ವಾರ್ತಾ ಮಂಜರಿ
Trending Stories, Viral News, Gossips & Everything in Kannada

ಗೋಲ್ಡನ್ ಸ್ಟಾರ್ ಗಣೇಶ್ ಆಫ್ರಿಕಾಗೆ ಹೋದದ್ದೇಕೆ ಸಿಹಿಸುದ್ದಿ

78
ಬೀರ್‌ಬಲ್‌’ ಬೆಡಗಿಯಾಗಿ ಚಂದನವನ ಪ್ರವೇಶಿಸಿದ್ದ ನಟಿ ರುಕ್ಮಿಣಿ ವಸಂತ್ ಇದೀಗ ‘ಲೀಲ’ ಎಂಬ ಪಾತ್ರದ ಮುಖೇನ ಗೋಲ್ಡನ್‌ ಸ್ಟಾರ್‌ ಗಣೇಶ್‌ಗೆ ಜೋಡಿಯಾಗಿ ‘ಬಾನದಾರಿಯಲ್ಲಿ’ ಪಯಣ ಆರಂಭಿಸಲಿದ್ದಾರೆ. ಸದ್ಯಕ್ಕೆ ನಟ ರಕ್ಷಿತ್‌ ಶೆಟ್ಟಿ ನಟನೆಯ, ಹೇಮಂತ್‌ ಎಂ. ರಾವ್‌ ನಿರ್ದೇಶನದ ‘ಸಪ್ತ ಸಾಗರದಾಚೆ ಎಲ್ಲೋ’ ಚಿತ್ರದಲ್ಲಿ ರುಕ್ಮಿಣಿ ಅವರು ನಾಯಕಿಯಾಗಿ ನಟಿಸುತ್ತಿದ್ದಾರೆ. ಈ ಚಿತ್ರದಲ್ಲಿ ಎರಡು ಶೇಡ್‌ಗಳಲ್ಲಿ ರಕ್ಷಿತ್‌ ಅವರು ಕಾಣಿಸಿಕೊಳ್ಳುತ್ತಿದ್ದು, ಮೊದಲನೇ ಹಂತದ ಚಿತ್ರೀಕರಣದ ಬಳಿಕ ರಕ್ಷಿತ್‌ ಅವರು ತೂಕ ಹೆಚ್ಚಿಸಿಕೊಳ್ಳಲು ಗ್ಯಾಪ್‌ ತೆಗೆದುಕೊಂಡಿದ್ದಾರೆ. ಹೀಗಾಗಿ ಎರಡನೇ ಹಂತದ ಚಿತ್ರೀಕರಣ ಆರಂಭಕ್ಕೂ ಮುನ್ನದ ಬಿಡುವಿನ ವೇಳೆ ರುಕ್ಮಿಣಿ ಅವರಿಗೆ ಹೊಸ ಚಿತ್ರದ ಆಫರ್‌ ಬಂದಿದೆ. ‘ಬಾನದಾರಿಯಲ್ಲಿ’ ವಾಟರ್‌ ಸ್ಪೋರ್ಟ್ಸ್‌ ಕ್ರೀಡಾಪಟುವಾಗಿ ರುಕ್ಮಿಣಿ ಅವರು ಕಾಣಿಸಿಕೊಳ್ಳಲಿದ್ದಾರೆ. ಇದಕ್ಕಾಗಿ ಹೊಸ ಕೌಶಲವನ್ನೂ ರುಕ್ಮಿಣಿ ಕಲಿಯುತ್ತಿದ್ದಾರೆ.
‘ಮುಂಗಾರು ಮಳೆ’ ಸಿನಿಮಾಗೆ ಕಥೆ ಬರೆದಿದ್ದ ಪ್ರೀತಮ್‌ ಗುಬ್ಬಿ, ‘ಮಳೆಯಲಿ ಜೊತೆಯಲಿ’, ‘ದಿಲ್‌ ರಂಗೀಲಾ’ ಹಾಗೂ ‘99’ ಸಿನಿಮಾದಲ್ಲಿ ಗಣೇಶ್‌ಗೆ ಆ್ಯಕ್ಷನ್‌ ಕಟ್‌ ಹೇಳಿದ್ದರು. ತಮಿಳಿನ ‘96’ ಸಿನಿಮಾದ ರಿಮೇಕ್‌ ಆಗಿದ್ದ ‘99’ ಹೆಚ್ಚು ಸದ್ದು ಮಾಡಿರಲಿಲ್ಲ. ಮೇನಲ್ಲಿ ‘ಬಾನದಾರಿಯಲ್ಲಿ’ ಚಿತ್ರದ ಚಿತ್ರೀಕರಣ ಆರಂಭವಾಗಲಿದೆ.ಬಾನ ದಾರಿಯಲ್ಲಿ ಸಿನಿಮಾದಲ್ಲಿನನ್ನದು ಲೀಲಾ ಎಂಬ ಸರ್ಫಿಂಗ್‌ ಆಟಗಾರ್ತಿಯ ಪಾತ್ರ. ಇದಕ್ಕಾಗಿ ಕೆಲವು ದಿನಗಳಿಂದ ಮಂಗಳೂರು ಬಳಿಯ ಮುಲ್ಕಿಯಲ್ಲಿ ತರಬೇತಿ ಪಡೆದುಕೊಳ್ಳುತ್ತಿದ್ದೇನೆ. ಸರ್ಫಿಂಗ್‌ ಗೇಮ್‌ ಬಹಳ ಖುಷಿ ಕೊಡುವ ಆಟ. ಒಂದರ್ಥದಲ್ಲಿ ಥ್ರಿಲ್ಲಿಂಗ್‌ ಗೇಮ್‌ ಎಂದೂ ಹೇಳಬಹುದು. ಚಿತ್ರೀಕರಣಕ್ಕಾಗಿ ಮೂರ್ನಾಲ್ಕು ದಿನಗಳಿಂದ ಈ ತರಬೇತಿ ಪಡೆದುಕೊಳ್ಳುತ್ತಿದ್ದೇನೆ.
