ಸ್ಯಾಂಡಲ್ವುಡ್ ಬಾದ್ಶಾ ಕಿಚ್ಚ ಸುದೀಪ್ ಮೊನ್ನೆಯಷ್ಟೆ ಸ್ಯಾಂಡಲ್ವುಡ್ ಗೆ ಬಂದು 26 ವರ್ಷ ಪೂರ್ಣವಾಗಿತ್ತು. ಕಳೆದ ವರ್ಷ 25ನೇ ವರ್ಷ ಪೂರೈಸಿದ್ದಕ್ಕಾಗಿ ಕಿಚ್ಚ ದುಬೈ ನಲ್ಲಿ ಸೆಲೆಬ್ರೇಷನ್ ಮಾಡಿದ್ದರು. 26 ವರ್ಷಗಳ ಕಾಲ ಕಿಚ್ಚ ಸುದೀಪ್ ಕನ್ನಡ ಸಿನಿರಸಿಕರನ್ನು ರಂಜಿಸಿಕೊಂಡು ಬರುತ್ತಿದ್ದಾರೆ. 26 ವರ್ಷಗಳ ಹಿಂದೆ ಜ.31 ರಂದು ಕಿಚ್ಚನ ಮೊದಲ ಸಿನಿಮಾ ‘ಬ್ರಹ್ಮ’ ಸೇಟ್ಟೇರಿತ್ತು. ಅದೇ ದಿನ ಕಿಚ್ಚ ಸುದೀಪ್ ಮೊದಲು ಮುಖಕ್ಕೆ ಬಣ್ಣ ಹಚ್ಚಿ ಕ್ಯಾಮರಾ ಮುಂದೆ ನಟಿಸಿದರು.
ಅಂದಿನ ‘ಬ್ರಹ್ಮ’ ಚಿತ್ರದ ಸುದೀಪ್ ಹಾಗೂ ಇಂದಿನ ‘ವಿಕ್ರಾಂತ್ ರೋಣ’ ಸುದೀಪ್ ನೋಡಿದರೆ ಬೆಳವಣಿಗೆ ಅಂದರೆ ಹೀಗಿರಬೇಕು ಎಂದು ಮಾತನಾಡುವ ಮಟ್ಟಕ್ಕೆ ಕಿಚ್ಚನ ಕಟೌಟ್ ಚಿತ್ರರಂಗದಲ್ಲಿ ನಿಂತಿದೆ. ಇದೇ ಸಂಭ್ರಮದಲ್ಲಿ ಕಿಚ್ಚನ ಪತ್ನಿ ವಿಶೇಷ ಫೋಟೋ ಪೋಸ್ಟ್ ಮಾಡಿ ಬಾದ್ಶಾಗೆ ವಿಶ್ ಮಾಡಿದ್ದರು. ಕಿಚ್ಚ ಸುದೀಪ್ ಅಭಿಮಾನಿಗಳ ಪಾಲಿಗೆ ಕೋಟಿಗೊಬ್ಬ. ಹೊರದೇಶದಲ್ಲೂ ಕಿಚ್ಚನಿಗೆ ಅಭಿಮಾನಿಗಳಿದ್ದಾರೆ. ಮಹಿಳೆಯರು, ಮಕ್ಕಳಿಗೂ ಕಿಚ್ಚ ಅಂದರೆ ಅಚ್ಚು ಮೆಚ್ಚು. ಈಗ ಕಿಚ್ಚ ಸ್ಯಾಂಡಲ್ವುಡ್ನಲ್ಲಿ 26 ವರ್ಷ ಪೂರೈಸಿದ್ದಕ್ಕಾಗಿ ಮಹಿಳಾ ಅಭಿಮಾನಿಗಳು ವಿಶೇಷ ಉಡುಗಡೆಯೊಂದನ್ನು ನೀಡಿದ್ದಾರೆ. ಈ ಗಿಫ್ಟ್ ಕಂಡು ಕಿಚ್ಚ ಫುಲ್ ಖುಷ್ ಆಗಿದ್ದಾರೆ.
