ವಾರ್ತಾ ಮಂಜರಿ
Trending Stories, Viral News, Gossips & Everything in Kannada

ಮಹೀಂದ್ರಾ ಎಕ್ಸ್‌ಯುವಿ400 ಹಾಗೂ ಟಾಟಾ ನೆಕ್ಸಾನ್ ಇವಿ ಯಾವುದು ಬೆಸ್ಟ್

138
ಬಹು ನಿರೀಕ್ಷಿತ ಸ್ಪೋರ್ಟ್ಸ್ ಯುಟಿಲಿಟಿ ವೆಹಿಕಲ್ (ಎಸ್​ಯುವಿ) ಮಹೀಂದ್ರಾ ಗ್ರಾಹಕರಿಗಾಗಿ ಯಾವಾಗಲೂ ಹೊಸತನದ ಹಾದಿಯಲ್ಲೇ ಇದೆ.ಅದೇ ರೀತಿ    ಮಹೀಂದ್ರಾ ಕಂಪನಿಯು ತನ್ನ ಹೊಸ ಎಕ್ಸ್‌ಯುವಿ400 ಎಲೆಕ್ಟ್ರಿಕ್ ಎಸ್‌ಯುವಿ ಮಾದರಿಯನ್ನು ಅನಾವರಣಗೊಳಿಸಿದೆ. ಅತ್ಯಾಕರ್ಷಕ ವಿನ್ಯಾಸ ಹೊಂದಿದ್ದು ಮಧ್ಯಮ ಕ್ರಮಾಂಕದ ಎಸ್‍ಯುವಿ ಮಾದರಿಗಳಲ್ಲೇ ಅತಿ ಹೆಚ್ಚು ಪ್ರೀಮಿಯಂ ಫೀಚರ್ಸ್ ಗಳನ್ನು ಹೊಂದಿದೆ. ಮಹೀಂದ್ರಾ ಕಂಪನಿಯು ಕೇವಲ 5 ಸೀಟ್ ಕಾರಿನ ಅವತರಣಿಕೆಗಳನ್ನು ಮಾತ್ರ ಅನಾವರಣಗೊಳಿಸಿದೆ.
ಎಕ್ಸ್‌ಯುವಿ400 ಎಲೆಕ್ಟ್ರಿಕ್ ಎಸ್‌ಯುವಿ ಅನಾವರಣಕ್ಕೂ ಮುನ್ನ ಕಳೆದ 2020ರ ದೆಹಲಿ ಆಟೋ ಎಕ್ಸ್‌ಪೋದಲ್ಲಿ ಪ್ರದರ್ಶನಗೊಳಿಸಲಾಗಿದ್ದ ಇಎಕ್ಸ್‌ಯುವಿ300 ಮಾದರಿಯನ್ನೇ ಬದಲಾವಣೆಯೊಂದಿಗೆ ಇದೀಗ ಬಿಡುಗಡೆ ಮಾಡಲಾಗುತ್ತಿದ್ದು, ಹೊಸ ಕಾರು ಟಾಟಾ ಮೋಟಾರ್ಸ್ ಹೊಸ ನೆಕ್ಸಾನ್ ಇವಿ ಸೇರಿದಂತೆ ಪ್ರಮುಖ ಕಾರು ಮಾದರಿಗಳಿಗೆ ಉತ್ತಮ ಪೈಪೋಟಿ ನೀಡಲಿದೆ.
AndrenoX ತಂತ್ರಜ್ಞಾನದೊಂದಿಗೆ, ಮಹೀಂದ್ರಾ ಬ್ರ್ಯಾಂಡ್​ನ ಹೊಸ ಲೋಗೋ ಜತೆಗೆ ಬರುತ್ತದೆ. ಟ್ವಿನ್ ಪೀಕ್ಸ್, ಸೋನಿ ಎನ್​ಫೋಟೇನ್​ಮೆಂಟ್ ಸಿಸ್ಟಮ್ ಜತೆ ಇರುತ್ತದೆ. ವಾಯ್ಸ್ ಕಮಾಂಡ್​ನಲ್ಲೇ ಸನ್​ರೂಪ್, ಏಸಿ ಕಂಟ್ರೋಲ್ ಮುಂತಾದವನ್ನು ಮಾಡಬಹುದು.
