ಸದ್ಯ ನಟ ನಿರ್ದೇಶಕ ಅರ್ಜುನ್ ಸರ್ಜಾ ಮೊದಲ ಪುತ್ರಿ ಐಶ್ವರ್ಯ ಅರ್ಜುನ್ ತಮಿಳು ಕನ್ನಡದ ನಂತರ ತೆಲುಗು ಚಿತ್ರರಂಗಕ್ಕೆ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದು ತೆಲುಗು ಚಿತ್ರರಂಗಕ್ಕೆ ಮಗಳನ್ನು ಪರಿಚಯಿಸುವ ಉದ್ದೇಶದಿಂದ ಅರ್ಜುನ್ ಸರ್ಜಾ ತಾವೇ ಕಥೆ ಬರೆದು ನಿರ್ದೇಶನ ಮತ್ತು ನಿರ್ಮಾಣ ಕೂಡಾ ಮಾಡಲು ಹೊರಟಿದ್ದಾರೆ. ಜೂನ್ನಲ್ಲಿ ಚಿತ್ರದ ಮುಹೂರ್ತ ಮಾಡಿ ಪೋಸ್ಟರ್ ಕೂಡಾ ರಿಲೀಸ್ ಮಾಡಲಾಗಿದ್ದು ಮುಹೂರ್ತ ಕಾರ್ಯಕ್ರಮಕ್ಕೆ ತೆಲುಗು ಚಿತ್ರರಂಗದ ಖ್ಯಾತ ಸ್ಟಾರ್ ನಟ ಪವನ್ ಕಲ್ಯಾಣ್ ಕೂಡಾ ಆಗಮಿಸಿದ್ದರು.
ಹೌದು ಐಶ್ವರ್ಯ ಜೊತೆ ವಿಶ್ವಕ್ ಸೇನ್ ನಾಯಕನಾಗಿ ನಟಿಸಲು ಒಪ್ಪಿದ್ದು ಚಿತ್ರದಲ್ಲಿ ಖ್ಯಾತ ಬಹುಭಾಷಾ ನಟ ಪ್ರಕಾಶ್ ರೈ ಜಗಪತಿಬಾಬು ಕೂಡಾ ನಟಿಸಲಿದ್ದಾರೆ ಎನ್ನಲಾಗಿತ್ತು. ಹೌದು ಆದರೆ ಎಲ್ಲವೂ ಸರಿಯಾಗಿ ನಡೆಯುತ್ತಿದೆ ಎನ್ನುವಷ್ಟರಲ್ಲಿ ಚಿತ್ರಕ್ಕೆ ಸಮಸ್ಯೆ ಎದುರಾಗಿದ್ದು ನಟ ವಿಶ್ವಕ್ ಚಿತ್ರೀಕರಣಕ್ಕೆ ಹಾಜರಾಗದೆ ಅರ್ಜುನ್ ಸರ್ಜಾ ಅವರ ಕರೆಯನ್ನೂ ಸ್ವೀಕರಿಸದೆ ಅವಾಯ್ಡ್ ಮಾಡುತ್ತಿದ್ದಾರೆ ಎನ್ನಲಾಗುತ್ತಿದೆ. ಹೌದು ಇದೇ ವಿಚಾರಕ್ಕೆ ಹಿರಿಯ ನಟ ಅರ್ಜುನ್ ಸರ್ಜಾ ಸುದ್ದಿಗೋಷ್ಠಿ ನಡೆಸಿ ಬೇಸರ ಹೊರ ಹಾಕಿದ್ದಾರೆ.
