ವಾರ್ತಾ ಮಂಜರಿ
Trending Stories, Viral News, Gossips & Everything in Kannada

ಹಳ್ಳಿಯಲ್ಲಿ ಓಡಾಡುತ್ತಿರುವ ನಟಿ ಶ್ರುತಿ ಮಗಳು ಗೌರಿ…ಚಿಂದಿ ವಿಡಿಯೋ

12,093

ನಮ್ಮ ಕನ್ನಡ ಚಿತ್ರೋದ್ಯಮದಲ್ಲಿ ಹಲವಾರ ನಟಿಮಣಿಯರು ದಶಕಗಳ ಕಾಲ ಕನ್ನಡ ಸಿನಿಮಾ ರಂಗವನ್ನು ಆಳಿದ್ದು ಅಲ್ಲದೇ ಕನ್ನಡ ಸಿನಿಮಾರಂಗದಲ್ಲಿ ಬಹುಬೇಡಿಕೆ ನಟಿಯರಾಗಿ ಕೂಡ ಹೊರಹೊಮ್ಮಿರುವ ವಿಚಾರ ತಮಗೆಲ್ಲರುಗೂ ತಿಳಿದಿದೆ. ಹೌದು ಇಂತಹ ನಟಿಯರ ಸಾಲಿನಲ್ಲಿ ಶೃತಿ ಅವರು ಸಹ ಪ್ರಮುಖ ಸ್ಥಾನದಲ್ಲಿ ಕಂಡುಬರುತ್ತಾರೆ ಎಂದು ಹೇಳಿದರೆ ಖಂಡಿತ ತಪ್ಪಾಗಲಾರದು. ನಟಿ ಶ್ರುತಿ ಎಂದರೆ ಸಾಕು ಅವರ ಸಾಲು ಸಾಲು ಸಿನಿಮಾಗಳು ಕಣ್ಣ ಮುಂದೆ ಕಟ್ಟಿದಂತಾಗುತ್ತದೆ.

ಹೌದು ಅಂತಹ ಜಾದು ಮೂಡಿಸಿದ ಶೃತಿ ಅವರು ಚಿತ್ರರಂಗದಿಂದ ಕೊಂಚ ವಿರಾಮ ಪಡೆದಿದ್ದು ಚಿತ್ರರಂಗದಿಂದ ದೂರವುಳಿದ ಶೃತಿ ಅವರು ರಾಜಕೀಯಕ್ಕೆ ಕಾಲಿಟ್ಟಿದ್ದಾರೆ. ನಟಿ ಶೃತಿ ಅವರಿಗೆ ಒಬ್ಬಳು ಮುದ್ದಾದ ಮಗಳಿದ್ದು ಅವರನ್ನು ಚಿತ್ರರಂಗಕ್ಕೆ ಕರೆತರಬೇಕೆಂದು ಆಸೆ ಇದೆಯಂತೆ. ಹಾಗಾದರೆ ಶ್ರುತಿ ಅವರ ಮಗಳು ಈಗ ಹೇಗಿದ್ದಾರೆ ಎಂಬ ಹಲವಾರು ಮಾಹಿತಿಗಳನ್ನು ತಿಳಿಯಲು ಲೇಖನಿಯನ್ನು ಸಂಪೂರ್ಣವಾಗಿ ಓದಿ.

ಅಮೋಘ ಅಭಿನಯದ ಮೂಲಕವಾಗಿ ಕೋಟಿ-ಕೋಟಿ ಅಭಿಮಾನಿಗಳನ್ನು ಹೊಂದಿರುವ ಶೃತಿ ಅವರ ಮಗಳ ಹೆಸರು ಗೌರಿ ಎಂಬುದಾಗಿದ್ದು ಸದ್ಯಕ್ಕೆ ಗೌರಿ ಅವರು ಬೆಂಗಳೂರಿನ ಮೌಂಟ್ ಕಾನ್ವೆಂಟ್ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ಓದುತ್ತಿದ್ದಾರೆ. ಇನ್ನು ಇವರನ್ನು ಮನೆಯಲ್ಲಿ ಪ್ರೀತಿಯಿಂದ ಮಿಲಿ ಎಂದು ಕರೆಯುತ್ತಿದ್ದು ಗೌರಿ ಕೇವಲ ಓದುವುದಲ್ಲದೇ ಗಿಟಾರ್ ನುಡಿಸುವುದು ಹಾಡು ಹೇಳುವುದು ಲಾಂಗ್ ಜರ್ನಿ ಹೋಗುವುದು ಎಂದರೆ ಬಹಳ ಇಷ್ಟವಂತೆ. ಇನ್ನು ಇವರಿಗೆ ಇದಷ್ಟೇ ಅಲ್ಲದೆ ಐ ಎ ಎಸ್ ಮಾಡಬೇಕೆಂಬ ಆಸೆ ಕೂಡ ಇದೆಯಂತೆ.