ಅಡ್ವಾನ್ಸ್ಡ್ ಡ್ರೈವರ್ ಅಸಿಸ್ಟೆನ್ಸ್ ಸಿಸ್ಟಂ(ಎಡಿಎಎಸ್) ಸ್ವಯಂಚಾಲಿತ ಬ್ರೇಕಿಂಗ್, ಲೇನ್ ನಿರ್ಗಮನ ಎಚ್ಚರಿಕೆ, ಹೈ ಬೀಮ್ ಅಸಿಸ್ಟ್, ಅಡಾಪ್ಟಿವ್ ಕ್ರೂಸ್ ಕಂಟ್ರೋಲ್, ಸ್ಮಾರ್ಟ್ ಪೈಲಟ್ ಅಸಿಸ್ಟ್, ಟ್ರಾಫಿಕ್ ಚಿಹ್ನೆಗಳ ಗುರುತಿಸುವಿಕೆ ಮತ್ತು ಡ್ರೈವರ್ ಅರೆನಿದ್ರಾವಸ್ಥೆ ಪತ್ತೆ ಮಾಡುವ ತಂತ್ರಜ್ಞಾನವನ್ನು ಹೊಂದಿದೆ. ಇದೇ ಮೊದಲ ಬಾರಿಗೆ ಈ ಸೆಗ್ಮೆಂಟ್​ನಲ್ಲಿ ಸನ್​ರೂಫ್​, ವಯರ್​ಲೆಸ್ ಚಾರ್ಜಿಂಗ್, ಟೂ-ಝೋನ್ ಕಂಟ್ರೋಲ್ ಮತ್ತಿತರ ಫೀಚರ್​ಗಳಿವೆ. ಆಸಕ್ತಿಕರ ಸಂಗತಿ ಏನೆಂದರೆ, ಈ ಎಸ್​ಯುವಿಯಲ್ಲಿ ಟೆಕ್ನಾಲಜಿಗೆ ಸಂಬಂಧಿಸಿದಂತೆಯೇ 60 ಫೀಚರ್​ಗಳಿವೆ. ಎರಡರಲ್ಲೂ ಮ್ಯಾನ್ಯುಯಲ್ ಹಾಗೂ ಆಟೋಮೆಟಿಕ್ ಗೇರ್​ಬಾಕ್ಸ್ ಆಯ್ಕೆಗಳು ಬರುತ್ತವೆ.
ಎಕ್ಸ್‌ಯುವಿ400 ಮಾದರಿಯು 39.4 kWh ಲೀಥಿಯಂ ಅಯಾನ್ ಬ್ಯಾಟರಿ ಪ್ಯಾಕ್ ಜೊತೆಗೆ 100kW ಎಲೆಕ್ಟ್ರಿಕ್ ಮೋಟಾರ್ ಪಡೆದುಕೊಂಡಿದ್ದು, ಇದು ಅತ್ಯುತ್ತಮ ಪರ್ಫಾಮೆನ್ಸ್‌ ಜೊತೆಗೆ ಪ್ರತಿ ಚಾರ್ಜ್‌ಗೆ ಗರಿಷ್ಠ 456 ಕಿ.ಮೀ ಮೈಲೇಜ್ ಹಿಂದಿರುಗಿಸುತ್ತದೆ.ಹೊಸ ಕಾರಿನಲ್ಲಿರುವ ಲೀಥಿಯಂ ಅಯಾನ್ ಬ್ಯಾಟರಿ ಪ್ಯಾಕ್ IP67 ಮಾನದಂಡ ಪೂರೈಸಿದ್ದು, ಇದು ಧೂಳು ಮತ್ತು ನೀರಿನಿಂದ ಸಂಪೂರ್ಣ ಸುರಕ್ಷತೆ ಹೊಂದಿದ್ದು, ಮಧ್ಯಮ ಕ್ರಮಾಂಕದ ಇವಿ ಕಾರುಗಳಲ್ಲಿಯೇ ಅತಿ ಹೆಚ್ಚು ವೇಗವರ್ಧನೆ(acceleration) ಹೊಂದಿದೆ. 7 ಏರ್​ಬ್ಯಾಗ್​ಗಳು, 360 ಕ್ಯಾಮೆರಾ ವ್ಯೂ ಸೇರಿದಂತೆ ಅತ್ಯಾಧುನಿಕವಾದ ಫೀಚರ್​ಗಳನ್ನು ಈ ಕಾರು ಹೊಂದಿದೆ. ಹೊಸ ಎಕ್ಸ್‌ಯುವಿ400 ಕಾರು ಮಾದರಿಯು ಬ್ಯಾಟರಿ, ಎಲೆಕ್ಟ್ರಿಕ್ ಮೋಟಾರ್, ಮೈಲೇಜ್, ಪರ್ಫಾಮೆನ್ಸ್, ಫೀಚರ್ಸ್ ಮತ್ತು ಗುಣಮಟ್ಟದ ಉತ್ಪಾದನೆಯಲ್ಲಿ ಪ್ರತಿಸ್ಪರ್ಧಿ ಮಾದರಿಯಾದ ಟಾಟಾ ನೆಕ್ಸಾನ್ ಇವಿ ಮಾದರಿಗೆ ನೇರ ಪೈಪೋಟಿಯಾಗಲಿದೆ.
