ಸದ್ಯ ಈ ವ್ಯಕ್ತಿ ಇದೀಗ ಬಿಗ್ ಬಾಸ್ (Bigg Boss) ಕಾರ್ಯಕ್ರಮಕ್ಕೆ ಹೋಗಿ ಎಷ್ಟರ ಮಟ್ಟಿಗೆ ಹೆಸರು ಸಂಪಾದಿಸಿದ್ದಾರೆ ಎಂದರೆ ಕರುನಾಡ (Karnataka) ಸಿನಿಪ್ರೇಕ್ಷಕರ ಹಾಗೂ ಕಿರುತೆರೆ ಪ್ರೇಕ್ಷಕರ ಮನೆ ಮಗನಾಗಿದ್ದಾರೆ ಎಂದೇ ಹೇಳಬಹುದು. ಆ ವ್ಯಕ್ತಿ ಬೇರೆ ಯಾರೂ ಅಲ್ಲ. ಬಿಗ್ ಬಾಸ್ ಸೀಸನ್ ಎಂಟರ(Bigg Boss Season 8) ಕಾರ್ಯಕ್ರಮದಲ್ಲಿ ಭಾಗವಹಿಸಿ ದೊಡ್ಡಮಟ್ಟದಲ್ಲಿಯೇ ಹೆಸರು ಸಂಪಾದಿಸಿರುವ ಮಂಜು ಪಾವಗಡ (Manju Pavagada) ಅವರು.
ಮೊದಮೊದಲು ಕಲರ್ಸ್ ವಾಹಿನಿಯಲ್ಲಿ (Colours Kannada) ಪ್ರಸಾರವಾಗುತ್ತಿದ್ದ ಮಜಾಭಾರತ(Maja Bharata) ಎಂಬ ಕಾಮಿಡಿ ರಿಯಾಲಿಟಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಇವರು ಕರ್ನಾಟಕದ ಜನತೆಗೆ ಪರಿಚಯವಾಗುತ್ತಾರೆ. ಮಂಜು ಪಾವಗಡ ಅವರು ಸ್ಟೇಜ್ ಗೆ (Stage) ಬರುತ್ತಿದ್ದಾರೆ ಎಂದರೆ ಪ್ರೇಕ್ಷಕರೆಲ್ಲ ಹೊಟ್ಟೆ ಹುಣ್ಣಾಗುವಂತೆ ನಗುತ್ತಿದ್ದರು. ಅಷ್ಟರಮಟ್ಟಿಗೆ ಇವರ ನಟನೆ ಹಾಗೂ ಹಾಸ್ಯಪ್ರಜ್ಞೆ ವೇದಿಕೆಯ ಮೇಲೆ ಕಮಾಲ್ ಮಾಡುತ್ತಿತ್ತು.
ತದನಂತರ ಇವರ ಜನಪ್ರಿಯತೆಯನ್ನು ನೋಡಿದ ಬಿಗ್ ಬಾಸ್ ಆಯೋಜಕರು ಇವರನ್ನು ಕಾರ್ಯಕ್ರಮಕ್ಕೆ ಆಹ್ವಾನಿಸುತ್ತಾರೆ. ಸಿಕ್ಕ ಅವಕಾಶವನ್ನು ಸರಿಯಾಗಿ ಉಪಯೋಗಿಸಿಕೊಂಡ ಮಂಜು ಪಾವಗಡ ರವರು ಬಿಗ್ ಬಾಸ್ ಮನೆಯ ಆಕರ್ಷಣೀಯ ಕೇಂದ್ರಬಿಂದುವಾಗಿದ್ದು ಜನರನ್ನು ಈ ಕಾರ್ಯಕ್ರಮದ ಮುಖಾಂತರ ಹೊಟ್ಟೆ ಹುಣ್ಣಾಗುವಂತೆ ನಗಿಸುವುದರಲ್ಲಿ ಯಶಸ್ವಿಯಾಗಿದ್ದರು.
ಮೊದಮೊದಲು ಮಜಾಭಾರತ ಕಾರ್ಯಕ್ರಮದಲ್ಲಿ ಸಣ್ಣ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದ ಮಂಜು ಪಾವಗಡ ಅವರಿಗೆ ತದನಂತರ ದೊಡ್ಡ ದೊಡ್ಡ ಪಾತ್ರಗಳು ಸಿಗುತ್ತವೆ. ಸಿಕ್ಕ ಪಾತ್ರವನ್ನು ಸರಿಯಾಗಿ ಉಪಯೋಗಿಸಿಕೊಂಡ ಮಂಜು ಜನರ ಮನಸ್ಸನ್ನು ಗೆಲ್ಲುವುದರಲ್ಲಿ ಯಶಸ್ವಿಯಾಗುವುದರ ಜೊತೆಗೆ ತಮ್ಮ ನಟನೆಯ ಮೂಲಕ ಸಾಕಷ್ಟು ಸಿನಿ ಮಂದಿಯ ಮನಸ್ಸನ್ನು ಕೂಡ ಗೆಲ್ಲುತ್ತಾರೆ.
