ವಾರ್ತಾ ಮಂಜರಿ
Trending Stories, Viral News, Gossips & Everything in Kannada

ಅಭಿಷೇಕ್ ಹಾಗು ಅವಿವಾ ನಡುವಿನ ವಯಸ್ಸಿನ ಅಂತರ ಇಷ್ಟೊಂದಾ..ನೋಡಿ ಸತ್ಯ

43,558

ಸದ್ಯ ರೆಬೆಲ್ ಸ್ಟಾರ್‌ ಅಂಬರೀಷ್ ಮತ್ತು ಸುಮಲತಾ ದಂಪತಿಯ ಪುತ್ರ ಅಭಿಷೇಕ್ ಅಂಬರೀಷ್ ರವರ ಮದುವೆ ನಿಶ್ಚಿತಾರ್ಥವು ಅವಿವಾ ಬಿದ್ದಪ್ಪ ಅವರೊಂದಿಗೆ ಭಾನುವಾರವಷ್ಟೆ ಬೆಂಗಳೂರಿನ ಖಾಸಗಿ ಹೋಟೆಲ್‌ನಲ್ಲಿ ಅದ್ದೂರಿಯಾಗಿ ನಡೆದಿದೆ. ಹೌದು ಫ್ಯಾಷನ್ ಗುರು ಪ್ರಸಾದ್ ಬಿದ್ದಪ್ಪ ಅವರ ಪುತ್ರಿಯಾಗಿರುವ ಅವಿವಾ ರವರು ಫ್ಯಾಷನ್ ಡಿಸೈನರ್ ಮಾಡೆಲ್‌ ಆಗಿ ಗುರುತಿಸಿಕೊಂಡಿದ್ದಾರೆ. ಇನ್ನು ಭಾನುವಾರ ನಡೆದ ಅಭಿಷೇಕ್ ಹಾಗೂ ಅವಿವಾ ನಿಶ್ಚಿತಾರ್ಥದಲ್ಲಿ ಎರಡು ಕುಟುಂಬಗಳ ಆಪ್ತರು ಹಾಗೂ ಸ್ನೇಹಿತರು ಮಾತ್ರ ಭಾಗಿಯಾಗಿದ್ದರು.

ಇನ್ನು ಅಭಿಷೇಕ್ ಅಂಬರೀಷ್ ಅವರ ಮದುವೆ ಬಗ್ಗೆ ಕೆಲ ದಿನಗಳಿಂದ ಕೂಡ ಸಾಕಷ್ಟು ಸುದ್ದಿ ಹರಿದಾಡುತ್ತಿದ್ದವು. ಹೌದು ಆದರೆ ಈ ಬಗ್ಗೆ ಅಂಬಿ ಫ್ಯಾಮಿಲಿ ಏನೊಂದು ಮಾಹಿತಿಯನ್ನೂ ಕೂಡ ಹಂಚಿಕೊಂಡಿರಲಿಲ್ಲ. ಅಭಿಷೇಕ್ ಅವರಿಗೆ ಈ ಬಗ್ಗೆ ಕೇಳಿದರೆ ಪ್ರತಿ ಸಲ ನನ್ನ ಮದುವೆ ನಿಶ್ಚಿತಾರ್ಥ ಆಗಲಿದೆ ಎಂಬ ನ್ಯೂಸ್ ಕೇಳುತ್ತಿರುತ್ತೇನೆ.

