ವಾರ್ತಾ ಮಂಜರಿ
Trending Stories, Viral News, Gossips & Everything in Kannada

ಅರ್ಜುನ್ ಸರ್ಜಾ ಮನೆಯಲ್ಲಿ ಪಾರ್ಟಿ ಹೇಗಿತ್ತು ನೋಡಿ…ಚಿಂದಿ ವಿಡಿಯೋ

2,428

ದಕ್ಷಿಣ ಭಾರತ ಚಿತ್ರರಂಗ ಕಂಡಂತಹ ಆಕ್ಷನ್ ಕಿಂಗ್ ಹಾಗೂ ಅಪ್ರತಿಮ ನಟ ಎಂದೇ ಖ್ಯಾತಿ ಪಡೆದಿರುವವರು ನಟ ಅರ್ಜುನ್ ಸರ್ಜಾ ರವರು ಸದ್ಯ ಈಗಲೂ ಕೂಡ ಬೇಡಿಕೆನ್ನುಳಿಸಿಕೊಂಡಿರುವುದು ಬಹಳ ವಿಶೇಷವಾಗಿದೆ ಎನ್ನಬಹುದು. ಹೌದು ಇವರು ಸರ್ಜಾ ಕುಟುಂಬದ ಗೌರವವನ್ನು ಎತ್ತಿ ಹಿಡಿಯುತ್ತಿರುವ ಪುತ್ರ ಎಂದರೆ ತಪ್ಪಾಗಲಾರದು.

ಅಲ್ಲದೇ ನಟ ಅರ್ಜುನ್ ಸರ್ಜಾ ರವರು ಕನ್ನಡ ಚಿತ್ರರಂಗಕ್ಕಾಗಿ ನಟನಾಗಿ ನಿರ್ದೇಶಕನಾಗಿ ತಮ್ಮದೇ ಆದ ಕೊಡುಗೆ ಕೂಡ ನೀಡಿದ್ದು ಅಲ್ಲದೇ ಹಲವು ವರ್ಷಗಳ ಕಾಲ ಸೇವೆ ಸಲ್ಲಿಸಿದ್ದ ಹಿರಿಯ ನಟ ಶಕ್ತಿ ಪ್ರಸಾದ್ ರವರ ಮಗ ಎಂಬುದು ವಿಶೇಷ. ಸದ್ಯ ಇದೀಗ ದಕ್ಷಿಣ ಭಾರತದ ಆಕ್ಷನ್ ಕಿಂಗ್ ಎಂದು ಖ್ಯಾತಿ ಪಡೆದು ಎಲ್ಲರ ಫೇವರೆಟ್ ನಟರಾಗಿದ್ದಾರೆ.

ಇನ್ನು ನಟ ಅರ್ಜುನ್ ಸರ್ಜಾ ರವರಿಗೆ ಇಬ್ಬರು ಹೆಣ್ಣುಮಕ್ಕಳಿದ್ದು ಅರ್ಜುನ್ ಸರ್ಜಾ ರವರ ಮೊದಲನೇ ಮಗಳು ಐಶ್ವರ್ಯ ಸರ್ಜಾ ಕನ್ನಡದಲ್ಲಿ ಎರಡು ಸಿನಿಮಾಗಳಲ್ಲಿ ಅಭಿನಯಿಸಿ ಕರ್ನಾಟಕದಲ್ಲಿ ಸಾಕಷ್ಟು ಹೆಸರು ಮಾಡಿದ್ದಾರೆ. ಹೌದು ಅಲ್ಲದೇ ತಮಿಳು ಚಿತ್ರರಂಗದಲ್ಲೂ ಕೂಡ ಐಶ್ವರ್ಯ ಅವರು ಮೂರು ಸಿನಿಮಾಗಳನ್ನು ಮಾಡಿದ್ದಾರೆ.

