ಸದ್ಯ ಇದೀಗ ಕನ್ನಡ ಕಿರುತೆರೆ ಲೋಕದ ಸಾಲು ಸಾಲು ಖ್ಯಾತ ಧಾರಾವಾಹಿಗಳು Serials ಅಂತ್ಯವಾಗುತ್ತಿದ್ದು ಹೀಗಂತ ಸೋಶಿಯಲ್ ಮೀಡಿಯಾದಲ್ಲಿ ಹಲವರು ಹೇಳುತ್ತಿದ್ದಾರೆ. ನನ್ನರಸಿ ರಾಧೆ ನಮ್ಮನೆ ಯುವರಾಣಿ ಮಂಗಳಗೌರಿ ಮದುವೆ ಕನ್ಯಾಕುಮಾರಿ ಕಮಲಿ ಯಂತಹ ಧಾರಾವಾಹಿಗಳು ಇದೀಗ ಅಂತ್ಯವಾಗಲಿವೆ ಎಂಬ ಮಾತು ಜೋರಾಗಿ ಕೇಳಿಬರುತ್ತಿದೆ. ಈ ಬಗ್ಗೆ ವಾಹಿನಿಯಾಗಲೀ ಅಥವಾ ಧಾರಾವಾಹಿ ತಂಡವಾಗಲೀ ಅಧಿಕೃತ ಮಾಹಿತಿ ನೀಡಿಲ್ಲ. ಇನ್ನು ಕಿರುತೆರೆಯ ಖ್ಯಾತ ರಿಯಾಲಿಟಿ ಶೋ ಬಿಗ್ ಬಾಸ್ ಕನ್ನಡ ಸೀಸನ್ 9 ಶುರುವಾಗಿರುವ ಕಾರಣ ಸ್ವಲ್ಪ ಕಡಿಮೆ ಟಿಆರ್ಪಿ ಇರುವ ಧಾರಾವಾಹಿಗಳು ಅಂತ್ಯವಾಗುತ್ತಲಿವೆ ಎನ್ನಲಾಗುತ್ತಿದೆ.
ಅಂದಿನ ಪುಟ್ಟಗೌರಿ ಮದುವೆಯೇ ಸದ್ಯ ಈಗ ಮಂಗಳಗೌರಿ ಮದುವೆಯಾಗಿ ಪ್ರಸಾರವಾಗುತ್ತ ದಶಕಗಳಾಗಿದ್ದು ಸದ್ಯ ಈಗ ಈ ಧಾರಾವಾಹಿಯನ್ನು ಮುಗಿಸಬೇಕು ಎಂದು ನಿರ್ದೇಶಕ ಹಾಗೂ ನಿರ್ಮಾಪಕ ಕೆ ಎಸ್ ರಾಮ್ಜೀ ರವರು ಅಭಿಪ್ರಾಯಪಟ್ಟಿದ್ದಾರಂತೆ. ಈ ಹಿಂದೆಯೂ ಕೂಡ ಈ ಧಾರಾವಾಹಿ ಮುಗಿಸಲಾಗುವುದು ಎಂದು ಸಾಕಷ್ಟು ಚರ್ಚೆಗಳಾಗಿದ್ದು ಆದರೆ ಅವು ಯಾವುದೂ ನಿಜವಾಗಲಿಲ್ಲ. ಸದ್ಯ ಈಗ ಈ ಧಾರಾವಾಹಿ ಮುಗಿಯುತ್ತಲಿದೆ ಎಂದು ಹೇಳಲಾಗುತ್ತಿದೆ. ಹೌದು ಕಾವ್ಯಶ್ರೀ ಗೌಡ ಐಶ್ವರ್ಯಾ ಸಿಂಧೋಗಿ ಪೃಥ್ವಿ ನಂದನ್ ಯಶಸ್ವಿನಿ ತನೀಶಾ ಕುಪ್ಪಂದ ಸುಷ್ಮಿತಾ ಮಾನಸಾ ಜೋಶಿ ಮುಂತಾದವರು ಈ ಧಾರಾವಾಹಿಯಲ್ಲಿ ಬಣ್ಣ ಹಚ್ಚಿದ್ದರು. ಇನ್ನು ಈ ಧಾರಾವಾಹಿ ಈಗಲೂ ಕೂಡ ಹೆಚ್ಚು ರೇಟಿಂಗ್ ಪಡೆದುಕೊಳ್ಳುತ್ತಿದ್ದು ಟಾಪ್ ಐದು ಧಾರಾವಾಹಿಗಳಲ್ಲಿ ಒಂದಾಗಿರುವುದು ವಿಶೇಷ.
