ನಮ್ಮ ಭಾರತದ ತಾರಾ ಟೆನಿಸ್ ಪಟ ಹಾಗೂ ಮೂಗುತಿ ಸುಂದರಿ ಸಾನಿಯಾ ಮಿರ್ಜಾ ಮತ್ತು ಪಾಕಿಸ್ತಾನದ ಅನುಭವಿ ಕ್ರಿಕೇಟ್ ಆಟಗಾರ ಶೋಯೆಬ್ ಮಲಿಕ್ ರವರ ವೈವಾಹಿಕ ಜೀವನದಲ್ಲಿ ಬಿರುಕುಬಿಟ್ಟಿದ್ದು ಸುಂದರವಾಗಿ ಸಾಗುತ್ತಿದ್ದ ತಾರಾ ಕ್ರೀಡಾಜೋಡಿಯ ಮಧ್ಯ ಇದೀಗ ಬಿರುಗಾಳಿಯಂತೆ ಆಯೆಷಾ ಒಮರ್ ಎಂಟ್ರಿಯಾಗಿದ್ದು ಕೆಲ ಮೂಲಗಳ ಪ್ರಕಾರವಾಗಿ ಈಗಾಗಲೇ ಸಾನಿಯಾ ಮಿರ್ಜಾ ಹಾಗೂ ಶೋಯೆಬ್ ಮಲಿಕ್ ಡೈವರ್ಸ್ ಪಡೆದುಕೊಂಡಿದ್ದಾರೆ ಎನ್ನಲಾಗುತ್ತಿದೆ.
ಹೌದು ಅಷ್ಟಕ್ಕೂ ಸಾನಿಯಾ-ಮಲಿಕ್ ದಾಂಪತ್ಯ ಜೀವನದ ಜತೆ ಥಳುಕು ಹಾಕಿಕೊಂಡಿರುವ ಆಯೆಷಾ ಒಮರ್ ಯಾರು ಗೊತ್ತಾ? ಭಾರತದ ಸ್ಟಾರ್ ಟೆನಿಸ್ ಆಟಗಾರ್ತಿ ಸಾನಿಯಾ ಮಿರ್ಜಾ ಮತ್ತು ಪಾಕಿಸ್ತಾನದ ಮಾಜಿ ನಾಯಕ ಶೋಯೆಬ್ ಅಖ್ತರ್ 2010ರಲ್ಲಿ ವೈವಾಹಿಕ ಜೀವನಕ್ಕೆ ಕಾಲಿರಿಸಿದ್ದರು. ಈ ಜೋಡಿಗೆ ಇಜಾನ್ ಎನ್ನುವ ಸುಂದರ ಗಂಡು ಮಗು ಕೂಡಾ ಇದ್ದಾನೆ.
ಸದ್ಯ ಇದೀಗ ಈ ತಾರಾ ಜೋಡಿ ತಮ್ಮ 13 ವರ್ಷಗಳ ವೈವಾಹಿಕ ಜೀವನಕ್ಕೆ ಪೂರ್ಣ ವಿರಾಮ ಹಾಕಲು ಮುಂದಾಗಿದ್ದು ಪಾಕಿಸ್ತಾನದ ಕೆಲ ಮಾಧ್ಯಮಗಳ ವರದಿಯ ಪ್ರಕಾರವಾಗಿ ಶೋಯೆಬ್ ಮಲಿಕ್ ಅವರು ಸಾನಿಯಾ ಮಿರ್ಜಾ ಅವರನ್ನು ವಂಚಿಸಿದ್ದಾರೆ. ಸದ್ಯ ಮಲಿಕ್ ಇನ್ನೋರ್ವ ಯುವತಿಯ ಜೊತೆ ಸಂಬಂಧ ಹೊಂದಿದ್ದಾರೆ ಎನ್ನಲಾಗಿದ್ದು ಈ ವಿಷಯ ತಿಳಿದ ಬಳಿಕ ಸಾನಿಯಾ ಮಿರ್ಜಾ ಹಾಗೂ ಶೋಯೆಬ್ ಮಲಿಕ್ ಮೊದಲಿನಂತಿಲ್ಲ ಎನ್ನಲಾಗಿದೆ.
