ಸದ್ಯ ನಟಿ ರಶ್ಮಿಕಾ ಮಂದಣ್ಣ ರವರ ಕ್ರೇಜ್ ದಿನದಿಂದ ದಿನಕ್ಕೆ ಬಹಳಾನೇ ಹೆಚ್ಚಾಗುತ್ತಲೇ ಇದ್ದು ಸದ್ಯ ರೋಶ್ ನಟನೆಯ ಹಿಂದಿ ಸಿನಿಮಾ ಗುಡ್ಬೈ ರಿಲೀಸ್ ಆಗಿ ಬಹಳಾನೇ ಸದ್ದು ಮಾಡ್ತಿದೆ. ಇನ್ನು ಇದರ ಬೆನ್ನಲ್ಲೇ ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ ರವರು ಮಾಲ್ಡೀವ್ಸ್ನಲ್ಲಿ ಮೋಜು ಮಸ್ತಿ ಮಾಡ್ತಿದ್ದು ಮತ್ತೊಂದು ಕಡೆ ಹಿಂದಿ ಬಿಗ್ಬಾಸ್ ಶೋಗೆ ಹೋಗಿ ಬಂದಿದ್ದಾರೆ. ಹೌದು ಬಿಗ್ಬಾಸ್ 16 ಶನಿವಾರ್ ಕಾ ವಾರ್ ಎಪಿಸೋಡ್ನಲ್ಲಿ ಭಾಗಿಯಾಗಿ ಗುಡ್ಬೈ ಸಿನಿಮಾ ಪ್ರಚಾರ ಮಾಡಿದ್ದು ಹಿರಿಯ ನಟಿ ನೀನಾ ಗುಪ್ತಾ ಜೊತೆಗೆ Rashmika Mandanna ರವರು ಕಳೆದ ಶನಿವಾರ ಬಿಗ್ ಬಾಸ್ ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಭಾಗವಹಿಸಿದ್ದಾರೆ.
ಹೌದು ಬಿಗ್ಬಾಸ್ ಮನೆಯ ಸ್ಪರ್ಧಿಗಳು ರಶ್ಮಿಕಾ ಮಂದಣ್ಣನ ನೋಡಿ ಖುಷಿಯಾಗಿದ್ದು ರಶ್ಮಿಕಾ ಸಲ್ಲು ಜೊತೆ ಸಾಮಿ ಸಾಮಿ ಸಾಂಗ್ಗೆ ಹೆಜ್ಜೆ ಹಾಕಿದ್ದಾರೆ. ಇನ್ನು ಪುಷ್ಪ ಸಿನಿಮಾ ಡೈಲಾಗ್ಗಳನ್ನು ಕೂಡ ಹೇಳಿದ್ದು ಇನ್ನು ಸಲ್ಲು ನೀನಾ ರಶ್ಮಿಕಾ ಒಂದಷ್ಟು ಫನ್ನಿ ಗೇಮ್ಸ್ ಕೂಡ ಆಡಿದ್ದಾರೆ.ಸದ್ಯ ಬಾಲಿವುಡ್ ವೀಕ್ಷಕರು ಹಿಂದಿ ಬಿಗ್ಬಾಸ್ ಶನಿವಾರದ ಎಪಿಸೋಡ್ ನೋಡಿ ಖುಷಿಯಾಗಿದ್ದಾರೆ.
