ವಾರ್ತಾ ಮಂಜರಿ
Trending Stories, Viral News, Gossips & Everything in Kannada

ಟೆಸ್ಟ್ ಕ್ರಿಕೆಟ್ ನ ವಿಚಿತ್ರ ಶಾಟ್ ನೋಡಿ…ಚಿಂದಿ ವಿಡಿಯೋ

2,238
Join WhatsApp
Google News
Join Telegram
Join Instagram

ವಿಶ್ವ ಕ್ರಿಕೆಟ್‌ನಲ್ಲಿ ಇರುವ ಶ್ರೇಷ್ಠ ಎಡಗೈ ವೇಗದ ಬೌಲರ್‌ಗಳ ಪೈಕಿ ಒಬ್ಬರಾದ ಕಿವೀಸ್‌ (Newzeland) ದಿಗ್ಗಜ ಟ್ರೆಂಟ್‌ ಬೌಲ್ಟ್‌(Trent Boult) ನ್ಯೂಜಿಲೆಂಡ್‌ ತಂಡದ ಪರ ದೀರ್ಘಕಾಲ ಎಲ್ಲಾ ಮಾದರಿಯ ಕ್ರಿಕೆಟ್‌ ಆಡುತ್ತಾ ಬಂದಿದ್ದಾರೆ. ಹೌದು ಜೊತೆಗೆ ಇಂಡಿಯನ್ ಪ್ರೀಮಿಯರ್‌ ಲೀಗ್‌ ಟೂರ್ನಿಯಲ್ಲೂ (IPL) ನಿರಂತರವಾಗಿ ಪಾಲ್ಗೊಂಡಿದ್ದಾರೆ.

ಹೀಗೆ ಬಿಡುವಿಲ್ಲದ ಕ್ರಿಕೆಟ್‌ ಆಡುತ್ತಿರುವ ಬೌಲ್ಟ್‌ ಅವರ ಪ್ರದರ್ಶನ ಮಟ್ಟ ಕೊಂಚ ಕಡಿಮೆಯಾಗಿದೆ ಕೂಡ. ಹೀಗಾಗಿ ನಿರಂತರ ಕ್ರಿಕೆಟ್‌ನ ಒತ್ತಡ ನಿಭಾಯಿಸಲು ಬೌಲ್ಟ್‌ ಟೆಸ್ಟ್‌ ಕ್ರಿಕೆಟ್‌ನಿಂದ(Test Cricket) ನಿವೃತ್ತಿ (Retire) ತೆಗೆದುಕೊಳ್ಳುವ ಸಾಧ್ಯತೆ ದಟ್ಟವಾಗಿದೆ ಎನ್ನಬಹುದು.ಟೆಸ್ಟ್‌ ಕ್ರಿಕೆಟ್‌ನಲ್ಲಿ ಈವರೆಗೆ 78 ಪಂದ್ಯಗಳನ್ನು ಆಡಿರುವ ಬೌಲ್ಟ್‌ ರವರು ಒಟ್ಟಾರೆ 317 ವಿಕೆಟ್‌ಗಳನ್ನು (Wickets) ಪಡೆದಿದ್ದಾರೆ.

ಹೌದು ಕಳೆದ ತಿಂಗಳು ನಡೆದ ಇಂಗ್ಲೆಂಡ್‌ (England) ವಿರುದ್ಧದ 3 ಪಂದ್ಯಗಳ ಟೆಸ್ಟ್‌ ಸರಣಿಯಲ್ಲಿ(Test Match Series) ಬೌಲ್ಟ್‌ ಒಟ್ಟು 16 ವಿಕೆಟ್‌ಗಳನ್ನು ಪಡೆದಿದ್ದರು. ಸದ್ಯ ಇನ್ಮುಂದೆ ವೈಟ್‌ ಬಾಲ್‌ (White Ball) ಕ್ರಿಕೆಟ್‌ ಕಡೆಗೆ ಹೆಚ್ಚು ಗಮನ ಕೊಡುವ ಸಾಧ್ಯತೆ ಇದೆ.ಇನ್ನು ನ್ಯೂಜಿಲೆಂಡ್‌ನ ಪ್ರಮುಖ ವೇಗದ ಬೌಲರ್ ಟ್ರೆಂಟ್ ಬೌಲ್ಟ್ ತಮ್ಮ ಯುವ ಕುಟುಂಬದೊಂದಿಗೆ ಹೆಚ್ಚು ಸಮಯ ಕಳೆಯಲು ನ್ಯೂಜಿಲೆಂಡ್ ಕ್ರಿಕೆಟ್‌ನೊಂದಿಗಿನ ಒಪ್ಪಂದದಿಂದ ಬಿಡುಗಡೆಗೊಂಡಿದ್ದಾರೆ.ಹೌದು ಬೌಲ್ಟ್ ಟೆಸ್ಟ್‌ಗಳಲ್ಲಿ 317 ಮತ್ತು ಏಕದಿನ(ODI) ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ 169 ವಿಕೆಟ್‌ಗಳನ್ನು ಪಡೆದಿದ್ದಾರೆ.

ಅವರ ಹೊಸ ಬಾಲ್ ಜೊತೆಗಾರ ಟಿಮ್ ಸೌಥಿ ಅವರು ಚೊಚ್ಚಲ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್(World Test Champianship) ಅನ್ನು ಗೆದ್ದು ಕೊನೆಯ ಪಂದ್ಯದ ಫೈನಲ್‌ಗೆ ತಲುಪಿದ ನ್ಯೂಜಿಲೆಂಡ್ ತಂಡದ ಯಶಸ್ಸಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಸದ್ಯ ಇದೀಗ ಸಾಮಾಜಿಕ ಜಾಲತಾಣದಲ್ಲಿ (Social Media) ಒಂದು ವಿಡಿಯೋ ಭಾರಿ ವೈರಲ್ ಆಗಿದ್ದು ಇಲ್ಲಿ ಬೋಲ್ಟ್ ಕ್ರಿಕೆಟ್ ನಲ್ಲಿ ಹೊಸ ಶಾಟ್ ಕಂಡುಹಿಡಿದಿದ್ದಾರೆ. ಅದು ಕೂಡ ಆಸೀಸ್ ಬೌಲರ್ ಮಿಚಲ್ ಸ್ಟಾರ್ಕ್ ಬೌಲಿಂಗ್ ನಲ್ಲಿ. ಈ ಶಾಟ್ ನೋಡಿ ಸ್ವೀವ್ ಸ್ಮಿತ್ ಬಿದ್ದು ಬಿದ್ದು ನಕ್ಕಿದ್ದು ಅದು ಯಾವ ಶಾಟ್ ಅಂತೀರ? ಕೆಳಗಿನ ವಿಡಿಯೋ ನೋಡಿ.