ಕನ್ನಡ ಚಿತ್ರರಂಗದ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ರವರು ಕನ್ನಡ ಚಿತ್ರರಂಗದಲ್ಲಿ ನಾಯಕ ನಟನಾಗಿ ನಟಿಸಿದ್ದು ಕೇವಲ ಬೆರಳೆಣಿಕೆಯಷ್ಟು ಸಿನಿಮಾ ಮಾತ್ರ. ಹೌದು ಆದರೆ ಆರು ತಿಂಗಳ ಮಗುವಾಗಿನಿಂದಲೇ ಕನ್ನಡ ಚಿತ್ರರಂಗದಲ್ಲಿ ಒಬ್ಬ ಕಲಾವಿದನಾಗಿ ಜನ್ಮ ತಾಳಿದವರು ಎನ್ನುವುದು ಎಲ್ಲರೂ ಕೂಡ ಮೆಚ್ಚುವಂತಹ ವಿಚಾರ ಎಂದರೆ ಖಂಡಿತ ತಪ್ಪಾಗಲಾರದು.
ಇನ್ನು ಅವರ ಅಗಲಿಕೆಯ ನಂತರ ಜನರಿಗೆ ಗೊತ್ತಿಲ್ಲದಿರುವ ಹಲವಾರು ವಿಚಾರಗಳು ಒಂದೊಂದಾಗಿಯೇ ಹೊರಬಂದಿದ್ದು ಅವುಗಳಲ್ಲಿ ಅಪ್ಪು ಅವರು ಜನರಿಗೆ ಯಾರಿಗೂ ತಿಳಿಯದಂತೆ ಸಹಾಯ ಮಾಡಿರುವ ಹಾಗೂ ಆರ್ಥಿಕ ಸಹಾಯವನ್ನು ನೀಡಿರುವಂತಹ ವಿಚಾರಗಳೇ ಹೆಚ್ಚು ಎನ್ನಬಹುದಾಗಿದೆ. ಇನ್ನು ಇಂದಿನ ವಿಚಾರದಲ್ಲಿ ನಾವು ಮಾತನಾಡಲು ಹೊರಟಿರುವುದು ಕಲರ್ಸ್ ಕನ್ನಡ ವಾಹಿನಿಯ ಟಾಪ್ ಧಾರವಾಹಿ ಆಗಿರುವ ಕನ್ನಡತಿ ಧಾರವಾಹಿಯ ಭುವಿ ಪಾತ್ರದಲ್ಲಿ ಕಾಣಿಸಿಕೊಳ್ಳುವಂತಹ ರಂಜಿನಿ ರಾಘವನ್ ಅವರ ಬಗ್ಗೆ.
ಹೌದು ರಂಜನಿ ರಾಘವನ್ ಅವರು ಲೇಟೆಸ್ಟ್ ಆಗಿ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಅಪ್ಪು ಅವರ ಜೊತೆಗೆ ಇರುವಂತಹ ಒಂದು ಹಳೆಯ ಫೋಟೋವನ್ನು ಪೋಸ್ಟ್ ಮಾಡಿದ್ದರು. ಇದರ ಹಿನ್ನೆಲೆಯನ್ನು ಕೂಡ ಕ್ಯಾಪ್ಷನ್ನಲ್ಲಿ ಬರೆದಿದ್ದು ಎಲ್ಲರೂ ಕೂಡ ಬಾವುಕರಾಗುವಂತೆ ಮಾಡಿತ್ತು.
