ವಾರ್ತಾ ಮಂಜರಿ
Trending Stories, Viral News, Gossips & Everything in Kannada

ಪ್ರಿಯಾಂಕಾಳನ್ನು ತಬ್ಬಿಕೊಂಡು ಡಾನ್ಸ್ ಮಾಡಿದ ರವಿಮಾಮ…ಚಿಂದಿ ವಿಡಿಯೋ

1,587

ಸದ್ಯ ಎಷ್ಟು ಸಲ ನೋಡಿದರೂ ಸಹ ಮತ್ತೆ ಮತ್ತೆ ನೋಡಬೇಕು ಎಂಬುವಂತಹ ವಿಡಿಯೋವೊಂದು ಇದಿಗ ಸಾಮಾಜಿಕ ಜಾಲತಾಣದಲ್ಲಿ ಓಡಾಡುತ್ತಾ ಇದ್ದು ಅದು ನಟ ಕ್ರೇಜಿಸ್ಟಾರ್ ರವಿಚಂದ್ರನ್ ಹಾಗೂ ಪ್ರಿಯಾಂಕಾ ಉಪೇಂದ್ರ ಅವರ ಡ್ಯಾನ್ಸ್ ವಿಡಿಯೋ. ಹೌದುನನ್ನಾಣೆ ಕೇಳೆ ನನ್ನ ಪ್ರಾಣವೇ ಹಾಡಿಗೆ ರವಿಚಂದ್ರನ್ ಹಾಗೂ ನಟಿ ಪ್ರಿಯಾಂಕಾ ಉಪೇಂದ್ರ ರವರು ಹೆಜ್ಜೆ ಹಾಕಿದ್ದು ಈ ವಿಡಿಯೋ ಎಲ್ಲೆಡೆ ವೈರಲ್ ಆಗುತ್ತಿದ್ದು ವಾವ್ ಎನ್ನುವ ಫೀಲ್ ಮನದಲ್ಲಿಯೇ ಮೂಡುತ್ತಿದೆ.

ಹೌದು ಹೇಳಿ ಕೇಳಿ ರವಿಚಂದ್ರನ್ ಜೊತೆಗೆ ಹೆಜ್ಜೆ ಹಾಕುವುದೆಂದರೆ ಸುಮ್ಮನೇ ಅಲ್ಲ. ರವಿಮಾಮ ಅಂದಿಗೂ ಇಂದಿಗೂ ಎಂದೆಂದಿಗೂ ಎಲ್ಲರ ಹಾರ್ಟ್ ಫೇವರಿಟ್ ಎನ್ನಬಹುದು. ಇತ್ತ ಪ್ರಿಯಾಂಕಾ ಉಪೇಂದ್ರ ಕೂಡ ಎವರ್‌ಗ್ರೀನ್ ಬ್ಯೂಟಿ ಮೆಂಟೈನ್ ಮಾಡಿರುವ ಚೆಲುವೆಯಾಗಿದ್ದು ಮಲ್ಲ ಸಿನಿಮಾದಲ್ಲಿ ಇಬ್ಬರ ಜೋಡಿ ನೋಡಿ ಖುಷಿ ಪಟ್ಟವರಿಗೆ ಮತ್ತೆ ಡ್ರಾಮಾ ಜ್ಯೂನಿಯರ್ ವೇದಿಕೆ ಮೇಲೆ ಡ್ಯುಯೆಟ್ ನೋಡುವ ಅವಕಾಶವೂ ಒದಗಿ ಬಂದಿತ್ತು.

ಹೌದು ಜೀ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಡ್ರಾಮಾ ಜ್ಯೂನಿಯರ್‌ನಲ್ಲಿ ವಾರಕ್ಕೊಮ್ಮೆ ಹಲವು ವಿಶೇಷತೆಗಳು ಕಾಣಸಿಗುತ್ತಿದ್ದು ಆಗಾಗ ವಿಶೇಷವಾಗಿ ಅತಿಥಿಗಳನ್ನು ಕರೆಸುತ್ತಿದ್ದರು. ಅದರಂತೆ ಪ್ರಿಯಾಂಕಾ ಉಪೇಂದ್ರ ಕೂಡ ಬಂದಿದ್ದು ಅಭಿಮಾನಿಗಳಿಗೆ ಸಖತ್ ಖುಷಿ ನೀಡಿತ್ತು. ಇನ್ನು ಇದೇ ವೇದಿಕೆಯಲ್ಲಿ ಕ್ರೇಜಿಸ್ಟಾರ್ ರವಿಚಂದ್ರನ್ ಜೊತೆಗೆ ಸ್ಟೇಪ್ ಹಾಕಿದ್ದು ಈ ಡ್ಯಾನ್ಸ್ ವಿಡಿಯೋ ಸದ್ಯ ಜೀ ಕನ್ನಡ ಅಪ್ಲೋಡ್ ಮಾಡಿದ್ದು ಪ್ರಿಯಾಂಕಾ ಉಪೇಂದ್ರ ಸಹ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು.