ಮಹೀಂದ್ರಾ ಕಂಪನಿಯು ಸದ್ಯಕ್ಕೆ ಹೊಸ ಎಕ್ಸ್‌ಯುವಿ400 ಮಾದರಿಯ ಉತ್ಪಾದನಾ ಆವೃತ್ತಿಯನ್ನು ಅನಾವರಣಗೊಳಿಸಿದ್ದು, ಹೊಸ ಕಾರನ್ನು ಕಂಪನಿಯು 2023ರ ಜನವರಿಯಲ್ಲಿ ಅಧಿಕೃತವಾಗಿ ಬಿಡುಗಡೆಗೊಳಿಸಿ ಅದೇ ತಿಂಗಳು ವಿತರಣೆ ಆರಂಭಿಸಲಿದೆ.
ಹೊಸ ಕಾರಿನಲ್ಲಿ 39.4 kWh ಲೀಥಿಯಂ ಅಯಾನ್ ಬ್ಯಾಟರಿ ಪ್ಯಾಕ್ ಸ್ವದೇಶಿ ನಿರ್ಮಿತ ಲೀ ಅಯಾನ್ ಬ್ಯಾಟರಿ ಸೆಲ್ಸ್‌ನೊಂದಿಗೆ ಅಭಿವೃದ್ದಿಗೊಂಡಿದ್ದು, 50kW ಡಿಸಿ ಫಾಸ್ಟ್ ಚಾರ್ಜ್ ಮೂಲಕ ಕೇವಲ 50 ನಿಮಿಷಗಳಲ್ಲಿ ಶೇ.80 ರಷ್ಟು ಚಾರ್ಜ್ ಆಗಲಿದೆ. ಒಂದು ವೇಳೆ 7.2 kW ಸ್ಟ್ಯಾಂಡರ್ಡ್ ಚಾರ್ಜರ್ ಮೂಲಕ ಚಾರ್ಜ್ ಮಾಡಿದ್ದಲ್ಲಿ ಸೊನ್ನೆಯಿಂದ ಶೇ.100 ರಷ್ಟು ಚಾರ್ಜ್ ಆಗಲು 6 ಗಂಟೆ 30 ನಿಮಿಷ ಸಮಯ ತೆಗೆದುಕೊಳ್ಳಲಿದ್ದರೆ 3.3 kW ಹೋಂ ಚಾರ್ಜ್‌ನಲ್ಲಿ ಸೊನ್ನೆಯಿಂದ ನೂರರಷ್ಟು ಚಾರ್ಜ್ ಮಾಡಲು ಗರಿಷ್ಠ 13 ಗಂಟೆ ತೆಗೆದುಕೊಳ್ಳುತ್ತದೆ.
