ವಾರ್ತಾ ಮಂಜರಿ
Trending Stories, Viral News, Gossips & Everything in Kannada

ಹಿಂದಿ ನಟನ ಬಾಯಲ್ಲಿ ಕನ್ನಡ ಹಾಡಿಸಿದ ವಿಜಯ್ ಪ್ರಕಾಶ್..ಚಿಂದಿ ವಿಡಿಯೋ

1,903

ಕನ್ನಡಿಗರ ಕಣ್ಮಣಿ ವರನಟ ಡಾ ರಾಜ್ ಕುಮಾರ್ ಅವರು ಕೇವಲ ಕನ್ನಡ ಚಿತ್ರರಂಗಕ್ಕೆ ಮಾತ್ರ ಆಸ್ತಿ ಎಂದುಕೊಂಡರೆ ಅದು ಖಂಡಿತಾ ತಪ್ಪು. ಹೌದು ಡಾ ರಾಜ್ ಕುಮಾರ್ ರವರು ಇಡೀ ಭಾರತೀಯ ಚಿತ್ರರಂಗಕ್ಕೆ ಒಂದು ರೀತಿ ಚಕ್ರವರ್ತಿ ಇದ್ದಂತೆ ಎಂಬುವ ಅದ್ಬುತವಾದ ಮಾತುಗಳನ್ನು ಬಾಲಿವುಡ್ ನ ಸ್ಟಾರ್ ನಟ ಅನಿಲ್ ಕಪೂರ್ ಹೇಳುತ್ತಾರೆ.

ಕಳೆದ ವರುಷ ಬೆಂಗಳೂರಿನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಅತಿಥಿಯಾಗಿ ಭಾಗವಹಿಸಿದ್ದ ಬಾಲುವುಡ್ ನಟ ಅನಿಲ್ ಕಪೂರ್ ರವರು ಸಿಲಿಕಾನ್ ಸಿಟಿ ಜನರಿಗೆ ಮನರಂಜನೆಯನ್ನು ಉಣಬಡಿಸಿದ್ದಾರೆ. ಹೌದು ಕನ್ನಡದ ಖ್ಯಾತ ಗಾಯಕ ವಿಜಯ್ ಪ್ರಕಾಶ್ ಅವರ ಜೊತೆಗೆ ವೇದಿಕೆ ಹಂಚಿಕೊಂಡ ಅನಿಲ್ ಕಪೂರ್ ರವರು ತಮ್ಮದೇ ಎವರ್ ಗ್ರೀನ್ ಕನ್ನಡ ಹಾಡಿಗೆ ಧ್ವನಿಗೂಡಿಸಿದ್ದು ವಿಶೇಷ.

ವರನಟ ರಾಜ್ ಎಂದರೆ ಅನಿಲ್ ಕಪೂರ್ ಅವರಿಗೆ ವಿಶೇಷವಾದ ಗೌರವ ಹಾಗೂ ಅವರ ಪಕ್ಕಾ ಅಭಿಮಾನಿ ಕೂಡ ಹೌದು.ಅವರು ಬರಿ ಡಾ ರಾಜ್ ಕುಮಾರ್ ಮಾತ್ರವಲ್ಲ. ಎಲ್ಲ ನಟರಿಗೂ ಅವರು ಚಕ್ರವರ್ತಿ ಇದ್ದಂತೆ. ಭಾರತೀಯ ಚಿತ್ರರಂಗಕ್ಕೆ ಅವರ ಕೊಡುಗೆ ಅಪಾರ. ಕೇವಲ ಕನ್ನಡ ಚಿತ್ರರಂಗಕ್ಕೆ ಮಾತ್ರ ರಾಜ್ ಕುಮಾರ್ ಕೀರ್ತಿ ತಂದುಕೊಟ್ಟಿಲ್ಲ. ಇಡೀ ದೇಶಕ್ಕೆ ಅವರು ಹೆಸರು ತಂದಿದ್ದಾರೆ.

