ವಾರ್ತಾ ಮಂಜರಿ
Trending Stories, Viral News, Gossips & Everything in Kannada

ವಿಮಾನ ಲ್ಯಾಂಡಿಂಗ್ ಮಾಡುವಾಗ ಯಡವಟ್ಟು…ಚಿಂದಿ ವಿಡಿಯೋ

3,667

ಪ್ರತಿಯೊಬ್ಬರು ಕೂಡ ತಮ್ಮ ಜೀವನದಲ್ಲಿ ಒಮ್ಮೆಯಾದರೂ ವಿಮಾನದಲ್ಲಿ ಪ್ರಯಾಣ ಕೈಗೊಳ್ಳಬೇಕು ಎಂದು ಬಯಸುತ್ತಾರೆ. ಏಕೆಂದರೆ ವಿಮಾನದ ಪ್ರಯಾಣವು ಆಕಾಶದ ಎತ್ತರಕ್ಕೆ ಕರೆದುಕೊಂಡು ಹೋಗಿ ಒಂದು ವಿಶಿಷ್ಟವಾದ ಅನುಭವವನ್ನು ನೀಡುತ್ತದೆ.ನಮ್ಮ ವಿಶ್ವದಲ್ಲಿ ಅನೇಕ ಐಷಾರಾಮಿ, ಬೃಹತ್ ವಿಮಾನ ನಿಲ್ದಾಣಗಳಿವೆ. ಇಂತಹ ವಿಮಾನ ನಿಲ್ದಾಣಗಳು ದೇಶ ಮತ್ತು ವಿಶ್ವದ ಮೂಲೆ ಮೂಲೆಗಳಲ್ಲಿವೆ.

ಅಷ್ಟೇ ಅಲ್ಲ, ಎದೆ ಝಲ್ ಅನ್ನಿಸುವ ಅಪಾಯಕಾರಿ ವಿಮಾನ ನಿಲ್ದಾಣಗಳು ಕೂಡ ನಮ್ಮ ವಿಶ್ವದಲ್ಲಿ ಇವೆ. ಮುಖ್ಯವಾಗಿ ಈ ವಿಮಾನ ನಿಲ್ದಾಣಗಳಲ್ಲಿ ಲ್ಯಾಂಡಿಂಗ್‌ ಅಥವಾ ಟೇಕಾಫ್‌ ಮಾಡುವಾಗ ಸಾಕಷ್ಟು ಎಚ್ಚರಿಕೆಯ ಅಗತ್ಯವಿದೆ. ಹಾಗಾದರೆ ಇಂತಹ ಅಪಾಯಕಾರಿ ವಿಮಾನ ನಿಲ್ದಾಣಗಳು ನಮ್ಮ ವಿಶ್ವದಲ್ಲಿ ಎಷ್ಟಿವೆ ಎಂಬುದನ್ನು ಇಲ್ಲಿ ತಿಳಿಯಿರಿ. ವಿಮಾನ ನಿಲ್ದಾಣವು ವಿಶ್ವದ ಅತ್ಯಂತ ಅಪಾಯಕಾರಿ ವಿಮಾನ ನಿಲ್ದಾಣಗಳಲ್ಲಿ ಒಂದಾಗಿದೆ. ಇದನ್ನು ಲುಕ್ಲಾ ವಿಮಾನ ನಿಲ್ದಾಣ ಎಂದೂ ಕೂಡ ಕರೆಯುತ್ತಾರೆ. ಕೆಲವು ಮಾಧ್ಯಮಗಳ ಕಾರ್ಯಕ್ರಮದ ಪ್ರಕಾರ, ಕಳೆದ 20 ವರ್ಷಗಳಿಗಿಂತಲೂ ಹೆಚ್ಚು ಕಾಲ ವಿಶ್ವದ ಅತ್ಯಂತ ಅಪಾಯಕಾರಿ ವಿಮಾನ ನಿಲ್ದಾಣ ಎಂಬ ಖ್ಯಾತಿಯನ್ನು ಗಳಿಸಿದೆ.

ವಿಶೇಷವೆಂದರೆ, ಈ ವಿಮಾನ ನಿಲ್ದಾಣದ ರನ್‌ ವೇ ಕೇವಲ 460 ಮೀಟರ್‌ಗಳಿದ್ದು, ಸಣ್ಣ ವಿಮಾನಗಳಿಗೆ ಮಾತ್ರ ಟೇಕಾಫ್‌ ಮಾಡಲು ಅವಕಾಶ ನೀಡಲಾಗಿದೆ. ಈ ರನ್ ವೇ ಸುತ್ತ 600 ಮೀಟರ್ ಆಳದ ಕಂದಕವಿದ್ದು, ಸಣ್ಣ ನಿರ್ಲಕ್ಷ್ಯವೂ ಅಪಘಾತಗಳಿಗೆ ಕಾರಣವಾಗಲಿದೆ.

