ನಟ ಡಾಲಿ ಧನಂಜಯ ನಟನೆಯ ಪಾಪ್ ಕಾರ್ನ್ ಮಂಕಿ ಟೈಗರ್ ಸಿನಿಮಾದಲ್ಲಿ ಗಿರಿಜಾ ಪಾತ್ರದ ಮೂಲಕ ಸಿನಿಪ್ರಿಯರಿಗೆ ಪರಿಚಯರಾದ ನಟಿ Sapthami Gowda ರವರು ಇದೀಗ ರಿಷಬ್ ಶೆಟ್ಟಿ ನಟಿಸಿ ನಿರ್ದೇಶನ ಮಾಡಿರುವ ಕಾಂತಾರ ಸಿನಿಮಾದಲ್ಲಿ ಲೀಲಾ ಪಾತ್ರದ ಮೂಲಕ ಎಲ್ಲರ ಗಮನ ಸೆಳೆಯುತ್ತಿದ್ದಾರೆ. ಪಾಪ್ ಕಾರ್ನ್ ಮಂಕಿ ಟೈಗರ್ನಂತಹ ದೊಡ್ಡ ಚಿತ್ರದ ಮೂಲಕ ನಾನು ಚಿತ್ರರಂಗಕ್ಕೆ ಎಂಟ್ರಿ ಕೊಟ್ಟೆ.
ಇನ್ನೊಂದು ದೊಡ್ಡ ಸಿನಿಮಾ ನನ್ನ ಎರಡನೇ ಸಿನಿಮಾವಾಗುತ್ತಿದೆ. ಈ ವಿಚಾರದಲ್ಲಿ ನಾನು ಅದೃಷ್ಟವಂತೆ ಎನ್ನಬಹುದು. ಗಿರಿಜಾ ಪಾತ್ರದ ನಂತರ ಅಂತಹದ್ದೇ ಪಾತ್ರಗಳು ನನ್ನನ್ನು ಹುಡುಕಿ ಬರುತ್ತಿದ್ದು ಈ ಪೈಕಿ ಐದಾರು ಕಥೆಗಳನ್ನು ಕೇಳಿದೆ. ಎಲ್ಲವೂ ಸ್ಟಿರಿಯೋಟೈಪ್ ಎನಿಸಿತು. ಅದೇ ಸಮಯದಲ್ಲಿರಿಷಭ್ ಶೆಟ್ಟಿ ಅವರು ಕರೆ ಮಾಡಿ ಬರಲು ಹೇಳಿದರು ಅವರ ಕಚೇರಿಗೆ ಹೋದಾಗ ಕಾಂತಾರ ಸಿನಿಮಾದ ಕಥೆ ಹೇಳಿ ನನ್ನ ಪಾತ್ರದ ಬಗ್ಗೆ ವಿವರಿಸಿದರು. ಅದುವರೆಗೂ ನಾನು ಕೇಳಿದ ಪಾತ್ರಗಳಿಗಿಂತಲೂ ಇದು ವಿಭಿನ್ನವಾಗಿದೆ ಎಂದು ಅನಿಸಿತು ಎಂದಿದ್ದಾರೆ ಸಪ್ತಮಿ.
ಈ ಸಿನಿಮಾದ ಪಾತ್ರಕ್ಕಾಗಿ ನಾನು ಮಂಗಳೂರು ಕಡೆ ಕನ್ನಡ ಮಾತನಾಡುವ ಶೈಲಿಯನ್ನು ಕಲಿಯುತ್ತಿದ್ದು ಆ ಕಡೆಯ ಮ್ಯಾನರಿಸಂ ಕಲಿಯುತೆ. ಗಿರಿಜಾ ಪಾತ್ರಕ್ಕೆ ಮತ್ತು ಕಾಂತಾರದಲ್ಲಿನ ಲೀಲಾ ಪಾತ್ರಕ್ಕೂ ಬಹಳಷ್ಟು ವ್ಯತ್ಯಾಸವಿದ್ದು ರಿಷಬ್ ಅವರ ತಂಡದಲ್ಲಿರುವ ಒಬ್ಬರು ನನಗೆ ತಯಾರಿ ಮಾಡಿದರು. ನಟಿಯಾಗಿ ನನಗೆ ಬಹಳ ಸ್ಕೋಪ್ ಇರುವ ಪಾತ್ರವಿದು.