ಶಕ್ತಿ ಪ್ರಸಾದ್ ರವರ ಪುತ್ರ ಅರ್ಜುನ್ ಸರ್ಜಾ ರವರು ಬಾಲನಟನಾಗಿ ನಮ್ಮ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದು ತಂದೆ ಖ್ಯಾತ ನಟರಾಗಿದ್ದ ಕಾರಣ ಅವಕಾಶ ಸುಲಭವಾಗಿ ಸಿಗುತ್ತದೆ. ಆದರೂ ಸಹ ತಮ್ಮ ಪ್ರತಿಭೆಯಿಂದ ಮುಂದೆ ಬಂದವರು ನಮ್ಮ ಅರ್ಜುನ್ ಸರ್ಜಾ. ನಟ ಅರ್ಜುನ್ ಸರ್ಜಾ ಅವರಿಗೆ ಒಬ್ಬ ಅಣ್ಣ ಕೂಡ ಇದ್ದರು ಅವರ ಹೆಸರು ಅವರ ಹೆಸರು ಕಿಶೋರ್ ಸರ್ಜಾ.

ಇವರು ಚಿತ್ರರಂಗದಲ್ಲಿ ನಿರ್ದೇಶಕರಾಗಿದ್ದು ಚಿರಂಜೀವಿ ಸರ್ಜಾ ಅವರನ್ನು ವಾಯು ಪುತ್ರ ಚಿತ್ರದ ಮೂಲಕ ಪರಿಚಯಿಸಿದ್ದು ಇವರೇ. ಆದರೆ ಕಿಶೋರ್ ಸರ್ಜಾ ಅವರು ಈಗ ಇಲ್ಲ. ಇನ್ನು ಅರ್ಜುನ್ ಸರ್ಜಾ ಅವರು ಬಾಲನಟನಾಗಿ ಹಲವು ಸಿನಿಮಾಗಳಲ್ಲಿ ಅಭಿನಯಿಸಿದ ಬಳಿಕ ಹೀರೋ ಆದವರಾಗಿದ್ದು ಕನ್ನಡ ಚಿತ್ರರಂಗದ ಮೂಲಕ ನಟನೆ ಪ್ರಾರಂಭಿಸಿದ ಅವರು ತದನಂತರ ತೆಲುಗು ಹಾಗೂ ತಮಿಳು ಸಿನಿಮಾಗಳಲ್ಲಿ ನಟಿಸಿ ಯಶಸ್ಸು ಪಡೆದರು.

ಸಾಹಸ ಲವ್ ಸ್ಟೋರಿ ಸೆಂಟಿಮೆಂಟ್ ಎಲ್ಲಾ ರೀತಿಯ ಕಥೆಗಳಲ್ಲೂ ಅದ್ಭುತವಾಗಿ ನಟಿಸಿ ಹಿಟ್ ಹೀರೋ ಎನ್ನಿಸಿಕೊಂಡವರು ಅರ್ಜುನ್ ಸರ್ಜಾ. ಇದೀಗ ಅವರಿಗೆ 55 ವರ್ಷದ ಮೇಲಾಗಿದ್ದರು ಕೂಡ ಈಗಲೂ ಬಹಳ ಫಿಟ್ ಆಗಿದ್ದಾರೆ. ಇನ್ನು ಅರ್ಜುನ್ ಸರ್ಜಾ ಅವರ ಕುಟುಂಬದ ವಿಚಾರಕ್ಕೆ ಬರುವುದಾದರೆ ಕನ್ನಡದ ಹಿರಿಯನಟ ರಾಜೇಶ್ ಅವರ ಮಗಳು ರಥಸಪ್ತಮಿ ಚಿತ್ರದಲ್ಲಿ ಶಿವಣ್ಣ ಅವರಿಗೆ ನಾಯಕಿಯಾಗಿದ್ದ ನಿವೇದಿತಾ ಅವರ ಜೊತೆ ಮದುವೆಯಾಗಿದ್ದು ಈ ದಂಪತಿಗೆ ಇಬ್ಬರು ಮಕ್ಕಳಿದ್ದಾರೆ.

