ವಾರ್ತಾ ಮಂಜರಿ
Trending Stories, Viral News, Gossips & Everything in Kannada

ಆಘಾತಕಾರಿ ಸುದ್ದಿ ತಿಳಿಸಿದ ದಿಗಂತ್ ಪತ್ನಿ ಅಂದ್ರಿತಾ ರೈ…ಎಲ್ಲವೂ ಅಂತ್ಯ

74,134

ಪತಂಗವಾಗಿ ಹಾರುತ್ತಾ ಮೆರವಣಿಗೆ ಸಿನಿಮಾ ಮೂಲಕ ಕನ್ನಡ ಚಿತ್ರರಂಗದಲ್ಲಿ ಪಾದಾರ್ಪಣೆ ಮಾಡುತ್ತಾ ಸಿನಿ ರಸಿಕರಿಂದ ಮನಸಾರೆ ಮೆಚ್ಚುಗೆ ಪಡೆದುಕೊಂಡು ಕನ್ನಡ ಚಿತ್ರರಂಗದ ವೀರ ಪರಂಪರೆ ಯಲ್ಲಿ ಪಾರಿಜಾತಾವಾಗಿ ಅರಳಿದ ಈ ನಟಿ ನಂತರ ದೂದ್ ಪೇಡ ದಿಂಗತ್ ಅವರ ಜೊತೆ ನೂರು ಜನ್ಮಕೂ ನೂರಾರು ಜನ್ಮಕು ಎಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದು ಸದ್ಯ ಇದೀಗ ಚಿತ್ರರಂಗದಿಂದ ಕೊಂಚ ದೂರ ಉಳಿದು ವೈವಾಹಿಕ ಜೀವನವನ್ನು ಎಂಜಾಯ್ ಮಾಡುತ್ತಿದ್ದಾರೆ.

2006 ರಲ್ಲಿ ಜಾಕ್‌ಪಾಟ್‌ ಎಂಬ ಸಿನಿಮಾದ ಒಂದು ಹಾಡಿನಲ್ಲಿ ಕಾಣಿಸಿಕೊಂಡ ಈ ನಟಿ ಬಳಿಕ 2008 ರಲ್ಲಿ ಮೆರವಣಿಗೆ ಎಂಬ ಚಿತ್ರದ ಮೂಲಕ ಪ್ರಜ್ವಲ್ ದೇವರಾಜ್ ರವರಿಗೆ ಪರಿಪೂರ್ಣ ನಾಯಕಿಯಾಗಿ ನಟನೆಯ ವೃತ್ತಿಜೀವನವನ್ನು ಪ್ರಾರಂಭಿಸಿದ್ದು ಈ ಸಿನಿಮಾದಲ್ಲಿನ ನಟನೆಯಿಂದಾಗಿ ಅಪಾರ ಮೆಚ್ಚುಗೆಗಳನ್ನು ಕೂಡ ಪಡದುಕೊಳ್ಳುತ್ತಾರೆ. ನಂತರ ಅದೇ ವರುಷ ಸುದೀಪ್ ಅಭಿನಯದ ಮಸ್ತ್ ಮಜಾ ಮಾಡಿ ಎಂಬ ಸಿನಿಮಾದಲ್ಲಿ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದು ಕನ್ನಡಿಗರಿಗೆ ಚಿರಪರಿಚಿತರಾಗುತ್ತಾರೆ.

ಇದಾದ ಬಳಕ ನಟಿ ಐಂದ್ರಿತಾ ರೇ ಅವರ ನಸೀಬೇ ಬದಲಾಗುತ್ತದೆ ಎನ್ನಹುದು. ವಾಯುಪುತ್ರ ಮನಸಾರೆ ನೂರ ಜನ್ಮಕು ನನ್ನವನು ಜನ್ಮ ಜನ್ಮದಲ್ಲೂ ವೀರ ಪರಂಪರೆಹೀಗೆ ಸಾಲು ಸಾಲು ಸಿನಿಮಾಗಳಲ್ಲಿ ಅಭಿನಯಿಸಿ ಕನ್ನಡ ಚಿತ್ರರಂಗದಲ್ಲಿ ಪ್ರಮುಖ ನಾಯಕಿಯ ಪಟ್ಟಿಗೆ ಸೇರಿಕೊಂಡ ಅವರಿಗೆ ಅನೇಕ ಪ್ರಶಸ್ತಿಗಳು ಮತ್ತು ಪುರಸ್ಕಾರಗಳನ್ನು ಕೂಡ ಪಡೆದು ಕೊಳ್ಳುತ್ತಾರೆ.