ಅದರಲ್ಲೂ ಕೂಡ ಎಷ್ಟೇ ಹೊಸ ಧಾರಾವಾಹಿಗಳು ಬಂದರೂ ಸಹ ಕನ್ನಡ ಕಿರುತೆರೆಯ ಟಾಪ್ ಐದು ಧಾರಾವಾಹಿಯಲ್ಲಿ ಇದು ಒಂದಾಗಿತ್ತು. ಅಷ್ಟು ಲಾಯಲ್ ಅಭಿಮಾನಿಗಳು ಈ ಧಾರಾವಾಹಿಗಿರೋದು ಸತ್ಯ. ವಾಹಿನಿಯ ಅನುಬಂಧ ಅವಾರ್ಡ್ಸ್ ಕಾರ್ಯಕ್ರಮದಲ್ಲಿ ಈ ತಂಡ ಭಾವುಕರಾಗಿದ್ದು ರಂಜನಿ ರಾಘವನ್ ಹಾಗೂ ಮಂಗಳ ಗೌರಿ ನಟಿ ಕಣ್ಣೀರಾಕಿ ನಮಗೆ ಬದುಕು ಕೊಟ್ಟ ಧಾರಾವಾಹಿ ಇದು ಎಂದರು. ಸದ್ಯ ಈ ಧಾರಾವಾಹಿ ಸಂಪೂರ್ಣವಾಗಿ ಅಂತ್ಯವಾಗಿದೆ.
ಇನ್ನು ಈ ಧಾರಾವಾಹಿಯ ಜೊತೆಗೆ ಜೀ ಕನ್ನಡದಲ್ಲಿಯೂ ಖ್ಯಾತ ಧಾರಾವಾಹಿಯೊಂದು ಮುಕ್ತಾಯಗೊಳ್ಳುತ್ತಿದ್ದು ಜೀ ಕನ್ನಡದ ಟಾಪ್ ಧಾರಾವಾಹಿಗಳಲ್ಲಿ ಒಂದಾಗಿರುವ ಕಮಲಿ ಧಾರಾವಾಹಿಯೂ ಕೂಡ ಮುಕ್ತಾಯವಾಗುತ್ತಿದ್ದು ತನ್ನ 1100 ಸಂಚಿಕೆಗಳನ್ನು ಇಂದಿಗೆ ಕೊನೆಯಾಗಿಸುತ್ತಿದೆ. ಹೌದು ಕಮಲಿ ಧಾರಾವಾಹಿಯೂ ಸಹ ವರ್ಷಗಳ ಹಿಂದೆ ಕಿರುತೆರೆಯ ಸೆನ್ಸೇಷನ್ ಎನಿಸಿಕೊಂಡಿದ್ದು ಕಮಲಿ ಮತ್ತು ರಿಷಿ ಜೋಡಿಯನ್ನು ಜನರು ಇಷ್ಟ ಪಟ್ಟಿದ್ದರು.
ಇದೀಗ ಆ ಧಾರಾವಾಹಿಯೂ ಮುಕ್ತಾಯವಾಗಿದ್ದು ಅದಾಗಲೇ ಅತ್ತ ಕಮಲಿ ಧಾರಾವಾಹಿಯ ನಟಿ ಅಮೂಲ್ಯ ಗೌಡ ಬಿಗ್ ಬಾಸ್ ಮನೆಯನ್ನೂ ಸೇರಿದ್ದಾಗಿದೆ. ಒಟ್ಟಿನಲ್ಲಿ ನಮ್ಮ ಬಾಲ್ಯವನ್ನು ರಂಜಿಸಿದ ಎರಡು ಧಾರಾವಾಹಿಗಳು ಇದೀಗ ಮುಕ್ತಾಯವಾಗಿದ್ದು ಹೊಸತನದ ಮೂಲಕ ಹೊಸ ಧಾರಾವಾಹಿಗಳನ್ನು ವಾಹಿನಿಗಳು ತರುವ ಪ್ರಯತ್ನ ನಡೆಸಿದೆ ಎನ್ನಬಹುದು. ಈ ಧಾರಾವಾಹಿಗಳ ಜೊತೆಗೆ ನನ್ನರಸಿ ರಾಧೆ ನಮ್ಮನೆ ಯುವರಾಣಿ ಕನ್ಯಾಕುಮಾರಿ ಧಾರಾವಾಹಿಗಳು ಕೂಡ ಅಂತ್ಯವಾಗಲಿವೆ.