ವಾರ್ತಾ ಮಂಜರಿ
Trending Stories, Viral News, Gossips & Everything in Kannada

ಮಗನ ನಿಶ್ಚಿತಾರ್ಥದಲ್ಲಿ ಸುಮಲತಾ ಕಾಮಿಡಿ ನೋಡಿ…ಚಿಂದಿ ವಿಡಿಯೋ

9,860

ನಮ್ಮ ಕನ್ನಡ ಚಲನಚಿತ್ರರಂಗದ ರೆಬಲ್ ಸ್ಟಾರ್ ಅಂಬರೀಶ್ ಅವರ ಪುತ್ರ ಅಭಿಷೇಕ್ ಅಂಬರೀಶ್ ಮತ್ತು ಖ್ಯಾತ ವಸ್ತ್ರ ವಿನ್ಯಾಸಕ ಪ್ರಕಾಶ್ ಬಿದ್ದಪ್ಪ ಅವರ ಪುತ್ರಿ ಅವಿವಾ ಬಿದ್ದಪ್ಪ ಮದುವೆಯಾಗಲಿದ್ದು ಕೆಲವೇ ದಿನಗಳಲ್ಲಿ ನಿಶ್ಚಿತಾರ್ಥ ಮಾಡಿಕೊಳ್ಳಲಿದ್ದಾರೆ ಎಂಬ ಸುದ್ದಿ ಕೆಲ ದಿನಗಳಿಂದ ಸಾಮಾಜಿಕ ಜಾಲತಾಣದಲ್ಲಿ ಜೋರಾಗಿ ಹರಿದಾಡುತ್ತಿತ್ತು.

ಸದ್ಯ ಡಿಸೆಂಬರ್ 11 ರಂದು ಅಭಿ‍ಷೇಕ್ ಅಂಬರೀಶ್ ಹಾಗೂ ಅವಿವಾ ಬಿದ್ದಪ್ಪ ನಿಶ್ಚಿತಾರ್ಥ ನಡೆಯಲಿದೆ ಎಂಬ ಸುದ್ದಿ ವೈರಲ್ ಆಗಿತ್ತಾದರೂ ಈ ವಿಷಯವನ್ನು ಮಾಧ್ಯಮಗಳಿಂದ ಮುಚ್ಚಿಡಲಾಗಿತ್ತು. ಹೌದು ಹೀಗೆ ಗಾಸಿಪ್ ಎಂದೇ ಹರಿದಾಡಿದ್ದ ಈ ಸುದ್ದಿ ಈಗ ನಿಜವಾಗಿ ಬಿಟ್ಟಿದ್ದು ಬೆಂಗಳೂರಿನ ಐಷಾರಾಮಿ ಹೊಟೇಲ್ ಫೋರ್ ಸೀಸನ್ಸ್‌ನಲ್ಲಿ ಅಭಿಷೇಕ್ ಅಂಬರೀಶ್ ಮತ್ತು ಅವಿವಾ ಬಿದ್ದಪ್ಪ ನಿಶ್ವಿತಾರ್ಥ ಕಾರ್ಯಕ್ರಮ ಜರುಗಿದೆ.

ಇನ್ನು ನಿಶ್ಚಿತಾರ್ಥ ಕಾರ್ಯಕ್ರಮಕ್ಕೆ ಕೇವಲ ಆಪ್ತರಿಗಷ್ಟೇ ಆಮಂತ್ರಣವನ್ನು ನೀಡಲಾಗಿದ್ದು ಚಿತ್ರರಂಗದ ಕೆಲ ನಟ – ನಟಿಯರು ನಿರ್ಮಾಪಕ ನಿರ್ದೇಶಕರು ಹಾಗೂ ತಂತ್ರಜ್ಞರು ಭಾಗಿಯಾಗಿದ್ದು ಸಚಿವ ಅಶ್ವತ್ಥ್ ನಾರಾಯಣ್ ಕೂಡ ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾರೆ.

ಹೌದು ಅತ್ತ ಫ್ಯಾಷನ್ ಡಿಸೈನರ್ ಆಗಿರುವ ಅವಿವಾ ಬಿಡ್ಡಪ್ಪ ಅವರ ಕುಟುಂಬಸ್ಥರೂ ಸಹ ಆಪ್ತರನ್ನಷ್ಟೇ ನಿಶ್ಚಿತಾರ್ಥ ಕಾರ್ಯಕ್ರಮಕ್ಕೆ ಆಹ್ವಾನಿಸಿದ್ದು ಅಭಿಷೇಕ್ ಅಂಬರೀಶ್ ಅಭಿನಯಿಸಲಿರುವ ಇನ್ನೂ ಹೆಸರಿಡದ ಮುಂದಿನ ಚಿತ್ರವೊಂದಕ್ಕೆ ಸದ್ಯ ಆಕ್ಷನ್ ಕಟ್ ಹೇಳಿರುವ ನಿರ್ದೇಶಕ ಅಯೋಗ್ಯ ಮಹೇಶ್ ಕೂಡ ಈ ನಿಶ್ಚಿತಾರ್ಥ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.