ತದನಂತರ ಕನ್ನಡದಲ್ಲಿ ಬಹು ಬೇಡಿಕೆಯ ನಟಿಯಾಗಿ ಬೆಳೆದ ಆಂಡಿ ಬಾಲಿವುಡ್ ನಲ್ಲೂ ಸಹ ತಮ್ಮ ಅದೃಷ್ಟ ಪರೀಕ್ಷೆ ನಡೆಸಿದ್ದುಕನ್ನಡ ಹಿಂದಿ ಬೆಂಗಾಲಿ ಹೀಗೆ ಮೂರು ಭಾಷೆಯ ಚಿತ್ರರಂಗದಲ್ಲಿಯೂ ಕೂಡ ಸಿನಿಮಾಗಳಲ್ಲಿ ಅಭಿನಯಿಸುತ್ತಾರೆ. 2018 ರಲ್ಲಿ ತನ್ನ ಬಹು ದಿನದ ಸ್ನೇಹಿತ ನಟ ದಿಗಂತ್ ಅವರ ಜೊತೆಗೆ ತಮ್ಮ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದು ಇನ್ನು ವಿವಾಹವಾದ ಮೇಲೆ ಸಿನಿಮಾಗಳ ವಿಚಾರದಲ್ಲಿ ಚ್ಯೂಸಿಯಾಗಿರುವ ಐಂದ್ರಿತಾ ರೇ ಇಲ್ಲಿ ತನಕ ಕನ್ನಡದಲ್ಲಿ ಕೇವಲ ಎತಡು ಸಿನಿಮಾಗಳಲ್ಲಿ ಕಾಣಿಸಿಕೊಂಡಿದ್ದಾರೆ.

ಹೌದು ವಿವಾಹ ಆದ ಮೇಲೆ ಯಾವ ಸಿನಿಮಾಗಳಲ್ಲೂ ಕಾಣಿಸಿಕೊಳ್ಳದ ಈ ನಟಿ ದಿ ಕ್ಯಾಸಿನೋ – ಮೈ ಗೇಮ್ ಮೈ ರೂಲ್ಸ್ ಎಂಬ ಹಿಂದಿ ವೆಬ್ ಸೀರೀಸ್ ನಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದು ಹಾರ್ದಿಕ್ ಗಜ್ಜರ್ ನಿರ್ಮಾಣದ ಮತ್ತು ನಿರ್ದೇಶನದ ವೆಬ್ ಸೀರೀಸ್ ಇದಾಗಿತ್ತು.

ಹಿಂದಿ ಕಿರುತೆರೆಯ ಕರಣ್ವೀರ್ ಬೋರಾ ಸುಧಾನ್ಷು ಪಾಂಡೇ ಮಂದನಾ ಕರೀಮಿ ರೋಮಿತ್ ರಾಜ್ ದಿಗಾಂಗನಾ ಸೂರ್ಯವಂಶಿ ಮತ್ತು ಮುಕುಲ್ ದೇವ್ ಅಭಿನಯಿಸಿದ್ದು ಸದ್ಯ ಇದೀಗ ಮನೆಯಲ್ಲಿ ಗಂಡನ ಜೊತೆ ಕಾಲ ಕಳೆಯುತ್ತಿರುವ ಐಂದ್ರಿತಾ ಸಾಮಜಿಕ ಜಾಲತಾಣದಲ್ಲಿ ಸದಾ ಸಕ್ರಿಯರಾಗಿರುತ್ತಾರೆ. ಸದ್ಯ ಈಗಲೂ ಕೂಡ ಕೆಲ ಅಭಿಮಾನಿಗಳು ತೆರೆಯ ಮೇಲೆ ಆಂಡಿಯ ಹಾಟ್ ಲುಕ್ ನೋಡಲು ಕಾದುಕುಳಿತ್ತಿದ್ದಾರೆ.

ಸದ್ಯ ತಮ್ಮ ಹೊಸ ಚಿತ್ರ ತಿಮ್ಮಯ್ಯ ಅಂಡ್ ತಿಮ್ಮಯ್ಯ ಎನ್ನುವ ಚಿತ್ರದ ಪ್ರಮೋಷನ್ ವೇಳೆ ಒಂದು ಸಂದರ್ಶನದಲ್ಲಿ ಭಾಗಿಯಾಗಿದ್ದ ಐಂದ್ರಿತಾ ರೇ ಸಂದರ್ಶನದಲ್ಲಿ ಮಾತನಾಡಿ ತಿಮ್ಮಯ್ಯ ಅಂಡ್ ತಿಮ್ಮಯ್ಯ ಚಿತ್ರದ ಮೂಲಕ ನಾನು ದಿಗಂತ್ ಮತ್ತೆ ತೆರೆ ಮೇಲೆ ಕಾಣಿಸಿಕೊಳ್ಳುತ್ತಿದ್ದೇವೆ. ಹೌದು ತಿಮ್ಮಯ್ಯ ಅಂಡ್ ತಿಮ್ಮಯ್ಯ ಚಿತ್ರದಲ್ಲಿ ದಿಗಂತ್ ಅನಂತ ನಾಗ್ ಮುಖ್ಯ ಭೂಮಿಕೆಯಲ್ಲಿ ನಟಿಸುತ್ತಿದ್ದು ಇದೊಂದು ಕೌಟುಂಬಿಕ ಚಿತ್ರವಾಗಿದೆ ಎಂದಿದ್ದಾರೆ.