ಸುಂದರವಾದ ಮಾಲ್ಡೀವ್ಸ್‌ ದೇಶದದಲ್ಲಿನ ಈ ಮೇಲ್‌ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವು ಸಮುದ್ರ ತೀರದಿಂದ ಕೇವಲ 2 ಮೀಟರ್ ಎತ್ತರದಲ್ಲಿದೆ. ಈ ಕಾರಣದಿಂದಲೇ ಪೈಲಟ್‌ ವಿಮಾನವನ್ನು ಟೇಕ್ ಆಫ್‌ ಮಾಡಲು ಅಥವಾ ಇಳಿಸಲು ತುಂಬಾ ಕಷ್ಟಕರವಾಗಿರುತ್ತದೆ. ಪೈಲಟ್‌ ಸ್ವಲ್ಪ ನಿರ್ಲಕ್ಷ್ಯ ವಹಿಸಿದರು ಕೂಡ ಅಪಾಯ ಕಟ್ಟಿಟ್ಟ ಬವೀಡಿಯೋ

ಭೂತಾನ್‌ನಲ್ಲಿರುವ ಈ ಪಾರೋ ಅಂತರಾಷ್ಟ್ರೀಯ ವಿಮಾನ ನಿಲ್ದಾಣವು ಭೂತಾನ್‌ನಲ್ಲಿರುವ 4 ವಿಮಾನ ನಿಲ್ದಾಣಗಳ ಏಕೈಕ ಅಂತರಾಷ್ಟ್ರೀಯ ವಿಮಾನ ನಿಲ್ದಾಣವಾಗಿದೆ.ಇದು ಪಾರೋ ಚು ನದಿಯ ದಡದಲ್ಲಿರುವ ಆಳವಾದ ಕಣಿವೆಯಲ್ಲಿ ಮತ್ತು ಪಾರೋದಿಂದ ಕೇವಲ 6 ಕಿ.ಮೀ ದೂರದಲ್ಲಿದೆ. ಅಲ್ಲದೆ, 5,500 ಮೀ ಎತ್ತರದಲ್ಲಿ ನೆಲೆಸಿದ್ದು, ವಿಶ್ವದ ಅತ್ಯಂತ ಅಪಾಯಕಾರಿ ವಿಮಾನ ನಿಲ್ದಾಣಗಳಲ್ಲಿ ಒಂದಾಗಿದೆ.

ಈ ಕಾರಣದಿಂದಾಗಿಯೇ ಪೈಲಟ್‌ ಇಳಿಯಲು ವಿಶೇಷವಾಗಿ ತರಬೇತಿ ಪಡೆದಿದ್ದಾರೆ. ಹಾಗೆಯೇ, ವಿಮಾನ ನಿಲ್ದಾಣದ ಎಲ್ಲಾ ಕಡೆಯಲ್ಲಿಯೂ ಮನೆಗಳಿಂದ ಆವೃತವಾಗಿದೆ. ವಿಮಾನಗಳು ಲ್ಯಾಂಡ್‌ ಮಾಡುವಾಗ ಅಪಘಾತಗಳ ಅಪಾಯವಿದೆ.

ಅಪಾಯಕಾರಿ ಲ್ಯಾಂಡಿಂಗ್ ವೀಡಿಯೋ

ಇತ್ತೀಚೆಗೆ ವಿಮಾನವನ್ನು ಲ್ಯಾಂಡ್ ಮಾಡುವಾಗ ಅತ್ಯಂತ ಅಪಾಯಕಾರಿಯಾಗಿ‌ ಲ್ಯಾಂಡ್ ಮಾಡಿದ್ದ ವೀಡಿಯೋ ಒಂದು ವೈರಲ್ ಆಗಿದೆ. ಅದೇ ರೀತಿ ಇಲ್ಲಿ ತುಂಬಾ ವಿಮಾನಗಳು ಲ್ಯಾಂಡ್ ಮಾಡುವಾಗ ಅಪಾಯಕಾರಿಯಾಗಿ ಲ್ಯಾಂಡ್ ಮಾಡಿ ಇನ್ನೆನು ವಿಮಾನ ಬ್ಲಾಸ್ಟ್ ಆಗಬೇಕು ಅನ್ನುವಾಗ ಸೇಫ್ ಆಗುತ್ತವೆ. ಅದೇ ರೀತಿ ಇದು ತರಬೇತಿ ಇಲ್ಲದ ಹೊಸ ಪೈಲೆಟ್ ಮಾಡಿರುವ ಸಾಧ್ಯತೆ ಇದೆ ಎನ್ನಲಾಗಿದೆ.