26 ವರ್ಷಗಳ ಸಿನಿ ಜರ್ನಿಯಲ್ಲಿ ಸಾಕಷ್ಟು ಸೋಲು, ಗೆಲುವು ಎಲ್ಲಾವನ್ನು ಕಂಡಿರುವ ಕಿಚ್ಚ ಗೆದ್ದಾಗ ಹಿಗ್ಗಲಿಲ್ಲ, ಬಿದ್ದಾಗ ಕುಗ್ಗಲಿಲ್ಲ. ಅದಕ್ಕೆ ಸಾಕ್ಷಿ ಎಂಬತೆ ‘ಹುಚ್ಚ’ ಚಿತ್ರದ ನಂತರ ಸುದೀಪ್ ಅವರ ಸಾಲು ಸಾಲು ಸಿನಿಮಾಗಳು ಬಾಕ್ಸ್ ಆಫೀಸ್ ನಲ್ಲಿ ಮುಗ್ಗರಿಸಿದ್ದವು, ಇದಕ್ಕೆ ಜಗ್ಗದ ಕಿಚ್ಚ ನಟನೆಯಿಂದ ನಿರ್ದೇಶಕ, ನಿರ್ಮಾಪಕನಾಗಿ ‘ಮೈ ಆಟೋ ಗ್ರಾಫ್’ ಚಿತ್ರ ಮಾಡಿ ಮತ್ತೆ ಗೆಲುವಿನ ಕುದುರೆ ಏರಿ ಚಿತ್ರರಂಗದಲ್ಲಿ ಸವಾರಿ ಮುಂದುವರೆಸಿದರು. ಕನ್ನಡ ಮಾತ್ರವಲ್ಲ ತೆಲುಗು, ಹಿಂದಿ, ಹಾಗೂ ತಮಿಳು ಸೇರಿದಂತೆ 70ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿರುವ ಕಿಚ್ಚ ಇಂದು ಪ್ಯಾನ್ ಇಂಡಿಯಾ ಸ್ಟಾರ್ ಆಗಿ ದರ್ಬಾರ್ ನಡೆಸುತ್ತಿದ್ದಾರೆ.
ಸುದೀಪ್ ಅಭಿನಯದ ಎಲ್ಲ ಸಿನಿಮಾಗಳ ಫೋಟೋವನ್ನು ಬಾಕ್ಸ್ನಲ್ಲಿರಿಸಿದ ಲೈಟ್ ಹಾಕಿ ಕೊಟ್ಟಿದ್ದಾರೆ. ಈ ಬಾಕ್ಸ್ ಓಪನ್ ಆಘುತ್ತಿದ್ದಂತೆ ಕಿಚ್ಚನ ಅಷ್ಟು ಸಿನಿಮಾಗಳ ಫೋಟೋ ಇದೆ. ಈ ಗಿಫ್ಟ್ ಕಂಡು ಕಿಚ್ಚ ಫುಲ್ ಖುಷ್ ಆಗಿದ್ದಾರೆ. ಈ ಬಾಕ್ಸ್ ಓಪನ್ ಮಾಡಿ ಎಲ್ಲ ಫೋಟೋಗಳನ್ನು ನೋಡಿ ಸಂತಸ ಪಟ್ಟಿದ್ದಾರೆ ಅಭಿನಯ ಚಕ್ರವರ್ತಿ. ಇನ್ನೂ ಈ ಗಿಫ್ಟ್ನ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ. ಅದೇ ರೀತಿ ಇತ್ತೀಚೆಗಷ್ಟೆ ಸುದೀಪ್ ಇದುವರೆಗೂ ಅನೇಕ ಬಾರಿ ದುಬೈಗೆ ಹೋಗಿ ಬಂದಿದ್ದಾರೆ. ಬುರ್ಜ್ ಖಲೀಫಾ ಕಟ್ಟಡದ ಮೇಲೆ ‘ವಿಕ್ರಾಂತ್ ರೋಣ’ ಚಿತ್ರದ ಟೀಸರ್ ಕೂಡಾ ಪ್ರದರ್ಶನವಾಗಿತ್ತು. ಈಗ ಸುದೀಪ್ ತಮ್ಮ ಪತ್ನಿ ಪ್ರಿಯಾ ಹೆಸರಿನಲ್ಲಿ ದುಬೈನಲ್ಲಿ ಹೊಸ ಉದ್ಯಮ ಆರಂಭಿಸಿದ್ದು ಇದೇ ಸಮಯದಲ್ಲಿ ಅವರಿಗೆ ಗೋಲ್ಡನ್ ವೀಸಾ ದೊರೆತಿದೆ.