ಪ್ರತಿಸ್ಪರ್ಧಿ ಮಾದರಿಯ ನೆಕ್ಸಾನ್ ಇವಿ ಕೂಡಾ ಈಗಗಾಲೇ ಹಲವಾರು ಬದಲಾವಣೆಗಳೊಂದಿಗೆ ಪ್ರಬುದ್ದತೆ ಹೊಂದಿರುವ ಮಾದರಿಯಾದಿದ್ದು, ಇದು ಗ್ರಾಹಕರ ಬೇಡಿಕೆಯೆಂತೆ ಇದು ಸ್ಟ್ಯಾಂಡರ್ಡ್ ಮತ್ತು ಮ್ಯಾಕ್ಸ್ ಆವೃತ್ತಿಗಳಲ್ಲಿ ಖರೀದಿಗೆ ಲಭ್ಯವಿದೆ.ನೆಕ್ಸಾನ್ ಇವಿ ಮ್ಯಾಕ್ಸ್ ಮಾದರಿಯ ಎಕ್ಸ್‌ಜೆಡ್ ಪ್ಲಸ್ ಮತ್ತು ಎಕ್ಸ್‌ಜೆಡ್ ಪ್ಲಸ್ ಲಕ್ಸ್ ವೆರಿಯೆಂಟ್‌ಗಳಲ್ಲಿ ಕಂಪನಿಯು ಎರಡು ಮಾದರಿಯ ಚಾರ್ಜಿಂಗ್ ಆಯ್ಕೆಗಳನ್ನು ನೀಡಿದ್ದು, 3.3 kW ಮತ್ತು 7.2 kW AC ಫಾಸ್ಟ್ ಚಾರ್ಜಿಂಗ್ ಆಯ್ಕೆ ನೀಡಿದೆ.  7.2 kW AC ಫಾಸ್ಟ್ ಚಾರ್ಜಿಂಗ್ ಆಯ್ಕೆ ಹೊಂದಿರುವ ಎಕ್ಸ್‌ಜೆಡ್ ಪ್ಲಸ್ ಮತ್ತು ಎಕ್ಸ್‌ಜೆಡ್ ಪ್ಲಸ್ ಲಕ್ಸ್ ವೆರಿಯೆಂಟ್‌ಗಳು ಸಾಮಾನ್ಯ ಮಾದರಿಗಿಂತಲೂ ತುಸು ಹೆಚ್ಚುವರಿ ಬೆಲೆ ಹೊಂದಿರಲಿದ್ದು, ಫಾಸ್ಟ್ ಚಾರ್ಜಿಂಗ್ ಮೂಲಕ ಅತಿ ಕಡಿಮೆ ಅವಧಿಯಲ್ಲಿ ಚಾರ್ಜ್ ಮಾಡಬಹುದಾಗಿದೆ.
3.3 kW ಚಾರ್ಜಿಂಗ್ ಆಯ್ಕೆ ಹೊಂದಿರುವ ನೆಕ್ಸಾನ್ ಇವಿ ಮ್ಯಾಕ್ಸ್ ಮಾದರಿಯು ಸೊನ್ನೆಯಿಂದ ಶೇ.100 ರಷ್ಟು ಚಾರ್ಜ್ ಮಾಡಲು ಕನಿಷ್ಠ 14 ರಿಂದ 15 ಗಂಟೆಗಳ ಕಾಲ ಸಮಯಾವಕಾಶ ತೆಗೆದುಕೊಂಡರೆ 7.2 kW AC ಫಾಸ್ಟ್ ಚಾರ್ಜಿಂಗ್ ಆಯ್ಕೆ ಹೊಂದಿರುವ ಮಾದರಿಯು ಪೂರ್ತಿಯಾಗಿ ಚಾರ್ಜ್ ಆಗಲು ಕನಿಷ್ಠ 5 ರಿಂದ 6 ಗಂಟೆಗಳ ಕಾಲ ಸಮಯಾವಕಾಶ ತೆಗದುಕೊಳ್ಳುತ್ತದೆ. ಹೊಸ ನೆಕ್ಸಾನ್ ಇವಿ ಮ್ಯಾಕ್ಸ್ ಮಾದರಿಯಲ್ಲಿ ಟಾಟಾ ಮೋಟಾರ್ಸ್ ಕಂಪನಿಯು ಈ ಹಿಂದಿನ 30kWh ಬ್ಯಾಟರಿ ಪ್ಯಾಕ್ ಸ್ಥಾನಕ್ಕೆ ಹೊಸದಾಗಿ 40.5kWh ಲೀಥಿಯಂ ಅಯಾನ್ ಬ್ಯಾಟರಿ ಪ್ಯಾಕ್ ಜೋಡಣೆ ಮಾಡಿದ್ದು, ಇದು ARAI ಸಂಸ್ಥೆಯು ಪ್ರಮಾಣೀಕರಿಸಿದಂತೆ ಪ್ರತಿ ಚಾರ್ಜ್‌ಗೆ ಗರಿಷ್ಠ 437 ಕಿ.ಮೀ ಮೈಲೇಜ್ ಹಿಂದಿರುಗಿಸಲಿದೆ.