ಮಜಾಭಾರತ ಮುಗಿದ ನಂತರ ಮುಂದೆ ಏನು ಎಂದು ಯೋಚಿಸುತ್ತಿದ್ದ ಸಮಯದಲ್ಲೇ ಮಂಜು ಅವರಿಗೆ ಬಿಗ್ ಬಾಸ್ ಮನೆಯೊಳಗೆ ಸ್ಪರ್ಧಿಯಾಗಿ ಹೋಗುವ ಅವಕಾಶ ದೊರೆಯುತ್ತದೆ. ಮೊದಮೊದಲು ಇದನ್ನು ಅವರಿಂದಲೇ ನಂಬಲು ಸಾಧ್ಯವಾಗಲಿಲ್ಲವಂತೆ. ಇನ್ನು ಬಿಗ್ ಬಾಸ್ ಮನೆಯೊಳಗೆ ಮಂಜು ಪಾವಗಡ ಅವರು ಪಾದಾರ್ಪಣೆ ಮಾಡುತ್ತಿದ್ದಂತೆ ಸಾಕಷ್ಟು ಮಂದಿ ಸ್ಕ್ರಿಪ್ಟ್ ಇಲ್ಲದೆ ಮಂಜು ಹೇಗೆ ಜನರನ್ನು ನಗಿಸುತ್ತಾರೆ ಎಂಬ ಪ್ರಶ್ನೆ ಮಾಡಿದ್ದರು. ಆದರೆ ಇವರೆಲ್ಲರ ಪ್ರಶ್ನೆಗಳಿಗೂ ತಕ್ಕ ಉತ್ತರ ಕೊಟ್ಟ ಮಂಜು ಪಾವಗಡ ಅವರು ಬಿಗ್ ಬಾಸ್ ಮನೆಯಲ್ಲಿ ಸ್ಪರ್ಧಿಗಳ ಜೊತೆಗೆ ಪ್ರೇಕ್ಷಕರನ್ನು ನಕ್ಕು ನಗಿಸುವಲ್ಲಿ ಯಶಸ್ವಿಯಾದರು.
ಸದ್ಯ ಇದೀಗ ಮಂಜು ಪಾವಗಡ ಸಿನಿಮಾದಲ್ಲಿ ಕಾಣಿಸಿಕೊಳ್ಳುತ್ತಿದ್ದು ಕಿರುತೆರೆಯಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳದೆ ಇದ್ದರೂ ಕೂಡ ಅವರು ಜನರ ಮನಸ್ಸಿನಲ್ಲಿ ಅಚ್ಚಳಿಯದಂತೆ ಉಳಿದಿದ್ದಾರೆ ಎಂದೇ ಹೇಳಬಹುದು. ಸದ್ಯ ಇದೀಗ ಮಂಜನನ್ನು ನೆನಪಿಸುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ (Social Media) ವೈರಲ್ ಆಗುತ್ತಿದೆ.
ತನ್ನ ಮಗಳಿಗೆ ಇನ್ನು ಮದುವೆಯಾಗುತ್ತಿಲ್ಲ ಎಂದು ತಂದೆ ಮಾಟ ಮಾಡಿಸುತ್ತಾನೆ. ಆದರೆ ಅದು ಉಲ್ಟಾಪಲ್ಟಾ ಆಗುತ್ತದೆ. ಅದೇ ಮನಯಲ್ಲಿನ ಅಜ್ಜಿ ತನಗೇ ಮದುವೆ ಮಾಡೆಂದು ಹೇಗೇಗೋ ಆಡುತ್ತಾಳೆ. ಕೊನೆಗೆ ಏನಾಗುತ್ತದೆ ಎಂಬುದೇ ಮಜಾಭಾರತದ ಸ್ಕಿಟ್ ಆಗಿದ್ದು ಮಂಜು ಇಲ್ಲಿ ಹೇಗೆ ಅಭಿನಯಿಸಿದ್ದಾರೆ ನೀವೆ ನೋಡಿ.