ಸದ್ಯ ಪರ ಭಾಷೆಗಳಲ್ಲಿ ಕನ್ನಡದ Kantara ಸಿನಿಮಾ ತೆರೆಗಪ್ಪಳಿಸಲು ಇನ್ನೊಂದೇ ದಿನ ಮಾತ್ರ ಬಾಕಿ ಇದ್ದು ಸದ್ಯ ಈಗಾಗಲೇ ಬೇರೆ ಭಾಷೆಗಳಲ್ಲಿ ಸಿನಿಮಾ ಟ್ರೈಲರ್ ರಿಲೀಸ್ ಆಗಿದ್ದು ಭರ್ಜರಿಯಾಗಿ ರೆಸ್ಪಾನ್ಸ್ ಸಿಕ್ಕಿದೆ. ಹೌದು ಕನ್ನಡದಲ್ಲೇ ಹಿಂದಿ ಪ್ರೇಕ್ಷಕರು ಸಿನಿಮಾ ನೋಡಿ ಮೆಚ್ಚಿಕೊಂಡಿದ್ದು ಅಂದಮೇಲೆ ಹಿಂದಿಯಲ್ಲಿ ಬಂದರೆ ಸಹಜವಾಗಿಯೇ ಮುಗಿಬಿದ್ದು ಚಿತ್ರ ನೋಡುವಂತಹ ನಿರೀಕ್ಷೆಯಿದೆ.
ಬರೋಬ್ಬರಿ 2500 ಸ್ಕ್ರೀನ್ಗಳಲ್ಲಿ ಶುಕ್ರವಾರ ಕಾಂತಾರ ಹಿಂದಿ ವರ್ಷನ್ ಬಿಡುಗಡೆ ಆಗುತ್ತಿದ್ದು ಸದ್ಯ ಈಗಾಗಲೇ ಕಾಂತಾರ ಹಿಂದಿ ಅಡ್ವಾನ್ಸ್ ಟಿಕೆಟ್ ಬುಕ್ಕಿಂಗ್ ಕೂಡ ಶುರುವಾಗಿದೆ. ನಿಧಾನವಾಗಿ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಸಿಗುತ್ತಿದ್ದು ಬುಕ್ಮೈ ಶೋನಲ್ಲಿ ಬರೋಬ್ಬರಿ 99% ರೇಟಿಂಗ್ ಪಡೆದಿರುವ ಸಿನಿಮಾದಲ್ಲಿ ಅಂಥಾದ್ದೇನಿದೆ ಎನ್ನುವ ಕುತೂಹಲ ಪರಭಾಷಿಕರಲ್ಲೂ ಕೂಡ ಮೂಡಿದೆ.
ಇನ್ನು ಕೆಜಿಎಫ್ ಹಿಂದಿ ವರ್ಷನ್ ವಿತರಣೆ ಹಕ್ಕನ್ನು ಎಎ ಫಿಲ್ಮ್ಸ್ ಸಂಸ್ಥೆ ಖರೀದಿಸಿ ಗೆದ್ದಿದ್ದು ಅದೇ ಸಂಸ್ಥೆಗೆ ಕಾಂತಾರ ಹಿಂದಿ ವರ್ಷನ್ ವಿತರಣೆ ಹಕ್ಕು ಸಿಕ್ಕಿದೆ. ಹಾಗಾಗಿ ಅನಿಲ್ ತದಾನಿ ಅಂಡ್ ಟೀಂ ದೊಡ್ಡಮಟ್ಟದಲ್ಲಿ ಪ್ರಮೋಷನ್ ಮತ್ತು ಬಿಡುಗಡೆಗೆ ಪ್ಲ್ಯಾನ್ ನಡಿಯುತ್ತಿದ್ದು ಕನ್ನಡದ ಮೀಡಿಯಂ ಬಜೆಟ್ ಚಿತ್ರವೊಂದರ ಹಿಂದಿ ವರ್ಷನ್ನ 2500 ಸ್ಕ್ರೀನ್ಗಳಲ್ಲಿ ರಿಲೀಸ್ ಮಾಡೋದು ಅಂದರೆ ತಮಾಷೆ ಮಾತಲ್ಲ ಬಿಡಿ.
ಸೌತ್ ಇಂಡಿಯನ್ ಸಿನಿಮಾಗಳು ನಿಧಾನವಾಗಿ ಹಿಂದಿಗೆ ಡಬ್ ಆಗಿ ಸದ್ದು ಮಾಡುತ್ತಿದ್ದು ಬಾಹುಬಲಿ ಕೆಜಿಎಫ್ ಪುಷ್ಪ ಬಳಿಕ ಇತ್ತೀಚೆಗೆ ತೆಲುಗಿನ ಕಾರ್ತಿಕೇಯ- 2 ಸಿನಿಮಾಗಳು ಸೆನ್ಸೇಷನಲ್ ಹಿಟ್ ಆಗಿತ್ತು. ಹಾಗಾಗಿ ಕಾಂತಾರ ಸಿನಿಮಾ ಬಗ್ಗೆ ನಿರೀಕ್ಷೆ ದುಪ್ಪಟ್ಟಾಗಿದೆ ಎನ್ನಬಹುದು. ಸದ್ಯ ಈಗಾಗಲೇ ಹಿಂದಿ ಪ್ರೇಕ್ಷಕರು ಸಿನಿಮಾ ನೋಡಿ ಮೆಚ್ಚಿಕೊಂಡಿರುವುದರಿಂದಾಗಿ ಹೊಸದಾಗಿ ಪ್ರಚಾರ ಮಾಡುವ ಅಗತ್ಯ ಇಲ್ಲ ಎನ್ನಿಸುತ್ತಿದೆ.