ಫಾಸ್ಟ್ ಚಾರ್ಜಿಂಗ್ ನಿಲ್ದಾಣಗಳು ಹೆಚ್ಚಿದಂತೆ ಇವಿ ಕಾರು ಮಾರಾಟವು ಇತರೆ ನಗರಗಳಿಗೂ ವಿಸ್ತರಣೆಯಾಗಲಿದ್ದು, ಹೊಸ ಕಾರಿನ ಮೂಲಕ ಕಂಪನಿಯು ಭಾರೀ ಪ್ರಮಾಣದ ಬೇಡಿಕೆ ಪಡೆದುಕೊಳ್ಳುವ ನೀರಿಕ್ಷೆಯಲ್ಲಿದೆ.  ಮಹೀಂದ್ರಾ ಕಂಪನಿಯು ಹೊಸ ಎಕ್ಸ್‌ಯುವಿ400 ಮಾದರಿಯನ್ನು ಹಲವಾರು ಮಾರುಕಟ್ಟೆ ಅಧ್ಯಯನದೊಂದಿಗೆ ಅಭಿವೃದ್ದಿಪಡಿಸಿದ್ದು, ಬೆಲೆ, ಮೈಲೇಜ್ ಮತ್ತು ತಾಂತ್ರಿಕ ಸೌಲಭ್ಯಗಳ ವಿಚಾರದಲ್ಲಿ ಹೊಸ ಮಾದರಿಯು ಪ್ರತಿಸ್ಪರ್ಧಿ ಮಾದರಿಗಳಿಗೆ ಉತ್ತಮ ಪೈಪೋಟಿ ನೀಡಲಿದೆ. ಹೊಸ ಕಾರು ಎಕ್ಸ್‌ಶೋರೂಂ ಪ್ರಕಾರ ವಿವಿಧ ವೆರಿಯೆಂಟ್‌ಗಳೊಂದಿಗೆ ರೂ. 16 ಲಕ್ಷದಿಂದ ರೂ. 20 ಲಕ್ಷ ಬೆಲೆ ಅಂತರದಲ್ಲಿ ಬಿಡುಗಡೆಯಾಗುವ ನೀರಿಕ್ಷೆಯಿದೆ. ಈಗಾಗಲೇ ಇವಿ ಕಾರು ಮಾದರಿಗಳಲ್ಲಿ ಭಾರೀ ಬೇಡಿಕೆ ಹೊಂದಿರುವ ನೆಕ್ಸಾನ್ ಇವಿ ಮತ್ತು ನೆಕ್ಸಾನ್ ಇವಿ ಮ್ಯಾಕ್ಸ್ ಮಾದರಿಗಳು ದೆಹಲಿ ಎಕ್ಸ್‌ಶೋರೂಂ ಪ್ರಕಾರ ರೂ. 14.99 ಲಕ್ಷದಿಂದ ರೂ. 20.04 ಲಕ್ಷ ಬೆಲೆ ಹೊಂದಿದೆ.
ಹೀಗಾಗಿ ಎರಡು ಮಾದರಿಗಳನ್ನು ಹೋಲಿಕೆ ಮಾಡಿದಾಗ ಸದ್ಯದ ಮಾರುಕಟ್ಟೆಯಲ್ಲಿ ಟಾಟಾ ನೆಕ್ಸಾನ್ ಇವಿ ಬಿಡುಗಡೆಯಾಗಲಿರುವ ಎಕ್ಸ್‌ಯುವಿ400 ಮಾದರಿಗಿಂತಲೂ ಫೀಚರ್ಸ್‌, ಮೈಲೇಜ್, ಬ್ಯಾಟರಿ ವಿಭಾಗಗಳಲ್ಲಿ ಹಿನ್ನಡೆ ಅನುಭವಿಸಲಿದ್ದು, ಬೆಲೆ ವಿಚಾರದಲ್ಲಿ ನೆಕ್ಸಾನ್ ಇವಿ ಮಾದರಿಗೆ ಪೈಪೋಟಿಯಾದರೆ ಮಾತ್ರ ಎರಡು ಮಾದರಿಗಳ ಆಯ್ಕೆಯಲ್ಲಿ ನಿಜವಾದ ಪೈಪೋಟಿ ಆಗ ಶುರುವಾಗಲಿದೆ. ಒಟ್ಟಾರೆಯಾಗಿ ಗ್ರಾಹಕರಿಗೆ ವಿಫುಲ ಆಯ್ಕೆ ನೀಡುವ ಮಹೀಂದ್ರಾ ಕಂಪನಿಯು ನಿಜವಾಗಿ ಗ್ರಾಹಕ ಸ್ನೇಹಿಯಾಗಿದ್ದು ಮುಂದಿನ ದಿನಗಳಲ್ಲಿ ಇನ್ನಷ್ಟು ಹೊಸ ಆವಿಷ್ಕಾರದೊಂದಿಗೆ ವಿನೂತನ ರೂಪ ದೊರೆಯಲಿದೆ.