ಕೆಜಿಎಫ್’ ಚಾಚಾ ಎಂದೇ ಜಗತ್ತಿನಾದ್ಯಂತ ಹೆಸರು ಪಡೆದಿರುವ ನಟ ಹರೀಶ್ ರಾಯ್ ಕ್ಯಾನ್ಸರ್ ಚಿಕಿತ್ಸೆ ಪಡೆಯಲು ಹಣವಿಲ್ಲದೆ ಒದ್ದಾಡುತ್ತಿದ್ದಾರೆ. ದಶಕಗಳಿಂದ ಸಿನಿಮಾರಂಗದಲ್ಲಿ ಹರೀಶ್ ರಾಯ್ ಸಕ್ರಿಯವಾಗಿದ್ದಾರೆ. ಕೆಲಕಾಲ ಅವರು ನಟನೆಯಿಂದ ದೂರ ಉಳಿದ ಕಾರಣ, ಎಲ್ಲೂ ಕಾಣಿಸಿಕೊಂಡಿರಲಿಲ್ಲ. ಆದರೆ ಕೆಜಿಎಫ್ನಲ್ಲಿ ನಟಿಸುವ ಮೂಲಕ ಮತ್ತೇ ಕಮ್ ಬ್ಯಾಕ್ ಮಾಡಿದರು. ಹಲವಾರು ಸಿನಿಮಾಗಳ ಮೂಲಕ ಜನಮನ ಗೆದ್ದ ನಟನಿಗೀನ ಸಂಕಷ್ಟ ಎದುರಾಗಿದೆ. ಹರೀಶ್ ರಾಯ್ ಸದ್ಯ ಅನಾರೋಗ್ಯದಿಂದ ಬಳಲುತ್ತಿದ್ದಾರೆ. ಕೆಜಿಎಫ್ ಸಿನಿಮಾ ಮುಗಿದ ಬಳಿಕ ಹರೀಶ್ ರಾಯ್ ಅವರಲ್ಲಿ ಆರೋಗ್ಯದ ಸಮಸ್ಯೆ ಹೆಚ್ಚಾಗಿದೆ.
ಹರೀಶ್ ರಾಯ್ ಥೈರಾಯ್ಡ್ ಕ್ಯಾನ್ಸರ್ನಿಂದ ಬಳುತ್ತಿದ್ದಾರೆ. ಕೆಜಿಎಫ್ ಸಿನಿಮಾದಲ್ಲಿ ರಾಕಿ ಭಾಯ್ ಪ್ರೀತಿಯ ಚಾಚಾನಾಗಿ ನಟಿಸಿದ್ದ ಹರೀಶ್ ರಾಯ್ ಅವರ ಆರೋಗ್ಯ ಸ್ಥಿತಿಯು ಸದ್ಯ ಗಂಭೀರವಾಗಿದೆ. ಕ್ಯಾನ್ಸರ್ನೊಂದಿಗೆ ಹೋರಾಡುತ್ತಿರುವ ವಿಚಾರ ಈಗ ಬೆಳಕಿಗೆ ಬಂದಿದೆ. ಹರೀಶ್ ರಾಯ್ ಥೈರಾಯ್ಡ್ ಕ್ಯಾನ್ಸರ್ನಿಂದ ಬಳಲುತ್ತಿದ್ದಾರೆ. ಕ್ಯಾನ್ಸರ್ ಕೊನೆಯ ಹಂತ ತಲುಪಿದೆ. ಸದ್ಯ ಚಿಕಿತ್ಸೆಯನ್ನು ಪಡೆದುಕೊಳ್ಳುತ್ತಿದ್ದಾರೆ. ಈ ವಿಚಾರವನ್ನು ಯುಟ್ಯೂಬ್ ಚಾನಲ್ ಒಂದಕ್ಕೆ ನೀಡಿದ ಸಂದರ್ಶನದಲ್ಲಿ ಅವರೇ ಹೇಳಿಕೊಂಡಿದ್ದಾರೆ. ಸದ್ಯ ಇವರಿಗೆ ಚಿಕಿತ್ಸೆ ಕೊಡಿಸಿ, ಉಳಿಸಿಕೊಳ್ಳಲು ಕುಟುಂಬಸ್ಥರು ಕಷ್ಟಪಡುತ್ತಿದ್ದಾರೆ. ಇನ್ನು ಚಿಕಿತ್ಸೆ ವೆಚ್ಚ ಭರಿಸಲು ಕುಟುಂಬ ಕಷ್ಟಪಡುತ್ತಿದೆ ಎನ್ನಲಾಗಿದೆ.
