ಸದ್ಯ ಇತ್ತೀಚಿನ ದಿನಗಳಲ್ಲಿ ಪ್ರತಿ ಪ್ರದೇಶಗಳಲ್ಲೂ ಕೂಡ ಅಪಘಾತಗಳು (Accidents) ಸಂಭವಿಸುವುದು ಸರ್ವೇಸಾಮಾನ್ಯವಾಗಿದೆ. ಹೌದು ಚಾಲಕನ ನಿರ್ಲಕ್ಷತನ ಮದ್ಯಪಾನ ಮಾಡಿ ವಾಹನ ಓಡಿಸುವುದು(Drink and Drive) ಅಥವಾ ಇನ್ನೊಬ್ಬರ ವಾಹನ ಓವರ್ ಟೇಕ್ ಮಾಡಲು ಹೋಗಿ ಸಂಚಾರಿ ನಿಯಮಗಳ ಉಲ್ಲಂಘನೆ (Break Traffic Rules) ಮಾಡುವುದು ಸೇರಿ ಹತ್ತು ಹಲವು ಕಾರಣಗಳಿಂದ ಪ್ರತಿನಿತ್ಯ ಅಪಘಾತ ಸಂಭವಿಸುತ್ತಲೇ ಇರುತ್ತದೆ.
ಇನ್ನು ವಿಶ್ವದಲ್ಲಿ ಬಹುತೇಕ ಅಪಘಾತ ಸಂಭವಿಸಲು ಕಾರಣ ವೇಗದ ಚಾಲನೆ (Overspeeding) ಎನ್ನವಹುದು. ಈ ವೇಗದ ವಾಹನ ಚಾಲನೆಯಿಂದ ಶೇಕಡ 91 ರಷ್ಟು ಅಪಘಾತ ಪ್ರಕರಣಗಳು ಸಂಭವಿಸಿ ಅನೇಕ ಜನರು ತಮ್ಮ ಪ್ರಾಣ ಕಳೆದುಕೊಂಡಿದ್ದು ಅದರಲ್ಲೂ ಭಾರತದಲ್ಲಿ ಅತಿ ಹೆಚ್ಚು ಅಪಘಾತ ಸಂಭವಿಸುವ ರಾಜ್ಯಗಳ ಪೈಕಿ ಕರ್ನಾಟಕದ(Karnataka) ಪಕ್ಕದ ರಾಜ್ಯ ತೆಲಂಗಾಣ(Telangana) ಕೂಡ ಸೇರಿದೆ
ಸದ್ಯ ದೇಶಾದ್ಯಂತ ಪ್ರತಿವರ್ಷ ಐದು ಲಕ್ಷ ರಸ್ತೆ ಅಪಘಾತ ನಡೆಯುತ್ತಿದ್ದು 1.5 ಲಕ್ಷ ಮಂದಿ ಅಗಲುತ್ತಿದ್ದಾರೆ . 2021ರಲ್ಲಿ ತೆಲಂಗಾಣದಾದ್ಯಂತ 11,822 ಮಂದಿ ಅಪಘಾತಕ್ಕೆ ಬಲಿಯಾಗಿದ್ದು ಶಮ್ಶಬಾದ್ನ ಹೋಟೆಲ್ನಲ್ಲಿ ನಡೆದ ರಸ್ತೆ ಅಪಘಾತಗಳು ಹಾಗೂ ಸುರಕ್ಷತಾ ಮಾನದಂಡಗಳ ಪರಿಶೀಲನಾ ಸಭೆಯಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಸುಪ್ರಿಂಕೋರ್ಟ್ ಮಾಜಿ ನ್ಯಾಯಮೂರ್ತಿ ಮತ್ತು ರಸ್ತ ಸುರಕ್ಷತಾ ಸಮಿತಿಯ ಮುಖ್ಯಸ್ಥರಾದ ಅಭಯ್ ಮನೋಹರ್ ಸಪ್ರೆ ಅಪಘಾತದ ಪ್ರಕರಣದಲ್ಲಿ ತೆಲಂಗಾಣ ಚೀನಾ ಜಪಾನ್ ಮತ್ತು ಜರ್ಮನಿಯನ್ನು ಮೀರಿಸಿದೆ ಎಂದು ಮಾಹಿತಿ ನೀಡಿದ್ದಾರೆ.
