ವಾರ್ತಾ ಮಂಜರಿ
Trending Stories, Viral News, Gossips & Everything in Kannada

ಕಾಂತರಕ್ಕಾಗಿ ಗ್ರಾಫಿಕ್ ಬಳಸದೆ ರಿಷಬ್ ಪಟ್ಟ ಕಷ್ಟ ನೋಡಿ…ಚಿಂದಿ ವಿಡಿಯೋ

143,203

ಸದ್ಯ ಕಾಂತಾರ ಸಿನಿಮಾ ದಾಖಲೆ ಮೇಲೆ ದಾಖಲೆ ಬರೆಯುತ್ತಿದ್ದು ಈಗಾಗಲೇ ದೇಶದಾದ್ಯಂತ ಸದ್ದು ಮಾಡುತ್ತಿರುವ ಕಾಂತಾರ ಸಿನಿಮಾ ಕೋಟಿ ಕೋಟಿ ಕಲೆಕ್ಷನ್ ಮಾಡಿದೆ. ರಿಷಬ್ ಶೆಟ್ಟಿ ನಟಿಸಿ ನಿರ್ದೇಶನ ಮಾಡಿರುವ ಕಾಂತಾರ ಚಿತ್ರಕ್ಕೆ ಪ್ರೇಕ್ಷಕರು ಫಿದಾ ಆಗಿದ್ದು ಈಗಲೂ ಕಾಂತಾರ ಸಿನಿಮಾ ಅನೇಕ ಕಡೆ ಹೌಸ್ ಫುಲ್ ಪ್ರದರ್ಶನ ಕಾಣುತ್ತಿದೆ. ಹೌದು ಕನ್ನಡ ಮಾತ್ರವಲ್ಲದೆ ಬೇರೆ ಬೇರೆ ಭಾಷೆಯಲ್ಲೂ ಸಿನಿಮಾಗೂ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು ಬಾಕ್ಸ್ ನಲ್ಲೂ ಭರ್ಜರಿ ಕಮಾಯಿ ಮಾಡಿದೆ. ಇನ್ನು ಕಾಂತಾರ ಸಿನಿಮಾ 350 ಕೋಟಿ ಕಲೆಕ್ಷನ್ ಮಾಡಿದೆ ಎನ್ನುವ ವರದಿಯಾಗಿದ್ದು ಸದ್ಯ ರಿಷಬ್ ಶೆಟ್ಟಿ ಸಿನಿಮಾ 400 ಕೋಟಿಯತ್ತ ಮುನ್ನುಗ್ಗುತ್ತಿದೆ.

ಇನ್ನು ಕಾಂತಾರ ಸಿನಿಮಾ ಮತ್ತೊಂದು ಹಿಟ್ ಸಿನಿಮಾದ ದಾಖಲೆ ಪುಡಿ ಪುಡಿ ಮಾಡಿದ್ದು ರಶ್ಮಿಕಾ ಮಂದಣ್ಣ ಮತ್ತು ಅಲ್ಲು ಅರ್ಜುನ್ ನಟನೆಯ ತೆಲುಗಿನ ಪುಷ್ಪ ಸಿನಿಮಾದ ಕಲೆಕ್ಷನ್ ಅನ್ನು ರಿಷಬ್ ಶೆಟ್ಟಿ ಸಿನಿಮಾ ಬ್ರೇಕ್ ಮಾಡಿದೆ. ಹೌದು ಪುಷ್ಪ ಚಿತ್ರದ ವರ್ಲ್ಡ್ ವೈಡ್ ಗಳಿಕೆಯನ್ನು ಕನ್ನಡದ ಕಾಂತಾರ ಹಿಂದಿಕ್ಕಿದ್ದು ಪುಷ್ಪ ಸಿನಿಮಾದ ಕಲೆಕ್ಷನ್ ಬ್ರೇಕ್ ಮಾಡಿ 400 ಕೋಟಿಯತ್ತ ನುಗ್ಗುತ್ತಿದೆ ರಿಷಬ್ ಶೆಟ್ಟಿ ಸಿನಿಮಾ.

ಅಂದಹಾಗೆ ಪುಷ್ಪ ಸಿನಿಮಾ ವರ್ಲ್ಡ್ ವೈಡ್ 350 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದ್ದು ಇದೀಗ ಪುಷ್ಪಕ ಕಲೆಕ್ಷನ್ ಅನ್ನು ಬ್ರೇಕ್ ಮಾಡಿದೆ ಕಾಂತಾರ. ಇನ್ನು ಬಾಲಿವುಡ್‌ನಲ್ಲೇ ಸಿನಿಮಾ ಬರೋಬ್ಬರಿ 70 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದ್ದು ಸದ್ಯದಲ್ಲೇ ಸಿನಿಮಾ 100 ಕೋಟಿ ರೂ. ಕ್ಲಬ್ ಸೇರುವ ಸಾದ್ಯತೆ ಇದೆ.

