ಕನ್ನಡ ಚಿತ್ರರಂಗದಲ್ಲಿ ಟಾಕಿಂಗ್ ಸ್ಟಾರ್ ಎಂದೇ ಗುರುತಿಸಿ ಕೊಂಡಿರುವ ಸೃಜನ್ ತಮ್ಮ ಮನದಾಳವನ್ನ ಯಾರೊಂದಿಗೂ ಹಂಚಿಕೊಳ್ಳದ ಭಾವನಾತ್ಮಕ ವ್ಯಕ್ತಿ. ಖ್ಯಾತ ಹಿರಿಯ ಕನ್ನಡ ಸಿನಿಮಾ ನಟ ದಿವಂಗತ ಲೋಕೇಶ್ ಅವರ ಪುತ್ರ ಸೃಜನ್ ಲೋಕೇಶ್ ತಮ್ಮ ಅಭಿಮಾನಿಗಳು ಸಿಹಿ ಸುದ್ದಿ ಕೊಟ್ಟಿದ್ದಾರೆ. ಸ್ಯಾಂಡಲ್ವುಡ್ ನಟ ಸೃಜನ್ ಲೋಕೇಶ್ ಒಬ್ಬ ನಟ, ದೂರದರ್ಶನ ನಿರೂಪಕ, ರೇಡಿಯೋ ನಿರೂಪಕ ಮತ್ತು ನಿರ್ಮಾಪಕ. ಪ್ರಸಿದ್ಧ ರಂಗಭೂಮಿ ಕಲಾವಿದ ಮತ್ತು ಚಲನಚಿತ್ರ ನಟ ಲೋಕೇಶ್, ನಟಿ ಗಿರೀಜಾ ಲೋಕೇಶ್ ಅವರ ಪುತ್ರ. ಮಜಾ ಟಾಕೀಸ್ ಮೂಲಕ ಇನ್ನು ಹೆಚ್ಚು ಜನಪ್ರಿಯ ಗಳಿಸಿದ್ದವರು.
ಸದ್ಯ ಕಲರ್ಸ್ ಕನ್ನಡದಲ್ಲಿ ರಾಜಾ-ರಾಣಿ ಸೀಸನ್ 2 ಸೀಸನ್ ಜಡ್ಜ್ ಆಗಿದ್ದಾರೆ. ಗಿಚ್ಚಿ ಗಿಲಿ ಗಿಲಿ ಶೋಗೂ ಸ್ಪಲ್ಪ ದಿನ ಜಡ್ಜ್ ಆಗಿದ್ರು. ಲೋಕೇಶ್ ಪ್ರೊಡಕ್ಷನ್ಸ್ ಅನ್ನು ಸೃಜನ್ ಲೋಕೇಶ್ ಮತ್ತು ಅವರ ತಾಯಿ ಗಿರಿಜಾ ಲೋಕೇಶ್ ಅವರು 2013 ರಲ್ಲಿ ಸ್ಥಾಪಿಸಿದರು. ಈಗ ಸೃಜನ ಲೋಕೇಶ್ ನಿರ್ದೇಶನದತ್ತ ಹೆಜ್ಜೆ ಹಾಕಿದ್ದಾರೆ.
ಸೃಜನ್ ಅವರು ಚಿತ್ರರಂಗಕ್ಕಿಂತ ಕಿರುತೆರೆಯಲ್ಲಿ ಹೆಚ್ಚು ಆಯಕ್ಟೀವ್ ಆಗಿದ್ದಾರೆ. ಸಿನಿಮಾಗಳನ್ನು ಅವರು ಅಳೆದು ತೂಗಿ ಒಪ್ಪಿಕೊಳ್ಳುತ್ತಿದ್ದಾರೆ. ಈಗ ಅವರು ಖ್ಯಾತ ನಿರ್ಮಾಪಕ ಸಂದೇಶ್ ನಾಗರಾಜ್ ಜತೆ ಸೇರಿ ಹೊಸ ಸಿನಿಮಾ ನಿರ್ಮಾಣ ಮಾಡುತ್ತಿದ್ದಾರೆ. ಈ ಚಿತ್ರದ ಮೂಲಕ ಅವರು ನಿರ್ದೇಶಕರಾಗಿಯೂ ಬಡ್ತಿ ಪಡೆಯುತ್ತಿದ್ದಾರೆ. ಈ ಕಾರಣದಿಂದಲೂ ಸೃಜನ್ ಅವರ ಹೊಸ ಸಿನಿಮಾ ಗಮನ ಸೆಳೆದಿದೆ.
