ವಾರ್ತಾ ಮಂಜರಿ
Trending Stories, Viral News, Gossips & Everything in Kannada

Mahalakshmi: ನಟಿ ಮಹಾಲಕ್ಷ್ಮಿ ಅವರ ಮೊದಲ ಗಂಡ ಏನಾದರು ಗೊತ್ತಾ …

133

ಸೋಷಿಯಲ್ ಮೀಡಿಯಾದಲ್ಲಿ ಆ್ಯಕ್ಟಿವ್ ಆಗಿರುವ ಟಿವಿ ಆ್ಯಂಕರ್ ಮತ್ತು ನಟಿ ಮಹಾಲಕ್ಷ್ಮಿ ಇತ್ತೀಚಿನ ದಿನಗಳಲ್ಲಿ ಸಾಕಷ್ಟು ಸುದ್ದಿ ಮಾಡುತ್ತಿದ್ದಾರೆ. ಇತ್ತೀಚೆಗೆ, ನಟಿ ಚಲನಚಿತ್ರ ನಿರ್ಮಾಪಕ ರವೀಂದ್ರನ್ ಚಂದ್ರಶೇಖರ್ ಅವರನ್ನು ವಿವಾಹವಾದರು. ‘ಅಂದಿನಿಂದ ಅವರ ಫೋಟೋಗಳು ಹೆಚ್ಚು ವೈರಲ್ ಆಗುತ್ತಿವೆ. ರವೀಂದ್ರನ್ ಜೊತೆ ವೈವಾಹಿಕ ಜೀವನ ಆರಂಭಿಸಲು ನಟಿ ತುಂಬಾ ಉತ್ಸುಕರಾಗಿದ್ದು, ಸಾಮಾಜಿಕ ಜಾಲತಾಣಗಳ ಮೂಲಕ ಅಭಿಮಾನಿಗಳೊಂದಿಗೆ ಫೊಟೋಸ್ ಹಂಚಿಕೊಂಡಿದ್ದಾರೆ.

ಮಹಾಲಕ್ಷ್ಮಿ ಕೇವಲ ನಿರೂಪಕಿ ಮಾತ್ರವಲ್ಲ, ಕಿರುತೆರೆ ನಟಿ ಕೂಡ. ರವೀಂದರ್ ಕೂಡ ಕಿರುತೆರೆಯ ಲೋಕದಲ್ಲಿ ಅನೇಕ ಧಾರಾವಾಹಿಗಳನ್ನು ನಿರ್ಮಾಣ ಮಾಡಿದ್ದಾರೆ. ರವೀಂದರ್ ನಿರ್ಮಾಣ ಮಾಡಿದ ಧಾರಾವಾಹಿಯಲ್ಲಿ ಮಹಾಲಕ್ಷ್ಮಿ ನಟಿಸಿದ್ದಾರೆ. ಮೊದಲ ಪ್ರೇಮ ಶುರುವಾಗಿದ್ದೇ ಈ ಧಾರಾವಾಹಿಯ ಮೂಲಕ. ಮೊದಲು ನಟಿಯಾಗಿ ಪರಿಚಯ. ಆಮೇಲೆ ಸ್ನೇಹ. ಸ್ನೇಹ ವಿಶ್ವಾಸವಾಗಿ, ಅದು ಸಂದೇಶವಾಗಿ ಹರಿದು ಬಂದು ಇಬ್ಬರನ್ನೂ ಒಂದಾಗಿಸಿದೆ. ಇತ್ತೀಚಿಗೆ ವಿವಾಹವಾದ ಟಿವಿ ಆ್ಯಂಕರ್ ಮಹಾಲಕ್ಷ್ಮೀ ಹಾಗೂ ನಿರ್ಮಾಪಕ ರವೀಂದ್ರನ್ ಚಂದ್ರಶೇಖರ್ ಇಬ್ಬರು ಸೋಶಿಯಲ್ ಮೀಡಿಯಾದಲ್ಲಿ ಸಖತ್ ಸುದ್ದಿಯಾಗಿದ್ದಾರೆ.

