ವಾರ್ತಾ ಮಂಜರಿ
Trending Stories, Viral News, Gossips & Everything in Kannada

ಗಟ್ಟಿಮೇಳ ನಟಿ ಪ್ರಿಯ ಆಚಾರ್ ಮದುವೆ ನೋಡಿ..ಚಿಂದಿ ವಿಡಿಯೋ

4,207
Join WhatsApp
Google News
Join Telegram
Join Instagram

ನಮ್ಮ ಕನ್ನಡ ಕಿರುತೆರೆ ಲೋಕದಲ್ಲಿ ಬಹಳ ಜನಪ್ರಿಯತೆ ಕಂಡಿರುವ ನಟಿ ಪ್ರಿಯಾ ಜೆ ಆಚಾರ್ (Priya J Achar) ಮತ್ತು ನಟ ಸಿದ್ದು ಮೂಲಿಮನಿ (Siddu Moolimani) ಫೆ.12 ರ ಭಾನುವಾರದಂದು ವೈವಾಗಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಹೌದು ಬೆಂಗಳೂರಿನ ಖಾಸಗಿ ರೆಸಾರ್ಟ್‌ವೊಂದರಲ್ಲಿ (Resort In Banglore) ಈ ಕಿರುತೆರೆಯ ಲವ್ ಬರ್ಡ್ಸ್(Love Birds) ವಿವಾಹ ಜರುಗಿದ್ದು ಕಳೆದ ಎರಡ್ಮೂರು ವರ್ಷಗಳಿಂದ ಈ ಜೋಡಿ ಪ್ರೀತಿ ಮಾಡುತ್ತಿತ್ತು.

ಇನ್ನು ಕಳೆದ ವರುಷ ನವೆಂಬರ್‌ನಲ್ಲಿ ಮನೆಯವರ ಒಪ್ಪಿಗೆ ಪಡೆದುಕೊಂಡು ನಿಶ್ಚಿತಾರ್ಥ (Engagement) ಮಾಡಲಾಗಿತ್ತು. ಸದ್ಯ ಇದೀಗ ಫೆ.12ರಂದು ಮದುವೆ ಆಗುವ ಮೂಲಕ ಹೊಸ ಜೀವನ ಆರಂಭಿಸಿದ್ದಾರೆ ಪ್ರಿಯಾ ಹಾಗೂ ಸಿದ್ದು.

ಇನ್ನು ನಟಿ ಪ್ರಿಯಾ ಜೆ ಆಚಾರ್‌ ಮೂಲತಃ ದಾವಣಗೆರೆಯವರಾಗಿದ್ದು ಈ ಕಾರಣದಿಂದಾಗಿ ಫೆ.12ರಂದು ಬೆಂಗಳೂರಿನಲ್ಲಿ ವಿವಾಹ ಮಾಡಿಕೊಂಡಿರುವ ಈ ಜೋಡಿ, ಫೆ.14ರಂದು ದಾವಣಗೆರೆಯಲ್ಲಿ (Davanagere) ಆರತಕ್ಷತೆಯನ್ನು (Reception) ಹಮ್ಮಿಕೊಂಡಿದೆ.

ಇನ್ನು ಬೆಂಗಳೂರಿನಲ್ಲಿ ನಡೆದ ಮದುವೆಯಲ್ಲಿ ಕಿರುತೆರೆಯ ಹಲವು ಸೆಲೆಬ್ರಿಟಿಗಳು(Celebrity) ಭಾಗಿಯಾಗಿದ್ದು ಪಾರು(Paru) ಧಾರಾವಾಹಿ ಖ್ಯಾತಿಯ ಮೋಕ್ಷಿತಾ ಪೈ (Mokshitha Pai)ವಿನಯಾ ಪ್ರಸಾದ್(Vinaya Prasad) ನಿಶಾ (Nisha) ಮುಂತಾದ ಕಿರುತೆರೆಯಲ್ಲಿ ಜನಪ್ರಿಯರಾಗಿರುವ ಸೆಲೆಬ್ರಿಟಿಗಳು ಪ್ರಿಯಾ ಮತ್ತು ಸಿದ್ದು ಮದುವೆಗೆ ಆಗಮಿಸಿ ನವಜೋಡಿಗೆ ಶುಭ ಹಾರೈಸಿದ್ದಾರೆ.

ಸದ್ಯ ಇತ್ತೀಚೆಗಷ್ಟೇ ಗಷ್ಟೇ ಪಾರು(Pary) ಧಾರಾವಾಹಿಯ ಶರತ್ ಪದ್ಮನಾಭ್ (Sharath Padhmanab) ರವರು ಸಾಫ್ಟ್‌ವೇರ್ ಇಂಜಿನಿಯರ್ ಆಗಿರುವ ದಿವ್ಯಶ್ರೀ (Divyashree)ಎಂಬುವವರನ್ನು ಮದುವೆ ಆಗಿದ್ದರು. ಇದೀಗ ಅದೇ ಧಾರಾವಾಹಿಯಲ್ಲಿ ಶರತ್ ತಮ್ಮನ ಪಾತ್ರ ಮಾಡಿರುವ ಸಿದ್ದು ಮೂಲಿಮನಿ ಗಟ್ಟಿಮೇಳ (Gattimela) ಧಾರಾವಾಹಿ ಖ್ಯಾತಿಯ ಪ್ರಿಯಾ ಅವರನ್ನು ಪ್ರೀತಿಸಿ ಮದುವೆ ಆಗಿದ್ದಾರೆ.

ಸದ್ಯ ಸಾಮಾಜಿಕ ಜಾಲತಾಣದಲ್ಲಿ(Social Media) ಈ ಮುದ್ದು ಜೋಡಿಗಳು ಮದುವೆ ವಿಡಿಯೋ ವೈರಲ್ ಆಗುತ್ತಿದ್ದು ಲೇಖನಿ ಕೆಳಗಿನ ವಿಡಿಯೋದಲ್ಲಿ ಪ್ರಿಯಾ ಹಾಗೂ ಸಿದ್ದು ಮದುವೆಗೆ ಗಟ್ಟೇಳ ಹಾಗೂ ಪಾರು ಧಾರಾವಾಹಿ ತಂಡ ಆಗಮಿಸಿ ಶುಭಹಾರೈಸಿರುವುದನ್ನು ನೋಡಬಹುದು.