ತಮಗೆಲ್ಲರಿಗೂ ಕೂಡ ತಿಳಿದಿರುವ ಹಾಗೆ ಅವತಾರ್ (Avathar) ಸರಣಿ ಹಿಟ್ ಆಗಿದೆ. ಇತ್ತೀಚೆಗೆ ಬಿಡುಗಡೆ (Releaae) ಆದ ಅವತಾರ್ 2 (Avathar 2) ಸಿನಿಮಾ ಕೂಡ ಬಾಕ್ಸ್ ಆಫೀಸ್ನಲ್ಲಿ ಒಳ್ಳೆಯ ಕಮಾಯಿ ಮಾಡಿದೆ. ಈ ಸಿನಿಮಾದಲ್ಲಿ ಬರುವಂತಹ ಪಾತ್ರಗಳು ಎಲ್ಲರ ಗಮನ ಸೆಳೆದಿದ್ದು ಇತ್ತೀಚೆಗೆ ಅವತಾರ್ 2 ಸಿನಿಮಾ (Avatar 2) ಬಿಡುಗಡೆ ಆಗಿ ಸಾವಿರಾರು ಕೋಟಿ ರೂಪಾಯಿ ಕಮಾಯಿ ಮಾಡಿದೆ. ಇನ್ನು ಈಗ ಇದೇ ಚಿತ್ರದಲ್ಲಿ ಬರೋ ಪಾತ್ರಗಳನ್ನು ಸ್ಫೂರ್ತಿಯಾಗಿಟ್ಟುಕೊಂಡು ಗಿಚ್ಚಿ ಗಿಲಿಗಿಲಿ 2 ನಲ್ಲಿ (Gichchi Giligili 2 ) ಡ್ರಾಮಾ ಮಾಡಲಾಗಿದೆ. ಈ ನಾಟಕ ನೋಡಿ ವೀಕ್ಷಕರು ಹೊಟ್ಟೆ ಹುಣ್ಣಾಗುವಂತೆ ನಕ್ಕಿದ್ದು ಫೆಬ್ರವರಿ 5 ರಂದು ಈ ಸಂಚಿಕೆ ಪ್ರಸಾರ ಆಗಿತ್ತು.
ನಿವೇದಿತಾ ಗೌಡ(Nivedita Gowda) ಮತ್ತು ವಿನೋದ್ ಗೊಬ್ಬರಗಾಲ(Vinodh Gobbargala) ರವರು ಗಿಚ್ಚಿ ಗಿಲಿಗಿಲಿ 2 ವೇದಿಕೆಯ ಮೇಲೆ ಈ ನಾಟಕ ಮಾಡಿದ್ದು ನಿವೇದಿತಾ ಗೌಡ ಬಿಗ್ ಬಾಸ್ (Bigg Boss) ಮೂಲಕ ಫೇಮಸ್ ಆದವರು. ಅವರು ಕಿರುತೆರೆಯಲ್ಲಿ ಬ್ಯುಸಿ ಇದ್ದು ರೀಲ್ಸ್(Reels) ಮಾಡಿ ಫೇಮಸ್ ಆಗಿದ್ದಾರೆ.
ವಿನೋದ್ ಗೊಬ್ಬರಗಾಲ ಬಿಗ್ ಬಾಸ್ ಕನ್ನಡ ಸೀಸನ್ 9 (Bigg Boss Season 9) ಕ್ಕೆ ಸ್ಪರ್ಧಿಯಾಗಿ ಬಂದಿದ್ದರು. ಮಜಾ ಭಾರತ (Maja Bharata) ಮೂಲಕ ಫೇಮಸ್ ಆಗಿದ್ದ ಅವರಿಗೆ ಬಿಗ್ ಬಾಸ್ ನಿಂದ ಮತ್ತಷ್ಟು ಜನಪ್ರಿಯತೆ ಸಿಕ್ಕಿದೆ. ಸದ್ಯ ನಿವೇದಿತಾ ಹಾಗೂ ವಿನೋದ್ ಅವತಾರ್ ಲುಕ್ನಲ್ಲಿ ಕಾಣಿಸಿಕೊಂಡಿದ್ದಾರೆ.
ನಿವೇದಿತಾ ರವರು ಅತಿಥಿಯಾಗಿ ಆಗಮಿಸಿದ್ದು ಮಾವಿನ್ಮುತ್ತು ಕದಿಯೋದು ವಿನೋದ್ ಪ್ಲ್ಯಾನ್. ಹೌದು ಈ ಮಾವಿನಮುತ್ತು ತಿಂದವರು ತೆಳ್ಳಗಾಗುತ್ತಾರೆ. ಪ್ರೀತಿಸುತ್ತಿರುವ ಹುಡುಗಿ ದಪ್ಪಗಿದ್ದಾಳೆ ಎನ್ನುವ ಕಾರಣಕ್ಕೆ ಈ ಮಾವಿನಮುತ್ತ ತರಲು ಅವತಾರ ಲೋಕಕ್ಕೆ ಬಂದ ವಿನೋದ್ಗೆ ನಿವೇದಿತಾ ಮೇಲೆ ಪ್ರೀತಿ ಆಗುತ್ತದೆ. ಅವರಿಬ್ಬರೂ ಮದುವೆ ಆಗುತ್ತಾರೆ.
ಇತ್ತ ಪ್ರೀತಿಸಿದ ಹುಡುಗಿ ಈತನಿಗಾಗಿ ಕಾಯುತ್ತಾ ಕುಳಿತು ಮುದುಕಿ ಆಗುತ್ತಾಳೆ. ಇದನ್ನು ಸಖತ್ ಫನ್ನಿಯಾಗಿ ಮಾಡಿದ್ದು ಈ ನಾಟಕ ನೋಡಿ ಎಲ್ಲರೂ ನಕ್ಕಿದ್ದಾರೆ. ನಿವೇದಿತಾ ಲುಕ್ ಗಮನ ಸೆಳೆದಿದೆ. ಇನ್ನು ನಿವೇದಿತಾ ಈ ರೀತಿ ವಿಶೇಷ ಪಾತ್ರ ಮಾಡುತ್ತಿರುವುದು ಮೊದಲೇನಲ್ಲ. ಈ ಹಿಂದೆ ಗಿಚ್ಚಿಗಿಲಿಗಿಲಿ ಸೀಸನ್ ಒಂದರಲ್ಲಿ ಲೇಡಿ ರೋಬೋ(Lady Robo) ಪಾತ್ರ ಮಾಡಿದ್ದರು.ಆ ಪಾತ್ರ ಹೇಗೆ ಮಾಡಿದ್ದರು ಎಂದು ನೋಡುವ ಕುತೂಹಲ ನಿಮಗಿದ್ದರೆ ಕೆಳಗಿನ ವಿಡಿಯೋ ನೋಡಿ.