ಆದರೆ ನಿರ್ದೇಶಕ ಪ್ರೀತಂ ಗುಬ್ಬಿಯವರು ತೆರೆಯ ಮೇಲೆ ಎಲ್ಲಿಯೂ ಲೀಲಾ ಈಗಷ್ಟೇ ಸರ್ಫಿಂಗ್‌ ಕಲಿತಿದ್ದಾಳೆ ಎಂದು ಅನಿಸಬಾರದು ಎಂಬಂತೆ ತರಬೇತಿ ಕೊಡಿಸುತ್ತಿದ್ದಾರೆ. ನಾನು ಸ್ವಿಮ್ಮಿಂಗ್ ಮಾಡುತ್ತೇನೆ, ಆದರೆ ನನಗೆ ನೀರೆಂದರೇ ಭಯ, ಕೆಲ ವರ್ಷಗಳ ಹಿಂದೆ ನನ್ನ ಸಂಬಂಧಿಯೊಬ್ಬರು ನನ್ನನ್ನು ಸ್ಕೂಬಾ ಡೈವಿಂಗ್ ಕರೆದೊಯ್ದಿದ್ದರು, ಇದರಿಂದಾಗಿ ಫೋಬಿಯಾದಿಂದ ಹೊರ ಬರಲು ಸಾಧ್ಯವಾಯಿತು ಎಂದು ರುಕ್ಷ್ಮಿಣಿ ವಸಂತ್ ಹೇಳಿದ್ದಾರೆ.
ಗೋಲ್ಡನ್ ಸ್ಟಾರ್ ಗಣೇಶ್- ಪ್ರೀತಂ ಗುಬ್ಬಿ ಕಾಂಬಿನೇಶನ್ ನಲ್ಲಿ ಬಾನ ದಾರಿಯಲ್ಲಿ ಚಿತ್ರ ಬರುತ್ತಿದೆ. ಪ್ರಸ್ತುತ ಈ ಚಿತ್ರಕ್ಕೆ ಮಂಗಳೂರಿನಲ್ಲಿ ದ್ವಿತೀಯ ಹಂತದ ಚಿತ್ರೀಕರಣ ಮುಕ್ತಾಯವಾಗಿದೆ.
ವಾಟರ್‌ ಗೇಮ್ಸ್ ಸೇರಿದಂತೆ ಕೆಲವು ಭಾಗದ ಚಿತ್ರೀಕರಣ ನಾಯಕ ಗಣೇಶ್, ನಾಯಕಿ ರುಕ್ಮಿಣಿ ವಸಂತ್ ಮುಂತಾದವರ ಅಭಿನಯದಲ್ಲಿ ಮಂಗಳೂರಿನಲ್ಲಿ ನಡೆದಿದೆ. ಕ್ರಿಕೆಟ್ ಆಟಗಾರನ ಪೋಸ್ ಕೊಟ್ಟಿರುವ ಗಣೇಶ್ ಅವರ ಪೋಸ್ಟರ್ ರಿಲೀಸ್ ಆಗಿದೆ. ಆದರೆ, ಈ ಸಿನಿಮಾದಲ್ಲಿ ಅವರು ಪೂರ್ಣ ಪ್ರಮಾಣದ ಕ್ರಿಕೆಟ್ ಆಟಗಾರರಾ? ಅಥವಾ ಯಾವುದಾದರೂ ಒಂದು ದೃಶ್ಯದಲ್ಲಿ ಹೀಗೆ ಬಂದು ಹೋಗುತ್ತಾರೆ ಎನ್ನುವುದು ಸದ್ಯಕ್ಕೆ ಸಸ್ಪೆನ್ಸ್. ಅದನ್ನು ಸಿನಿಮಾದಲ್ಲಿಯೇ ನೋಡಿ ಎನ್ನುತ್ತಾರೆ ನಿರ್ದೇಶಕರು. ಮೂರನೇ ಹಂತದ ಚಿತ್ರೀಕರಣ ಆಫ್ರಿಕಾದಲ್ಲಿ ನಡೆಯಲಿದ್ದು, ಸದ್ಯದಲ್ಲೇ ಚಿತ್ರತಂಡ ಆಫ್ರಿಕಾಗೆ ತೆರಳಲಿದೆ.
ಗಣೇಶ್ ಮತ್ತು ಪ್ರೀತಮ್ ಈವರೆಗೂ ಮೆಚ್ಚುವಂತಹ ಸಿನಿಮಾಗಳನ್ನೇ ಕೊಟ್ಟಿರುವುದರಿಂದ, ಈ ಸಿನಿಮಾ ಕೂಡ ಎಲ್ಲರಿಗೂ ಇಷ್ಟವಾಗಲಿದೆ ಎನ್ನುತ್ತಿದೆ ಚಿತ್ರತಂಡ.