ಇನ್ನು ತೆಲಂಗಾಣದಲ್ಲಿ ಅಪಘಾತದ ಅಗಲಿಕರ ಪ್ರಮಾಣವು ಶೇಕಡಾ 31.5 ರಷ್ಟಿದ್ದು ಇದು ರಾಷ್ಟ್ರೀಯ ಸರಾಸರಿ 27.7 ಶೇಕಡಾಕ್ಕಿಂತ ಸ್ವಲ್ಪ ಹೆಚ್ಚಾಗಿದೆ. ತೆಲಂಗಾಣದಲ್ಲಿ ವರದಿಯಾದ ಒಟ್ಟು ಅಪಘಾತ ಅಗಲಿಕೆಯ ಸಂಖ್ಯೆ 11,822, ಅದರಲ್ಲಿ 9,868 ಪುರುಷರು ಮತ್ತು 1,954 ಮಹಿಳೆಯರು. ಒಟ್ಟಾರೆಯಾಗಿ ರಾಜ್ಯದಲ್ಲಿ 19,505 ಟ್ರಾಫಿಕ್ ಅಪಘಾತಗಳು ವರದಿಯಾಗಿವೆ. ಇದು 7,219 ಜನರ ಸಾವಿಗೆ ಕಾರಣವಾಗಿದೆ ಮತ್ತು 18,661 ಜನರು ಗಾಯಗೊಂಡಿದ್ದು 2020 ರಲ್ಲಿ 6,882 ಜನರು ರಸ್ತೆ ಅಪಘಾತಗಳಲ್ಲಿ ಪ್ರಾಣ ಕಳೆದುಕೊಂಡಿದ್ದರು ಮತ್ತು 337 ಜನರು ರೈಲ್ವೆ ಅಪಘಾತಗಳಲ್ಲಿ ಅಗಲಿದ್ದರು.
ಇನ್ನು 91ರಷ್ಟು ಅಪಘಾತಗಳು ವೇಗದ ಚಾಲನೆಯಿಂದಲೇ ಸಂಭವಿಸುತ್ತಿವೆ. ಹೌದು ಹೀಗಾಗಿ ವಾಹನ ಸವಾರರು ಶೇ. 100ರಷ್ಟು ಹೆಲ್ಮೆಟ್ ಮತ್ತು ಸೀಟ್ ಬೆಲ್ಟನ್ನು ಧರಿಸಬೇಕು. ಅಲ್ಲದೆ ಸರ್ಕಾರ ಅಪಘಾತದ ಕೇಂದ್ರಗಳನ್ನು ಪತ್ತೆ ಹಚ್ಚಿ ಸುರಕ್ಷತಾ ಮಾನದಂಡಗಳನ್ನು ಹೆಚ್ಚಿಸಬೇಕು.
ಅಪಘಾತಗಳನ್ನು ತಡೆಯಲು ಉತ್ತಮ ಮಾನದಂಡಗಳನ್ನು ರಚಿಸಬೇಕಿದೆ. ಈ ನಡುವೆ ಪ್ರಾಣಿಗಳು ಇದ್ದಕ್ಕಿದ್ದ ಹಾಗೆ ರಸ್ತೆಗೆ ನುಗ್ಗುವ ಕಾರಣದಿಂದ ಕೂಡ ಘೋರ ಅಪಘಾತ ಸಂಭವಿಸುತ್ತದೆ. ಸದ್ಯ ಇದೀಗ ಅಂತಹದ್ದೆ ವಿಡಿಯೋ ವೈರಲ್ ಆಗುತ್ತಿದ್ದು ಗೂಳಿಯೊಂದರ ಅವಾಂತರದಿಂದ ಹೇಗೆ ಬೈಕ್ ಸವಾರ ಅಗಲಿದ್ದಾನೆ ನೋಡಿ.