ಇನ್ನು ಇತ್ತೀಚೆಗೆ ಬಾಲಿವುಡ್ನಲ್ಲಿ ಒಳ್ಳೆ ಸಿನಿಮಾಗಳು ಬರುತ್ತಿಲ್ಲ ಎನ್ನುವ ಆರೋಪ ಇದ್ದು ಬೇರೆ ಭಾಷೆಯ ಸಿನಿಮಾಗಳೇ ಡಬ್ ಆಗಿ ಅಲ್ಲಿ ಸದ್ದು ಮಾಡುತ್ತಿದೆ. ಪ್ರೇಕ್ಷಕರನ್ನು ಸೆಳೆಯುವ ಸಿನಿಮಾಗಳಿಲ್ಲದೇ ಚಿತ್ರಗಳು ಖಾಲಿ ಹೊಡೆಯುವಂತಹ ಪರಿಸ್ಥಿತಿ ನಿರ್ಮಾಣವಾಗಿದ್ದು ಹಾಗಾಗಿ ಕಾಂತಾರ ಚಿತ್ರಕ್ಕೆ ದಾಖಲೆಯ 2500 ಸ್ಕ್ರೀನ್ ಸಿಕ್ಕಿದ್ದು ಕೆಜಿಎಫ್ ಸರಣಿ ಸಿನಿಮಾಗಳು ಬಿಟ್ಟರೆ ಕನ್ನಡದ ಯಾವುದೇ ಸಿನಿಮಾ ಹಿಂದಿಗೆ ಡಬ್ ಆಗಿ ಇಷ್ಟುದೊಡ್ಡಮಟ್ಟದಲ್ಲಿ ರಿಲೀಸ್ ಆಗಿಲ್ಲ.
ಸದ್ಯ ಹಿಂದಿ ಕಾಂತಾರ ಸ್ಕ್ರೀನ್ಗಳ ಲೆಕ್ಕದಲ್ಲೇ ದಾಖಲೆ ಬರೆದಿದೆ. ಇನ್ನು ಇದೇ ವಾರ ಬಿಡುಗಡೆಯಾಗುತ್ತಿರುವುದರಿಂದ ಸಿನಿಮಾ ತಂಡ ತೆಲುಗಿನಲ್ಲಿ ಪ್ರಚಾರ ಆರಂಭಿಸಿದ್ದು ಈ ವೇಳೆ ರಿಷಬ್ ಶೆಟ್ಟಿ ಜೂ.ಎನ್ಟಿಆರ್ ಹಾಗೂ ಅವರ ತಾಯಿಯ ಹುಟ್ಟೂರಿನ ಬಗ್ಗೆ ಮಾತಾಡಿದ್ದಾರೆ. ಹೌದು ಕಾಂತಾರ ತೆಲುಗು ಸಿನಿಮಾದ ಪ್ರಚಾರದಲ್ಲಿ ನಟ ನಿರ್ದೇಶಕ ರಿಷಬ್ ಶೆಟ್ಟಿ ತೊಡಗಿದ್ದು ಈ ವೇಳೆ ಸಂದರ್ಶನವೊಂದರಲ್ಲಿ ನಿರೂಪಕಿ ತೆಲುಗು ಸ್ಟಾರ್ ಬಗ್ಗೆ ಪ್ರಶ್ನೆ ಮಾಡಿದ್ದರು.
ಹೌದು ಈ ವೇಳೆ ರಿಷಬ್ ಶೆಟ್ಟಿ ಟಾಲಿವುಡ್ ಸ್ಟಾರ್ ನಟ ಜೂ.ಎನ್ಟಿಆರ್ ಬಗ್ಗೆ ತಮ್ಮ ಅಭಿಪ್ರಾಯ ತಿಳಿಸಿದ್ದು ಎನ್ಟಿಆರ್ ಕೃಷ್ಣಗಾರು ಬಾಲಯ್ಯ ಬಾಬು ಸಿನಿಮಾಗಳನ್ನು ನೋಡುತ್ತೇನೆ. ಆದರೆ ನನ್ನ ಅಚ್ಚುಮೆಚ್ಚಿನ ನಟ ಜೂ.ಎನ್ಟಿಆರ್ ರವರು. ಹೌದು ಯಾಕಂದರೆ ಅವರ ಅಮ್ಮನ ಹುಟ್ಟೂರು ನನ್ನ ಊರು. ಕುಂದಾಪುರದವರು. ತುಂಬಾ ಅದ್ಭುತ ನಟ ಎಂದಿದ್ದಾರೆ ರಿಷಬ್.
ನಾನು ತುಂಬಾ ಪ್ಲ್ಯಾನ್ ಮಾಡುವುದಿಲ್ಲ. ನಾನು ಯಾವಾಗಲೂ ಫ್ಲೋನಲ್ಲಿ ಮುಂದಕ್ಕೆ ಸಾಗುತ್ತೇನೆ. ಆ ದಿನ ನನಗೆ ತುಂಬಾನೇ ಮುಖ್ಯ ಆಗುತ್ತೆ. ಎಲ್ಲಾ ಹೀರೊಗಳ ಜೊತೆನೂ ಕೆಲಸ ಮಾಡುವುದಕ್ಕೆ ಇಷ್ಟ ಎಂದಿದ್ದಾರೆ ರಿಷಬ್ ಶೆಟ್ಟಿ. ಹಾಗೇ ನಿರೂಪಕಿ ಎನ್ಟಿಆರ್ ಜೊತೆ ಕೆಲಸ ಮಾಡುತ್ತೀರಾ ಅನ್ನೋ ಪ್ರಶ್ನೆ ಹೌದು ಕೂಡ ಎಂದಿದ್ದಾರೆ.