ವಾರ್ತಾ ಮಂಜರಿ
Trending Stories, Viral News, Gossips & Everything in Kannada

ಕನ್ನಡ ಚಿತ್ರರಂಗಕ್ಕೆ ಪುನೀತ್ ಮಗಳ ಎಂಟ್ರಿ…ಊಹಿಸದ ಸಂಚಲನ ನೋಡಿ ಸಿಹಿಸುದ್ದಿ

401

ಕರ್ನಾಟಕ ರತ್ನ ನಟ ಪುನೀತ್ ರಾಜಕುಮಾರ್ ರವರು ನಮ್ಮ ಜೊತೆ ದೈಹಿಕವಾಗಿ ಇಲ್ಲದೆ ಇರಬಹುದು. ಆದರೆ ಮಾತ್ರ ಅವರ ನಗು ಅವರು ಮಾಡಿದ ಸಹಾಯಗಳು ಅವರು ನಮ್ಮ ಸಮಾಜಕ್ಕೆ ನೀಡಿ ಹೋದ ಉತ್ತಮ ಸಂದೇಶಗಳು ಯಾವಾಗಲೂ ಕೂಡ ನಮ್ಮ ಜೊತೆಯಲ್ಲೇ ಇರುತ್ತದೆ ಎಂದೇ ಹೇಳಬಹುದು.

ನಟ ಪುನೀತ್ ರಾಜಕುಮಾರ್ ರವರಿಗೆ ಇಬ್ಬರು ಹೆಣ್ಣು ಮಕ್ಕಳಿದ್ದು ಹಿರಿಯ ಮಗಳು ದೃತಿ ಮತ್ತು ಕಿರಿಯ ಮಗಳು ವಂದಿತ. ಹಿರಿಯ ಮಗಳು ದೃತಿ ಸದ್ಯ ವಿದೇಶದಲ್ಲಿ ವ್ಯಾಸಾಂಗ ಮಾಡುತ್ತಿದ್ದು ತಮ್ಮ ಸ್ಕಾಲರ್ಶಿಪ್ ನಲ್ಲಿ ತಾವೇ ಕಾಲೇಜಿನ ಫೀಸನ್ನು ಸಹ ಕಟ್ಟಿ ದೂರದ ಜರ್ಮನಿಯಲ್ಲಿ ಓದುತ್ತಿದ್ದಾರೆ. ಇನ್ನು ದ್ವಿತೀಯ ಪುತ್ರಿ ವಂದಿತಾ ಕಳೆದ ವರ್ಷವಷ್ಟೇ ಬೆಂಗಳೂರಿನಲ್ಲಿ ತಮ್ಮ ಎಸ್ ಎಸ್ ಎಲ್ ಸಿ ಯನ್ನು ಮುಗಿಸಿ ಇದೀಗ ಕಾಲೇಜಿಗೆ ಹೋಗುತ್ತಿದ್ದಾರೆ.

ನಟ ಪುನೀತ್ ರಾಜ್ ಕುಮಾರ್ ರವರ ಇಬ್ಬರು ಮುದ್ದಿನ ಮಕ್ಕಳು ಕೂಡ ವಿದ್ಯಾಭ್ಯಾಸದಲ್ಲಿ ಮುಂದಿದ್ದು ತಮ್ಮ ತಂದೆಯ ಆಸೆಯಂತೆ ತಾವು ಚೆನ್ನಾಗಿ ಓದಿ ಅವರ ದಾರಿಯಲ್ಲೇ ಸಾಗಬೇಕೆಂಬುದು ಅವರಿಬ್ಬರ ಆಶಯವಾಗಿದೆ. ಇನ್ನು ಅಪ್ಪುವಿನ ಹಿರಿಯ ಮಗಳು ದೃತಿ ಮೊನ್ನೆ ತಾನೆ ಗಂಧದಗುಡಿ ಚಿತ್ರವನ್ನು ನೋಡಿ ಬಾವುಕರಾಗಿ ತಮ್ಮ ತಂದೆಯನ್ನು ನೆನೆದು ಕಣ್ಣೀರು ಹಾಕಿ ತಮ್ಮ ಸಾಮಾಜಿಕ ಜಾಲತಾಣದ ಕಥೆಗಳಲ್ಲಿ ಆ ಫೋಟೋಗಳನ್ನು ಹಂಚಿಕೊಂಡಿದ್ದರು. ಅಪ್ಪು ಹಿರಿಯ ಮಗಳು ದೃತಿರವರಿಗೆ ಪರೀಕ್ಷೆ ಇದ್ದ ಕಾರಣ ಅಪ್ಪುವಿನ ವರ್ಷದ ಪುಣ್ಯತಿಥಿಗು ಸಹ ಬರಲು ಸಾಧ್ಯವಾಗಿರಲಿಲ್ಲ.