ಅಂದಹಾಗೆ ಕಾಂತಾರ ಅನೇಕ ಸಿನಿಮಾಗಳ ಕಲೆಕ್ಷನ್ ಬ್ರೇಕ್ ಮಾಡುವ ಮೂಲಕ ಸಾಕಷ್ಟು ದಾಖಲೆಗಳನ್ನು ಬರೆದಿದ್ದು ಕರ್ನಾಟಕದಲ್ಲಿ ಕಾಂತಾರ ಸಿನಿಮಾದ 1 ಕೋಟಿ ರೂಪಾಯಿ ಟೆಕೆಟ್ ಮಾರಾಟವಾಗಿದೆ. ಈ ಬಗ್ಗೆ ಸಿನಿಮಾತಂಡ ಅಧಿಕೃತವಾಗಿ ಬಹಿರಂಗ ಪಡಿಸಿದ್ದು ಈ ಮೂಲಕವಾಗಿ ಅತೀ ಹೆಚ್ಚು ಟಿಕೆಟ್ ಮಾರಾಟವಾದ ಸಿನಿಮಾ ಕಾಂತಾರ ಎನ್ನುವ ಹೆಗ್ಗಳಿಕೆ ಗಳಿಸಿದೆ. ಈಗಾಗಲೇ ದೇಶ-ವಿದೇಶಗಳಲ್ಲಿ ಸದ್ದು ಮಾಡುತ್ತಿರುವ ಕಾಂತಾರಗೆ ಈ ದಾಖಲೆ ಮತ್ತಷ್ಟು ಖುಷಿ ತಂದಿದೆ.

ಇನ್ನು ಕಾಂತಾರ ಸಿನಿಮಾದಲ್ಲಿ ರಿಷಬ್ ಶೆಟ್ಟಿ ನಾಯಕನಾಗಿ ಕಾಣಿಸಿಕೊಂಡಿದ್ದು ನಟ ಕಿಶೋರ್ ಪೊಲೀಸ್ ಅಧಿಕಾರಿ ಪಾತ್ರದಲ್ಲಿ ಮಿಂಚಿದ್ದಾರೆ. ಇನ್ನೂ ನಾಯಕಿಯಾಗಿ ಸಪ್ತಮಿ ಗೌಡ ಬಣ್ಣ ಹಣ್ಣ ಹಚ್ಚಿದ್ದಾರೆ. ಅಚ್ಯುತ್ ಕುಮಾರ್ ಗಮನಾರ್ಹ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಇನ್ನು ಅನೇಕ ರಂಗಭೂಮಿ ಕಲಾವಿದರು ನಟಿಸಿದ್ದಾರೆ. ಪ್ರತಿಯೊಂದು ಪಾತ್ರಗಳು ಸಹ ಪ್ರೇಕ್ಷಕರ ಹೃದಯ ಗೆದ್ದಿದ್ದು ಪ್ರತಿಷ್ಠಿತ ಹೊಂಬಾಳೆ ಫಿಲ್ಮ್ಸ್ ಬ್ಯಾನರ್‌ನಲ್ಲಿ ಸಿನಿಮಾ ಮೂಡಿಬಂದಿದೆ.

ಬ್ಯಾಕ್‌ ಟು ಬ್ಯಾಕ್‌ ಕನ್ನಡಿಗರ ಸಿನಿಮಾಗಳು ಭಾರತೀಯ ಚಿತ್ರರಂಗದಲ್ಲಿ ಹಿಸ್ಟರಿ ಸೃಷ್ಟಿಸುತ್ತಿವೆ. ಇದೇ ಸಾಲಿಗೆ ಶೆಟ್ಟರ್ ಕಾಂತಾರ ಸೇರ್ಪಡೆಯಾಗಿದೆ ಕಾರಣ ಚಿತ್ರದ ಸ್ಟೋರಿ ಹಾಗೂ ಮೇಕಿಂಗ್‌. ಸದ್ಯ ಇದೀಗ ಮೇಕಿಂಗ್ ವಿಡಿಯೋ ಬಿಡುಗಡೆ ಆಗಿದ್ದು ಅಭಿಮಾನಿಗಳಿಗೆ ಹುಚ್ಚು ಹೆಚ್ಚಿಸಿದೆ.

ಇನ್ನು ಮೇಕಿಂಗ್‌ ವಿಡಿಯೋದಲ್ಲಿ ರಿಷಬ್‌ ಕಂಬಳದ ಕಣದಲ್ಲಿ ಕೋಣದ ಜೊತೆ ಸರಿಸಮಾನವಾಗಿ ಓಡುವ ದೃಶ್ಯವನ್ನು ಕಾಣಬಹುದು. ಅಷ್ಟೇ ಅಲ್ಲದೆ ಸಿನಿಮಾಗೆ ಛಾಯಾಗ್ರಹಣ ಮಾಡಿರುವ ಅರವಿಂದ ಕಷ್ಯಪ್‌ ಅವರು ಕೆಸರಿನಲ್ಲಿ ಕ್ಯಾಮೆರಾ ಹಿಡಿದು ಅದ್ಭುತ ದೃಶ್ಯಗಳನ್ನು ಸೆರೆಹಿಡಿಯುತ್ತಿರುವುದು ಇದೆ. ಇನ್ನು ಸಿನಿಮಾಗಾಗಿ ರಿಷಬ್‌ ಅವರು ಎಷ್ಟು ತಯಾರಿ ನಡೆಸಿದ್ದರು ಎಂದು ಮೇಂಕಿಗ್‌ ನೋಡಿದರೆ ತಿಳಿಯುತ್ತದೆ.