ವಾರ್ತಾ ಮಂಜರಿ
Trending Stories, Viral News, Gossips & Everything in Kannada

ಪತ್ನಿ ಎದುರೇ ವಿಜಯ್ ರಾಘವೇಂದ್ರನನ್ನು ರೇಗಿಸಿದ ಶಿವಣ್ಣ…ಕ್ಯೂಟ್ ವಿಡಿಯೋ

2,067

ಸದ್ಯ ರಂಗಭೂಮಿಯ ಬಹುತೇಕ ಪ್ರತಿಭೆಗಳಿರುವ ಕದ್ದ ಚಿತ್ರಕ್ಕೆ ಹಿರಿಯ ನಟ ಶಿವರಾಜ್ ಕುಮಾರ್ ಸಾಥ್ ನೀಡಿದ್ದಾರೆ. ಹೌದು ಚಿತ್ರದ ಮೊದಲ ಮಳೆ ಹಾಡು ಬಿಡುಗಡೆ ಮಾಡಿ ಟ್ರೈಲರ್ ಸೊಗಸಾಗಿ ಮೂಡಿಬಂದಿದ್ದು ಸದ್ಯ ದೊಡ್ಡ ಮಟ್ಟದಲ್ಲಿ ಯಶಸ್ವಿಯಾಗಲಿ ಎಂದು ಹಾರೈಸಿದರು.

ಇನ್ನು ಸುಹಾಸ್‍ಕೃಷ್ಣ ಆಕ್ಷನ್ ಕಟ್ ಹೇಳಿದ್ದು ಕಾದಂಬರಿ ಆಧಾರಿತ ಕೃತಿ ಚೌರ್ಯದ ಕಥೆ ಆಧರಿಸಿದ ಚಿತ್ರ ಈ ಕದ್ದ ಚಿತ್ರ. ಬರಹಗಾರನ ವೃತ್ತಿ ವೈಯಕ್ತಿಕ ಜೀವನದಲ್ಲಿ ಹಲವು ಅಡೆತಡೆಗಳು ಬರುತ್ತಿದ್ದು ಅವುಗಳನ್ನು ಹೇಗೆ ಎದುರಿಸುತ್ತಾನೆ ಎನ್ನುವುದು ಈ ಸಿನಿಮಾದ ಸಾರವಾಗಿದೆ. ನಾಯಕ ವಿಜಯರಾಘವೇಂದ್ರ ವಿವರ ನೀಡಿ ಪಾತ್ರಕ್ಕೆ ತಕ್ಕಂತೆ ಮೊದಲ ಬಾರಿ ಸಿಗರೇಟ್ ಸೇದಿದ್ದೇನೆ. ಶಾಂತ ಸ್ವಭಾವ ಮತ್ತೊಮ್ಮೆ ಕೋಪ. ಅತಿರೇಕಕ್ಕೆ ಹೋಗಲು ಬಲವಾದ ಕಾರಣ ಇರುತ್ತದೆ.

ಅದರ ಹಿಂದೆ ಆತನ ಬದುಕಲ್ಲಿ ನಾಟಕ ನಡೆಯುತ್ತಿದ್ದು ಡ್ರಾಮಾಕ್ಕೆ ಒಳಗಿರುವ ವ್ಯಕ್ತಿ ಕುರಿತಂತೆ ಅಭಿನಯಿಸಿದ್ದೇನೆ ಎಂದರು. ಇನ್ನು ನಾಯಕಿ ಸಮ್ರತಾ ಸರೇಂದ್ರನಾಥ್ ಪ್ರತಿ ಪುರುಷನ ಹಿಂದೆ ಮಹಿಳೆಯೊಬ್ಬಳು ಇರುತ್ತಾರೆ. ಪತ್ನಿಯಾಗಿ ಗಂಡನ ಯಶಸ್ಸಿಗೆ ಬೆನ್ನಲುಬಾಗಿ ನಿಲ್ಲುವ ಪಾತ್ರ ಎಂದಿದ್ದು ನಿರ್ಮಾಪಕ ಸಂದೀಪ್ ಚಿತ್ರದ ಚಿತ್ರೀಕರಣ ಪೂರ್ಣಗೊಂಡಿದೆ. ಅಕ್ಟೋಬರ್‍ದಲ್ಲಿ ತೆರೆಗೆ ತರುವ ಯೋಜನೆ ಇದೆ ಎಂದರು. ಇನ್ನು ಕಲಾವಿದರಾದ ರಾಘುಶಿವಮೊಗ್ಗ ಬಾಲಾಜಿನಾರಾಯಣ್ ಸುಜಿತ್‍ಸುಪ್ರಭ್ ಸಂಗೀತ ನೀಡಿರುವ ಕೃಷ್ಣರಾಜ್ ಸಂಕಲನಕಾರ ಕ್ರೇಜಿಮೈಂಡ್ಸ್ ಛಾಯಾಗ್ರಾಹಕ ಗೌತಮ್‍ಮನು ಸಾಹಿತಿ ಅನಿಕೇತ್‍ಶ್ರೀವತ್ಸ ಮಾಹಿತಿ ನೀಡಿದರು.

