ಸ್ಯಾಂಡಲ್ ವುಡ್ ನ ಹೆಮ್ಮಯ ನಿರ್ದೇಶಕರಾದಂತಹ ಸುಕ್ಕ ಸೂರಿ ಅವರ ಸೂಪರ್ ಡೂಪರ್ ಹಿಟ್ ಸಿನಿಮಾ ದುನಿಯಾ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ನಟ ಎಂದರೆ ಲೂಸ್ ಮಾದ ಯೋಗೇಶ್ ರವರು. ಹೌದು ಈ ಸಿನಿಮಾದಲ್ಲಿ ನಿರ್ವಹಿಸಿದ ಪಾತ್ರದ ಹೆಸರಿನಿಂದಲೇ ಯೋಗೇಶ್ Loose Mada Yog ರವರು ಹೆಚ್ಚು ಖ್ಯಾತಿಯಾಗಿದ್ದು ದುನಿಯಾ ಸಿನಿಮಾ ಬಳಿಕ ನಾಯಕನರಾದ ಯೋಗೇಶ್ ರವರು ಕನ್ನಡದಲ್ಲಿ ಹಲವಾರು ಸಿನಿಮಾಗಳಲ್ಲಿ ಅಭಿನಯಿಸಿ ತಮ್ಮದೇ ಆದ ಛಾಪನ್ನು ಮೂಡಿಸಿದ್ದಾರೆ ಹಾಗೂ ಕಿರುತೆರೆಯಲ್ಲೂ ಕೂಡ ಕೆಲವು ಕಾರ್ಯಕ್ರಮಗಳನ್ನು ನಿರೂಪಣೆ ಮಾಡಿರುವ ಅವರು ತಮ್ಮದೇ ಆದ ಪ್ರತ್ಯೇಕ ಅಭಿಮಾನಿ ಬಳಗ ಕೂಡ ಹೊಂದಿದ್ದಾರೆ.
ಇನ್ನು ಲೂಸ್ ಮಾದ ಯೋಗೇಶ್ ಹಾಗೂ ಪತ್ನಿ ಸಾಹಿತ್ಯ ಅರಸ್ ಇಬ್ಬರೂ ಕೂಡ ಪರಸ್ಪರ ಪ್ರೀತಿಸಿ ಮನೆಯವರ ಒಪ್ಪಿಗೆ ಪಡೆದು ವಿವಾಹವಾಗಿದ್ದು ಈ ದಂಪತಿಗೆ ಮುದ್ದಾದ ಹೆಣ್ಣು ಮಗುವಿದೆ. ಇವರ ಮಗಳ ಹೆಸರು ಶ್ರೀನಿಕ ಎಂಬುದಾಗಿದ್ದು Loose Mada Yogi ಹಾಗೂ ಅವರ ಪತ್ನಿ ಸಾಹಿತ್ಯ ಇಬ್ಬರೂ ಕೂಡ ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಮಗುವಿನ ಫೋಟೋ ಹಾಗೂ ವಿಡಿಯೋ ಗಳನ್ನು ಹಂಚಿಕೊಳ್ಳುತ್ತಿರುತ್ತಾರೆ. ಸದ್ಯ Loose Mada Yogi ಯನ್ನ ಬಿಟ್ಟು ಸಾಹಿತ್ಯ ತವರು ಮನೆಗೆ ಹೋಗಿದ್ದು ಕಾರಣವೇನು ಗೊತ್ತಾ.