ಬುರ್ಜ್ ಖಲೀಫಾ ಕಟ್ಟಡದ ಮೇಲೆ ‘ವಿಕ್ರಾಂತ್ ರೋಣ’ ಚಿತ್ರದ ಟೀಸರ್ ಕೂಡಾ ಪ್ರದರ್ಶನವಾಗಿತ್ತು. ಈಗ ಸುದೀಪ್ ತಮ್ಮ ಪತ್ನಿ ಪ್ರಿಯಾ ಹೆಸರಿನಲ್ಲಿ ದುಬೈನಲ್ಲಿ ಹೊಸ ಉದ್ಯಮ ಆರಂಭಿಸಿದ್ದು ಇದೇ ಸಮಯದಲ್ಲಿ ಅವರಿಗೆ ಗೋಲ್ಡನ್ ವೀಸಾ ದೊರೆತಿದೆ. ಇದು ಸುದೀಪ್ ಅಭಿಮಾನಿಗಳಿಗೆ ಬಹಳ ಖುಷಿ ನೀಡಿದೆ. ಏಕೆಂದರೆ ಸುದೀಪ್, ಗೋಲ್ಡನ್ ವೀಸಾ ಪಡೆದ ಮೊದಲ ಕನ್ನಡ ನಟ. ಇದುವರೆಗೂ ಹಲವು ಬಾಲಿವುಡ್ ನಟರಿಗೆ, ದಕ್ಷಿಣ ಭಾರತದಲ್ಲಿ ಮಲಯಾಳಂ ನಟ ಮೋಹನ್ ಲಾಲ್, ಮೀರಾ ಜಾಸ್ಮಿನ್, ಬಹುಭಾಷಾ ನಟಿ ಮೀನಾ, ಅಮಲಾ ಪೌಲ್ ಹಾಗೂ ಇನ್ನಿತರರಿಗೆ ಗೋಲ್ಡನ್ ವೀಸಾ ದೊರೆತಿತ್ತು. ಆದರೆ ಮೊದಲ ಬಾರಿ ಸ್ಯಾಂಡಲ್ವುಡ್ ನಟನಿಗೆ ಈ ವೀಸಾ ದೊರೆತಿದೆ.
ಯುಎಇ ಸರ್ಕಾರವು ಪ್ರತಿ ವರ್ಷ ವಿದೇಶಿಗರಿಗೆ ಗೋಲ್ಡನ್ ವೀಸಾ ನೀಡುತ್ತಾ ಬಂದಿದೆ. ಮೊದಲ ಬಾರಿಗೆ 2019 ರಲ್ಲಿ ಗೋಲ್ಡನ್ ವೀಸಾ ಸೌಲಭ್ಯವನ್ನು ಆರಂಭಿಸಿತ್ತು. ಇದುವರೆಗೂ ಅನೇಕ ನಟ-ನಟಿಯರು ಈ ಸೌಲಭ್ಯ ಪಡೆದಿದ್ದಾರೆ. ಯುಎಇಯಲ್ಲಿ ಯಾವುದೇ ಉದ್ಯಮ ಹೊಂದಿರದ ಉದ್ಯಮಿಗಳು ಹಾಗೂ ವಿದ್ಯಾರ್ಥಿಗಳಿಗೆ ಕೂಡಾ ಈ ವೀಸಾ ಪಡೆಯುವ ಅವಕಾಶವಿದೆ. 5-10 ವರ್ಷಗಳ ಕಾಲ ಗೋಲ್ಡನ್ ವೀಸಾ ಅವಧಿ ಇರುತ್ತದೆ.
ಅವಧಿ ಮುಗಿದ ನಂತರ ವೀಸಾ ಅವಧಿ ನವೀಕೃತವಾಗಲಿದೆ. ಇದೀಗ ಸುದೀಪ್ಗೆ ಮುಂದಿನ 10 ವರ್ಷಗಳ ಕಾಲ ಈ ಗೋಲ್ಡನ್ ವೀಸಾ ದೊರೆತಿದೆ. ಸುದೀಪ್ ಅವರ ಸಾಧನೆಯನ್ನು ಭಾರತೀಯ ಅಂಚೆ ಇಲಾಖೆ ದಾಖಲೆ ಮಾಡುತ್ತಿದೆ. ಆ ಕಾರಣದಿಂದ ಗೌರಿ ಗಣೇಶ ಹಬ್ಬದ ವಿಶೇಷ ದಿನದಂದು ಅಂಚೆ ಇಲಾಖೆಯ ಅಧೀಕ್ಷರಾದ ಶ್ರೀ ಮಾದೇಶ್, ಕಿಚ್ಚ ಸುದೀಪ್ ಅವರ ನಿವಾಸಕ್ಕೆ ತೆರಳಿ, ಅವರಿಂದ ಯಾವುದೇ ಆಕ್ಷೇಪಣೆ ಇಲ್ಲವೆಂಬ ಪ್ರಮಾಣಪತ್ರ ಪಡೆದು ಅಂಚೆ ಲಕೋಟೆ ಬಿಡುಗಡೆ ಕಾರ್ಯಕ್ರಮಕ್ಕೆ ಆಹ್ವಾನಿಸಿದ್ದರು. ಈ ವಿಶೇಷ ಅಂಚೆ ಲಕೋಟೆ ಬಿಡುಗಡೆ ಸಮಾರಂಭ ಶೀಘ್ರದಲ್ಲಿಯೇ ನೆರವೇರಲಿದೆ.