ಇದರಲ್ಲಿ ಸಿಕ್ಕಾಪಟ್ಟೆ ಎಮೋಷನ್ಸ್ ಇದೆ ಎಂದರು ಸಪ್ತಮಿ ಗೌಡ. ಒಟ್ಟಾರೆಯಾಗಿ ಲೀಲಾ ಪಾತ್ರ ಸಪ್ತಮಿ ಗೌಡ ಅವರ ವೃತ್ತಿಜೀವನದಲ್ಲಿ ದೊಡ್ಡ ತಿರುವನ್ನೇ ತಂದುಕೊಟ್ಟಿದ್ದು ಪರಭಾಷಿಗರಿಂದ ಹಿಡಿದು ಪ್ರತಿಯೊಬ್ಬರೂ ಕೂಡ ರಥ ಸಪ್ತಮಿ ಅವರಲ್ಲಿನ ಪಾತ್ರಕ್ಕೆ ಮೆಚ್ಚುಗೆ ಸೂಚಿಸಿದ್ದಾರೆ. ಈ ನಡುವೆ ಇದೀಗ ಸಪ್ತಮಿ ಗೌಡ ಅವರು ಕಾರಿನಲ್ಲಿ ಕುಳಿತುಕೊಂಡು ಚಪ್ಪಲಿ ಕಿತ್ತು ಹೋಗುವ ವರೆಗೂ ಹೊಡಿತೀನಿ ಎಂದು ಹೇಳಿದ್ದು ಸದ್ಯ ಈ ವಿಡಿಯೋ ವೈರಲ್ ಆಗುತ್ತಿದೆ. ಅಷ್ಟಕ್ಕೂ ಸಪ್ತಮಿ ಹೀಗೆ ಯಾರಿಗೆ ಹೇಳಿದ್ದಾರೆ ಗೊತ್ತಾ? ತಿಳಿಸುತ್ತೇವೆ ಮುಂದೆ ಓದಿ.
ರಿಷಬ್ ಶೆಟ್ಟಿ ಹಾಗೂ ಹೊಂಬಾಳೆ ಕಾಂಬಿನೇಷನ್ ಮೊದಲ ಸಿನಿಮಾ ಕಾಂತಾರ ಆಗಿದ್ದು ಚೊಚ್ಚಲು ಸಿನಿಮಾದಲ್ಲಿ ಅದ್ಭುತ ಯಶಸ್ಸು ಕಂಡಿದೆ. ಇನ್ನು ನಾಯಕ ನಟನಿಗೆ ನಾಯಕಿ ಸಪ್ತಮಿ ಗೌಡ ಕೂಡ ಹೇಳಿ ಮಾಡಿಸಿದ ಜೋಡಿಯಾಗಿದ್ದು ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಸದ್ಯ ಸ್ಯಾಂಡಲ್ವುಡ್ನಲ್ಲಿ ತಮ್ಮ ಬೇಡಿಕೆ ಹೆಚ್ಚಿಸಿಕೊಳ್ಳುವುದರೊಂದಿಗೆ ಈ ಸುಂದರಿ ಜನಪ್ರಿಯತೆ ಕೂಡ ಗಳಿಸುತ್ತಿದ್ದು ಸಿನಿಮಾ ಎಂಬ ಈ ಗ್ಲ್ಯಾಮರ್ ಪ್ರಪಂಚದಲ್ಲಿ ಸಪ್ತಮಿ ಗೌಡ ಸಕ್ಸಸ್ ಫುಲ್ ನಟಿಯಾಗಬೇಕೆಂಬ ಕನಸು ಕಂಡವರು. ಇನ್ನು ನಿವೃತ್ತ ಪೊಲೀಸ್ ಅಧಿಕಾರಿ ಎಸ್.ಕೆ. ಉಮೇಶ್ ಅವರ ಸುಪುತ್ರಿಯಾಗಿರುವ ಈ ಸುಂದರಿ ಮೂಲತಃ ಬೆಂಗಳೂರಿನವರು.
