ಕನ್ನಡ ಚಿತ್ರರಂಗದಲ್ಲಿ ಕೆಲವು ಕರಾಳ ಘಟನೆಗಳನ್ನು ಮರೆಯಲು ಸಾಧ್ಯವಿಲ್ಲ. ಅದರಲ್ಲಿ ದುನಿಯಾ ವಿಜಯ್ ಹಾಗೂ ಪಾನಿಪುರಿ ಕಿಟ್ಟಿ ನಡುವೆ ನಡೆದ ಘಟನೆ ಕೂಡ ಒಂದು. ಇಂದು ಈ ವಿಚಾರದ ಬಗ್ಗೆ ತಿಳಿಯೋಣ. 2018 ರಲ್ಲಿ ಕಿಡ್ನಾಪ್ ಪ್ರಕರಣದಲ್ಲಿ ದುನಿಯಾ ವಿಜಿ ಸೇರಿ ಮೂವರು ಆರೋಪಿಗಳು ಜೈಲುಪಾಲಾಗಿದ್ದರು. ವಿಜಿ ಮತ್ತಿತರರನ್ನು 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೊಳಪಡಿಸಲಾಗಿದ್ದು ಆರೋಪಿಗಳಾಗಿದ್ದ ದುನಿಯಾ ವಿಜಯ್ ಮಣಿ ಮತ್ತು ಪ್ರಸಾದ್ ಅವರು ಪರಪ್ಪನ ಅಗ್ರಹಾರಕ್ಕೆ ಅವರನ್ನಿರಿಸಲಾಗಿತ್ತು.
8ನೇ ಎಸಿಎಂಎಂ ನ್ಯಾಯಾಧೀಶ ಮಹೇಶ್ ಬಾಬು ಅವರು ಈ ತೀರ್ಪು ನೀಡಿದ್ದರು. ಹೌದು ಜಿಮ್ ಟ್ರೇನರ್ ಮಾರುತಿಗೌಡ ಅವರನ್ನು ಕಿಡ್ನಾಪ್ ಮಾಡಿ ಪ್ರಾಣ ತೆಗುಯುವುದಾಗಿ ನಡೆಸಿದ ಆರೋಪ ದುನಿಯಾ ವಿಜಿ ಹಾಗೂ ಸಂಗಡಿಗರ ಮೇಲಿದ್ದು ದುನಿಯಾ ವಿಜಿ ಅವರ ಮಾಜಿ ಜಿಮ್ ಟ್ರೇನರ್ ಪಾನಿಪುರಿ ಕಿಟ್ಟಿ ಅವರ ಅಣ್ಣನ ಮಗನಾದ ಮಾರುತಿಗೌಡ ಅವರ ತುಟಿಗೆ 14 ಹೊಲಿಗೆಗಳನ್ನ ಹಾಕಲಾಗಿತ್ತು. ಕಿವಿ ಮೂಗು ಬಾಯಿಯ ಮೇಲೂ ಗಂಭೀರ ಗಾಯವಾಗಿತ್ತು.
ಪಾನಿಪುರಿ ಕಿಟ್ಟಿ ನೀಡಿದ ದೂರಿನ ಮೇಲೆ ಹೈಗ್ರೌಂಡ್ ಪೊಲೀಸ್ ಠಾಣೆಯಲ್ಲಿ ದುನಿಯಾ ವಿಜಿ ಅವರ ಜಿಮ್ ಟ್ರೇನರ್ ಪ್ರಸಾದ್ ಹಾಗೂ ಮಣಿ ಅವರ ಮೇಲೆ 363 ಸೇರಿ ವಿವಿಧ ಐಪಿಸಿ ಸೆಕ್ಷನ್ ಅಡಿ ಕೇಸ್ ದಾಖಲಾಗಿತ್ತು. ಆದರೆ ಈ ಕೇಸ್ನಲ್ಲಿ ಪ್ರಮುಖವಾಗಿ ಇರಬೇಕಾದ 307 ಸೆಕ್ಷನ್ ಅಡಿಯಡಿ ಪ್ರಕರಣ ದಾಖಲಾಗಿರಲಿಲ್ಲ. ಇದು ಸಾಕಷ್ಟು ಅಚ್ಚರಿ ಮೂಡಿತ್ತು. ಅಪಹರಣ ಮಾಡಿ ಹಲ್ಲೆ ಮಾಡಿದ್ದು ಗಂಭೀರ ಕೃತ್ಯವಾದ್ದರಿಂದ ಸೆಕ್ಷನ್ 307 ಅನ್ನೂ ಸೇರಿಸಬೇಕಾಗಿತ್ತು ಎಂಬ ಅಭಿಪ್ರಾಯ ಕೂಡ ಮೂಡಿತ್ತು.