ಅಭಿಷೇಕ್ ಅಂಬರೀಶ್ ಹಾಗೂ ಅವಿವಾ ಬಿದ್ದಪ್ಪ ಜೋಡಿ ಜತೆಗಿನ ತಮ್ಮ ಫೋಟೊವನ್ನು ಹಂಚಿಕೊಂಡು ನಿಶ್ಚಿತಾರ್ಥದ ಶುಭಾಶಯ ಕೋರಿದ್ದು ಹೀಗೆ ಅಯೋಗ್ಯ ಮಹೇಶ್ ಹಂಚಿಕೊಂಡ ಈ ಒಂದು ಪೋಟೊದಿಂದ ಅಭಿಷೇಕ್ ಅಂಬರೀಶ್ ಮತ್ತು ಅವಿವಾ ಬಿದ್ದಪ್ಪ ನಿಶ್ಚಿತಾರ್ಥ ಮಾಡಿಕೊಂಡಿರುವುದು ಖಾತರಿಯಾಗಿದೆ.

ಇನ್ನು ಅಭಿಷೇಕ್ ಅಂಬರೀಶ್ ಮತ್ತು ಅವಿವಾ ಬಿದ್ದಪ್ಪ ಪರಸ್ಪರ ಉಂಗುರ ತೊಡಿಸಿದ ಸಂದರ್ಭದಲ್ಲಿ ನೆರೆದಿದ್ದ ಎರಡೂ ಕುಟುಂಬಗಳ ಸದಸ್ಯರು ಮತ್ತು ಬಂಧುಗಳು ಚಪ್ಪಾಳೆ ತಟ್ಟುವುದರ ಮೂಲಕ ಸಂಭ್ರಮಿಸಿದ್ದು ಶುಭ ಕೋರಿದ್ದಾರೆ. ಕಳೆದ ನಾಲ್ಕೈದು ವರ್ಷಗಳಿಂದ ಪ್ರೀತಿಸುತ್ತಿದ್ದ ಅಭಿಷೇಕ್ ಹಾಗೂ ಅವಿವಾ ಬಿದ್ದಪ್ಪ ನಗು ನಗುತ್ತಾ ಉಂಗುರ ಬದಲಿಸಿಕೊಂಡು ಫೋಟೊಗೆ ಪೋಸ್ ನೀಡಿದ್ದಾರೆ.

ಇನ್ನು ಅನೇಕ ಅಂಬರೀಶ್ ಸುಮಲತಾ ಅಂಬರೀಶ್ ಮತ್ತು ಅಭಿಷೇಕ್ ಅಂಬರೀಶ್ ಅಭಿಮಾನಿಗಳ ಪಾಲಿಗೆ ಈ ಸುದ್ದಿ ಸರ್‌ಪ್ರೈಸ್ ಎನಿಸಿದರೆ ತಪ್ಪಾಗಲಾರದು. ಹೌದು ಇದಕ್ಕೆ ಕಾರಣ ಈ ಬಗ್ಗೆ ಅಂಬರೀಶ್ ಕುಟುಂಬಸ್ಥರು ಒಂದೇ ಒಂದು ಬಾರಿ ಕೂಡ ಮಾಹಿತಿಯನ್ನು ಹೊರಗೆ ಬಿಟ್ಟುಕೊಡದೇ ಇದ್ದದ್ದು.

ಕಳೆದ ಕೆಲ ದಿನಗಳ ಹಿಂದಷ್ಟೇ ಅಭಿಷೇಕ್ ಅಂಬರೀಶ್ ರವರು ನಿಶ್ಚಿತಾರ್ಥದ ವಿಚಾರ ಕೇಳಿದಾಗಲೂ ಸುಮಲತಾ ನೀವೇ ಹುಡುಗಿಯನ್ನು ಹುಡುಕಿ ಎಂದು ಉತ್ತರ ನೀಡುವ ಮೂಲಕ ನಿಶ್ಚಿತಾರ್ಥದ ಯೋಜನೆ ಸದ್ಯಕ್ಕಿಲ್ಲ ಎನ್ನುವಂತೆ ಮಾತನಾಡಿದ್ದರು. ಆದರೆ ಮಾತ್ರ ಇದೀಗ ನಿಶ್ಚಿತಾರ್ಥ ಮಾಡಿ ಮುಗಿಸಿ ಸರ್‌ಪ್ರೈಸ್ ನೀಡಿದ್ದಾರೆ. ಕೆಳಗಿನ ವಿಡಿಯೋದಲ್ಲಿ ಜೋಡಿಗಳು ಉಂಗುರ ಬಂದಲಿಸಿಕೊಂಡ ಕ್ಷಣ ನೋಡಬಹುದು.