ಕಾಂತಾರ ಸಿನಿಮಾದ ಕೆಲಸದಲ್ಲಿ ಬ್ಯುಸಿಯಾಗಿದ್ದ ನಟ ನಿರ್ದೇಶಕ ರಿಷಭ್ ಶೆಟ್ಟಿ ಯವರು ಕಳೆದ ಆರು ತಿಂಗಳಿಂದ ಮೂರು ಬಾರಿಯಷ್ಟೇ ಮನೆಗೆ ಹೋಗಲು ಸಾಧ್ಯವಾಗಿತ್ತಂತೆ. ಈ ವಿಚಾರವನ್ನು ರಿಷಬ್ ಪತ್ನಿ ಹೇಳಿಕೊಂಡು ಬೇಸರವನ್ನ ವ್ಯಕ್ತಪಡಿಸಿದ್ದರು. ಸದ್ಯ ಈಗ ಲೂಸ್ ಮಾದ Loose Mada Yogi ಅವರ ಪತ್ನಿ ಸಾಹಿತ್ಯ ಅವರೂ ಕೂಡ ಇದೇ ವಿಚಾರವಾಗಿ Loose Mada Yogi ಅವರನ್ನು ಬಿಟ್ಟು ಹೋಗಿದ್ದರು ಎನ್ನಲಾಗಿದ್ದು ವಿಚಾರವನ್ನು ಖುದ್ದು Loose Mada Yogi ಯವರೇ ಹೇಳಿಕೊಂಡಿದ್ದಾರೆ.
ಸದ್ಯ ಕನ್ನಡ ಚಿತ್ರರಂಗದಲ್ಲಿ ಮಿಂಚುತ್ತಿರುವ ಸ್ಟಾರ್ ನಟರುಗಳ ಪೈಕಿ ಡಾಲಿ ಧನಂಜಯ್ ಅವರೂ ಕೂಡ ಒಬ್ಬರಾಗಿದ್ದು ಸಾಲು ಸಾಲು ಹಿಟ್ ಸಿನಿಮಾಗಳನ್ನು ನೀಡುತ್ತಾ ಅಭಿನಯದ ಜೊತೆಗೆ ನಿರ್ಮಾಪಕನಾಗಿಯೂ ಕೂಡ ಕಾಣಿಸಿಕೊಂಡಿರುವ ಧನಂಜಯ್ ಅವರು ಜಯರಾಜ್ ಅವರ ಜೀವನಾಧಾರಿತ ಕತೆಯ ಸಿನಿಮಾ ಹೆಡ್ ಅಂಡ್ ಬುಷ್ ಸಿನಿಮಾದಲ್ಲಿ ಬ್ಯುಸಿ ಆಗಿದ್ದಾರೆ.
ಚಿತ್ರದಲ್ಲಿ ನಿರ್ಮಾಪಕರೂ ಕೂಡ ಧನಂಜಯ್ ಅವರೇ ಆಗಿದ್ದು ಸಿನಿಮಾದಲ್ಲಿ ತಮ್ಮ ಸಾಕಷ್ಟು ಸ್ನೇಹಿತರಿಗೆ ಅವಕಾಶವನ್ನ ಕೂಡ ನೀಡಿದ್ದಾರೆ. ಅದೇ ರೀತಿಯಾಗಿ ಧನಂಜಯ್ ಅವರ ಆತ್ಮೀಯ ಗೆಳೆಯ ನಟ Loose Mada Yogi ಅವರೂ ಕೂಡ ಹೆಡ್ ಅಂಡ್ ಬುಷ್ ಸಿನಿಮಾದಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದು ಪಾತ್ರಕ್ಕಾಗಿ ಸಾಕಷ್ಟು ತಯಾರಿಯನ್ನು ಕೂಡ ನಡೆಸಿ ಅಭಿನಯಿಸಿದ್ದು ಸಿನಿಮಾ ಬಿಡುಗಡೆಗೆ ಸಜ್ಜಾಗುತ್ತಿದೆ. ಸಿನಿಮಾದ ಪ್ರಚಾರದ ಸಲುವಾಗಿ Loose Mada Yogi ಯವರನ್ನು ಖುದ್ದು ಧನಂಜಯ್ ಅವರೇ ಸಂದರ್ಶನ ಮಾಡಿದ್ದು ಈ ವೇಳೆ ತಮ್ಮ ಪತ್ನಿ ತಮ್ಮನ್ನು ಬಿಟ್ಟು ಹೋದ ವಿಚಾರವನ್ನು Loose Mada Yogi ಅವರು ಹೇಳಿಕೊಂಡಿದ್ದಾರೆ.
