆ ಅನೇಕ ರೀತಿಯ ಮಾಡಿದ್ದು ವೀಡಿಯೋ ಹೇಗಿದೆ ಗೊತ್ತಾ ? ನೀವೆ ನೋಡಿ.

Amrutha varshini serial Actress Rajani dance