ಈಗಾಗಲೇ 8 ವರ್ಷದ ಮಗು ಇರೋ ಮಹಾಲಕ್ಷ್ಮಿ ನನಗೆ ಮತ್ತೊಂದು ಮಗು ಬೇಕು ಎಂದು ಷರತ್ತು ನೀಡಿದ್ದಾರೆ.ಮಹಾಲಕ್ಷ್ಮಿಗೆ ಈ ಮೊದಲೇ ಮದುವೆ ಆಗಿತ್ತು. ಎರಡು ಮಕ್ಕಳು ಕೂಡ ಇವೆ. ಮೊದಲ ಗಂಡನಿಂದ ಡಿವೋರ್ಸ್ ಪಡೆದ ನಂತರ ತಮ್ಮೊಂದಿಗೆ ನಟಿಸುತ್ತಿದ್ದ ಸಹ ನಟ ಈಶ್ವರ್ ಎನ್ನುವವರ ಜತೆ ಅಫೇರ್ ಇಟ್ಟುಕೊಂಡಿದ್ದರು ಎಂದು ಸ್ವತಃ ಈಶ್ವರ್ ಅವರ ಪತ್ನಿಯೇ ಆರೋಪ ಮಾಡಿದ್ದಾರೆ. ನನ್ನ ಗಂಡನ ಜೊತೆ ಮಹಾಲಕ್ಷ್ಮಿ ದಿನ ರಾತ್ರಿಯೂ ವಿಡಿಯೋ ಕಾಲ್ ಮಾಡಿ ಮಾತನಾಡುತ್ತಿದ್ದಳು. ಅದಕ್ಕೆ ಬೇಕಾದ ಸಾಕ್ಷಿ ನನ್ನ ಬಳಿ ಇದೆ ಎಂದು ಈಶ್ವರ್ ಪತ್ನಿ ಜಯಶ್ರೀ ಆರೋಪ ಮಾಡಿದ್ದರು.

ರವೀಂದರ್ ಚಂದ್ರಶೇಖರನ್ ಜೊತೆ ಮಹಾಲಕ್ಷ್ಮಿ ಮದುವೆ ಆಗುತ್ತಿದ್ದಂತೆಯೇ ಈ ವಿಷಯ ತಮಿಳು ಮಾಧ್ಯಮದಲ್ಲಿ ಮತ್ತೆ ಪ್ರಮುಖ ಸುದ್ದಿಯಾಗಿದೆ. ಮಹಾಲಕ್ಷ್ಮಿ ಮತ್ತು ಈಶ್ವರ್ ಲವ್ವಿ ಡವ್ವಿ ವಿಚಾರ ರವೀಂದರ್ ಅವರಿಗೂ ಗೊತ್ತಿತ್ತು ಎಂದು ವರದಿಯಾಗಿದೆ. ಎಲ್ಲ ಗೊತ್ತಿದ್ದರೂ ಮಹಾಲಕ್ಷ್ಮಿಯನ್ನು ರವೀಂದರ್ ಮದುವೆ ಆಗಿದ್ದಾರೆ ಎಂದು ವರದಿಗಳಲ್ಲಿ ಉಲ್ಲೇಖಿಸಲಾಗುತ್ತಿದೆ. ಮದುವೆ ಅವರ ಸ್ವಂತ ವಿಚಾರ. ಅಷ್ಟಕ್ಕೂ ಇಬ್ಬರೂ ಕಾನೂನು ಬದ್ಧವಾಗಿಯೇ ಮದುವೆಯಾಗಿದ್ದಾರೆ. ಆದರೂ, ಜಯಶ್ರೀ ಆರೋಪ ಇದೀಗ ಮುನ್ನೆಲೆಗೆ ಬಂದಿದೆ. ಅದಾದ ಬಳಿಕ ಸೀರಿಯಲ್ ನಟಿ ಮಹಾಲಕ್ಷ್ಮಿ 2ನೇ ಮದುವೆಯ ನಂತರ ಮೊದಲ ಬಾರಿಗೆ ಮಾಜಿ ಪತಿ ಅನಿಲ್ ಬಗ್ಗೆ ಮಾತನಾಡಿದ್ದು ಸಹ ಸಾಕಷ್ಟು ವೈರಲ್ ಆಗಿದೆ.