ನಾನು ನಿತ್ಯ ಕನಕಪುರಕ್ಕೆ ಶೂಟಿಂಗ್‌ಗೆ ಹೋಗುತ್ತಿದ್ದು ಇದರ ಮಧ್ಯೆ ಯಾವಾಗ ಹುಡುಗಿ ನೋಡಿದೆ ಯಾವಾಗ ನಿಶ್ಚಿತಾರ್ಥ ಮಾಡಿಕೊಂಡೆ ಎಂದು ಗೊತ್ತಿಲ್ಲ. ಪದೇ ಪದೇ ನಿಶ್ಚಿತಾರ್ಥದ ಬಗ್ಗೆ ಮಾತನಾಡ್ತಿದರೆ ಮುಂದೆ ನನಗೆ ಯಾರೂ ಹುಡುಗಿ ಕೊಡಲ್ಲ ಎಂದು 10 ದಿನಗಳ ಹಿಂದಷ್ಟೇ ಹೇಳಿದ್ದರು. ಸದ್ಯ ಇದೀಗ ಅದ್ದೂರಿಯಾಗಿ ಅವಿವಾ ಜೊತೆಗೆ ಎಂಗೇಜ್ ಆಗಿದ್ದಾರೆ. ಇನ್ನು ಇವರಿಬ್ಬರ ನಡುವಿನ ವಯ್ಯಸ್ಸಿನ ಅಂತರ ಎಷ್ಟು ಗೊತ್ತಾ?

ನಟ ಅಂಬರೀಶ್ ಮತ್ತು ಸುಮಲತಾ ಅವರ ಪುತ್ರ ಅಭಿಷೇಕ್ ಇಂದು ಅವಿವಾ ಬಿದ್ದಪ್ಪ ಅವರೊಂದಿಗೆ ಎಂಗೇಜ್‌ ಆಗಿದ್ದಾರೆ. 5 ವರ್ಷಗಳ ತಮ್ಮ ಪ್ರೀತಿಗೆ ಇಂದು ಉಂಗುರದ ಮುದ್ರೆ ಒತ್ತಿದ್ದಾರೆ. ಅಭಿ 2019ಕ್ಕೆ ಅಮರ್ ಸಿನಿಮಾ ಮೂಲಕ ಸ್ಯಾಂಡಲ್‌ವುಡ್‌ಗೆ ಭರವಸೆಯ ನಟನಾಗಿ ಎಂಟ್ರಿ ಕೊಟ್ಟಿದ್ದು ಈ ಚಿತ್ರದ ಮುಂಚೆಯೇ ಅವಿವಾ ಮತ್ತು ಅಭಿಷೇಕ್ ಗೆಳೆತನವಿತ್ತು. ಆ ಗೆಳೆತನ ಪ್ರೀತಿಗೆ ತಿರುಗಿ ಇದೀಗ ಗುರುಹಿರಿಯರ ಸಮ್ಮುಖದಲ್ಲಿ ಎಂಗೇಜ್‌ಮೆಂಟ್ ಮಾಡಿಕೊಂಡಿದ್ದಾರೆ. 5 ವರ್ಷಗಳ ಪ್ರೀತಿಗೆ ಇಂದು ಉಂಗುರ ತೊಡಿಸುವ ಮೂಲಕ ಅಧಿಕೃತ ಮುದ್ರೆ ಒತ್ತಿದ್ದಾರೆ. ತಮ್ಮ ಪ್ರೀತಿಯ ವಿಚಾರವನ್ನ ಎರಡು ಕುಟುಂಬಕ್ಕೂ ತಿಳಿಸಿ ಒಪ್ಪಿಗೆ ಮೇರೆಗೆ ಇಂದು ಈ ಜೋಡಿ ಎಂಗೇಜ್ ಆಗಿದ್ದಾರೆ. ಇನ್ನು ವಿಶೇಷ ಅಂದರೆ ಅಭಿಗಿಂತ ಅವಿವಾ ಮೂರು ವರುಷ ದೊಡ್ಡವರಾಗಿದ್ದು ಪ್ರೀತಿಗೆ ವಯ್ಯಸ್ಸಿನ ಮಿತಿಯಿಲ್ಲ ಎಂಬುದು ಸಾಭೀತಾಗಿದೆ.