ಇನ್ನು 8 ಜೂನ್ 1996 ರಂದು ಬೆಂಗಳೂರಿನಲ್ಲಿ ಜನಿಸಿದರು ಸಪ್ತಮಿ ಸದ್ಯ ಕನ್ನಡದ ಸ್ಟಾರ್ ನಟಿಯರ ಪಟ್ಟಿಯಲ್ಲಿ ಗುರುತಿಸಿಕೊಂಡಿದ್ದು ನಟನೆಗೆ ಬರುವುದಕ್ಕೂ ಮುನ್ನ ಇವರು ಬೆಂಗಳೂರಿನ ಬಿಐಟಿಯಲ್ಲಿ ಸಿವಿಲ್ ಇಂಜಿನಿಯರಿಂಗ್ ಮುಗಿಸಿದ್ದಾರೆ.ಸಿನಿಮಾ ಅಲ್ಲದೇ ಫಿಟ್ನೆಸ್ ಹಾಗೂ ಅಡ್ವೆಂಚರ್ಸ್ ಬಗ್ಗೆ ಕ್ರೇಜ್ ಕೂಡ ಹೊಂದಿದ್ದಾರೆ ಕಾಂತಾರ ಸುಂದರಿ ಸಪ್ತಮಿ ಗೌಡ.
ನಟಿಸಿದ ಸಿನಿಮಾಗಳು ಬೆರಳೆಣಿಕೆಯಷ್ಟಾದರೂ ಹೆಚ್ಚು ತೂಕ ಇರುವ ಪಾತ್ರಗಳನ್ನು ಆಯ್ಕೆ ಮಾಡುವ ಬುದ್ಧಿವಂತೆ ಕೂಡ ಹೌದು. ಕಾಂತಾರ ಸಿನಿಮಾದ ಸಕ್ಸಸ್ ಖುಷಿಯಲ್ಲಿರುವ ಈ ತಾರೆ ಹೆಸರಿಡದ ಎರಡು ಸಿನಿಮಾಗಳಿಗೆ ಒಪ್ಪಿಗೆ ಕೂಡ ಕೊಟ್ಟಿದ್ದಾರೆ. ಇನ್ನೂ ಮೊದಲೇ ಹೇಳಿದ ಹಾಗೆ ಧನಂಜಯ್ ಅಭಿನಯದ ಪಾಪ್ಕಾರ್ನ್ ಮಂಕಿ ಟೈಗರ್ ಸಿನಿಮಾ ಮೂಲಕ ಮೊದಲ ಇವರು ಬಾರಿಗೆ ಕನ್ನಡ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ್ದು ಚಿತ್ರದಲ್ಲಿ ಧನಂಜಯ್ ಜೊತೆ ಮಾಸ್ ಡೈಲಾಗ್ ಹೇಳುವ ಮೂಲಕ ಕನ್ನಡಿಗ ಮನ ಗೆದ್ದರು.
ಸದ್ಯ ಇದೀಗ ಕಾರಲ್ಲಿ ಕುಳಿತುಕೊಂಡು ಚಪ್ಪಲಿ ಕಿತ್ತು ಹೋಗುವವರೆಗೂ ಕೊಡ್ತೀನಿ ಅಂತಿದ್ದಾರೆ ಸಪ್ತಮಿ. ಅಷ್ಟಕ್ಕೂ ಅಸಲಿ ವಿಚಾರವೇನೆಂದರೆ ಇದು ಹಳೆಯ ವೀಡಿಯೋ ಆಗಿದ್ದು ಸಪ್ತಮಿ ಗೌಡ ಚಪ್ಪಲಿ ಕಿತ್ತು ಹೋಗುವಹಾಗೆ ಹೊಡಿತಿನಿ ಅಂದಿದ್ದು ಬೇರೆ ಯಾರಿಗೂ ಅಲ್ಲ ಇದು ಪಾಪ್ ಕಾರ್ನ್ ಮಂಕಿ ಟೈಗರ್ ಸಿನಿಮಾದ ಡೈಲಾಗ್. ಹೌದು ಅಭಿಮಾನಿಗಳ ಒತ್ತಾಯದ ಮೇರೆಗೆ ಸಪ್ತಮಿ ಈ ಡೈಲಾಗ್ ಹೇಳಿದ್ದು ಸದ್ಯ ಈಗ ಈ ವಿಡಿಯೋ ವೈರಲ್ ಆಗುತ್ತಿದೆ.