ವಾರ್ತಾ ಮಂಜರಿ
Trending Stories, Viral News, Gossips & Everything in Kannada

ಧ್ರುವನಿಗೆ ಊಟ ಮಾಡಿಸಿದ ನಟಿ ತಾರಾ….ನೋಡಿ ಚಿಂದಿ ವಿಡಿಯೋ

640

ಸ್ಯಾಂಡಲ್ ವುಡ್ ನಲ್ಲಿ ಆಕ್ಷನ್ ಪ್ರಿನ್ಸ್ ಎಂದೇ ಖ್ಯಾತಿ ಪಡೆದಿರುವ  ಧ್ರುವ ಸರ್ಜಾ ಅವರು ನಟಿಸಿರುವ 4 ಸಿನಿಮಾಗಳ ಪೈಕಿ 3 ಸಿನಿಮಾಗಳಲ್ಲಿ ಪ್ರೇಮ ಕಥೆಯೇ ಇದೆ ಎಂಬುದು ವಿಶೇಷ. ಹೌದು ಬೆಳ್ಳಿ ಪರದೆಯ ಮೇಲೆ ಲವ್ವರ್ ಬಾಯ್ ಆಗಿ ಕಾಣಿಸಿಕೊಳ್ಳುವ ಧ್ರುವ ಅಭಿಮಾನಿಗಳ ಮನಗೆದ್ದಿದ್ದು ಇದರ ಜೊತೆಗೆ  ನಿಜಜೀವನದಲ್ಲೂ ಕೂಡಾ ಅತ್ಯುತ್ತಮ ಪ್ರಿಯತಮನಾಗಿ ಪ್ರೇರಣಾ ಶಂಕರ್ ಅವರನ್ನು ಪ್ರೀತಿಸಿ  ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ.

ಹೌದು ವಿವಾಹಕ್ಕೂ ಮುನ್ನ ಹುಟ್ಟುಹಬ್ಬದ ದಿನದಂದು ಮಾಧ್ಯಮದ ಸಂದರ್ಶನದಲ್ಲಿ ತಮ್ಮ ವೈಯಕ್ತಿಕ ಜೀವನದ ಬಗ್ಗೆ ಮಾತನಾಡಿದ್ದ ಧ್ರುವ ರವರು ನಾನು ಮದುವೆಯಾದರೆ ಪ್ರೇಮ ವಿವಾಹವೇ ಎಂಬುವಂತಹ ವಿಚಾರವನ್ನು ತಿಳಿಸಿ ಪ್ರೇಕ್ಷಕರ ಮನಸ್ಸಿಗೆ ಕುತೂಹಲ ಉಂಟು ಮೂಡಿಸಿದ್ದರು.

ಇನ್ನು ಧ್ರುವ ಸರ್ಜಾ ಅವರ ಮಾತನ್ನು ಕೇಳುತ್ತಿದ್ದಂತೆ ಅಭಿಮಾನಿಗಳ ಮನದಲ್ಲಿ ಹಲವಾರು ಪ್ರಶ್ನೆಗಳು ಹರಿದಾಡಿದ್ದು,  ಧ್ರುವ ಅವರು ವಿವಾಹವಾಗುತ್ತಿರುವ ಹುಡುಗಿ ಚಿತ್ರರಂಗಕ್ಕೆ ಸೇರಿದವರು, ಟಾಪ್ ನಟಿಯನ್ನು ವಿವಾಹವಾಗುತ್ತಿದ್ದಾರೆ   ಎಂಬಂತಹ ವಿಚಾರಗಳೆಲ್ಲಾ ದೊಡ್ಡಮಟ್ಟದಲ್ಲಿಯೇ ಸುದ್ಧಿಯಾಗಿತ್ತು. ಆದರೆ ಈ ಯಾವ ವದಂತಿಗಳಿಗೂ ಕೂಡ ಪ್ರತಿಕ್ರಿಯಿಸದ ಧ್ರುವ ಅವರು  ನಿಶ್ಚಿತಾರ್ಥ ನಿಶ್ಚಯವಾದ ಮೇಲೆಯೇ ತಾವು ಪ್ರೀತಿಸುತ್ತಿರುವ ಹುಡುಗಿಯ ಬಗ್ಗೆ ಅಧಿಕೃತವಾಗಿ