ಹೌದು ಅಷ್ಟಕ್ಕೂ ಈ ದಾಂಪತ್ಯ ಜೀವನ ಬಿರುಕು ಬಿಡಲು ಕಾರಣವೇನು ಎನ್ನುವುದನ್ನು ಹೊಡುಕಿ ಹೊರಟಾಗ ಕೇಳಿ ಬಂದ ಹೆಸರೇ ಆಯೆಷಾ ಒಮರ್.ಆಯೆಷಾ ಒಮರ್ ರವರು ಪಾಕಿಸ್ತಾನ ಮೂಲದ ಮಾಡೆಲ್ ಆಗಿದ್ದು ನಟಿ ಹಾಗೂ ಯೂಟ್ಯೂಬರ್ ಆಗಿ ಪ್ರಖ್ಯಾತಿ ಗಳಿಸಿದ್ದಾರೆ. ಆಯೆಷಾ ಪಾಕಿಸ್ತಾನದ ಖ್ಯಾತ ಸಿನಿಮಾಗಳಾದ ಕರಾಚಿ ಸೆ ಲಾಹೋರ್(2015) ಯಲ್ಘಾರ್(2017), ಕಾಫ್ ಕಂಗನಾ(2019) ಸಿನಿಮಾಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದು
ಕೆಲ ಮೂಲಗಳ ಪ್ರಕಾರವಾಗಿ ಆಯೆಷಾ ಒಮರ್ ಗರಿಷ್ಠ ಸಂಭಾವನೆ ಪಡೆಯುವ ನಟಿಯಾಗಿದ್ದು ಯೂಟ್ಯೂಬ್ನಲ್ಲೂ ಸಾಕಷ್ಟು ಅಭಿಮಾನಿ ಫಾಲೋವರ್ಸ್ಗಳನ್ನು ಕೂಡ ಹೊಂದಿದ್ದಾರೆ.
ಇನ್ನು ಆಯೆಷಾ ಒಮರ್ ತಮ್ಮ ಚೊಚ್ಚಲ ಸಿನೆಮಾವಾದ ಕರಾಚಿ ಸೆ ಲಾಹೋರ್ ಚಿತ್ರದಲ್ಲಿ ನಾಯಕಿಯಾಗಿ ನಟಿಸಿ ಸೈ ಎನಿಸಿಕೊಂಡಿದ್ದು ಈ ಚಿತ್ರವು ರೊಮ್ಯಾಂಟಿಕ್ ಮತ್ತು ಹಾಸ್ಯಮಯ ಕಥಾ ಹಂದರವನ್ನು ಒಳಗೊಂಡಿದೆ.
ಇನ್ನು ಆಯೆಷಾ ಒಮರ್ ರವರು ತಾರಾ ಕ್ರಿಕೆಟಿಗ ಶೋಯೆಬ್ ಮಲಿಕ್ ಜತೆ ಬೋಲ್ಡ್ ಆಗಿ ಫೋಟೊ ಕ್ಲಿಕ್ಕಿಸಿಕೊಂಡು ಸಾಕಷ್ಟು ಸುದ್ದಿಗೆ ಗ್ರಾಸವಾಗಿದ್ದು ಇದೇ ಈಗ ಸಾನಿಯಾ ಮಿರ್ಜಾ ಹಾಗೂ ಶೋಯೆಬ್ ಮಲಿಕ್ ದಾಂಪತ್ಯ ಜೀವನ ಬೇರ್ಪಡಲು ಕಾರಣ ಎನ್ನಲಾಗುತ್ತಿದೆ.