ವಾರ್ತಾ ಮಂಜರಿ
Trending Stories, Viral News, Gossips & Everything in Kannada

ಮುಟ್ಟಾದ ಹೆಣ್ಣಿಗೆ ಎಷ್ಟು ಶಕ್ತಿ ಇರುತ್ತೆ….ಸ್ವಾಮೀಜಿ ಉತ್ತರಿಸಿದ ವಿಡಿಯೋ ನೋಡಿ

9,847

ಪ್ರತಿ ಹೆಣ್ಣು ಕೂಡ ತನ್ನ ಜೀವಮಾನದಲ್ಲಿ ಅನುಭವಿಸುವ ಒಂದು ಸಹಜ ಪ್ರಕ್ರಿಯೆಯೇ ಮುಟ್ಟು ಅಥವಾ ಋತುಚಕ್ರ. ಹೌದು ಇದೊಂದು ಸ್ವಾಭಾವಿಕವಾದ ಸಹಜವಾದ ಶಾರೀರಿಕ ಪ್ರಕ್ರಿಯೆಯಾಗಿದ್ದು ಮುಟ್ಟು ಎಂದರೆ ನಿಜವಾಗಿಯೂ ಏನಾಗುತ್ತದೆ ಎಂಬ ಸಂದೇಹ ಈಗಲೂ ಹಲವರಲ್ಲಿದೆ ಎಂದರೂ ತಪ್ಪಾಗಲಿಕ್ಕಿಲ್ಲ. ಹೌದು ಒಂದು ಹೆಣ್ಣಿಗೆ ಮುಟ್ಟಾಯಿತೆಂದರೆ ಆಗ ಅವಳ ಗರ್ಭಾಶಯದಿಂದ ಅವಳ ಯೋನಿಯ ಮೂಲಕ ರಕ್ತ ಬಿಡುಗಡೆಯಾಗುತ್ತದೆ.

ಇನ್ನು ಇದನ್ನೆ ಮುಟ್ಟು ಋತುಚಕ್ರ ಅಥವಾ ಪಿರಿಯಡ್ಸ್ ಎಂದು ಕರೆಯುತ್ತಾರೆ. ಇದು ಆ ಹೆಣ್ಣು ತನ್ನ ಪ್ರೌಢಾವಸ್ಥೆಯಿಂದ ಮುಂದಿನ ಹಂತಕ್ಕೆ ಹೋಗುತ್ತಿದ್ದಾಳೆ ಹೊಸ ಜೀವನ ತನ್ನಲ್ಲಿ ರೂಪಗೊಳ್ಳುವಿಕೆಗೆ ಶಾರೀರಿಕವಾಗಿ ಆಕೆ ಸಿದ್ದಳಾಗಿದ್ದಾಳೆ ಎಂಬುದನ್ನು ಸಂಕೇತಿಸುತ್ತದೆ ಎನ್ನಬಹುದು. ಪಿರಿಯಡ್ಸ್ ಬಗ್ಗೆ ಕಲಿಯಲು ಬಹಳಷ್ಟಿದೆ. ಏಕೆಂದರೆ ಮುಟ್ಟಿನ ಬಗ್ಗೆ ಬಹಳಷ್ಟು ಹುಡುಗಿಯರಿಗೆ ಅವಶ್ಯಕವಾದ ಪ್ರಮಾಣದಷ್ಟು ತಿಳುವಳಿಕೆಯಾಗಲಿ ಅವುಗಳಿಂದುಂಟಾಗುವ ಸಮಸ್ಯೆಗಳ ಬಗ್ಗೆಯಾಗಲಿ ತಿಳಿದಿರುವುದಿಲ್ಲ. ಹಾಗಾಗಿ ಇಂದಿಗೂ ಸಾಕಷ್ಟು ಹೆಣ್ಣು ಮಕ್ಕಳು ಅದರಲ್ಲೂ ಕೂಡ ವಿಶೇಷವಾಗಿ ಗ್ರಾಮೀಣ ಭಾಗದ ಹೆಣ್ಣು ಮಕ್ಕಳು ಮುಟ್ಟಿನ ಸಾಕಷ್ಟು ಸಮಸ್ಯೆಗಳನ್ನು ಅನುಭವಿಸುತ್ತಿರುತ್ತಾರೆ.

ಇನ್ನು ಹೆಂಗಸರು ಮನೆಯಲ್ಲಿ ಮುಟ್ಟಾದ ಸಮಯದಲ್ಲಿ ಯಾವುದೇ ಕಾರಣಕ್ಕೂ ಕೆಲವು ವಸ್ತುಗಳನ್ನು ಮುಟ್ಟಲು ಹೋಗಬಾರದು ಯಾವುದೇ ಕಾರಣಕ್ಕೂ ಸ್ಪರ್ಶ ಮಾಡಬಾರದು ಒಂದು ವೇಳೆ ನೀವು ಏನಾದರೂ
ಗೊತ್ತೋ ಗೊತ್ತಿಲ್ಲದೆ ಇಂತಹ ತಪ್ಪುಗಳನ್ನು ಮಾಡುತ್ತಾ ಇದ್ದರೆ ಮನೆಯಲ್ಲಿ ದಾರಿದ್ರ್ಯ ದೋಷಗಳು ಉಂಟಾಗುತ್ತದೆ.