ಸರಿ ಸುಮಾರು 40 ವರ್ಷಗಳ ಸಿನಿಜರ್ನಿಯಲ್ಲಿ ಅನೇಕ ತೆಲುಗು ಸಿನಿಮಾಗಳನ್ನು ಮಾಡಿದ್ದು ನನ್ನ ಮಗಳನ್ನು ಟಾಲಿವುಡ್ಗೆ ಪರಿಚಯಿಸುವ ಉದ್ದೇಶದಿಂದ ನಾನೇ ಕಥೆ ಬರೆದಿದ್ದೇನೆ. ಹೌದು ಇದುವರೆಗೂ ನಾನು ಬರೆದ ಕಥೆಗಳಲ್ಲಿ ಇದು ನನಗೆ ಬಹಳ ಇಷ್ಟವಾದ ಕಥೆಯಾಗಿದ್ದು ಚಿತ್ರಕ್ಕೆ ನಾಯಕ ಯಾರು ಎಂದು ಯೋಚಿಸುವಾಲೇ ನನ್ನ ಕಣ್ಣ ಮುಂದೆ ಬಂದದ್ದು ವಿಶ್ವಕ್ ಸೇನ್.
ಆತನಿಗೆ ಸುಮಾರು 2 ಗಂಟೆಗಳಿಗೂ ಹೆಚ್ಚು ಕಾಲ ಕಥೆ ಹೇಳಿದ್ದು ಆತ ಕೂಡಾ ಕಥೆ ಬಹಳ ಇಷ್ಟವಾಯ್ತು ಎಂದು ಹೇಳಿದರು. ಸಂಭಾವನೆ ಕೂಡಾ ಆತನ ಇಷ್ಟದಂತೆ ನಡೆಯಿತು. ಆದರೆ ನಂತರ ಆತ ನನ್ನ ಕರೆಗಳನ್ನು ಅವಾಯ್ಡ್ ಮಾಡುತ್ತಲೇ ಬಂದಿದ್ದು ನನ್ನ ಜೀವನದಲ್ಲಿ ನಾನು ಯಾರಿಗೂ ಇಷ್ಟು ಕರೆ ಮಾಡಿರಲಿಲ್ಲ. ನಾನು ಎಲ್ಲವನ್ನೂ ಸಹಿಸುತ್ತಲೇ ಬಂದೆ.
ಕೊನೆಗೂ ಶೆಡ್ಯೂಲ್ ಫಿಕ್ಸ್ ಮಾಡಿದ್ದಯ ಅಕ್ಟೋಬರ್ನಿಂದ ಚಿತ್ರೀಕರಣ ಆರಂಭವಾಗಬೇಕಿತ್ತು. ಆದರೆ ಇದ್ದಕ್ಕಿದ್ದಂತೆ ವಿಶ್ವಕ್ ತನ್ನ ಮ್ಯಾನೇಜರ್ ಜೊತೆ ಬಂದು ನಾನು ಇನ್ನೂ ಫಿಟ್ ಆಗಬೇಕಿದೆ ಶೂಟಿಂಗ್ ಭಾಗವಹಿಸಲು ಇನ್ನೂ ಸಮಯ ಬೇಕು ಎಂದಿದ್ದಾರೆ. ಜಗಪತಿ ಬಾಬು ಕೂಡಾ ಚಿತ್ರದಲ್ಲಿ ನಟಿಸುತ್ತಿದ್ದು ಅವರ ಡೇಟ್ ಸಮಸ್ಯೆ ಆಗಬಾರದು ಎಂದು ಎರಡು ದಿನಗಳು ಶೂಟಿಂಗ್ ಮಾಡಿ ಎಲ್ಲರ ಜೊತೆ ಚರ್ಚಿಸಿ ಆ ಶೆಡ್ಯೂಲ್ ಕ್ಯಾನ್ಸಲ್ ಮಾಡಿದೆವು.
ವಿಶ್ವಕ್ ಮತ್ತೆ ನವೆಂಬರ್ 3 ರಿಂದ ಡಿಸೆಂಬರ್ 10ವರೆಗೂ ಹೊಸ ಡೇಟ್ಸ್ ನೀಡಿದ್ದು ಮತ್ತೆ ಚಿತ್ರೀಕರಣ ಆರಂಭವಾಗುವ 2 ದಿನಗಳ ಹಿಂದಷ್ಟೇ ಆತನಿಗೆ ಕರೆ ಮಾಡಿ ಮಾತನಾಡಿದ್ದೆ. ಆದರೆ ಶೂಟಿಂಗ್ ಶುರು ಆಗುವ ಮುಂಜಾನೆ ಆತ ನನಗೆ ಮೆಸೇಜ್ ಮಾಡಿ ಕ್ಷಮಿಸಿ, ನಿಮ್ಮ ಜೊತೆ ಕೆಲವು ವಿಚಾರದ ಬಗ್ಗೆ ಚರ್ಚೆ ಮಾಡಬೇಕಿದೆ ಶೂಟಿಂಗ್ ಕ್ಯಾನ್ಸಲ್ ಮಾಡಿ ಎಂದಿದ್ದಾರೆ.