ಹೌದು ತಮಾಷೆಯಾಗಿಯೇ ಮಾತು ಪ್ರಾರಂಭ ಮಾಡಿದ Loose Mada Yogi ಸಿನಿಮಾ ಅಂತ ಬಂದರೆ ಇವನು ಎರಡು ಮೂರು ದಿನ ಸೆಟ್ ನಲ್ಲೇ ಉಳಿಸಿಕೊಳ್ಳುತ್ತಿದ್ದ. ಹೌದು ಆಕಡೆ ನನ್ನ ಹೆಂಡತಿ ಎರಡು ದಿನ ಆದರೂ ಕೂಡ ಮನೆಗೆ ಬರುತ್ತಿರಲಿಲ್ಲ. ನೀವು ನಿಜವಾಗ್ಲೂ ಚಿತ್ರೀಕರಣಕ್ಕೆ ಹೋಗ್ತಿದ್ರಾ ಅಥವಾ ಬೇರೆ ಎಲ್ಲಾದ್ರೂ ಹೋಗ್ತಿದ್ರಾ ಎಂದು ಕೋಪ ಮಾಡಿಕೊಂಡು ಮಗು ಜೊತೆ ವಾರಗಟ್ಟಲೆ ಹೊರಟು ಹೋಗಿದ್ರು. ನಾನು ಹೇಗೋ ಸಮಾಧಾನ ಮಾಡಿ ವಾಪಸ್ ಕರೆದುಕೊಂಡು ಬಂದು ಮನೆಯಲ್ಲಿ ಇಟ್ಟುಕೊಂಡಿದ್ದೀನಿ ಎಂದರು.
ಇನ್ನು ಲೂಸ್ ಮಾದ Loose Mada Yogi ಅವರ ಮಾತು ಕೇಳಿ ಧನಂಜಯ್ ಅವರು ನಕ್ಕು ಸುಸ್ತಾಗಿದ್ದು Loose Mada Yogi ಯವರ ಮಾತುಗಳು ತಮಾಷೆ ಯಾಗಿಯೇ ಹೊರ ಬಂದರೂ ಸಹ ನಿಜಕ್ಕೂ ಕಲಾವಿದರು ತೆರೆ ಮೇಲೆ ಮಿಂಚಿ ಸ್ಟಾರ್ ಗಿರಿಯನ್ನು ಸುಮ್ಮನೆ ಸುಲಭವಾಗಿ ಪಡೆಯುವುದಿಲ್ಲ ಎಂಬ ಮಾತು ನಿಜಕ್ಕೂ ಸತ್ಯವಾಗಿದೆ.
ಅದಕ್ಕಾಗಿಯೇ ಸಿನಿಮಾದ ಯಶಸ್ಸಿಗಾಗಿಯೇ ಸಾಕಷ್ಟು ಪರಿಶ್ರಮ ಪಡುವವರಿದ್ದು ಆ ಪರಿಶ್ರಮದಲ್ಲಿ ಕುಟುಂಬದವರ ಸಹಕಾರ ಬೆಂಬಲವೂ ಬಹಳ ಮುಖ್ಯವಾದದ್ದು ಎಂಬ ಮಾತು ಅಕ್ಷರಶಃ ಸತ್ಯ. Loose Mada Yogi ಮಾತ್ರವಲ್ಲ ಎಲ್ಲಾ ಕಲಾವಿದರುಗಳ ಕುಟುಂಬದ ಸದಸ್ಯರೂ ಕೂಡ ಇದೇ ರೀತಿಯಲ್ಲಿ ಬೆಂಬಲ ನೀಡುತ್ತಾ ಮನೆಯ ಜವಾಬ್ದಾರಿಯನ್ನು ತಾವೇ ನಿಭಾಯಿಸಿಕೊಂಡು ಹೋಗುತ್ತಿದ್ದು ನಿಜಕ್ಕೂ ಕಲಾವಿದರ ಯಶಸ್ಸಿನ ಹಿಂದೆ ಮುಖ್ಯವಾಗಿ ಕುಟುಂಬದವರ ಪಾತ್ರ ಇರುತ್ತದೆ ಎನ್ನಬಹುದು.