ಮಗನ ಮೊದಲನೇ ಸಿನಿಮಾಗೆ ಸೃಜನ್ ತಾಯಿ ಗಿರಿಜಾ ಲೋಕೇಶ್ ಅವರು ಸಾಥ್ ನೀಡುತ್ತಿದ್ದು, ಈ ಸಿನಿಮಾದಲ್ಲಿ ಅವರು ಪ್ರಮುಖ ಪಾತ್ರ ಮಾಡಲಿದ್ದಾರೆ. ತಾಯಿಗೆ ಆ್ಯಕ್ಷನ್ ಕಟ್ ಹೇಳುವ ಭಾಗ್ಯ ಸೃಜನ್ ಅವರಿಗೆ ಸಿಕ್ಕಿದೆ. ಈಗಾಗಲೇ ಕಥೆ, ಚಿತ್ರಕಥೆ ಮತ್ತು ಸಂಭಾಷಣೆಯ ಕೆಲಸವನ್ನೂ ಮುಗಿಸಿರುವ ಸೃಜನ್, ನಾಯಕಿಗಾಗಿ ಹುಡುಕಾಟ ಆರಂಭಿಸಿದ್ದಾರೆ. ಸಂದೇಶ್ ಪ್ರೊಡಕ್ಷನ್ ಮತ್ತು ಲೋಕೇಶ್ ಪ್ರೊಡಕ್ಷನ್ ಜಂಟಿಯಾಗಿ ಈ ಸಿನಿಮಾವನ್ನು ನಿರ್ಮಾಣ ಮಾಡಲಿದೆ.
ಈ ಬಗ್ಗೆ ಮಾತನಾಡಿದ ಸೃಜನ್ ಲೋಕೇಶ್, ‘ಸಿನಿಮಾ ನಿರ್ದೇಶನ ಮಾಡಬೇಕು ಎನ್ನುವುದು ತುಂಬಾ ದಿನಗಳ ಆಸೆ ಆಗಿತ್ತು. ಹಾಗಾಗಿ ನಾನೇ ಒಂದು ಕಥೆ ಮಾಡಿಕೊಂಡು ಅದರ ಮೇಲೆ ಕೆಲಸ ಮಾಡುತ್ತಿದ್ದೆ.
ಹೀಗೆ ಮಾತನಾಡುತ್ತಿದ್ದಾಗ ಸಂದೇಶ್ ಅವರ ಜೊತೆ ಸಿನಿಮಾ ಮಾಡುವ ವಿಚಾರ ಹಂಚಿಕೊಂಡೆ. ಮತ್ತು ಅವರಿಗಾಗಿ ನಾನೊಂದು ಸಿನಿಮಾ ಮಾಡಬೇಕಿತ್ತು. ಇದೀಗ ಎಲ್ಲವೂ ಕೂಡಿ ಬಂದು ಈ ಸಿನಿಮಾ ಆಗುತ್ತಿದೆ’ ಅಂದರು. ಸೃಜನ್ ಅವರ ತಾತ ಮತ್ತು ತಂದೆ ಇಂತಹ ಅನೇಕ ಸಾಹಸಗಳನ್ನು ಮಾಡಿದ್ದಾರೆ. ಈ ಕುಟುಂಬದ ಮೂರನೇ ತಲೆಮಾರು ಸೃಜನ್ ಅದನ್ನು ಮುಂದುವರೆಸಿಕೊಂಡು ಹೋಗುತ್ತಿದ್ದಾರೆ. ಅಂದಹಾಗೆ ತಮ್ಮ ಮೊದಲ ನಿರ್ದೇಶನದ ಚಿತ್ರಕ್ಕೆ ಹಾರರ್ ಕಾಮಿಡಿ ಕಥೆಯನ್ನು ಆಯ್ಕೆ ಮಾಡಿಕೊಂಡಿದ್ದು, ಅದನ್ನು ಹೊಸ ರೀತಿಯಲ್ಲಿ ಹೇಳುವ ಪ್ರಯತ್ನ ಮಾಡಲಿದ್ದಾರೆ ಎಂಬ ಸುದ್ದಿಎಲ್ಲೆಡೆ ವೈರಲ್ ಆಗಿದೆ. ಸೃಜನ ಲೋಕೇಶ್ ಅವರ ಸದ್ಯ ತಾವು ನಿರ್ದೇಶನ ಮಾಡುತ್ತಿರುವುದರ ಬಗ್ಗೆ ಹೇಳಿದ್ದಾರೆ.
ಹಿರಿಯ ನಿರ್ಮಾಪಕರಾದ “ಸಂದೇಶ ನಾಗರಾಜ್” ಅವರ ಆಶೀರ್ವಾದದೊಂದಿಗೆ ಹೊಸ ಪ್ರಯತ್ನಕ್ಕೆ ಶುಭಾರಂಭ. “ಲೋಕೇಶ್ ಪ್ರೊಡಕ್ಷನ್ಸ್” ಹಾಗೂ “ಸಂದೇಶ ಪ್ರೊಡಕ್ಷನ್ಸ್” ಸಂಸ್ಥೆ ಅಡಿಯಲ್ಲಿ ಹೊಸ ಚಿತ್ರ ನಿರ್ಮಾಣ, ಮತ್ತಷ್ಟು ವಿವರಗಳು ಅತಿ ಶೀಘ್ರದಲ್ಲಿ ದೊರೆಯಲಿದೆ.ಯಾವ ಚಿತ್ರ, ಏನು ಅಂತ ಹೇಳಿಲ್ಲ. ಆದಷ್ಟು ಬೇಗ ಯಾವ ಚಿತ್ರ, ನಾಯಕ, ನಾಯಕಿ ಯಾರು ಅನ್ನುವುದರ ಬಗ್ಗೆ ತಿಳಿಸಲಿದ್ದಾರಂತೆ.