ಸದ್ಯ ಇದೀಗ ನಮ್ಮ ಕಿರುತೆರೆಯಲ್ಲಿ ಅನೇಕ ರಿಯಾಲಿಟಿ ಶೋಗಳು ಜನರ ಪ್ರತಿನಿತ್ಯದ ಮನರಂಜನಾ ಕಾರ್ಯಕ್ರಮಗಳಲ್ಲಿ ಒಂದಾಗಿದ್ದು ಇನ್ನು ಇಂತಹ ರಿಯಾಲಿಟಿ ಶೋಗಳಲ್ಲಿ ಬಿಗ್ ಬಾಸ್ Bigboss Kannada ಕಾರ್ಯಕ್ರಮ ಕೂಡ ಒಂದು. ಹೌದು ಈ ರಿಯಾಲಿಟಿ ಶೋ ಕನ್ನಡ ಸೇರಿದಂತೆ ಹಿಂದಿ ತೆಲುಗು ಹಾಗೂ ತಮಿಳು ಭಾಷೆಗಳಲ್ಲಿ ಕೂಡ ನಡೆಯುತ್ತಿದ್ದು ಇನ್ನು ಕನ್ನಡ ಭಾಷೆಯಲ್ಲಿ ಇದೀಗಾಗಲೇ ಬಿಗ್ ಬಾಸ್ ತನ್ನ ಎಂಟು ಸೀಸನ್ ಗಳನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದೆ.
ಹೌದು ನಟ ಹಾಗೂ ನಿರೂಪಕ ಕಿಚ್ಚ ಸುದೀಪ್ ರವರ ನಿರೂಪಣೆ ಕನ್ನಡಿಗರ ಮನಸೂರೆಗೊಳಿಸಿದ್ದು ಇ ಇದೀಗ ಯಶಸ್ವಿಯಾಗಿ 8 ಸೀಸನ್ ಗಳನ್ನು ಪೂರೈಸಿರುವ ಕನ್ನಡದ ಬಿಗ್ ಬಾಸ್ ತನ್ನ 9ನೇ ಸೀಸನ್ ಕೂಡ ಬಹಳ ಅದ್ದೂರಿಯಾಗಿಯೆ ಪ್ರಾರಂಭಿಸಿದೆ. ಸಾಮಾನ್ಯವಾಗಿ ಪ್ರತಿ ಸೀಸನ್ ನಲ್ಲೂ ಕೂಡ ಬಿಗ್ ಬಾಸ್ ಮನೆಯಲ್ಲಿ ಸಾಕಷ್ಟು ಪ್ರೇಮಕಹಾನಿಗಳು ಚಿಗುರೊಡೆಯುತ್ತವೆ.
ಹೌದು ಅದರಲ್ಲಿ ಕೆಲವು ಬಿಗ್ ಬಾಸ್ ಮನೆಯಿಂದ ಹೊರಬಂದ ಬಳಿಕ ಮುಂದುವರೆದು ವಿವಾಹ ಎಂಬ ಅರ್ಥ ನೀಡಿದರೆ ಮತ್ತೆ ಕೆಲವರು ಬೇರೆ ಬೇರೆ ಆಗಿ ಬಿಡುತ್ತಾರೆ. ಒಟ್ಟಾರೆಯಾಗಿ ಬಿಗ್ ಬಾಸ್ ಮನೆಯಲ್ಲಿ ಪ್ರೇಮಕಹಾನಿಗಳು ಹುಟ್ಟಿಕೊಳ್ಳುವುದಂತೂ ಸಹಜವಾಗಿದೆ. ಸದ್ಯ ಇದೀಗ ಅದೇ ಸಾಲಿನಲ್ಲಿ ಬಿಗ್ ಬಾಸ್ ಮನೆಯಲ್ಲಿ ಸಾನ್ಯ ಅಯ್ಯರ್ ಹಾಗೂ ರೂಪ ಶೆಟ್ಟಿ ಅವರ ಮಧ್ಯೆ ಲವ್ವಿ ಡವ್ವಿ ಆರಂಭವಾಗಿದೆ.
ಸದ್ಯ ಇತ್ತೀಚಿಗಷ್ಟೇ ಕನ್ನಡದ ಬಿಗ್ ಬಾಸ್ ಓಟಿಟಿ ಮೊದಲ ಸೀಸನ್ ಪ್ರಸಾರವಾಗಿದ್ದು ಇದರಲ್ಲಿ ರೂಪೇಶ್ ಶೆಟ್ಟಿಯವರು ಮೊದಲ ಸ್ಥಾನ ಪಡೆದು ವಿಜೇತರಾಗಿದ್ದರು.ಇನ್ನು ಅದೇ ರೀತಿ ಇದೆ ರಿಯಾಲಿಟಿ ಶೋ ದಲ್ಲಿ ಸಾನ್ಯ ಅಯ್ಯರ್ ಅವರು ಸಹ ಭಾಗಿಯಾಗಿದ್ದು ಸದ್ಯ ಇದೀಗ ಈ ಜೋಡಿ ಬಿಗ್ ಬಾಸ್ ಸೀಸನ್ ೯ರಲ್ಲಿ ಕೂಡ ಪ್ರವೇಶ ಪಡೆದಿದ್ದು ಅವರ ಆಟಗಳ ಮೂಲಕ ಮೆಚ್ಚುಗೆ ಪಡೆಯುತ್ತಿದ್ದಾರೆ.
