ತಮಿಳು ನಾಡಿನ(Tamil Nadu) ಸಂಸ್ಕೃತಿಯ ಅವಿಭಾಜ್ಯ ಅಂಗವಾಗಿರುವ ಗೂಳಿ (Bull) ಪಳಗಿಸುವ ಜಲ್ಲಿಕಟ್ಟು(Jallikattu) ಕೇವಲ ಅಪ್ಪಟ ದೇಸಿ ಕ್ರೀಡೆಯಷ್ಟೇ ಮಾತ್ರವಲ್ಲದೇ ಗ್ರಾಮೀಣ ಭಾಗದ ದೊಡ್ಡ ಆರ್ಥಿಕತೆಯ ಮೂಲವೂ ಕೂಡ ಹೌದು. ಸಂಕ್ರಾತಿ (Sankranti) ಅಂದರೆ ರೈತರ (Formers) ಗೂಳಿಗಳ ಮಾಲೀಕರಲ್ಲಿ ಒಂದು ರೀತಿಯಾ ಪುಳಕ. ಒಂದು ವರ್ಷದಿಂದ ಸನ್ನದ್ಧವಾಗುವ ಹೋರಿಗಳ ರೋಮಾಂಚನಕಾರಿ ಕಾಳಗವೊಂದು ಏರ್ಪಡುವುದರ ಜತೆಗೆ ಸಂಪ್ರದಾಯವೊಂದು ಅನಾವರಣಗೊಳ್ಳುತ್ತದೆ.
ಇನ್ನು ತಮಿಳುನಾಡಿನಲ್ಲಿ ಸಂಕ್ರಾಂತಿ ಅಥವಾ ಪೊಂಗಲ್(Pongal) ಮೂರು ದಿನಗಳ ಆಚರಣೆಯಾಗಿದ್ದು ಎರಡನೇ ದಿನ ಜಲ್ಲಿಕಟ್ಟು ನಡೆಯುತ್ತದೆ. ಹೌದು
ಯಾವುದೇ ರೀತಿಯಾ ಆಯುಧಗಳನ್ನು ಬಳಸದೆ ಹುಚ್ಚೆದ್ದು ಓಡುವ ಹೋರಿಯನ್ನು ಮುಂದಕ್ಕೆ ಹೋಗದಂತೆ ತಡೆಯುವುದೇ ಈ ಸ್ಪರ್ಧೆಯಾಗಿದೆ. ಹಿಂದೆ ಹೋರಿಗಳ ಕುತ್ತಿಗೆಗೆ ಬೆಲೆಬಾಳುವ ವಸ್ತು ಅಥವಾ ಸರ ಕಟ್ಟಿ ಬಯಲಲ್ಲಿ ಬಿಡುತ್ತಿದ್ದರಂತೆ.
ಓಡುವ ಗೂಳಿಯನ್ನು ಹಿಡಿದು ಅದರ ಕುತ್ತಿಗೆಯಲ್ಲಿರುವ ಬೆಲೆ ಬಾಳುವ ವಸ್ತುವನ್ನು ಕಸಿದು ತರುವವರನ್ನು ಸ್ಪರ್ಧೆ ವಿಜೇತರಾಗಿ ಘೋಷಿಸಲಾಗುತ್ತಿತ್ತು ಎಂದು ಹೇಳಿತ್ತದೆ ಇತಿಹಾಸ. ಇನ್ನು ಯಾವುದು ಮುಂದೆ ಸಾಗಲು ವಿಫಲವಾಗುತ್ತದೋ ಅದರ ವಂಶವಾಹಿ ಮುಂದುವರಿಯಲು ಅರ್ಹವಲ್ಲ ಅದು ದುರ್ಬಲ ಎಂದು ನಿರ್ಧರಿಸಲಾಗುತ್ತದೆ.
ಇನ್ನು ಈಗಿನ ಸ್ಪರ್ಧೆ ಹೇಗಿರುತ್ತಿತ್ತು ಎಂದರೆ ಒಂದು ನಿರ್ದಿಷ್ಟ ಪಥದಲ್ಲಿ ಹೋರಿಗಳನ್ನು ಓಡಿಸಿ ದಾರಿಯುದ್ದಕ್ಕೂ ನಿಲ್ಲುವ ಯುವಕರು ಅದರ ಕೊಂಬು ಡುಬ್ಬವನ್ನು ಹಿಡಿದು ಹೋರಿಯನ್ನು ತಮ್ಮ ಹಿಡಿತಕ್ಕೆ ತೆಗೆದುಕೊಳ್ಳುವುದು ಈಗಿನ ಸ್ಪರ್ಧೆಯಾಗಿತ್ತು. ಹೌದು ಜಲ್ಲಿಕಟ್ಟು ಎಂಬುದು ಹೋರಿ ಹಿಡಿಯುವ ಸ್ಪರ್ಧೆಯಾದರೂ ಕೂಡ ಅದನ್ನು ಹಿಡಿಯವವನು ನಿಜಕ್ಕೂ ವೀರನೇ ಸರಿ. ಹಾಗೆ ನೋಡುವುದಾದರೆ ಇದು ಯುವಕನ ಶಕ್ತಿ ಪ್ರದರ್ಶನವೂ ಕೂಡ ಹೌದು. ಒಂದು ರೀತಿಯ ಸ್ವಯಂವರ ಪರೀಕ್ಷೆ ಎಂದರ ಹೇಳದರೂ ಕೂಡ ತಪ್ಪಾಗದು.
ಹಿಂದೆ ಜಲ್ಲಿಕಟ್ಟು ಗೂಳಿಯನ್ನು ಹಿಡಿದ ವೀರನೊಂದಿಗೆ ಹೆಣ್ಣು ಮಕ್ಕಳ ವಿವಾಹ ಮಾಡಿಸುವ ಕ್ರಮ ಇತ್ತಂತೆ. ಹೌದು ಜಲ್ಲಿಕಟ್ಟುವಿಗೆ ಬರೋಬ್ಬರಿ 3500 ವರ್ಷಗಳ ಇತಿಹಾಸವಿದ್ದು ಮಧುರೈ(Madurai) ನೀಲಗಿರಿಯಲ್ಲಿ(Neelagiri) ಲಭ್ಯವಾಗಿರುವ ಶಿಲಾಶಾಸನಗಳಲ್ಲಿ ಮನುಷ್ಯರು ಎತ್ತುಗಳನ್ನು ಓಡಿಸುವ ಚಿತ್ರದ ಕೆತ್ತನೆ ತಾವಿಗಳು ಕಾಣಬಹುದು. ಸದ್ಯ ಈಗೇಕೆ ಜಲ್ಲಿಕಟ್ಟು ಬಗ್ಗೆ ಚರ್ಚೆ ಅಂತೀರ ಕಾರಣವಿದೆ. ಇಲ್ಲೊಬ್ಬ ಪುಟ್ಟ ಪೂರ (Jallikattu Veeran) ಈಗಲೇ ಪುಟ್ಟ ಹೋರಿಯನ್ನು ಪಳಗಿಸಲು ಮುಂದಾಗಿದ್ದಾರೆ. ಇದು ಒಂದು ರೀತಿ ಜಲ್ಲಿಕಟ್ಟು ರೀತಿಯಲ್ಲಿಯೇ ಇದ್ದು ಒಮ್ಮೆ ಲೇಖನಿ ಕೆಳಗಿನ ವಿಡಿಯೋ ನೋಡಿ.