ಕೊಡಗಿನ ಬೆಡಗಿ ನಟ ರಶ್ಮಿಕಾ ಮಂದಣ್ಣ ರವರು ಎಲ್ಲೇ ಹೋದರೂ ಎಲ್ಲೇ ಬಂದರೂ ಕೂಡ ಪುಷ್ಪ ಸಿನಿಮಾ ಬಗ್ಗೆ ಮಾತನಾಡುವಂತಾಗಿದ್ದು ಹಿಂದಿ ಬೆಲ್ಟ್ನಲ್ಲೂ ಈ ಸಿನಿಮಾ ಸೂಪರ್ ಹಿಟ್ ಆಗಿತ್ತು. ಹೌದು ಸಾಂಗ್ಸ್ ಡೈಲಾಗ್ಸ್ ಸಕತ್ ಸದ್ದು ಮಾಡಿದ್ದು ಇತ್ತೀಚೆಗೆ ಹಿಂದಿ ಕಿರುತೆರೆಯ ಡ್ಯಾನ್ಸ್ ಕಾರ್ಯಕ್ರಮಕ್ಕೆ ಕೂಡ ಅತಿಥಿಯಾಗಿ ಹೋಗಿದ್ದ ರಶ್ಮಿಕಾ ಮಂದಣ್ಣ ಬಾಲಿವುಡ್ ನ ಹಿರಿಯ ನಟ ಗೋವಿಂದ ರವರ ಜೊತೆ ಸಾಮಿ ಸಾಮಿ ಹಾಡಿಗೆ ಕುಣಿದಿದ್ದರು. ಸದ್ಯ ಬಿಗ್ಬಾಸ್ ಕಾರ್ಯಕ್ರಮಕ್ಕೆ ಅತಿಥಿಯಾಗಿ ಹೋಗಿದ್ದ ರಶ್ಮಿಕಾ ಸಾಮಿ ಸಾಮಿ ಹಾಡಿಗೆ ಕುಣಿದಿದ್ದು ಸಲ್ಲುನ ಕೂಡ ಕುಣಿಸಿದ್ದಾರೆ. ನೀನಾ ಗುಪ್ತಾ ಕೂಡ ಸಲ್ಲು ರಶ್ಮಿಕಾ ಜೊತೆ ಹೆಜ್ಜೆ ಹಾಕಿದ್ದಾರೆ.
ಇನ್ನು ವೇದಿಕೆಯಿಂದ ಬಿಗ್ಬಾಸ್ ಸ್ಪರ್ಧಿಗಳನ್ನು ಸಲ್ಮಾನ್ ಖಾನ್ ಮಾತನಾಡಿಸಿದ್ದು ಈ ವೇಳೆ ಪುಷ್ಪ ಚಿತ್ರದ ಡೈಲಾಗ್ಗಳನ್ನು ಹೇಳಲು ಸ್ಪರ್ಧಿಗಳಿಗೆ ಹೇಳಿದ್ದಾರೆ. ಹೌದು ಒಬ್ಬೊಬ್ಬರು ಒಂದೊಂದು ಸ್ಟೈಲ್ನಲ್ಲಿ ಜುಕೇಗಾ ನಹೀ ಎಂದು ಪುಷ್ಪರಾಜ್ ಸ್ಟೈಲ್ನಲ್ಲಿ ಡೈಲಾಗ್ ಹೊಡೆದಿದ್ದು ಅವರ ದಾಟಿ ನೋಡಿ ಸಲ್ಮಾನ್ ಹಾಗೂ ರಶ್ಮಿಕಾ ಮಂದಣ್ಣ ತಮಾಷೆ ಮಾಡಿದ್ದಾರೆ. ಎರಡು ವಾರದ ಹಿಂದೆಯಷ್ಟೆ ಹಿಂದಿ ಬಿಗ್ಬಾಸ್ ಸೀಸನ್ 16 ಆರಂಭವಾಗಿದ್ದು ಬೇರೆ ಬೇರೆ ಕ್ಷೇತ್ರಗಳ ಸ್ಪರ್ಧಿಗಳು ಈ ಬಾರಿ ದೊಡ್ಮನೆಯ ಆಟಕ್ಕೆ ಎಂಟ್ರಿ ಕೊಟ್ಟಿದ್ದಾರೆ. ತಜಕಿಸ್ತಾನ್ ಗಾಯಕ ಅಬ್ದು ರೋಝಿಕ್ ಗಮನ ಸೆಳೆದಿದ್ದು ಕುಬ್ಜರಾಗಿರುವ ಅಬ್ದು ತಮ್ಮ ಗಾಯನದಿಂದ ಮೋಡಿ ಮಾಡಿದವರು. ಇನ್ನು ಈತ ಪುಷ್ಪ ಚಿತ್ರದ ಡೈಲಾಗ್ಸ್ ಹೇಳಿದ್ದು ನೋಡಿ ಖುಷಿಯಾದ ರಶ್ಮಿಕಾ ನೀವು ನನ್ನ ಫೇವರಿಟ್ ಸ್ಪರ್ಧಿ ಎಂದಿದ್ದಾರೆ. ಆ ವಿಡಿಯೋ ಈಗ ಸಖತ್ ವೈರಲ್ ಆಗಿದೆ.