ಇನ್ನು ಅಷ್ಟೇ ಅಲ್ಲದೆ ಇವರ ಮಧ್ಯೆ ಇದೀಗ ಲವ್ವೀ ಡವ್ವಿ ಪ್ರಾರಂಭವಾಗಿದ್ದು ಸಾಮಾಜಿಕ ಜಾಲತಾಣದಲ್ಲಿ ಇದು ಸುದ್ದಿಯಾಗುತ್ತಿದೆ. ಸಾನ್ಯ ಅಯ್ಯರ್ ಅವರಿಗೆ ರೂಪೇಶ್ ಶೆಟ್ಟಿ ಕಂಡರೆ ತುಂಬಾ ಇಷ್ಟ. ಹಾಗಾಗಿ ಅವರಿಬ್ಬರೂ ಏಕಾಂತದಲ್ಲಿದ್ದಾಗ ಮಾತಿಗೆ ಇಳಿದುಬಿಡುತ್ತಾರೆ.
ಇನ್ನು ಇದಕ್ಕೆ ಸಾಕ್ಷಿ ಎಂಬಂತೆ ರೂಪೇಶ್ ಶೆಟ್ಟಿ ಅವರು ಕುಳಿತಿದ್ದಾಗ ಅವರ ಬಳಿ ಬಂದ ಸಾನ್ಯ ಅಯ್ಯರ್ ರವರು ನಿನ್ನನ್ನು ಕಂಡರೆ ನನಗೆ ಒಂಥರಾ ಆಗುತ್ತಿದೆ ಎಂದು ರೂಪೇಶ್ ಅವರಿಗೆ ಹೇಳಿದ್ದಾರೆ. ಹೌದು ಅಂದಿನಿಂದ ಇಂದಿನವರೆಗೆ ಈ ಜೋಡಿಯ ಕುರಿತು ಸಾಕಷ್ಟು ಸುದ್ದಿಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಲೇ ಇದೆ.
ಸದ್ಯ ಇದೀಗ ಇದಕ್ಕೆ ಮತ್ತಷ್ಟು ಪುಷ್ಠಿ ನೀಡಲಾಗಿದ್ದು ಮೊನ್ನೆ ತಾನೆ ಗಾರ್ಡನ್ ಏರಿಯಾದಲ್ಲಿ ವರ್ಕೌಟ್ ಮಾಡುತ್ತಿದ್ದಾಗ ಸಾನ್ಯ ಅಯ್ಯರ್ ರವರನ್ನು ಎತ್ತಿಕೊಂಡು ರೂಪೇಶ್ ಶೆಟ್ಟಿ ಯವರು ವರ್ಕೌಟ್ ಮಾಡಿದ್ದಾರೆ. ಆಗ ಸಾನ್ಯ ಅವರು ಈಗ ನಿನಗೆ ಎತ್ತಿಕೊಳ್ಳಬೇಕು ಎಂದು ಅನಿಸುತ್ತಿದೆಯಾ? ನಿನಗೆ ನನ್ನನ್ನು ಯಾವಾಗ ಎತ್ತಿಕೊಳ್ಳಬೇಕು ಎನಿಸುತ್ತದೆಯೋ ಆಗಾಗ ನೀನು ನನ್ನನ್ನು ಎತ್ತಿಕೊಳ್ಳಬಹುದು ಎಂದು ಹೇಳಿ ರೂಪೇಶ್ ಅವರಿಗೆ ಫುಲ್ ಫ್ರೀಡಂ ನೀಡಿದ್ದಾರೆ.
ಅಷ್ಟೇ ಅಲ್ಲದೆ ಇದೀಗ ಸಾನ್ಯ ಅಯ್ಯರ್ ಅವರನ್ನು ರೂಪೇಶ್ ಶೆಟ್ಟಿ ಮಧ್ಯರಾತ್ರಿ ಸಮಯದಲ್ಲಿ ತಬ್ಬಿಕೊಂಡಿರುವ ದೃಶ್ಯ ಕ್ಯಾಮೆರಾ ಕಣ್ಣುಗಳಲ್ಲಿ ಸೆರೆಯಾಗಿದ್ದು ಪ್ರತಿನಿತ್ಯ ಸಾನ್ಯ ಅಯ್ಯರ್ ಅವರಿಗೆ ರಾತ್ರಿ ಮಲಗಿಕೊಳ್ಳುವುದಕ್ಕಿಂತ ಮುಂಚೆ ರೂಪೇಶ್ ಶೆಟ್ಟಿ ತಬ್ಬಿಕೊಂಡು ಶುಭರಾತ್ರಿ ಹೇಳುತ್ತಿದ್ದರು. ಆದರೆ ಮೊನ್ನೆ ರಾತ್ರಿ ಇದು ಮಿಸ್ ಆಗಿರಬೇಕು ಅನಿಸುತ್ತದೆ.
ಹೀಗಾಗಿ ರೂಪ ಶೆಟ್ಟಿ ಅವರು ಮಧ್ಯರಾತ್ರಿ ಎದ್ದು ಬಂದು ಸಾನ್ಯ ಅಯ್ಯರ್ ರವರಿಗೆ ತಬ್ಬಿಕೊಂಡು ಗುಡ್ ನೈಟ್ ಹೇಳಿದ್ದು ಸದ್ಯ ಇದೀಗ ಈ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗುತ್ತಿದ್ದು ಈ ಜೋಡಿ ಇದೀಗ ಸಾಮಾಜಿಕ ಜಾಲತಾಣದಲ್ಲಿ ಬಹಳಾನೇ ಸುದ್ದಿಯಾಗುತ್ತಿದೆ.