ಹರೀಶ್ ರಾಯ್ ಅವರಿಗೆ ಹಲವು ದಿನಗಳಿಂದ ಥೈರಾಯ್ಡ್ ಸಮಸ್ಯೆ ಇತ್ತತ್ತಂತೆ. ಆದರೆ ಅದು ಅವರ ಅರಿವಿಗೆ ಬಂದಿದ್ದೇ ತಡವಾಗಿ. ಕೆಜಿಎಫ್ ಸಿನಿಮಾ ಮಾಡುವ ಸಂದರ್ಭದಲ್ಲಿ ಅವರಿಗೆ ತೊಂದರೆ ಇದ್ದರೂ ಗೊತ್ತಾಗಿರಲಿಲ್ಲವಂತೆ. ಸಮಸ್ಯೆ ಕಾಣಿಸಿಕೊಂಡಾಗ, ಕೆಜಿಎಫ್ ಸಿನಿಮಾ ಮಾಡಿದ ಬಳಿಕ ಚಿಕಿತ್ಸೆ ಪಡೆಯೋಣ ಎಂದು ಸುಮ್ಮನಾಗಿದ್ದರಂತೆ. ಕಾರಣ ಮನೆಯಲ್ಲಿ ಕಷ್ಟ ಇದ್ದಿದ್ದರಿಂದ ಕೆಜಿಎಫ್ ಸಿನಿಮಾದಿಂದ ಬರುವ ಹಣವನ್ನು ಮನೆಯ ಕಡೆಗೆ ಸೇಫ್ಟ್ ಮಾಡಿ ಬಳಿಕ ಚಿಕಿತ್ಸೆಗೆ ಹೋಗೋಣ ಎಂದು ಸುಮ್ಮನಿದ್ದರಂತೆ. ಆದರೀಗ ಕ್ಯಾನ್ಸರ್ ಕೊನೆಯ ಹಂತ ತಲುಪಿ ಬಿಟ್ಟಿದೆ. ವಿಚಾರ ಸಿನಿಮಾರಂಗದಲ್ಲಿ ಗೊತ್ತಾದರೆ ಯಾರೂ ಅವಕಾಶ ಕೊಡುವುದಿಲ್ಲ ಎನ್ನುವ ಕಾರಣಕ್ಕೆ ಮುಚ್ಚಿಟ್ಟಿದ್ದರಂತೆ.
ನನಗೆ ಕ್ಯಾನ್ಸರ್ ಇದೆ ಎಂದು ಗೊತ್ತಾದಾಗ ಸಾಕಷ್ಟು ಜನರು ಫೋನ್ ಮಾಡಿದ್ದಾರೆ. ನನ್ನ ಮಕ್ಕಳು ಚಿಕ್ಕವರು, ನನಗೆ ಏನಾದರೂ ಆದರೆ ಕುಟುಂಬದ ಕಥೆ ಏನು ಎಂಬ ಚಿಂತೆಯಿತ್ತು. ಮನೆಯಲ್ಲಿ ಸಮಸ್ಯೆ ಇತ್ತು. ಈ ಹಿಂದೆ ನಾನೇ ಕೆಲವರ ಬಳಿ ಸಹಾಯ ಕೇಳಿದರೂ ಕೊಡಲಿಲ್ಲ. ನನಗೆ ಏನಾದರೂ ಆದರೆ ಜನರು ನನ್ನ ಕುಟುಂಬಕ್ಕೆ ಸಹಾಯ ಮಾಡಲಿ ಅಂತ ಈ ಹಿಂದೆಯೇ ನನ್ನ ಮೊಬೈಲ್ನಲ್ಲಿ ವಿಡಿಯೋ ಮಾಡಿಟ್ಟಿದ್ದೆ. ನನಗೆ ಹೆಚ್ಚು ಕಮ್ಮಿಯಾದರೆ ಪತ್ನಿಗೂ ಕೂಡ ಈ ವಿಡಿಯೋವನ್ನು ಜನರಿಗೆ ಮುಟ್ಟಿಸು ಅಂತ ಹೇಳಿಟ್ಟಿದ್ದೆ” ಎಂದು ಕಣ್ಣೀರು ಹಾಕಿದ್ದಾರೆ ಹರೀಶ್ ರಾಯ್. ಸಂದರ್ಶನದ ವೇಳೆ ಅವರ ಫೋನ್ ನಂಬರ್ ಕೂಡ ನೀಡಿದ್ದಾರೆ. ಈ ಮೂಲಕ ಹಲವರು ಅವರಿಗೆ ನೆರವಾಗಿದ್ದಾರೆ.