ಈ ದಂಪತಿಗಳ ಮೊದಲ ಮಗಳು ಐಶ್ವರ್ಯ ಆದರೆ ಎರಡನೇ ಮಗಳು ಅಂಜನ ಎಂದು. ಐಶ್ವರ್ಯ ಪ್ರೇಮ ಬರಹ ಸಿನಿಮಾದಿಂದ ನಾಯಕಿಯಾಗಿ ಕನ್ನಡ ಚಿತ್ರರಂಗ ಹಾಗೂ ಕಾಲಿವುಡ್ ಎರಡು ಕಡೆಗೂ ಎಂಟ್ರಿ ಕೊಟ್ಟಿದ್ದು ಆದರೆ ಅಂಜನ ಅವರು ಇನ್ನು ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿಲ್ಲ.

ಆದರೆ ಇವರು ಸಹ ಅಕ್ಕನ ಹಾಗೆ ನೋಡಲು ಬಹಳ ಸುಂದರವಾಗಿದ್ದು ಮಗಳು ಅಂಜನ ಅವರು ಸಾಮಾಜಿಕ ಜಾಲತಾಣದಲ್ಲಿ ಆಕ್ಟಿವ್ ಇದ್ದು ಆಗಾಗ ತಮ್ಮ ಫೋಟೋಗಳನ್ನು ಕೂಡ ಶೇರ್ ಮಾಡಿಕೊಳ್ಳುತ್ತಾರೆ. ಅಕ್ಕ ಐಶ್ವರ್ಯ ಸರ್ಜಾ ಅವರಂತೆ ಅಂಜನಾ ಸರ್ಜಾ ಅವರಿಗೆ ಕೂಡ ಸಿನಿಮಾ ಕ್ಷೇತ್ರವೆಂದರೆ ಬಹಳ ಇಷ್ಟವಾಗಿದ್ದು ತಮ್ಮ ವಿಧ್ಯಾಬ್ಯಾಸಗಳನ್ನು ಮುಗಿಸಿದ ಮೇಲೆ ಅಂಜನಾ ಸರ್ಜಾ ಅವರು ಸಿನಿಮಾ ಕ್ಷೇತ್ರಕ್ಕೆ ಬರಲಿದ್ದಾರಂತೆ.

ಇನ್ನು ಅಂಜನಾ ಸರ್ಜಾ ಅವರಿಗೆ ನಟನೆ ಗಿಂತ ನಿರ್ದೇಶನ ಹಾಗೂ ಕಥೆ ಚಿತ್ರಕಥೆ ಮತ್ತು ಸಂಭಾಷಣೆ ಕೆಳಕೆವುದು ಬಹಳ ಇಷ್ಟವಾಗಿದ್ದು ಆದರಿಂದ ವಿದ್ಯಾಭ್ಯಾಸ ಮುಗಿಸಿದ ನಂತರ ಅಂಜನಾ ಅವರು ಇದಕ್ಕೆ ಸಂಬಂಧಪಟ್ಟ ಕೋರ್ಸ್ ಗಳನ್ನೂ ಕೂಡ ಮಾಡಿ ನಂತರ ಸಿನಿಮಾ ಕ್ಷೇತ್ರಕ್ಕೆ ಬರಲಿದ್ದಾರೆ ಸಂದರ್ಶನದಲ್ಲಿ ಅರ್ಜುನ್ ಸರ್ಜಾ ರವರ ಮಗಳು ಅಂಜನಾ ಸರ್ಜಾ ಅವರು ಹಂಚಿಕೊಂಡಿದ್ದಾರೆ.

ಸದ್ಯ ಇದೀಗ ಅರ್ಜುನ್ ಸರ್ಜಾ ಕುಟುಂಬದವರೆಲ್ಲ ಬೆಂಗಳೂರಿಗೆ ಬಂದಿದ್ದು ಪ್ರೀತಿಯ ಅಳಿಯ ಧ್ರುವ ಸರ್ಜಾ ದಂಪತಿ ಹಾಗೂ ಮಗುವಿನ ಜೊತೆ ಸಮಯ ಕಳೆಯುತ್ತಿದ್ದಾರೆ. ಸದ್ಯ ಈ ಫೊಟೊಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು ಈ ಲೇಖನಿಯ ಕೆಳಗುನ ವಿಡಿಯೋದಲ್ಲಿ ನೋಡಬಹುದು.