ಮಾಧ್ಯಮಗಳ ಮುಂದೆ ಹಂಚಿಕೊಂಡಿದ್ದರು. ಹೌದು ಧ್ರುವ ಸರ್ಜಾ ಅವರು ಮದುವೆಯಾಗಿರುವವರ ಹೆಸರು ಪ್ರೇರಣಾ ಶಂಕರ್ ಎಂಬುದಾಗಿದ್ದು ಮೂಲತಃ ಬೆಂಗಳೂರಿನವರೇ ಆದ ಇವರು ಶಂಕರ್ ಹಾಗೂ ಸರಿತಾ ದಂಪತಿಗಳ ಪ್ರೀತಿಯ ಮಗಳಾಗಿದ್ದಾರೆ. ಇನ್ನು ವೃತ್ತಿಯಲ್ಲಿ ಬೆಂಗಳೂರಿನ ದಯಾನಂದ ಸಾಗರ್ ಕಾಲೇಜಿನಲ್ಲಿ ಉಪನ್ಯಾಸಕಿಯಾಗಿ ಕೆಲಸ ಮಾಡುತ್ತಿದ್ದ ಇವರು ನಟ ಧ್ರುವ ಸರ್ಜಾ ಅವರಿಗೆ ಪ್ರೀತಿಯ ಪಾಠ  ಹೇಳಿಕೊಡುವ ಶಿಕ್ಷಕಿ ಕೂಡ ಆಗಿದ್ದಾರೆ.

ಇನ್ನೂ ಪ್ರೇರಣಾ ಶಂಕರ್ ರವರು ಧ್ರುವ ಸರ್ಜಾ ಅವರ ಮನೆಯ ಎದುರಲ್ಲಿಯೇ ನೆಲೆಸಿದ್ದರು ಸಾಕಷ್ಟು ವರುಷಗಳಿಂದ ಇವರಿಬ್ಬರ ಪರಿಚಯವಿದ್ದು ಬರೋಬ್ಬರಿ ಹದಿನಾಲ್ಕು ವರುಷಗಳ ಕಾಲ ಪ್ರೇಮದಲ್ಲಿ ತೇಲಾಡುತ್ತಿದ್ದರು ಎಂದೇ ಹೇಲಾಗಿತ್ತು.

ಆದರೆ ಈ ವಿಚಾರವನ್ನು ಗೌಪ್ಯವಾಗಿಯೇ ಇಟ್ಟಿದ್ದ ಧ್ರುವ ಸರ್ಜಾ ಚಿತ್ರರಂಗದಲ್ಲಿ ಏನಾದರೂ ಸಾಧನೆ ಮಾಡಲೇಬೇಕು ಹಾಗೂ ನಟನಾಗಿ ಬೆಳೆಯಬೇಕು ಎಂಬ ನಿರ್ಧಾರ ತೆಗೆದುಕೊಂಡ ನಂತರ ಈ ವಿಚಾರವನ್ನು ಮನೆಯಲ್ಲಿ ತಿಳಿಸಿ ಅದ್ದೂರಿಯಾಗಿ ವಿವಾಹವಾಗಬೇಕು ಎಂಬುವ  ಕನಸನ್ನು ಕೂಡ ಹೊಂದಿದ್ದರಂತೆ. ಇದೇ ಕಾರಣದಿಂದಾಗಿಯೇ ಅವರ ಬಗ್ಗೆ ಯಾವುದೇ ರೀತಿಯ ಪ್ರೇಮದ ವಿಚಾರಗಳು ಬಂದರೂ ಕೂಡಾ ಮಾತನಾಡದೆ ಸುಮ್ಮನಿದ್ದ ಧ್ರುವ ಸರ್ಜಾ ಗೌಪ್ಯವಾಗಿಯೇ ತಮ್ಮ ಪ್ರಿಯತಮೆ ಜೊತೆ ಡೇಟಿಂಗ್ ಮಾಡುತ್ತಿದ್ದು ಈ ವಿಚಾರಗಳು ಸಾಮಾಜಿಕ ಜಾಲತಾಣದಲ್ಲಿ ಸುದ್ದಿಯಾಗಿತ್ತು.