ಚಿತ್ರರಂಗದಿಂದ ಸಾಕಷ್ಟು ಮಂದಿ ಕಲಾವಿದರು, ತಂತ್ರಜ್ಞರು ಹಾಗೂ ಕರುನಾಡಿನ ಜನತೆ ಅವ್ರಿಗೆ ಆರ್ಥಿಕ ನೆರವು ನೀಡಲು ಮುಂದಾಗ್ತಿದ್ದಾರೆ. ಇದು ನಿಜಕ್ಕೂ ಮೆಚ್ಚಬೇಕಾದ ವಿಷಯವೇ ಸರಿ. ನನಗೆ ದೊಡ್ಡ ಸ್ಟಾರ್ ನಟರೊಬ್ಬರು ಫೋನ್ ಮಾಡಿ ಏನು ಸಹಾಯ ಬೇಕೋ ಕೇಳಿ, ಎಷ್ಟು ದುಡ್ಡು ಬೇಕೋ ಕೇಳಿ ಕೊಡುತ್ತೇನೆ ಎಂದಿದ್ದಾರೆ. ನನ್ನ ಹೆಸರನ್ನು ಎಲ್ಲಿಯೂ ತೆಗೆಯಬೇಡಿ ಎಂದಿದ್ದಾರೆ. ಅವರು ಯಾರು ಅಂತ ನಾನು ಹೇಳುವ ಹಾಗಿಲ್ಲ. ಈಗ ನನಗೆ ಸ್ವಲ್ಪ ಧೈರ್ಯ ಬಂದಿದೆ. ಈಗ ಎಲ್ಲರೂ ಫೋನ್ ಮಾಡಿ ಧೈರ್ಯ ತುಂಬುವುದನ್ನು ನೋಡಿದರೆ ನಾನು ಜನರನ್ನು ಸಂಪಾದನೆ ಮಾಡಿದ್ದೇನೆ ಎಂದು ಖುಷಿಯಾಗುತ್ತಿದೆ . ಅದೇ ರೀತಿ ಡೆಡ್ಲಿ ಸೋಮ ನಿರ್ದೇಶಕ ರವಿ ಶ್ರೀನಿವಾಸ್ ಅವರು ನೆರವು ನೀಡುತ್ತೇನೆ ಎಂದಿದ್ದಾರೆ ಅದೇ ರೀತಿ ದುನಿಯಾ ವಿಜಯ್ ನಾವಿದ್ದೇವೆ ಯಾಕೆ ಒಂದು ಮಾತು ತಿಳಿಸಿಲ್ಲ ಎಂದು ಕ್ಲಾಸ್ ತಂಗೊಡಿದ್ದಾರೆ.
ಸಿನೆಮಾ ರಂಗದ ಅನೇಕ ಗಣ್ಯರು ನೆರವು ನೀಡಲು ಮುಂದೆ ಬಂದಿದ್ದಾರೆ ಎಲ್ಲಾ ರೀತಿಯ ಸಹಕಾರ ನೀಡುತ್ತಿದ್ದಾರೆ. ಎಂದಿದ್ದಾರೆ ಹರೀಶ್ ರಾಯ್. ಎಲ್ಲರ ಸಹಕಾರ ಖುಷಿಯಾಗಿದೆ ಮುಂದೆ ಇದೇ ರೀತಿ ಒಳ್ಳೆ ಅಭಿನಯದಿಂದ ಬರಬೇಕು. ನನ್ನ ಈ ಹೋರಾಟದಲ್ಲಿ ಗೆದ್ದು ಬರ್ತೆನೆ. ಬಂದಮೇಲೆ ಮತ್ತಷ್ಟು ಸಿನೆಮಾದಲ್ಲೂ ನಟಿಸುವೆ ಎಂದಿದ್ದಾರೆ. ವಿಚಾರ ತಿಳಿದ ಕೆಜಿಎಫ್ ಸ್ಟಾರ್ ಯಶ್ ಕೂಡ ಅಪಾರ ಪ್ರಮಾಣದ ನೆರವು ನೀಡುವುದು ಮಾತ್ರವಲ್ಲದ ಅವರ ಕುಟುಂಬದ ಸಮಸ್ಯೆಯನ್ನು ಬಗೆಹರಿಸುವುದಾಗಿ ಮಾತನಾಡಿದ್ದಾರೆ. ಯಶ್ ಅವರು ಸುಮಾರು ನಲ್ವತ್ತು ಲಕ್ಷ ಸಹಾಯ ಧನ ನೀಡಿದ್ದಾರೆ ಎಂಬ ವದಂತಿ ಹರಿದಾಡುತ್ತಿದೆ. ಈ ಕುರಿತು ವೀಡಿಯೋ ಮಾಹಿತಿಗೆ ಕೆಳಗಿನ ಲಿಂಕ್ ಬಳಸಿ