ಹೌದು ರಾಜಹಂಸ ಸಿನಿಮಾದ ಪ್ರಮೋಷನ್ ವಿಚಾರವಾಗಿ ಅಪ್ಪು ಅವರನ್ನು ಭೇಟಿ ಮಾಡೋಕೆ ಹೋದ ಸಂದರ್ಭದಲ್ಲಿ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ರವರು ರಂಜನಿ ರಾಘವನ್ ಅವರಿಗೆ ನಮ್ಮ ಮನೆಯಲ್ಲಿ ನಿಮ್ಮ ಧಾರವಾಹಿ ಎಲ್ಲರೂ ಕೂಡ ನೋಡ್ತಾರೆ ಎಂಬುದಾಗಿ ಮೆಚ್ಚುಗೆಯನ್ನು ಸೂಚಿಸಿದ್ದರು. ಅದೇ ಸಂದರ್ಭದಲ್ಲಿ ತೆಗೆದುಕೊಂಡ ಸೆಲ್ಫಿ ಫೋಟೋ ಇದಾಗಿದ್ದು ಇದನ್ನು ರಂಜನಿ ರಾಘವನ್ ಅವರು ಪೋಸ್ಟ್ ಮಾಡುವ ಮೂಲಕ ಹಳೆಯ ಕ್ಷಣಗಳನ್ನು ಮೆಲುಕು ಹಾಕಿದ್ದಾರೆ. ಸದ್ಯ ಇದೀಗ ರಂಜನಿ ಅಪ್ಪುಗಾಗಿ ಅಪ್ಪು ಚಿತ್ರದ ಹಾಡು ಹಾಡಿದ್ದು ಯಾವ ಹಾಡು ಎಂದು ತಿಳಿಯಲು ಲೇಖನಿಯ ಕೆಳಗಿರುವ ವಿಡಿಯೋ ನೋಡಿ.
ಸದ್ಯ ಕನ್ನಡತಿ ಧಾರಾವಾಹಿಯಲ್ಲಿ ಭುವಿಗೆ ಸರ್ಪ್ರೈಸ್ ನೀಡಬೇಕು ಎಂಬುದು ಹರ್ಷನ ಉದ್ದೇಶವಾಗಿದ್ದು ಅದಕ್ಕಾಗಿ ಸಿದ್ಧತೆ ಮಾಡಿಕೊಂಡಿದ್ದಾನೆ. ಚಿತ್ರಮಂದಿರ ಒಂದರಲ್ಲಿ ಇದಕ್ಕಾಗಿ ಭರ್ಜರಿ ಸಿದ್ಧತೆ ಮಾಡಿಕೊಂಡಿದ್ದಾನೆ ಹರ್ಷ. ಈ ಬಗ್ಗೆ ಭುವಿಗೆ ಗೊತ್ತಿಲ್ಲ. ಆಕೆ ಇದ್ದ ಜಾಗಕ್ಕೆ ಕಾರನ್ನು ಹರ್ಷ ಕಳುಹಿಸಿದ್ದಾನೆ. ಭುವಿಯನ್ನು ಸ್ವಾಗತಿಸಲು ಹೂವಿನಿಂದ ಅಲಂಕಾರ ಮಾಡಿಕೊಂಡಿದ್ದಾನೆ.
ಈ ಮೂಲಕ ಭುವಿಗೆ ಸರ್ಪ್ರೈಸ್ ನೀಡಬೇಕು ಎಂಬುದು ಆತನ ಉದ್ದೇಶ. ಇದನ್ನು ನೋಡಿದರೆ ವರುಧಿನಿ ಸಿಟ್ಟಾಗಬಹುದು. ಇನ್ನು ಈ ಮೊದಲು ಹರ್ಷನ ಮೇಲೆ ಭುವಿಗೆ ಪ್ರೀತಿ ಮೂಡಿತ್ತು. ಇದಕ್ಕೆ ಕಾರಣ ಆತ ನಡೆದುಕೊಂಡ ರೀತಿ. ಭುವಿ ಬಗ್ಗೆ ಆತ ತುಂಬಾನೇ ಪ್ರೀತಿ ತೋರಿದ್ದ. ಆಕೆಗೆ ಪ್ರಪೋಸ್ ಮಾಡುವಾಗಲೂ ಹರ್ಷ ಅದ್ದೂರಿಯಾಗಿ ಸಿದ್ಧತೆ ಮಾಡಿಕೊಂಡಿದ್ದ. ಈಗ ಹರ್ಷ ಮತ್ತೆ ಸರ್ಪ್ರೈಸ್ ನೀಡಲು ರೆಡಿ ಆಗಿದ್ದು ಈ ಮೂಲಕ ಭುವಿಯನ್ನು ಪ್ರೀತಿಯಿಂದ ಗೆಲ್ಲಬೇಕು ಎಂದುಕೊಂಡಿದ್ದಾನೆ.