ಆದಷ್ಟು ನೀವು ನೋಡಿಯೇ ಇರುತ್ತೀರಿ ಮನೆಯಲ್ಲಿ ಇದ್ದಕಿದ್ದ ಹಾಗೆ ಚೇಳು ಕಾಣಿಸುವುದು ಹಾವು ಕಾಣಿಸುವುದು ಯಾವುದಾದರೂ ರೀತಿ ಮನೆಯಲ್ಲಿ ಹಾವುಗಳು ಕಾಣಿಸುವುದು ಈ ರೀತಿಯಾಗಿ ಪದೇ ಪದೇ ನಡೆಯುತ್ತಾ ಇದ್ದರೆ ಇಂತಹ ತಪ್ಪುಗಳನ್ನು ನೀವು ಮಾಡುತ್ತಾ ಇದ್ದೀರಿ ಎನ್ನುವ ಸಂಕೇತ ಇದು ನೀಡುತ್ತದೆ ಎಂದು ಹಿರಿಯರು ಹೇಳುತ್ತಾರೆ. ಹೆಣ್ಣು ಮಕ್ಕಳು ಮುಟ್ಟಾದ ಸಮಯದಲ್ಲಿ ಯಾವುದೇ ಕಾರಣಕ್ಕೂ ಗೋಮಾತೆ ಸ್ಪರ್ಶ ಮಾಡಬಾರದು ಗೋಮಾತೆ ಮುಟ್ಟಬಾರದು ಇದು ಅತಿ ಮುಖ್ಯವಾದ ವಿಷಯವಾಗಿದ್ದು ಇನ್ನೂ ನಿಮ್ಮ ಮನೆಯಲ್ಲಿ ಅಥವಾ ಬೇರೆಯವರ ಮನೆಯಲ್ಲಿ ಮುಟ್ಟಾದ ಸಮಯದಲ್ಲಿ ತುಳಸಿ ಗಿಡವನ್ನು ಸ್ಪರ್ಶ ಮಾಡಬಾರದು ನಿಮ್ಮ ನೆರಳು ಕೂಡ ಅದಕ್ಕೆ ಬೀಳಬಾರದು ಎನ್ನುತ್ತಾರೆ.

ಇನ್ನು ಯಾವುದೇ ಕಾರಣಕ್ಕೂ ಅರಳಿ ಎಲೆ ಆಗಿರಬಹುದು ಅರಳಿ ಮರ ಆಗಿರಬಹುದು ಯಾವುದೇ ಕಾರಣಕ್ಕೂ ಮುಟ್ಟಾದ ಸಮಯದಲ್ಲಿ ಸ್ಪರ್ಶ ಮಾಡಬಾರದು. ಹೌದು ಶ್ರೀ ವಿಷ್ಣು ವಾಸ ಇರುವ ಅರಳಿ ಎಲೆಯನ್ನು ಮುಟ್ಟಾದ ಸಮಯದಲ್ಲಿ ಸ್ಪರ್ಶ ಮಾಡಬಾರದು ಇದರಿಂದ ದೋಷಗಳು ಉಂಟಾಗುತ್ತದೆ. ಇನ್ನೂ ಯಾವುದೇ ಕಾರಣಕ್ಕೂ ನಿಮ್ಮ ಮನೆಯ ದೇವರ ಕೋಣೆಯ ಒಳಗೆ ಹೋಗಬಾರದು ದೇವರ ಕೋಣೆಯಲ್ಲಿ ಇರುವ ವಸ್ತುಗಳನ್ನು ಮುಟ್ಟಬಾರದು. ನಿಮ್ಮ ಮನೆಯ ದೇವರ ಕೋಣೆಯ ವಸ್ತುಗಳನ್ನು ಕೆಲವೊಮ್ಮೆ ಹೊರಗೆ ಇಟ್ಟು ಇರುತ್ತೀರಿ ಅದನ್ನು ಯಾವುದೇ ಕಾರಣಕ್ಕೂ ಮುಟ್ಟಬಾರದು ಮತ್ತು ನಿಮ್ಮ ಕೈಯಾರೆ ಯಾವುದೇ ಕಾರಣಕ್ಕೂ ದೀಪಗಳನ್ನು ಮುಟ್ಟಾದ ಸಮಯದಲ್ಲಿ ಸ್ಪರ್ಶ ಮಾಡಬಾರದು ಇದರಿಂದ ದೋಷಗಳು ಉಂಟಾಗುತ್ತದೆ.

ಎಲ್ಲಾ ರೀತಿಯಲ್ಲಿ ಕೂಡ ಮನೆಯನ್ನು ಶುದ್ಧ ಗೊಳಿಸಿ ನಂತರ ನೀವು ಪೂಜೆಯನ್ನು ಮಾಡಬೇಕು ಅದರಿಂದ ಮುಟ್ಟಾದ ಸಮಯದಲ್ಲಿ ಯಾರು ಕೂಡ ಪೂಜೆ ಮಾಡುವುದಿಲ್ಲ ದೇವರ ಸಾಮಗ್ರಿಗಳನ್ನು ಕೂಡ ಮುಟ್ಟಬಾರದು ಎನ್ನುತ್ತಾರೆ. ಆದರೆ ಮುಟ್ಟಾದ ಹೆಣ್ಣಿಗಿರುವ ಶಕ್ತಿ ಎಂತಹದ್ದು ಗೊತ್ತಾ? ಈ ವಿಚಾರವನ್ನು ಗುರುವಾಣಿಯಲ್ಲಿ ರಾಜಗುರು ಮಹರಾಜಗುರುಗಳು ಹೇಳಿದ್ದು ಒಮ್ಮೆ ಲೇಖನಿಯ ಕೆಳಗಿನ ವಿಡಿಯೋ ನೋಡಿ ಆಶ್ಚರ್ಯ ಪಡುತ್ತೀರ.