ಘಟನೆ ಏನು ಎಂದು ನೋಡುವುದಾದರೆ ವಸಂತನಗರದ ಅಂಬೇಡ್ಕರ್ ಭವನದಲ್ಲಿ ಮಿಸ್ಟರ್ ಬೆಂಗಳೂರು ಪ್ರಶಸ್ತಿಗಾಗಿ ಬಾಡಿ ಬ್ಯುಲ್ಡಿಂಗ್ ಸ್ಪರ್ಧೆ ನಡೆದಿರುತ್ತದೆ. ಆ ಸಂದರ್ಭದಲ್ಲಿ ದುನಿಯಾ ವಿಜಿ ಅವರ ಮಗ ಸಾಮ್ರಾಟ್ ಹಾಗೂ ವಿಜಿ ಸಂಗಡಿಗರು ಅಲ್ಲಿಗೆ ಹೋಗಿರುತ್ತಾರೆ. ಯಶ್ ಪ್ರೇಮ್ ಅಜೇಯ್ ರಾವ್ ಮೊದಲಾದವರಿಗೆ ಜಿಮ್ ಟ್ರೇನರ್ ಆಗಿರುವ ಮಾರುತಿಗೌಡ ಕೂಡ ಅಲ್ಲಿಗೆ ಬಂದಿರುತ್ತಾರೆ. ದುನಿಯಾ ವಿಜಿ ಅವರ ಮಾಜಿ ಜಿಮ್ ಟ್ರೇನರ್ ಪಾನಿಪುರಿ ಕಿಟ್ಟಿ ಅವರ ಅಣ್ಣನ ಮಗನಾದ ಮಾರುತಿಗೌಡ ಹಾಗೂ ದುನಿಯಾ ವಿಜಿ ನಡುವೆ ಮಾತಿನ ಚಕಮಕಿ ನಡೆಯುತ್ತದೆ.
ಅದಾದ ನಂತರ ಮಾರುತಿಗೌಡರನ್ನು ಕಾರಿನಲ್ಲಿ ಕರೆದೊಯ್ಯುವ ದುನಿಯಾ ವಿಜಿ ಹಾಗೂ ಸಂಗಡಿಗರು ರಾತ್ರಿಯಿಡೀ ಕಿರುಕುಳ ಕೊಟ್ಟು ಜೋರು ಹಲ್ಲೆ ಮಾಡುತ್ತಾರೆ.ಹೌದು ಅಷ್ಟರಲ್ಲಿ ವಿಷಯ ತಿಳಿದ ಪಾನಿಪುರಿ ಕಿಟ್ಟಿ ಕೂಡಲೇ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸುತ್ತಾರೆ. ಇದರ ಮಧ್ಯೆ ಮಾರುತಿಗೌಡ ಅವರು ತಮ್ಮ ಮೇಲೆ ಹಲ್ಲೆ ಮಾಡಿದ್ದು ದುನಿಯಾ ವಿಜಿ ಅಭಿಮಾನಿಗಳು ಎಂದು ಹೇಳಿಕೆ ನೀಡಿದ ವಿಡಿಯೋವೊಂದನ್ನು ದುನಿಯಾ ವಿಜಿ ಸಂಗಡಿಗರು ಬಿಡುಗಡೆ ಮಾಡಿದ್ದು ಹ ಲ್ಲೆ ಮಾಡಿದ ನಂತರ ಮಾರುತಿಗೌಡರನ್ನು ಬೆ ದರಿಸಿ ಈ ವಿಡಿಯೋ ರೆಕಾರ್ಡ್ ಮಾಡಿರುವ ಆರೋಪ ದುನಿಯಾ ವಿಜಿ ಮೇಲಿತ್ತು.
ಹಲ್ಲೆ ಮಾಡಿಯೂ ಕೂಡ ದುನಿಯಾ ವಿಜಿ ತೋರಿಸುತ್ತಿದ್ದ ದರ್ಪ ಪೊಲೀಸರಿಗೇ ಅಚ್ಚರಿ ಹುಟ್ಟಿಸಿತ್ತು. ದುನಿಯಾ ವಿಜಿ ಈ ಹಿಂದೆಯೂ ಇಂಥ ಅನೇಕ ದಾಂಧಲೆಗಳನ್ನು ಮಾಡಿದ್ದು ಅವರ ಹಳೆಯ ಪ್ರಕರಣಗಳಿಗೆಲ್ಲಾ ಮತ್ತೆ ಜೀವ ಕೊಡಲು ಪೊಲೀಸರು ಅಣಿಯಾಗಿದ್ದರು. ಅವರ ಆಟಾ ಟೋಪಗಳ ಆಧಾರದ ಮೇಲೆ ದುನಿಯಾ ವಿ ಜಿಯನ್ನು ರೌಡಿ ಶೀಟ್ಗೆ ಸೇರಿಸುವ ಚಿಂತನೆಯೂ ಜೂಡ ಪೊಲೀಸರಲ್ಲಿತ್ತು. ದುನಿಯಾ ವಿಜಿ ಅರೆಸ್ಟ್ ಆದ ಸನ್ನಿವೇಶ ಇಲ್ಲಿದೆ ನೋಡಿ.