ಇನ್ನು ಕನ್ನಡದಲ್ಲಿ ನಿಮ್ಮ ಚಿತ್ರಗಳು ಕಡಿಮೆ ಆಗುತ್ತಿವೆ ಯಾಕೆ ಎಂದು ಐಂದ್ರಿತಾ ರೆ ರವರನ್ನು ಪ್ರಶ್ನಿಸಿದಾಗ ಅದಕ್ಕೆ ಅವರು ಉತ್ತರಿಸಿ ನನಗೆ ಸಿನಿಮಾಗಳಲ್ಲಿ ಸಾಕಷ್ಟು ಆಫರ್ ಗಳು ಬರುತ್ತಿದ್ದವು. ಮದುವೆಯ ನಂತರ ಆಫರ್ ಗಳು ಬರುವುದು ಕಮ್ಮಿಯಾಗಿದ್ದು ಮದುವೆಯಾದೆ ಎಂಬ ಕಾರಣಕ್ಕೆ ಸಿನಿಮಾ ದಿಂದ ನನಗೆ ಆಫರ್ಗಳು ಬರುತ್ತಿಲ್ಲವೇ ಎಂದು ಪ್ರಶ್ನಿಸಿದ್ದಾರೆ. ಈಗಿನ ಕಾಲದಲ್ಲಿ ಮದುವೆಯ ನಂತರ ನಟಿಯರು ಸಿನಿಮಾಗಳಲ್ಲಿ ತೊಡಗಿ ಕೊಳ್ಳುವುದು ಸಾಮಾನ್ಯವಾಗಿದ್ದು ನಯನತಾರ ಸಮಂತಾ ಮುಂತಾದವರೆಲ್ಲರೂ ನಟನೆಯಲ್ಲಿ ಸಕ್ರಿಯರಾಗಿದ್ದು ಕನ್ನಡ ಚಿತ್ರರಂಗದಲ್ಲಿ ಇಂತಹ ಮನೋಭಾವನೆ ಬದಲಾಗಬೇಕಿದೆ.

ಇನ್ನು ಕಳೆದ ವರ್ಷ ನಾನು ಎರಡು ಹಿಂದಿ ಚಿತ್ರಗಳಲ್ಲಿ ತೊಡಗಿಕೊಂಡಿದ್ದೆ ಆ ಸಿನಿಮಾಗಳು ಬಾಲಿವುಡ್ ಓಟಿಟಿ ಯಲ್ಲಿ ರಿಲೀಸ್ ಆಗಿವೆ. ಸದ್ಯ ಇದೀಗ ತಿಮ್ಮಯ್ಯ ಅಂಡ್ ತಿಮ್ಮಯ್ಯ ಎನ್ನುವ ಚಿತ್ರವೂ ಸಹ ಮುಗಿದಿದ್ದು ಈ ಚಿತ್ರ ತೆರೆಗೆ ಬರಲು ರೆಡಿಯಾಗಿದೆ. ನನಗೂ ಕೂಡ ಆಕ್ಷನ್ ಸಿನಿಮಾಗಳಲ್ಲಿ ನಟಿಸಬೇಕು ಎನ್ನುವ ಆಸೆಯಿದ್ದು ಆ ಚಿತ್ರಗಳಿಗಾಗಿ ನಾನು ಕೂಡ ಕಾಯುತ್ತಿದ್ದೇನೆ.ಹೌದು ಮದುವೆಗೆ ಮೊದಲು ನನಗೆ 35 ರಿಂದ 40 ಸಿನಿಮಾಗಳು ಆಫರ್ ಬರುತ್ತಿತ್ತು ಆದರೆ ಮದುವೆಯಾದ ಬಳಿಕ ಒಂದು ಸಿನಿಮಾ ಕೂಡ ಆಫರ್ ಸಿಗುತ್ತಿಲ್ಲ ಎಂದು ಐಂದ್ರಿತಾರೆ ಹೇಳಿಕೊಂಡು ಭಾವುಕರಾಗಿದ್ದಾರೆ. ಈಗ ಎಲ್ಲಾ ಅವಕಾಶಗಳು ಅಂತ್ಯ ಎಂದು ಹೇಳಿದ್ದಾರೆ.