ಸದ್ಯ ಸ್ಯಾಂಡಲ್‌ವುಡ್‌ನಲ್ಲಿ ಮದುವೆ ಸಂಭ್ರಮ ಮನೆ ಮಾಡಿದ್ದು ಕೆಲ ತಿಂಗಳ ಹಿಂದೆ ನಟ ಮನೋರಂಜನ್ ರವಿಚಂದ್ರನ್ ರವರ ಮದುವೆ ಆಗಿದ್ದರು. ಈಚೆಗೆ ನಟಿ ಅದಿತಿ ಪ್ರಭುದೇವ ಅವರ ಮದುವೆ ಕೂಡ ಆಗಿದ್ದು ಕೆಲ ದಿನಗಳ ಹಿಂದೆ ಸದ್ದಿಲ್ಲದೇ ನಟ ವಸಿಷ್ಠ ಸಿಂಹ ಮತ್ತು ಹರಿಪ್ರಿಯಾ ಅವರು ಎಂಗೇಜ್‌ಮೆಂಟ್ ಕೂಡ ಮಾಡಿಕೊಂಡಿದ್ದರು. ಈಗ ನಟ ಅಭಿಷೇಕ್ ಅವರ ಎಂಗೇಜ್‌ಮೆಂಟ್ ನಡೆದಿದೆ. ಅಭಿಷೇಕ್ ಮತ್ತು ಅವಿವಾ ಅವರ ಮದುವೆ ಯಾವಾಗ ಅನ್ನೋದು ಸದ್ಯಕ್ಕೆ ಬಹಿರಂಗವಾಗಿಲ್ಲ. ಹೌದು ಬಹುಶಃ 2023ರ ಆರಂಭದಲ್ಲಿ ನಡೆಯುವ ಸಾಧ್ಯತೆ ಇದೆ. ಈ ಬಗ್ಗೆ ಅಧಿಕೃತ ಮಾಹಿತಿ ಹೊರಬೀಳಬೇಕಿದೆ.

ಇನ್ನು ಅಮರ್‌’ ಸಿನಿಮಾದ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟ ಅಭಿಷೇಕ್ ಆನಂತರ ಈಗ ಬ್ಯಾಡ್ ಮ್ಯಾನರ್ಸ್ ಸಿನಿಮಾವನ್ನು ಮುಗಿಸಿದ್ದಾರೆ. ಇದಕ್ಕೆ ದುನಿಯಾ ಸೂರಿ ಅವರು ನಿರ್ದೇಶನ ಮಾಡುತ್ತಿದ್ದು ಹೆಬ್ಬುಲಿ ಕೃಷ್ಣ ನಿರ್ದೇಶನದ ಕಾಳಿ ಸಿನಿಮಾದಲ್ಲೂ ಅಭಿಷೇಕ್ ನಟಿಸುತ್ತಿದ್ದು ಈಚೆಗಷ್ಟೇ ಆ ಸಿನಿಮಾಗೆ ಮುಹೂರ್ತ ಕೂಡ ನೆರವೇರಿದೆ.

ಅಯೋಗ್ಯ ಖ್ಯಾತಿಯ ಮಹೇಶ್ ನಿರ್ದೆಶನ ಮಾಡಲಿರುವ ಹೊಸ ಸಿನಿಮಾದಲ್ಲೂ ಕೂಡ ಅಭಿಷೇಕ್ ಬಣ್ಣ ಹಚ್ಚಲಿದ್ದು ಮುಂದಿನ ವರ್ಷ ಶೂಟಿಂಗ್ ಆರಂಭವಾಗಲಿದೆ. ಎಲ್ಲ ಅಂದುಕೊಂಡಂತೆ ಆದರೆ 2023ರಲ್ಲಿ ಅಭಿಷೇಕ್ ಅವರ ಮೂರು ಸಿನಿಮಾಗಳು ತೆರೆಕಂಡರೆ ಅಚ್ಚರಿ ಇಲ್ಲ.ಅಭಿಷೇಕ್ ಅವರು ರಾಜಕೀಯಕ್ಕೂ ಎಂಟ್ರಿ ನೀಡಲಿದ್ದಾರೆ ಎಂಬ ಮಾತು ಕೂಡ ಹಲವು ದಿನಗಳಿಂದ ಕೇಳಿಬರುತ್ತಲೇ ಇದೆ.