ಮಹಾಲಕ್ಷ್ಮಿ ಕೆಲ ವರ್ಷಗಳ ಹಿಂದೆ ಅನಿಲ್ ಎಂಬಾತನನ್ನು ಮದುವೆಯಾಗಿದ್ದರು. ದಂಪತಿಗೆ ಸಚಿನ್ ಎಂಬ 8 ವರ್ಷದ ಮಗನಿದ್ದಾನೆ. ಕೆಲವು ವರ್ಷಗಳ ಹಿಂದೆ ಅನಿಲ್ ಮತ್ತು ಮಹಾಲಕ್ಷ್ಮಿ ವೈಯಕ್ತಿಕ ಕಾರಣಗಳಿಂದ ವಿಚ್ಛೇದನ ಪಡೆದಿದ್ದರು. ಮಹಾಲಕ್ಷ್ಮಿ ಧಾರಾವಾಹಿಗಳಲ್ಲಿ ನಟಿಸುವುದನ್ನು ಮುಂದುವರೆಸಿದರು. ಇತ್ತ ಅನಿಲ್ ಮಾಧ್ಯಮದವರನ್ನು ಭೇಟಿಯಾಗಿ ತಮ್ಮ ವೈವಾಹಿಕ ಜೀವನದ ಹಲವು ವಿಷಯಗಳನ್ನು ಹಂಚಿಕೊಂಡಿದ್ದಾರೆ. ಇತ್ತೀಚೆಗೆ ಯೂಟ್ಯೂಬ್ ಸಂದರ್ಶನವೊಂದರಲ್ಲಿ ಮಹಾಲಕ್ಷ್ಮಿ ತಮ್ಮ ಮಾಜಿ ಪತಿ ಅನಿಲ್ ಬಗ್ಗೆ ಮಾತನಾಡಿದ್ದಾರೆ. ಅದರಲ್ಲಿ ನನ್ನ ಮಾಜಿ ಪತಿ 1 ವರ್ಷದ ಹಿಂದೆ ಮದುವೆಯಾಗಿದ್ದರು. ಅದು ಅನೇಕರಿಗೆ ತಿಳಿದಿಲ್ಲ ಎಂದಿದ್ದಾರೆ.

ಇತ್ತೀಚಿಗೆ ವಿವಾಹವಾದ ಟಿವಿ ಆ್ಯಂಕರ್ ಮಹಾಲಕ್ಷ್ಮೀ ಹಾಗೂ ನಿರ್ಮಾಪಕ ರವೀಂದ್ರನ್ ಚಂದ್ರಶೇಖರ್ ಇಬ್ಬರು ಸೋಶಿಯಲ್ ಮೀಡಿಯಾದಲ್ಲಿ ಸಖತ್ ಸುದ್ದಿಯಾಗಿದ್ದಾರೆ. ಈಗಾಗಲೇ 8 ವರ್ಷದ ಮಗು ಇರೋ ಮಹಾಲಕ್ಷ್ಮಿ ನನಗೆ ಮತ್ತೊಂದು ಮಗು ಬೇಕು ಎಂದು ಷರತ್ತು ನೀಡಿದ್ದಾರೆ. ರವೀಂದರ್ ಮತ್ತು ಮಹಾಲಕ್ಷ್ಮಿ ಮದುವೆ ವಿಚಾರ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದ್ದರೂ, ಈ ಜೋಡಿ ಇದೀಗ ಹನಿಮೂನ್ ಗೆ ಹೊಗಲು ಸಿದ್ಧತೆ ಮಾಡಿಕೊಂಡಿದೆ. ಪರಸ್ಪರ ಇಬ್ಬರೂ ಗೌರವದ ಮಾತುಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡು ಹೊಸ ಜೀವನವನ್ನು ಎಂಜಾಯ್ ಮಾಡುತ್ತಿದ್ದಾರೆ. ಒಟ್ಟಾರೆಯಾಗಿ ಮಿಸ್ ಮ್ಯಾಚ್ ಜೋಡಿಯಾದರು ಯಾರಿಗೂ ಕಮ್ಮಿ ಇಲ್ಲವೆಂಬಂತೆ ಬದುಕುವ ಇವರ ಶೈಲಿ ನಿಜಕ್ಕೂ ಇತರರಿಗೆ ಪ್ರೇರಣೆ ಎನ್ನಬಹುದು.