ಇನ್ನು ಅಪ್ಪುವಿನ ಮೊದಲನೇ ಮಗಳು ಧೃತಿ ಗಂಧದಗುಡಿಸಿ ಸಿನಿಮಾವನ್ನು ಕೂಡ ವಿದೇಶದಲ್ಲಿ ನೋಡಿದ್ದು ದೃತಿಯವರು ತಮ್ಮ ವಿದ್ಯಾಭ್ಯಾಸವನ್ನು ವಿದೇಶದಲ್ಲಿ ಮುಗಿಸಿ ವಾಪಸ್ ಭಾರತಕ್ಕೆ ಬಂದ ಬಳಿಕ ಅಪ್ಪುರವರು ಕಟ್ಟಿರುವ ತಮ್ಮದೇ ಆದ ಪಿಆರ್‌ಕೆ ಪ್ರೊಡಕ್ಷನ್ ಅಲ್ಲಿ ತಮ್ಮ ತಾಯಿ ಅಶ್ವಿನಿ ಪುನೀತ್ ರಾಜಕುಮಾರ್ ರವರ ಜೊತೆಗೆ ಕೆಲಸ ಮಾಡುತ್ತಾರೆ ಎಂದು ಮೂಲಗಳಿಂದ ತಿಳಿದು ಬಂದಿದೆ.

ಹೌದು ಇಷ್ಟೇ ಅಲ್ಲದೆ ಅಪ್ಪುವಿನ ಮಗಳು ಧೃತಿ ಸಿನಿಮಾ ಕಾರ್ಯಗಳಲ್ಲೂ ಸಹ ತೊಡಗಿಕೊಂಡು ಮುಂದೆ ಸಿನಿಮಾವನ್ನು ಕೂಡ ಮಾಡುತ್ತಾರೆ ಎಂದು ಸುದ್ದಿ ಬಂದಿದ್ದು ಆದರೆ ಅಪ್ಪುವಿನ ಪತ್ನಿ ಅಶ್ವಿನಿ ಮೇಡಮ್ ರವರು ಮಕ್ಕಳನ್ನು ಸಿನಿಮಾ ರಂಗಕ್ಕೆ ತರುತ್ತಾರೋ ಇಲ್ಲವೋ ಎಂಬುದನ್ನ ಕಾದು ನೋಡಬೇಕಾಗಿದೆ.

ಇನ್ನು ಕರ್ನಾಟಕ ರತ್ನ ಪುನೀತ್ ರಾಜ್‌ಕುಮಾರ್ ಕೊನೆಯ ಸಿನಿಮಾ ಗಂಧದ ಗುಡಿ ಎಲ್ಲಡೆ ಉತ್ತಮ ಪ್ರದರ್ಶನ ಕಾಣುತ್ತಿದೆ. ಅಪ್ಪು ಕನಸಿನ ಚಿತ್ರವನ್ನು ಪ್ರೇಕ್ಷಕರು ಕಣ್ತುಂಬಿಕೊಳ್ಳುತ್ತಿದ್ದಾರೆ. ಆದರೆ ಎರಡೇ ವಾರಕ್ಕೆ ಈ ಚಿತ್ರವನ್ನು ನರ್ತಕಿ ಚಿತ್ರಮಂದಿರದಿಂದ ತೆಗೆದು ಅಲ್ಲಿ ರಾಣಾ ಚಿತ್ರವನ್ನು ಹಾಕುತ್ತಿರುವುದು ಕೆಲವರ ಬೇಸರಕ್ಕೆ ಕಾರಣವಾಗಿದೆ. ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.

ಪಿಆರ್‌ಕೆ ಪ್ರೊಡಕ್ಷನ್ಸ್ ಹಾಗೂ ಮಡ್‌ಸ್ಕಿಪರ್‌ ಜಂಟಿಯಾಗಿ ಈ ಡಾಕ್ಯೂ ಡ್ರಾಮಾ ಸಿನಿಮಾವನ್ನು ನಿರ್ಮಾಣ ಮಾಡಿವೆ. ಹೌದು ಕರ್ನಾಟದ ಅರಣ್ಯ ಹಾಗೂ ವನ್ಯಜೀವಿ ಸಂಪತ್ತು ಜಗತ್ತಿಗೆ ಪರಿಚಯಿಸಬೇಕು ಅದರ ಸಂರಕ್ಷಣೆಯ ಬಗ್ಗೆ ಅರಿವು ಮೂಡಿಸಬೇಕು ಎನ್ನುವ ಮಹದಾಸೆಯಿಂದ ಪುನೀತ್ ರಾಜ್‌ಕುಮಾರ್ ಈ ಕನಸು ಕಂಡಿದ್ದರು.ವವೈಲ್ಡ್‌ ಲೈಫ್‌ ಫೋಟೊಗ್ರಫರ್ ಅಮೋಘ ವರ್ಷ ಅವರಿಗೆ ಸಾಥ್ ಕೊಟ್ಟಿದ್ದರು. ಅಕ್ಟೋಬರ್ 28ಕ್ಕೆ ಸಿನಿಮಾ ಬಹಳ ಅದ್ಧೂರಿಯಾಗಿ ತೆರೆಗಪ್ಪಳಿಸಿತ್ತು. ಪ್ರೇಕ್ಷಕರು ಮುಗಿಬಿದ್ದು ಸಿನಿಮಾ ನೋಡಿದ್ದರು. ನೋಡುತ್ತಲೇ ಇದ್ದಾರೆ.