ಇನ್ನು ವಿಶ್ವಕ್ ಕಳಿಸಿದ್ದ ಮೆಸೇಜ್ ನೋಡಿ ನನಗೆ ಶಾಕ್ ಆಯ್ತು. ನಾನು ಮಗಳಿಗಾಗಿ ಸಿನಿಮಾ ಮಾಡಿದರೂ ನಾಯಕನ ಪಾತ್ರಕ್ಕೂ ಬಹಳ ಪ್ರಾಮುಖ್ಯತೆ ನೀಡಿದ್ದೆ. ಏನಾದರೂ ನನಗೆ ಸಮಸ್ಯೆ ಇದ್ದರೆ ಮೊದಲೇ ಹೇಳಬಹುದಿದ್ದು ಆದರೆ ಆ ದಿನ ಲೈಟ್ ಬಾಯ್ನಿಂದ ಹಿಡಿದು ಹಿರಿಯ ಕಲಾವಿದರೆಲ್ಲಾ ಬೇರೆ ಕೆಲಸ ಬಿಟ್ಟು ನನ್ನ ಸಿನಿಮಾ ಚಿತ್ರೀಕರಣಕ್ಕೆ ಬಂದಿದ್ದಾರೆ. ಇದ್ದಕ್ಕಿದ್ದಂತೆ ಚಿತ್ರೀಕರಣ ಹೇಗೆ ಕ್ಯಾನ್ಸಲ್ ಮಾಡೋದು.
ವಿಶ್ವಕ್ ಸೇನ್ಗೆ ಒಬ್ಬ ಹಿರಿಯ ನಿರ್ಮಾಪಕ ನಿರ್ದೇಶಕನ ಬಳಿ ಹೇಗೆ ನಡೆದುಕೊಳ್ಳಬೇಕು ಎಂಬ ಅರಿವಿಲ್ಲ. ಈ ರೀತಿ ಮೋಸ ಮಾಡಬಾರದು. ವಿಶ್ವಕ್ ಅವರಿಂದ ಇದನ್ನು ನಿರೀಕ್ಷೆ ಮಾಡಿರಲಿಲ್ಲ ಎಂದು ನಟ ಅರ್ಜುನ್ ಸರ್ಜಾ ಬೇಸರ ಹೊರ ಹಾಕಿದ್ದಾರೆ.
ಇನ್ನು ವಿಶ್ವಕ್ ಸೇನ್ ಈ ಚಿತ್ರದಲ್ಲಿ ನಟಿಸುತ್ತಿಲ್ಲ ಎಂದು ಟಾಲಿವುಡ್ ಮೂಲಗಳು ಹೇಳುತ್ತಿದ್ದು ಆದರೆ ಅರ್ಜುನ್ ಸರ್ಜಾ ಈ ವಿಚಾರವನ್ನು ಅಧಿಕೃತವಾಗಿ ಪ್ರಕಟಿಸಿಲ್ಲ. ಒಂದು ವೇಳೆ ವಿಶ್ವಕ್ ಚಿತ್ರದಿಂದ ಹೊರ ಹೋಗಿದ್ದರೂ ಮುಂದೆ ಆ ಸ್ಥಾನಕ್ಕೆ ಯಾರು ಬರಬಹುದು? ಎಂಬ ಕುತೂಹಲ ಸಿನಿಪ್ರಿಯರಿಗೆ ಕಾಡುತ್ತಿದೆ ಎನ್ನಬಹುದು.