ಅವರು ಸದಾ ನಮ್ಮೆಲ್ಲರ ಹೃದಯದಲ್ಲಿರುತ್ತಾರೆ ಎಂದು ಖಾಸಗಿ ಮಾಧ್ಯಮಕ್ಕೆ ನೀಡಿದ ಸಂದರ್ಶನದಲ್ಲಿ ಮನ ತುಂಬಿ ಹೇಳಿದ್ದರು. ಇನ್ನು ಅನಿಲ್ ಕಪೂರ್ ರವರು ಕನ್ನಡದಲ್ಲಿಯೂ ಸಹ ಒಂದು ಸಿನಿಮಾದಲ್ಲಿ ಅಭಿನಯಿಸಿದ್ದು ಮಣಿರತ್ನಂ ಚೊಚ್ಚಲ ನಿರ್ದೇಶನದ ಪಲ್ಲವಿ ಅನುಪಲ್ಲವಿ ಚಿತ್ರದಲ್ಲಿ ಅನಿಕ್ ಕಪೂರ್ ನಾಯಕನಾಗಿ ಅಭಿನಯಿಸಿದ್ದರು. ಇದು ಇವರಿಬ್ಬರು ಮೊದಲ ಕನ್ನಡ ಸಿನಿಮಾವಾಗಿದ್ದು 1983ರಲ್ಲಿ ಈ ಚಿತ್ರ ತೆರೆಕಂಡಿತ್ತು. ಇದಾದ ಬಳಿಕ ಮತ್ತೆ ಕನ್ನಡ ಸಿನಿಮಾದಲ್ಲಿ ಮತ್ತೆ ಅನಿಲ್ ಕಪೂರ್ ಕಾಣಿಸಿಕೊಳ್ಳಲಿಲ್ಲ.

ಇನ್ನು ಬೆಂಗಳೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ವಿಜಯ್ ಪ್ರಕಾಶ್ ರವರ ಬಗ್ಗೆ ಮಾತನಾಡಿದ ಅವರು
ನಾನು ವಿಜಯ್ ಪ್ರಕಾಶ್ ಅವರ ಬಹುದೊಡ್ಡ ಅಭಿಮಾನಿ. ನಾನು ನಟಿಸಿದ್ದ ಸ್ಲಂ ಡಾಗ್ ಮಿಲೇನಿಯರ್ ಚಿತ್ರದಲ್ಲಿ ಜೈ ಹೋ ಹಾಗೂ ಯುವರಾಜ ಚಿತ್ರದಲ್ಲಿ ಮನಮೋಹಿನಿ ಹಾಡುಗಳನ್ನ ಹಾಡಿದ್ದಾರೆ.

ಅವರ ಹಾಡುಗಳು ನಿಜಕ್ಕೂ ಅದ್ಭುತ. ಎಆರ್ ರೆಹಮಾನ್ ಅವರ ನೆಚ್ಚಿನ ಗಾಯಕರಲ್ಲಿ ವಿಜಯ್ ಪ್ರಕಾಶ್ ಕೂಡ ಒಬ್ಬರು ಎಂದು ಅನಿಲ್ ಕಪೂರ್ ಹೇಳಿದ್ದಾರೆ. ಇನ್ನು ಪಲ್ಲವಿ ಅನು ಪಲ್ಲವಿ ಚಿತ್ರದ ಎವರ್ಗೀನ್ ಹಾಡು ನಗುವ ನಯನ ಮಧುರ ಮೌನ ಹಾಡನ್ನ ಅನಿಲ್ ಕಪೂರ್ ಹಾಡಿದ್ದು ಬೆಂಗಳೂರು ಗಣೇಶ ಉತ್ಸವದಲ್ಲಿ ವಿಜಯ್ ಪ್ರಕಾಶ್ ಜೊತೆ ಅನಿಲ್ ಕಪೂರ್ ಧ್ವನಿ ಗೂಡಿಸಿದ್ದಾರೆ. ಈ ಅದ್ಬುತವಾದ ಕ್ಷಣ ಹೇಗಿತ್ತು ಗೊತ್ತಾ? ನೀವೆ ಕೇಳಗಿನ ವಿಡಿಯೋ ನೋಡಿ.