ಡ್ರಾಮಾ ಜ್ಯೂನಿಯರ್‌ನಲ್ಲಿ ಸಖತ್ ಟ್ಯಾಲೆಂಟ್ ಇರುವ ಮಕ್ಕಳು ವಾರದಲ್ಲಿ ಎರಡು ದಿನ ನಕ್ಕು ನಲಿಸುತ್ತಿದ್ದರು. ಈ ಮಧ್ಯೆ ರವಿಚಂದ್ರನ್ ಕಡೆಯಿಂದ ಮತ್ತಷ್ಟು ಮಸ್ತಿ ಸಿಗುತ್ತಿದ್ದದ್ದು ಗ್ಯಾರಂಟಿ ಆಗಿತ್ತು. ಹೌದು ಜೀ ಕನ್ನಡ ಹಿರಿಯ ಕಲಾವಿದರಿಗೆ ಸಾಕಷ್ಟು ಗೌರವ ನೀಡುತ್ತದ್ದು ಅದರಂತೆ ರವಿಚಂದ್ರನ್ ಹುಟ್ಟುಹಬ್ಬ. ಬೇರೆ ಏನಾದರೂ ಸ್ಪೆಷಲ್ ದಿನವಾದರೆ ಅಂದು ರವಿಚಂದ್ರನ್‌ಗಾಗಿಯೇ ಆ ವೇದಿಕೆಯನ್ನು ಮೀಸಲಿಡುತ್ತದೆ.

ಅದರಲ್ಲೂ ರವಿಚಂದ್ರನ್ ಜೊತೆಗೆ ಈ ಹಿಂದೆಯೆಲ್ಲಾ ನಟಿಸಿದ್ದ ನಟಿ ಮಣಿಯರು ಕರೆತಂದು ಅಲ್ಲೊಂದು ಹಳೆಯ ಭಾವಯಾನ ನಿರ್ಮಾಣವಾಗುವಂತೆ ಮಾಡುತ್ತದೆ. ಹೊಸ ಲೋಕವನ್ನೇ ಸೃಷ್ಟಿಸಿ ಬಿಡುತ್ತಿದ್ದು ಖುಷ್ಭು ಅವರನ್ನು ಕರೆಸಿ ಕ್ರೇಜಿಸ್ಟಾರ್‌ಗೆ ಬಿಗ್ ಸರ್ಪೈಸ್ ನೀಡಿತ್ತು. ನಂತರ ಪ್ರಿಯಾಂಕಾ ಉಪೇಂದ್ರ ಆಗಮನದಿಂದ ಇನ್ನಷ್ಟು ಕಳೆ ಬಂದಿತ್ತು ಎನ್ನಬಹುದು.

ಇನ್ನು ನಟಿಯರು ಹಾಕುವ ಕಾಸ್ಟ್ಯೂಮ್ ಮೇಲೆ ಸದಾ ಎಲ್ಲರ ಚಿತ್ತ ನೆಟ್ಟಿರುತ್ತದೆ. ಪ್ರಿಯಾಂಕಾ ಉಪೇಂದ್ರ ಹಾಕಿರುವ ಗ್ರೀನ್ ಗೌನ್ ಮೇಲೆ ಎಲ್ಲರ ಗಮನ ಸೆಳೆದಿದ್ದು ಇದೊಂಥರ ಡಿಫ್ರೆಂಟ್ ಆಗಿ ರೆಡಿ ಮಾಡಲಾಗಿದ್ದು ಪಾಚಿ ಗ್ರೀನ್ ಡ್ರೆಸ್ ತುಂಬಾ ಅದ್ಭುತವಾಗಿ ಕಾಣುತ್ತಿದ್ದು ನೆಟ್ಟಿಗರು ಬ್ಯೂಟಿಫುಲ್ ಡ್ರೆಸ್ ಎಂದು ಕಮೆಂಟ್ ಹಾಕುವ ಮೂಲಕ ತಮ್ಮ ಆಸೆ ಅಭಿಲಾಷೆಯನ್ನು ವ್ಯಕ್ತಪಡಿಸಿದ್ದಾರೆ.

ಇನ್ನು ಡ್ರಾಮಾ ಜ್ಯೂನಿಯರ್ ಮನೆರಂಜನೆಯ ಜೊತೆಗೆ ಒಂದಷ್ಟು ಉಪಯೋಗಕರ ಸಂದೇಶವನ್ನು ನೀಡಿದ್ದು ಒಂದು ವಾರ ಲೋಕ ಅದಲಾತ್ ಬಗ್ಗೆಯೂ ಮಾಹಿತಿ ನೀಡಿತ್ತು. 1987 ಕಾಯ್ದೆಯ ಬಗ್ಗೆ ಡ್ರಾಮಾದ ಮೂಲಕ ಪಾಠ ಮಾಡಿದ್ದು ಅದರಲ್ಲೂ ಲೋಕಾಯುಜ್ತದಲ್ಲಿಯೇ ಇದ್ದವರನ್ನು ಕರೆಯಿಸಿ ಆ ಬಗ್ಗೆ ಜಾಗೃತಿ‌ ಮೂಡಿಸಿತ್ತು ಜೀ ಕನ್ನಡ ವಾಹಿನಿ.