ಇನ್ನು ಬಿಡುಗಡೆಯಾಗಿರುವ ಕದ್ದ ಚಿತ್ರ ಟೀಸರ್‌ನಲ್ಲಿ ಪಾತ್ರ ಪರಿಚಯ ಮಾಡಿಕೊಡಲಾಗಿದ್ದು ಬಿಡುಗಡೆಯಾಗಿರುವ ಮೊದಲ ಮಳೆಯ ಎಂಬ ಗೀತೆಗೆ ಕೃಷ್ಣರಾಜ್‌ ಸಂಗೀತ ಸಂಯೋಜಿಸಿದ್ದಾರೆ. ಹೌದು ಗೀತೆಗೆ ಅನಿಕೇತ್‌ ಶ್ರೀವತ್ಸ ಸಾಹಿತ್ಯವಿದ್ದು ಸೂರಜ್‌ ಸಂತೋಷ್‌ ಈ ಹಾಡಿಗೆ ಧ್ವನಿಯಾಗಿದ್ದಾರೆ. ಇದೇ ವೇಳೆ ಮಾತನಾಡಿದ ನಿರ್ದೇಶಕ ಸುಹಾಸ್‌ ಕೃಷ್ಣ ಇದೊಂದು ಕಾದಂಬರಿ ಆಧಾರಿತ ಸಿನಿಮಾವಾಗಿದ್ದು ಕೃತಿ ಚೌರ್ಯದ ಕಥೆ ಸಿನಿಮಾದಲ್ಲಿದೆ. ಬರಹಗಾರನ ವೃತ್ತಿ ವೈಯಕ್ತಿಕ ಜೀವನದಲ್ಲಿ ಹಲವು ಅಡೆತಡೆಗಳು ಬರುತ್ತವೆ. ಅವಲ್ಲವನ್ನು ಆತ ಹೇಗೆ ಎದುರಿಸುತ್ತಾನೆ ಎನ್ನುವುದು ಸಿನಿಮಾದ ಕಥೆಯ ಒಂದು ಎಳೆ ಎಂದು ಕಥಾಹಂದರ ಬಿಚ್ಚಿಟ್ಟಿದ್ದಾರೆ.

ಶಾನ್ವಿ ಟಾಕೀಸ್‌ ಬ್ಯಾನರ್‌ನಲ್ಲಿ ಸಂದೀಪ್‌ ಹೆಚ್‌. ಕೆ. ನಿರ್ಮಿಸಿರುವ ಕದ್ದ ಚಿತ್ರ ಚಿತ್ರಕ್ಕೆ ಶ್ರೀ ಕ್ರೇಜಿಮೈಂಡ್ ಸಂಕಲನ ಗೌತಮ್‌ ಮನು ಛಾಯಾಗ್ರಹಣವಿದ್ದು ಸದ್ಯ ಪ್ರಚಾರ ಕಾರ್ಯದಲ್ಲಿರುವ ಕದ್ದ ಚಿತ್ರ ಸಿನಿಮಾವನ್ನು ಮುಂದಿನ ತಿಂಗಳು ತೆರೆಗೆ ತರುವ ಯೋಚನೆಯಲ್ಲಿದೆ ಚಿತ್ರತಂಡ. ಇದೆಲ್ಲದರ ನಡುವೆ ಅಪರೂಪದ ಘಟನೆಗೆ ವೇದಿಕೆ ಸಾಕ್ಷಿಯಾಗಿದ್ದು ಮೊದಲು ಶಿವಣ್ಣ ಟಮಟೆ ಬೀಟ್ ಗೆ ಭರ್ಜರಿ ಡ್ಯಾನ್ಸ್ ಮಾಡಿದರು.ನಂತರ ವಿಜಯ್ ರಾಘವೇಂದ್ರ ಪತ್ನಿ ಜೊತೆ ಶಿವಣ್ಣ ಚಿಟ್ ಚಾಟ್ ಮಾಡಿದ್ದು ಅದೇನು ಎಂದು ನೀವೆ ನೋಡಿ.