 

ಇನ್ನು ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಹಾಗೂ ಪ್ರೇರಣಾ ಶಂಕರ್ ಅವರಿಗೆ ಪ್ರೀತಿ ಮೊಳಕೆಯೊಡಿದ ಸಮಯದಲ್ಲಿ ಚಿತ್ರರಂಗಕ್ಕೆ ಧ್ರುವ ಇನ್ನೂ ಪದಾರ್ಪಣೆ ಮಾಡಿರಲಿಲ್ಲ. ಹೌದು ವಿಶೇಷವೇನೆಂದರೆ ಹದಿನಾರನೇ ವಯಸ್ಸಿನಲ್ಲಿಯೇ ಧ್ರುವ ಸರ್ಜಾ ಅವರಿಗೆ ಪ್ರೇರಣೆ ಅವರ ಮೇಲೆ ಪ್ರೀತಿ ಮೂಡಿದ್ದು, ಆ ಸಮಯದಲ್ಲಿ ಧ್ರುವ ಬಾಕ್ಸರ್ ಆಗುವಂತಹ ಕನಸನ್ನು ಕಂಡಿದ್ದೆಂತೆ.

ಆದರೆ ಅಣ್ಣ ಚಿರಂಜೀವಿ ಸರ್ಜಾ ಹಾಗೂ ಮಾವ ಅರ್ಜುನ್ ಸರ್ಜಾ ಇಬ್ಬರೂ ಕೂಡ ಚಿತ್ರರಂಗದಲ್ಲಿ ಖ್ಯಾತ ನಟರಾಗಿ ಮಿಂಚುತ್ತಿದ್ದುದನ್ನು ಕಂಡ ಧ್ರುವ ಅವರಿಗೆ ಅದೊಂದು ದಿನ ತಾನೂ ಕೂಡ ಕಲಾವಿದನಾಗಬೇಕು ಎಂಬ ಆಕರ್ಷಣೆ ಬಂದು ನಟನಾ ತರಬೇತಿಗೆ ಸೇರಿಕೊಂಡು ನಂತರ ಎ ಪಿ ಅರ್ಜುನ್ ನಿರ್ದೇಶನದ ಅದ್ದೂರಿ ಸಿನಿಮಾದ ಮೂಲಕ  ಅದ್ದೂರಿಯಾಗಿಯೇ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡುತ್ತಾರೆ.

ಇನ್ನು ಧ್ರುವ ಹಾಗೂ ಪ್ರೇರಣಾ ಶಂಕರ್ ರವರ ಕುಟುಂಬಗಳು ಕೂಡ ಬಹಳ ವರುಷದಿಂದ ಆತ್ಮೀಯವಾದ ಒಡನಾಟ  ಬೆಳೆಸಿಕೊಂಡು ಬಂದಿದ್ದು  ಹೀಗಾಗಿ ಅನೇಕ ಬಾರಿ ಎರಡು ಕುಟುಂಬದ ಕಾರ್ಯಕ್ರಮಗಳಿದ್ದಾಗ ಒಟ್ಟಾಗಿ ಧ್ರುವ – ಪ್ರೇರಣಾ ಭಾಗಿಯಾಗುತ್ತಿದ್ದರು. ಹೌದು ಚಿತ್ರರಂಗದಲ್ಲಿ ಅದ್ದೂರಿ ಬಹದ್ದೂರ್ ಹಾಗೂ ಭರ್ಜರಿ ಎಂಬುವಂತಹ 3 ಹಿಟ್ ಸಿನಿಮಾಗಳನ್ನು ನೀಡಿ ಚಿತ್ರರಂಗದಲ್ಲಿ ತಮ್ಮನ್ನು ತಾವು ಸ್ಥಾಪಿಸಿಕೊಂಡ ಧ್ರುವ  ತನ್ನ ಅಣ್ಣನ ಮದುವೆ ಮುಗಿಯಲಿ ಎಂದು ಕಾಯುತ್ತಿದ್ದರು.