ಕನ್ನಡಚಿತ್ರರಂಗದಲ್ಲಿ ಗೌರಿ ಅವರ ಅಚ್ಚುಮೆಚ್ಚಿನ ನಟ ಯಶ್ ಆದರೆ ಅಚ್ಚುಮೆಚ್ಚಿನ ನಟಿ ಮೋಹಕತಾರೆ ರಮ್ಯಾ ಆಗಿದ್ದು ಗೌರಿ ಅವರು ತಾವೇ ಸ್ವತಃ ಹಾಡಿದ ಹಾಡುಗಳನ್ನು ಸಾಮಾಜಿಕ ಜಾಲತಾಣದ ತಮ್ಮ ಖಾತೆಯಲ್ಲಿ ಆಗಾಗ ಹಂಚಿಕೊಳ್ಳುತ್ತಿದ್ದು ಇವರ ಗಾಯನವನ್ನು ಸಾಮಾನ್ಯರಲ್ಲದೇ ಹಲವಾರು ನಟ ನಟಿಯರು ಸಹ ಮೆಚ್ಚಿಕೊಂಡಿದ್ದಾರೆ. ಇನ್ನು ನಟಿ ಶೃತಿ ಅವರಿಗೆ ನಿಮ್ಮ ಮಗಳನ್ನು ಸಿನಿಮಾರಂಗಕ್ಕೆ ಕರೆದುಕೊಂಡು ಬರುತ್ತೀರಾ ಎಂದು ಕೇಳುವ ಪ್ರಶ್ನೆಗೆ ಶೃತಿ ಅವರು ಅದು ಅವಳ ಸ್ವತಂತ್ರಕ್ಕೆ ಬಿಟ್ಟಿದ್ದು. ಅವಳಿಗೆ ಯಾವುದರಲ್ಲಿ ಬೆಳೆಯಬೇಕೆಂಬ ಆಸೆ ಇದೆಯೋ ಅದರಲ್ಲಿ ಅವಳು ಬೆಳೆಯಲಿ. ಇದರಲ್ಲಿ ನನ್ನ ಬಲವಂತ ಇಲ್ಲ ಎಂದು ಹೇಳುತ್ತಾರೆ.

ಇನ್ನು ಗೌರಿಯವರು ಸಾಮಾಜಿಕ ಜಾಲತಾಣದಲ್ಲಿ ಬಹಳ ಆಕ್ಟಿವ್ ಆಗಿ ಇದ್ದು ತಮ್ಮ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುವುದರ ಮೂಲಕವಾಗಿ ಅನೇಕ ಅಭಿಮಾನಿಗಳನ್ನು ಕೂಡ ಹೊಂದಿದ್ದಾರೆ. ಆಗಾಗ ವಿದೇಶ ಪ್ರವಾಸವನ್ನು ಮಾಡುವುದರ ಮೂಲಕ ತಮ್ಮ ಫೋಟೋಗಳನ್ನು ಬಿಟ್ಟು ಸಖತ್ ಗ್ಲ್ಯಾಮರಸ್ ಆಗಿ ಕಾಣಿಸುವ ಇವರು ಟಿಕ್ ಟಾಕ್ ವಿಡಿಯೋಗಳನ್ನು ಕೂಡ ಮಾಡಿದ್ದ ಸಾಕಷ್ಟು ವೈರಲ್ ಕೂಡ ಆಗಿವೆ.

ಇನ್ನು ಇವರು ಸಹ ಚಿತ್ರರಂಗದಲ್ಲಿ ಬರುವ ನಿರೀಕ್ಷೆ ಹಲವರಿಗೆ ಇದ್ದು ಇನ್ನು ಇವರು ಕನ್ನಡ ಸಿನಿಮಾ ಜಗತ್ತಿಗೆ ಕಾಲಿಡುತ್ತಾರಾ ಎಂಬ ಕುತೂಹಲ ಹಲವರಿಗಿದೆ.ಇನ್ನು ಗೌರಿ ಯಾವ ಸಿನಿಮಾದಲ್ಲಿ ನಟಿಸುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ. ಇನ್ನು ಇವರು ನೋಡಲು ಬಹಳ ಸುಂದರವಾಗಿ ಕಾಣುತ್ತಿದ್ದು ಇನ್ನು ಇವರು ಸಿನಿಮಾ ರಂಗಕ್ಕೆ ಬರುತ್ತಾರೋ ಇಲ್ಲವೋ ಎಂಬುದನ್ನು ಕೂಡ ಕಾದುನೋಡಬೇಕಾಗಿದೆ. ಸದ್ಯ ಗೌರಿಶ್ರುತಿ ಯವರ ಹಳ್ಳಿ ಲುಕ್ ಇದೀಗ ವೈರಲ್ ಆಗುತ್ತಿದ್ದು ಒಮ್ಮೆ ಈ ಲೇಖನಿ ಕೆಳಗಿನ ವಿಡಿಯೋ ನೋಡಿ ಎಷ್ಟು ಮುದ್ದಾಗಿದ್ದಾರೆ ಗೌರಿ ಎಂದು ತಿಳಿದು ಬರುತ್ತದೆ.