ವಾರ್ತಾ ಮಂಜರಿ
Trending Stories, Viral News, Gossips & Everything in Kannada

ರಸ್ತೆ ದಾಟುವಾಗ ನಡೆದ ಭೂಕಂಪ…ಚಿಂದಿ ವಿಡಿಯೋ

239
Join WhatsApp
Google News
Join Telegram
Join Instagram

ಭೂಮಿಯ (Earth) ಹೊರಪದರದಲ್ಲಿ ಶಕ್ತಿಯು (Energy) ಇದ್ದಕ್ಕಿದ್ದಂತೆ ಬಿಡುಗಡೆಯಾದಾಗ ಅದು ಉಂಟುಮಾಡುವ ತರಂಗಗಳ ಪರಿಣಾಮವೇ ಭೂಕಂಪ (Earthquakes). ಭೂಮಿಯ ಒಳಗೆ (Within The Earth)ನಡೆಯುವ ತಳಮಳ ಏರುಪೇರುಗಳಿಂದ ಭೂಮಿಯ ಮೇಲ್ಮೈ ಹಠಾತ್ ಅಲುಗಾಡುವ(Shaky) ಅಥವಾ ಲಟಲಟ ಸದ್ದು ಮಾಡುತ್ತಾ ನಡುಗುವುದನ್ನು ಭೂಕಂಪಗಳು ಎಂದು ಕರೆಯಾಲಗುತ್ತದೆ.

ಅವು ಸಾಮಾನ್ಯವಾಗಿ ವಿಶಾಲ ಪ್ರದೇಶಗಳಲ್ಲಿ (Wide Area)ಅನುಭವಕ್ಕೆ ಬರುತ್ತವೆ ಮತ್ತು ಒಂದು ನಿಮಿಷಕ್ಕಿಂತ ಕಡಿಮೆ ಕಾಲ ದವರೆಗೆ ಆಗುತ್ತವೆ. ಆದಾಗ್ಯೂ ವಿಜ್ಞಾನಿಗಳು(Scientists) ಯಾವಾಗ ಎಲ್ಲಿ ಭೂಕಂಪ ಸಂಭವಿಸಬಹುದು ಎಂದು ಊಹಿಸಲು ಇನ್ನೂ ಸಾಧ್ಯವಾಗಿಲ್ಲ.

ಭೂಕಂಪನ ಅನುಭವ ಕೆಲ ಸೆಕೆಂಡುಗಳಿಂದ(Seconds) ಕೆಲ ನಿಮಿಷಗಳ(Minutes) ತನಕ ಇರಬಹುದು. ಅದರೆ ನಂತರ ಧರೆಗೆ ಕುಸಿಯುವ ಮನೆ(Home) ಕಟ್ಟಡ(Building) ಐತಿಹಾಸಿಕ ಸ್ಮಾರಕಗಳು (Historical m}Monuments) ಮನುಷ್ಯನ ನಂಬಿಕೆಯ ಸೌಧವನ್ನೇ ಅಲ್ಲಾಡಿಸಿ ಬಿಡುತ್ತದೆ. ಪ್ರಕೃತಿಯ ಆಟದ ಮುಂದೆ ಎಲ್ಲವೂ ಗೌಣ ಎಂಬ ಮಾತು ಸ್ಮರಿಸಿಕೊಳ್ಳಬಹುದು. 2015 ರಲ್ಲಿ ನೇಪಾಳದ(Nepal) ವಿವಿಧೆಡೆ ಉಂಟಾದ ಕಂಪನದ ಅನುಭವದ ಕಥೆ ಹೇಳುವ ಸಿಸಿಟಿವಿ ದೃಶ್ಯಾವಳಿಗಳನ್ನು(Scenes) ನೋಡುತ್ತಿದ್ದರೆ ಕಣ್ನಂಚಲ್ಲಿ ನೀರು ತುಂಬುತ್ತದೆ.

1934ರಲ್ಲಿ ನೇಪಾಳಸದಲ್ಲಿ ಸಂಭವಿಸಿದ ಭೂಕಂಪದಲ್ಲಿ ಸುಮಾರು 8,500 ಮಂದಿ ಬಲಿಯಾಗಿದ್ದರು. ಆದರೆ 2015 ರಲ್ಲಿಪ್ರಕೃತಿಯ ರುದ್ರನರ್ತನಕ್ಕೆ ಮಾನವ ತಲೆ ಬಾಗಿದ್ದು 10,000ಕ್ಕೂ ಹೆಚ್ಚು ಜನ ಸಾವನಪ್ಪಿದ್ದರು. ಏಪ್ರಿಲ್ 25, 2015 ರಂದು ಸಂಭವಿಸಿದ ಈ ಭೂಕಂಪನವು ಕಠ್ಮಂಡುವನ್ನು ಸಂಪೂರ್ಣವಾಗಿ ಧ್ವಂಸಮಾಡಿತು, ಮೌಂಟ್ ಎವರೆಸ್ಟ್ನಲ್ಲಿ ಹಿಮಕುಸಿತಗಳನ್ನು ಸೃಷ್ಟಿಸಿತು ಮತ್ತು ಬಡ ನೇಪಾಳದ ಸಾವಿರಾರು ಜನರನ್ನು ನಿರಾಶ್ರಿತಗೊಳಿಸಿತು.

7.8 ರಷ್ಟು ಪ್ರಮಾಣದಲ್ಲಿ ಭೂಕಂಪನವು 1934 ರಿಂದಲೂ ನೇಪಾಳದಲ್ಲಿ ಪ್ರಬಲವಾದ ಅನುಭವವಾಗಿತ್ತು. ಮೇ 12 ರಂದು ಎರಡನೇ ಭೂಕಂಪ ಸಂಭವಿಸಿತು ಮತ್ತು ಹಾನಿಗೊಳಗಾದ ಕಟ್ಟಡಗಳನ್ನು ಕಳೆದುಕೊಂಡಿತು ಮತ್ತು ಇನ್ನೂ ಹೆಚ್ಚಿನ ನೋವುಗಳನ್ನುಸೃಷ್ಟಿಸಿತು. ಇನ್ನು ರಸ್ತೆಯಲ್ಲೂ ಕೂಡ ಈ ಭೂಕಂಪದ ಅನುಭವವಾಗಿದ್ದು ದ್ವಿಚಕ್ರ ವಾಹನ ಹಾಗೂ ಕಾರುಗಳು ಚಲಿಸುವಾಗ ಮತ್ತು ಫುಟ್ ಬಾತ್ ನಲ್ಲಿ ಸಾರ್ವಜನಿಕರು ಚಲಿಸುವಾಗ ಭೂಕಂಪವಾಗಿತ್ತು. ಆ ಸಮಯದಲ್ಲಿ ರಸ್ತೆಯೇ ಅಲುಗಾಡಿದ್ದು ಜನರೆಲ್ಲ ಕಕ್ಕಾಬಿಕ್ಕಿಯಾದರು. ಇನ್ನು ಭೂಕಂಪ ಹೇಗೆ ಆಗುತ್ತದೆ ಎಂದು ನೋಡುವ ಕುತೂಹಲ ನಿಮಗಿದ್ದರೆ ಕೆಳಗಿನ ವಿಡಿಯೋ ನೋಡಿ.