ನಂತರ ಅಣ್ಣ ಚಿರಂಜೀವಿ ಸರ್ಜಾ ಅವರ ವಿವಾಹ ಮುಗಿಯುತ್ತಿದ್ದಂತೆಯೇ ಮನೆಯಲ್ಲಿ ತಮ್ಮ ಪ್ರೇಮದ ವಿಚಾರವನ್ನು ಪ್ರಸ್ತಾಪ ಮಾಡಿದ  ಅವರ ಪ್ರೀತಿಗೆ ಮನೆಯವರು ಸಂತಸವನ್ನು ವ್ಯಕ್ತಪಡಿಸಿದ್ದು ನಂತರ ಎರಡೂ ಕುಟುಂಬದವರು ಕೂಡ  ಮದುವೆ ಮಾಡಿದ್ದಾರೆ. ಸದ್ಯ ಇದೀಗ ವೈವಾಹಿಕ ಜೀವನದಲ್ಲಿ ನೆಮ್ಮದಿಯಾಗುತ್ತಿರುವ ಧ್ರುವ ಸರ್ಜಾ ಹಾಗೂ ಪ್ರೇರಣಾ ಶಂಕರ್ ರವರು ಸಾಮಾಜಿಕ ಜಾಲತಾಣದಲ್ಲಿ ಸೆನ್ಸೇಷನ್ ಮೂಡಿಸಿದ್ದು ಧ್ರುವ ಅವರನ್ನು ಇಷ್ಟಪಡುವ ಪ್ರತಿಯೊಬ್ಬ ಪ್ರೇಕ್ಷಕನೂ ಕೂಡ ಪ್ರೇರಣಾ  ಅವರನ್ನು ಪ್ರೀತಿಯಿಂದ ಅತ್ತಿಗೆ ಎಂದು ಕರೆಯುತ್ತಿದ್ದು  ಇವರಿಬ್ಬರ ಪ್ರೀತಿ ಹಾಗೂ  ದಾಂಪತ್ಯ ಜೀವನಕ್ಕೆ ಪ್ರೇಕ್ಷಕರು ಮನಸೋತಿದ್ದಾರೆ

. ಸದ್ಯ ಇದೀಗ ಮುದ್ದಾದ ಮಗುವಿ ಪೋಷಕರು ಕೂಡ ಆಗಿದ್ದಾರೆ. ಇನ್ನು ನಟಿ ತಾರಾ ಅವರು ಧ್ರುವ ಸರ್ಜಾ ಹಾಗೂ ಚಿರುಸರ್ಜಾ ರನ್ನು ತಮ್ಮ ಸ್ವಂತ ಮಕ್ಕಳೆಂದೆ ಎಂದುಕೊಂಡಿದ್ದಾರೆ. ಚಿರು ಅಗಲಿದಾಗ ಅವರ ದುಃಖ ಮುಗಿಲು ಮುಟ್ಟಿತ್ತು. ಸದ್ಯ ಧ್ರುವನ್ನು ಮಗನಂತೆ ಪ್ರೀತಿಸುತ್ತಿದ್ದು ಧ್ರುವ ಮದುವೆಯಲ್ಲಿ ತಾರಾ ಹೇಗೆ ತುತ್ತು ತಿನ್ನಿಸುತ್ತಿದ್ದಾರೆ ನೋಡಿ.